Tuesday, April 17, 2012

ಮರೆತ ಕಥೆ

ಅಂದು ಅವಳ ಕಣ್ಣೀರು
ನನಗೆ ವ್ಯಥೆ
ಇಂದು ನನ್ನ ಕಣ್ಣೀರು
ಅವಳಿಗೆ ಮರೆತ ಕಥೆ 
by ಹರೀಶ್ ಶೆಟ್ಟಿ, ಶಿರ್ವ

ಹಾಡಿದ ಹಾಡು

ನಿನ್ನನ್ನು
ಸತಾಯಿಸಿ
ಅಂದು ನಾನು
ಹಾಡಿದ ಹಾಡು
ಇಂದು ನನಗೆ
ಕರ್ಕಶ ಸ್ವರವಾಗಿ
ಕೇಳಿ ಬಂದು
ನನ್ನನ್ನು
ಹಿಂಸಿಸುತ್ತಿದೆ 
by ಹರೀಶ್ ಶೆಟ್ಟಿ, ಶಿರ್ವ

Monday, April 16, 2012

ಹನಿಗವನ

ನೀ ನನ್ನ ಪ್ರೀತಿಯಲಿ ಅಂದು ಆಡಿದ ಮಾತೆಲ್ಲ
ಇಂದು ಕೇವಲ ನನ್ನ ಪುಸ್ತಕದ ಹನಿಗವನಗಳಾದವು 
by ಹರೀಶ್ ಶೆಟ್ಟಿ, ಶಿರ್ವ

ಕಣ್ಣೀರ ಸಸಿ

ನಿನ್ನ ಅಗಲಿಕೆಯಿಂದ
ನನ್ನ ಕಣ್ಣೀರ ಸಸಿ
ಇಂದು ಬೆಳೆದು ಮರವಾಗಿದೆ........
by ಹರೀಶ್ ಶೆಟ್ಟಿ, ಶಿರ್ವ

ಚಂದಿರ

ಈಗ ರಾತ್ರಿ ಚಂದಿರನ ಹಾಗೆ ನಾನೊಬ್ಬನೇ
ಸುತ್ತ ಮುತ್ತ ನಕ್ಷತ್ರಗಳಂತೆ ಮಿನುಗುತ್ತಿದೆ ಅವಳ ನೆನಪು
by ಹರೀಶ್ ಶೆಟ್ಟಿ, ಶಿರ್ವ

Sunday, April 15, 2012

ಮಲ್ಲಿಗೆಯ ಹೂವು

ನನ್ನನ್ನು
ಮರೆತು
ಬಿಡು
ಎಂದು
ಹೇಳಿ
ಹೋಗುವಾಗ.......
ನೀನೆ
ನಿನ್ನ
ಜಡೆಗೆ
ಮುಡಿದ
ಮಲ್ಲಿಗೆಯ
ಹೂವು
ನನ್ನಲ್ಲಿ
ಬಿಟ್ಟು
ಹೋದೆಯಲ್ಲ .......
ನಿನ್ನನ್ನು ಮರೆಯಲು ನನ್ನಿಂದ ಸಾಧ್ಯವಿಲ್ಲವೆಂದು ನಿನಗೆ ತಿಳಿದಿದೆ ಅಲ್ಲವೇ...
by ಹರೀಶ್ ಶೆಟ್ಟಿ, ಶಿರ್ವ

ಗಾಳಿ

ಅಲ್ಲಿ ಇಲ್ಲಿ
ಅಲ್ಲಲ್ಲಿ ಎಲ್ಲೆಲ್ಲಿ
ನಾನು ಗಾಳಿ !

ನನಗಿಲ್ಲ ತಡೆ
ತಿರುಗುವೆ ಎಲ್ಲ ಕಡೆ
ನಾನು ಎಲ್ಲೆಡೆ !

ನನಗಿಲ್ಲ ಭಯ
ನನಗಿಲ್ಲ ಸಮಯ
ನಾನು ಅಭಯ !

ನನಗಿಲ್ಲ ಊರು ಕೇರು
ನನಗಿಲ್ಲ ಪುರ ಪಟ್ಟಣ
ನಾನು ಹೋದಲ್ಲಿ ಪ್ರಯಾಣ !

ನನಗಿಲ್ಲ ಮನೆ ಮಠ
ನನಗಿಲ್ಲ ಸ್ಥಿರ ನಿವಾಸ
ನಾನು ಅಲೆಮಾರಿ !

ನನಗಿಲ್ಲ ವ್ಯಥೆ ಚಿಂತೆ
ನನಗಿಲ್ಲ ಆಸೆ ಆಕಾಂಕ್ಷೆ
ನಾನು ನಿಶ್ಚಿಂತ !

ನನಗಿಲ್ಲ ದಿನ ರಾತ್ರಿ
ನನಗಿಲ್ಲ ನಿದ್ರೆ ಆಲಸ್ಯ
ನಾನು ಶಾಶ್ವತ ಯಾತ್ರಿ !
by ಹರೀಶ್ ಶೆಟ್ಟಿ, ಶಿರ್ವ



ಸಿದ್ಧಿದಾತ್ರಿ