Sunday, May 31, 2020

Tribute


my small tribute to Lyricist shri.yogesh in my voice one of his song.

ಗೀತರಚನೆಕಾರ ಶ್ರೀ.ಯೋಗೇಶ್ ಅವರಿಗೆ ನನ್ನ ಸಣ್ಣ ಗೌರವ,ನಾನು ಹಾಡಿದ ಅವರ ಒಂದು ಹಾಡು.










Wednesday, May 27, 2020

ಜೀವನ ತಾನೇ

ಸ್ವಲ್ಪ ಹೊಲಿದು ನೋಡಿರೋ, ಪುನಃ ಹೊಸತಾಗಿ ಕಾಣುತ್ತದೆ, ಜೀವನ ತಾನೇ... ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್

Tuesday, May 26, 2020

ನೆನಪಿನ ವ್ಯಾಪಾರ

ತುಂಬಾ ಕಷ್ಟದಿಂದ ಮಾಡುತ್ತಿದ್ದೇನೆ
ನಿನ್ನ ನೆನಪಿನ ವ್ಯಾಪಾರ, ಲಾಭ ಕಡಿಮೆಯಿದೆ, ಆದರೆ ಬದುಕಲು ಪರ್ಯಾಪ್ತವಾಗಿದೆ. ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ : ಗುಲ್ಜಾರ್

Monday, May 25, 2020

ಯೋಗಕ್ಷೇಮ

ಯಾರು ಹೇಳುತ್ತಾರೆ ನಾನು ಸುಳ್ಳು ಹೇಳುವುದಿಲ್ಲವೆಂದು, ನೀನೊಂದು ಸಲ ನನ್ನ ಯೋಗಕ್ಷೇಮ ಕೇಳಿಯಾದರೂ ನೋಡು. ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್

Sunday, May 24, 2020

ಪ್ರಕೃತಿ

ಈ ನಗರಗಳ ಮೌನ ಹೇಳುತ್ತಿದೆ, ಮನುಷ್ಯರು ಪ್ರಕೃತಿಯನ್ನು ತುಂಬಾ ಮುನಿಸಿದ್ದಾರೆಯೆಂದು. ಅನುವಾದ: ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್
------
ಈ ನಗರಗಳ ಮೌನ ಹೇಳುತ್ತಿದೆ
ಈ ಮನುಷ್ಯರಿಂದ ಪ್ರಕೃತಿ ಮುನಿಸಿಕೊಂಡಿದೆ.
ಅನುವಾದ: ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್

Saturday, May 23, 2020

ಶತಮಾನ

ಇಷ್ಟು ಯಾಕೆ ಕಲಿಸುತ್ತ ಹೋಗುತ್ತಿರುವೆ ಜೀವನ, ನಮಗೆ ಎಲ್ಲಿ ಶತಮಾನ ಕಳೆಯಲಿಕ್ಕೆ ಇದೆ ಇಲ್ಲಿ. ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್



ನಾನೊಂದು ದೀಪ

ನಾನೊಂದು ದೀಪ, ನನ್ನ ವೈರತ್ವ ಕೇವಲ ಅಂಧಕಾರದ ಜೊತೆ, ಗಾಳಿ ವಿನಃ ಕಾರಣ ನನ್ನನ್ನು ವಿರೋಧಿಸುತ್ತಿದೆ. ಅನುವಾದ : ಹರೀಶ್ ಶೆಟ್ಟಿ, ಶಿರ್ವ

Thursday, May 21, 2020

ಗುಲ್ಜಾರ್ ಕ್ಲಾಸಿಕ್

ರೇಖೆ ಇದ್ದರೆ ಇರಲಿ,
ಯಾರೋ ಮುನಿಸಿ ಎಳೆದಿರಬೇಕು,
ಅದನ್ನೇ ಈಗ ಮಾಡುವ ಮೈದಾನ ಹಾಗು
ಬನ್ನಿ ಕಬ್ಬಡ್ಡಿ ಆಡುವ.

-------
ಮನುಷ್ಯ ನೀರಿನ ಗುಳ್ಳೆಗಳಂತೆ
ಹಾಗು ನೀರು ಹರಿಯುವ ಮೇಲ್ಮೈಯಲ್ಲಿ ತುಂಡಾಗುತ್ತಾನೆ,
ಮುಳುಗುತ್ತಾನೆ ಪುನಃ ಮೇಲೆತ್ತುತ್ತಾನೆ,
ಪುನಃ ಹರಿಯುತ್ತಾನೆ.
______

ಮಿಂಚುಗಳನ್ನು ಇಡುತ್ತಿದ್ದೆ ತೋಳುಗಳಲ್ಲಿ,
ಒಂದು ವೇಳೆ ಮೇಘಗಳ ಉಡುಪು ಇರುತ್ತಿದ್ದರೆ.

लकीरें हैं तो रहने दो 
किसी ने रूठ के गुस्से में शायद खींच दी थी 
इन्हीं को अब बनाओ पाला और 
आओ कबड्डी खेलते हैं 
------
आदमी बुलबुला है पानी का 
और पानी की बहती सतह पर टूटता भी है, 
डूबता भी है, फिर उभरता है, 
फिर से बहता है
--------
बिजलियाँ रखते आस्तीनों में, 
बादलों का अगर लिबास होता।

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ 

Wednesday, May 20, 2020

ಸ್ವಲ್ಪ ನಿಧಾನ ಜೀವನ,

ಸ್ವಲ್ಪ ನಿಧಾನ ಜೀವನ, ಇನ್ನೆಷ್ಟೋ ಋಣ ತೀರಿಸಲಿದೆ, ಕೆಲವು ನೋವು ಸಹಿಸಲಿದೆ, ಇನ್ನೆಷ್ಟೋ ಕರ್ತವ್ಯ ಪಾಲಿಸಲಿದೆ,

ನಿನ್ನ ವೇಗದ ನಡೆಯಿಂದ ಕೆಲವು ಮುನಿದರು, ಕೆಲವು ಅಗಲಿದರು,
ಮುನಿದವರನ್ನು ಸಂತೈಸಲಿದೆ ಅಳುತ್ತಿದ್ದವರನ್ನು ನಗಿಸಲಿದೆ

ಕೆಲವು ಆಸೆ ಇನ್ನೂ ಅಪೂರ್ಣವಾಗಿದೆ, ಕೆಲವು ಕೆಲಸ ಇನ್ನು ಮುಖ್ಯವಾಗಿದೆ, ಜೀವನದ ಈ ಗೊಂದಲಮಯ ಒಗಟನ್ನು,
ಪೂರ್ಣವಾಗಿ ಪರಿಹರಿಸುವುದು ಬಾಕಿ ಇದೆ,

ಕೆಲವು ಸಂಬಂಧ ಸೇರಿ, ಮುರಿದವು, ಕೆಲವು ಸಂಬಂಧ ಬಿಟ್ಟೋದವು, ಆ ಮುರಿದ ಬಿಟ್ಟೋದ ಸಂಬಂಧದ,
ಗಾಯ ತುಂಬುವುದು ಬಾಕಿ ಇದೆ,

ನೀನು ಮುಂದೆ ಹೋಗು,ನಾನು ಬರುವೆ, ನಿನ್ನನು ಬಿಟ್ಟು ಬದುಕುವೇನೋ? ಈ ಉಸಿರಲ್ಲಿ ಯಾರ ಹಕ್ಕು ಇದೆಯೋ,
ಅವರನ್ನು ಒಲಿಸುವುದು ಬಾಕಿ ಇದೆ,

ಸ್ವಲ್ಪ ನಿಧಾನ ಜೀವನ, ಇನ್ನೆಷ್ಟೋ ಋಣ ತೀರಿಸಲಿದೆ,


ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ : ಗುಲ್ಜಾರ್

A poem by Gulzar:

Ahista chal zindagi,
abhi kai karz chukana baaki hai.
Kuch dard mitana baaki hai,
kuch farz nibhana baaki hai.

Raftaar mein tere chalne se
kuchh rooth gaye, kuch chhut gaye.
Roothon ko manana baaki hai,
roton ko hasana baki hai.

Kuch hasraatein abhi adhuri hain,
k
kaam bhi aur zaruri hai.
Khwahishen jo ghut gayi is dil mein,
unko dafnana baki hai.

Kuch rishte ban kar toot gaye,
kuch judte-judte chhut gaye.
Un tootte-chhutte rishton ke
zakhmon ko mitana baki hai.

Tu aage chal main aata hoon,
kya chhod tujhe ji paunga?
In saanson par haqq hai jinka,
unko samjhaana baaki hai.

Aahista chal zindagi,
abhi kai karz chukana baki hai...



Sunday, May 17, 2020

ಕೊರೋನಾ

ಬಂದಿದ್ದಾನೆ ಮಗ ಪುನಃ ಊರಿಗೆ,
ಮರೆತು ಹೋದ ಆ ದಾರಿಗೆ,
ಕಾದು ಕಾದು ಬರಿದಾದ ಅಮ್ಮನ ಕಣ್ಣಿಂದ ಕಣ್ಣೀರು ಜಾರಿದೆ,
ಅಮ್ಮ ಧನ್ಯವಾದ ನೀಡುತ್ತಿದ್ದಾಳೆ ಕೊರೋನಾಗೆ
---
ಹಳೆ ಮನೆ ಊರಿನ,
ತುಂಬಾ ದಿವಸದ ನಂತರ,
ತುಂಬಿದೆ ಮನೆ ಸದಸ್ಯರಿಂದ,
ಆನಂದ ಭಾಷ್ಪ ಹರಿಯುತ್ತಿದೆ ಕಣ್ಣಿಂದ,
ಮರಳಿದೆ ಪುನಃ ಖುಷಿ ಮನೆಯಲ್ಲಿ ಕೊರೋನಾದಿಂದ
----
by ಹರೀಶ್ ಶೆಟ್ಟಿ, ಶಿರ್ವ

Saturday, May 16, 2020

ಸತ್ಯ

ಸುಳ್ಳರ ಗುಂಪಲ್ಲಿ
ಸತ್ಯವನ್ನು ಹುಡುಕುವುದು ಸುಲಭ
ಸತ್ಯ ಪ್ರಕಾಶಮಯ
ಸುಳ್ಳು ಅಂಧಕಾರ

----------

ಅಂಧಕಾರ ಕೋಣೆಯಲ್ಲಿ
ಬುದ್ಧನ ಮೂರ್ತಿ ಪ್ರಜ್ವಲಿತ

----------

ಅತಿಥಿ ಬಂದಿದ್ದಾರೆ
ಆಧಾರ ಸತ್ಕಾರ
ಅಡುಗೆ ಮನೆಯಲ್ಲಿ
ಸಾಕು ಕೋಳಿಯ ಚೀತ್ಕಾರ

-----------

ಬಂಡಿ ಸಾಗುತ್ತಿದೆ
ತಾಣ ದೂರ
ವಾಹಕ ಹಸಿವೆಯಲ್ಲಿ
ಹಿಂದೆ ಪ್ರಯಾಣಿಕರು ತಿನ್ನುವುದರಲ್ಲಿ ನಿರತ

by ಹರೀಶ್ ಶೆಟ್ಟಿ,  ಶಿರ್ವ 

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...