Sunday, April 26, 2020

ಎಲ್ಲಿಯ ತನಕ

ಎಲ್ಲಿಯ ತನಕ ಈ ಮನಸ್ಸಿಗೆ ಕತ್ತಲೆ ಮೋಸಿಸುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಕೆಲವೊಮ್ಮೆ ಸುಖ ಕೆಲವೊಮ್ಮೆ ದುಃಖ, ಇದೇ ಸಾರ ಜೀವನದ
ಈ ಶರತ್ಕಾಕಾಲದ ಋತು ಕ್ಷಣ ಎರಡು ಕ್ಷಣದ
ಹೊಸ ಹೂವು ನಾಳೆ ಪುನಃ ಪರಿಸರದಲ್ಲಿ ಅರಳುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಅದೆಷ್ಟೇ ಜೋರು ಗಾಳಿಯ ರಭಸವಿರಲಿ
ನಿನ್ನ ಮನಸ್ಸಲಿ ಸದಾ ಈ ನಂಬಿಕೆ ಇರಲಿ
ಪಯಣದಲಿ ಕಳೆದೋದವರ ಪುನಃ ಭೇಟಿಯಾಗುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಯಾರು ಏನಾದರೂ ಹೇಳಲಿ, ಆದರೆ ಇದೇ ಸತ್ಯವಾಗಿದೆ
ಪ್ರೀತಿಯ ಅಲೆಗಳು ಎಲ್ಲಿಯೋ ಏರುತ್ತಿದೆ
ಅದಕ್ಕೆ ಒಂದಾನೊಂದು ದಿನ ತಟ ಸಿಗುತ್ತದೆ
ಬೇಸರದ ದಿನಗಳು ಎಲ್ಲಾದರೂ ಕೊನೆಗೊಳ್ಳುತ್ತದೆ

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಯೋಗೇಶ್
ಸಂಗೀತ : ರಾಜೇಶ್ ರೋಷನ್
ಹಾಡಿದವರು : ಕಿಶೋರ್ ಕುಮಾರ್
ಚಲನಚಿತ್ರ : ಬಾತೊ ಬಾತೊ ಮೇ

कहाँ तक ये मन को अंधेरे छलेंगे
उदासी भरे दिन कहीं तो ढलेंगे

कभी सुख कभी दुख, यही ज़िंदगी हैं
ये पतझड़ का मौसम घड़ी दो घड़ी हैं    (२)
नये फूल कल फिर डगर में खिलेंगे
उदासी भरे दिन कहीं तो ढलेंगे

भले तेज कितना, हवा का हो झोंका
मगर अपने मन में तू रख ये भरोसा    (२)
जो बिछड़े सफ़र में तुझे फिर मिलेंगे
उदासी भरे दिन कहीं तो ढलेंगे

कहे कोई कुछ भी, मगर सच यही है
लहर प्यार की जो कहीं उठ रही है   (२)
उसे एक दिन तो किनारे मिलेंगे
उदासी भरे दिन कहीं तो ढलेंगे

Saturday, April 25, 2020

ಜಾಗ ಬೇಕು, ಜಾಗ

ಜಾಗ ಬೇಕು, ಜಾಗ
ಮಣ್ಣಲ್ಲಿ ಮಣ್ಣಾಗಲು
ಜಾಗ ಬೇಕು,

ಜಾತಿ ಮತ ಕೇಳುವೀರೋ?
ಮಾನವನಾಗಿ ಜನ್ಮ ತಾಳಿದ್ದೇ,
ಮನುಷ್ಯನಾಗಿಯೇ ಸತ್ತಿದ್ದೇನೆ,
ನೀವೂ ಮನುಷ್ಯನಾಗಿ
ನಿರ್ಜೀವ ಶರೀರಕ್ಕೆ ನೀಡಿರಿ ಸ್ವಲ್ಪನೇ ಜಾಗ,,

ಸ್ವಲ್ಪನೇ ಜಾಗ ಬೇಕು, ಜಾಗ
ಮಣ್ಣಲ್ಲಿ ಮಣ್ಣಾಗಲು
ಜಾಗ ಬೇಕು,

ಬದುಕಿದ್ದಾಗ ನೋಡಿದ್ದೇ
ಮರಣದ ನಂತರ ಕಣ್ಣು ಮುಚ್ಚುವುದನ್ನು,
ಆದರೆ ಸತ್ತ ನಂತರ ನೋಡುತ್ತಿದ್ದೇನೆ ಬದುಕಿದ್ದವರನ್ನು
ಅಂಧರಂತೆ ವರ್ತಿಸುತ್ತಿಸುವುದನ್ನು,
ಕಣ್ಣು ತೆರೆಯಿರಿ
ನಿರ್ಜೀವ ಶರೀರಕ್ಕೆ ನೀಡಿರಿ ಸ್ವಲ್ಪನೇ ಜಾಗ,
ಸ್ವಲ್ಪನೇ ಜಾಗ ಬೇಕು,ಜಾಗ
ಮಣ್ಣಲ್ಲಿ ಮಣ್ಣಾಗಲು

ಹರೀಶ್ ಶೆಟ್ಟಿ, ಶಿರ್ವ

Wednesday, April 8, 2020

ಅರಳಿದ ಹೂವು

ನಾನೊಂದು ಅರಳಿದ ಹೂವು,
ಶಾಖೆಯಿಂದ ತುಂಡಾಗಿ ಯಾವಾಗಲೂ ಬಿದ್ದು ಹೋಗುವೆ,
ಸ್ವಲ್ಪ ಹೊತ್ತು ಈ ಉದ್ಯಾನ ನನ್ನಿಂದ ಘಮಘಮಿಸಲಿ.
ಹರೀಶ್ ಶೆಟ್ಟಿ, ಶಿರ್ವ

मैं तो खिला हुआ फूल हूँ,
शाख से कभी भी टूट के गिर सकता हूँ,
चलो कुछ पल इस बाग़ को महका दिया जाए!
हरीश शेट्टी

Saturday, April 4, 2020

ಒಂದು ಹಣತೆ

ಒಂದು ಹಣತೆ ಹಚ್ಚುವ
ಒಗ್ಗಟ್ಟಿನ ಸಂದೇಶಕ್ಕೆ

ಒಂದು ಹಣತೆ ಹಚ್ಚುವ
ಮಾಲಿನ್ಯ ತೊರೆಯಲಿಕ್ಕೆ

ಒಂದು ಹಣತೆ ಹಚ್ಚುವ
ಆಪತ್ತನ್ನು ಎದುರಿಸಲಿಕ್ಕೆ

ಒಂದು ಹಣತೆ ಹಚ್ಚುವ
ಮನಸ್ಸು ಶುದ್ಧಗೊಳಿಸಲಿಕ್ಕೆ

ಒಂದು ಹಣತೆ ಹಚ್ಚುವ
ಮಾನವೀಯತೆಕ್ಕಾಗಿ ನಿಸ್ವಾರ್ಥ ಶ್ರಮಿಸುವವರ ಕಲ್ಯಾಣಕ್ಕೆ

ಒಂದು ಹಣತೆ ಹಚ್ಚುವ
ಮನಶಕ್ತಿ ಸದೃಢಗೊಳಿಸಲಿಕ್ಕೆ

ಒಂದು ಹಣತೆ ಹಚ್ಚುವ
ದೇಶ ಕಾಪಾಡಲಿಕ್ಕೆ

ಒಂದು ಹಣತೆ ಹಚ್ಚುವ
ದ್ವೇಷ ಮರೆತು ಪ್ರೀತಿ ಹಬ್ಬಿಸ್ಸಲಿಕ್ಕೆ

ಬನ್ನಿ ಒಂದಾಗೋಣ
ಒಂದು ಹಣತೆ ಹಚ್ಚುವ
ದೇಶ ಉಳಿಸುವ ದೇಶ ಬೆಳಗಿಸುವ

by ಹರೀಶ್ ಶೆಟ್ಟಿ, ಶಿರ್ವ

Wednesday, April 1, 2020

ಮುನಿಸಿ ನನ್ನಿಂದ



ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು
ಇದು ಯೋಚಿಸಲಿಲ್ಲ ಎಂದು ಇಷ್ಟು ನೆನಪಾಗುವೆ ನೀನು
ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು

ನಿನ್ನ ವಿನಃ ನಡೆಯಲಿಲ್ಲ, ಎರಡು ಹೆಜ್ಜೆಯೂ ಎಂದು ನಾನು
ನನ್ನದೇ ಬಾಲ್ಯಯೆಂದು, ಇದೇ ಎನಿಸಿದೆ ನಾನು
ಬಿಟ್ಟು ನನ್ನನ್ನು, ಈಗ ಎಲ್ಲಿ ಹೋಗುವೆ ನೀನು
ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು
ಇದು ಯೋಚಿಸಲಿಲ್ಲ ಎಂದು ಇಷ್ಟು ನೆನಪಾಗುವೆ ನೀನು
ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು

ಮಾತಿಂದ,ಕೆಲವೊಮ್ಮೆ ಕೈಯಿಂದಲೂ ಹೊಡೆದಿದ್ದೆ ನಿನಗೆ
ಯಾವಾಗಲೂ ಇದೇ ಹೆಸರಿಂದ ಕರೆದಿದ್ದೆ ನಿನಗೆ
ಏನು ಮಾಡುವೆ ನನ್ನ, ನನ್ನಿಂದ ಕೋಪಿಸಿಕೊಂಡರೆ ನೀನು
ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು
ಇದು ಯೋಚಿಸಲಿಲ್ಲ ಎಂದು ಇಷ್ಟು ನೆನಪಾಗುವೆ ನೀನು
ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು

ನೋಡು ನನ್ನ ಕಣ್ಣೀರು, ಮಾಡುತ್ತಿದೆ ಕರೆಯ
ಓ ಬಾ ಬಂದು ಬಿಡು , ನನ್ನ ಅಣ್ಣ ನನ್ನ ಗೆಳೆಯ
ಒರೆಸು ಕಣ್ಣೀರು ನನ್ನ, ಏನು ಬರುವುದಿಲ್ಲವ ನೀನು
ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು
ಇದು ಯೋಚಿಸಲಿಲ್ಲ ಎಂದು ಇಷ್ಟು ನೆನಪಾಗುವೆ ನೀನು
ಮುನಿಸಿ ನನ್ನಿಂದ ಎಲ್ಲಿಯೋ ಹೊರಟು ಹೋದರೆ ನೀನು


ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ : ಮಜರೂಹ್ ಸುಲ್ತಾನ್ಪುರಿ ಹಾಡಿದವರು : ಜತಿನ್ ಪಂಡಿತ್ ಸಂಗೀತ : ಜತಿನ್ ಲಲಿತ್ ಚಿತ್ರ : ಜೋ ಜೀತಾ ವಹಿ ಸಿಕಂದರ್






रूठ के हम से कहीं जब चले जाओगे तुम
रूठ के हम से कहीं जब चले जाओगे तुम
ये ना सोचा था कभी, इतने याद आओगे तुम
रूठ के हम से कहीं जब चले जाओगे तुम
रूठ के हम से कहीं..
मैं तो ना चला था, दो कदम भी तुम बिन
हो फिर भी मेरा बचपन यही समझा हर दिन
छोड के मुझे भला, अब कहाँ जाओगे तुम
छोड के मुझे भला, अब कहाँ जाओगे तुम
ये ना सोचा था कभी, इतने याद आओगे तुम
रूठ के हम से कहीं जब चले जाओगे तुम
रूठ के हम से कहीं..
बातों, कभी हाथों से भी मारा है तुम्हें
हो सदा यही कह के ही पुकारा है तुम्हें
क्या कर लोगे मेरा जो बिगड़ जाओगे तुम
क्या कर लोगे मेरा जो बिगड़ जाओगे तुम
ये ना सोचा था कभी, इतने याद आओगे तुम
रूठ के हम से कहीं जब चले जाओगे तुम
रूठ के हम से कहीं..
देखो मेरे आँसू यहीं करते हैं पुकार
हो आओ चले आओ, मेरे भाई मेरे यार
पोछने आँसू मेरे क्या नहीं आओगे तुम
पोछने आँसू मेरे क्या नहीं आओगे तुम
ये ना सोचा था कभी, इतने याद आओगे तुम
रूठ के हम से कहीं जब चले जाओगे तुम
रूठ के हम से कहीं..






ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...