ಎಂಥ ಕಠಿಣ ಸಮಯ,
ನೀರವ ಮೌನ,
ರಸ್ತೆ ಖಾಲಿ ಖಾಲಿ,
ಆಸ್ಪತ್ರೆಯಲ್ಲಿ ಹೋರಾಟ,
ಮುರಿಯುತ್ತಿರುವ ಉಸಿರಾಟ,
ಸ್ಮಶಾನಗಳಲ್ಲಿ ಸಾಲು ಸಾಲು,
ಆಪ್ತರ ರೋಧನೆ,
ಯಾವುದೇ ಅಂತ್ಯಕ್ರಿಯೆಯ ವಿಧಿ ಇಲ್ಲ,
ಹೆಣದ ಬಾಯಿಗೆ ಒಂದು ತೊಟ್ಟು ನೀರು ಸಹ ಕೊಡಲು ಅನುಮತಿ ಇಲ್ಲ,
ಅಯ್ಯೋ ಎಂತಹ ಸ್ಥಿತಿ,
ಗಂಭೀರ ಪರಿಸ್ಥಿತಿ,
ಮಾನವ ಈಗಾದರೂ ಕಲಿ,
ನಿನ್ನ ಸಂರಕ್ಷಣೆ ನಿನ್ನದೇ ಕೈಯಲ್ಲಿ....
by ಹರೀಶ್ ಶೆಟ್ಟಿ, ಶಿರ್ವ