Sunday, April 26, 2020

ಎಲ್ಲಿಯ ತನಕ

ಎಲ್ಲಿಯ ತನಕ ಈ ಮನಸ್ಸಿಗೆ ಕತ್ತಲೆ ಮೋಸಿಸುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಕೆಲವೊಮ್ಮೆ ಸುಖ ಕೆಲವೊಮ್ಮೆ ದುಃಖ, ಇದೇ ಸಾರ ಜೀವನದ
ಈ ಶರತ್ಕಾಕಾಲದ ಋತು ಕ್ಷಣ ಎರಡು ಕ್ಷಣದ
ಹೊಸ ಹೂವು ನಾಳೆ ಪುನಃ ಪರಿಸರದಲ್ಲಿ ಅರಳುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಅದೆಷ್ಟೇ ಜೋರು ಗಾಳಿಯ ರಭಸವಿರಲಿ
ನಿನ್ನ ಮನಸ್ಸಲಿ ಸದಾ ಈ ನಂಬಿಕೆ ಇರಲಿ
ಪಯಣದಲಿ ಕಳೆದೋದವರ ಪುನಃ ಭೇಟಿಯಾಗುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಯಾರು ಏನಾದರೂ ಹೇಳಲಿ, ಆದರೆ ಇದೇ ಸತ್ಯವಾಗಿದೆ
ಪ್ರೀತಿಯ ಅಲೆಗಳು ಎಲ್ಲಿಯೋ ಏರುತ್ತಿದೆ
ಅದಕ್ಕೆ ಒಂದಾನೊಂದು ದಿನ ತಟ ಸಿಗುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಯೋಗೇಶ್
ಸಂಗೀತ : ರಾಜೇಶ್ ರೋಷನ್
ಹಾಡಿದವರು : ಕಿಶೋರ್ ಕುಮಾರ್
ಚಲನಚಿತ್ರ : ಬಾತೊ ಬಾತೊ ಮೇ

कहाँ तक ये मन को अंधेरे छलेंगे
उदासी भरे दिन कहीं तो ढलेंगे

कभी सुख कभी दुख, यही ज़िंदगी हैं
ये पतझड़ का मौसम घड़ी दो घड़ी हैं    (२)
नये फूल कल फिर डगर में खिलेंगे
उदासी भरे दिन कहीं तो ढलेंगे

भले तेज कितना, हवा का हो झोंका
मगर अपने मन में तू रख ये भरोसा    (२)
जो बिछड़े सफ़र में तुझे फिर मिलेंगे
उदासी भरे दिन कहीं तो ढलेंगे

कहे कोई कुछ भी, मगर सच यही है
लहर प्यार की जो कहीं उठ रही है   (२)
उसे एक दिन तो किनारे मिलेंगे
उदासी भरे दिन कहीं तो ढलेंगे

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...