ಚಿತ್ರಕೃಪೆ : Google
ಹಾಡಿನ ಕೊಂಡಿ :You Tube
!!ಜಗತ್ತನ್ನು ಸೃಷ್ಟಿಸಿದವನೆಮನಸ್ಸಲ್ಲಿ ನಿನ್ನ ಬಂತು ಅದೇನು
ಯಾಕೆ ಸೃಷ್ಟಿಸಿದೆ ಜಗತ್ತನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು
!!ಯಾಕೆ ಸೃಷ್ಟಿಸಿದೆ ನೀನು ಮಣ್ಣಿನ ಗೊಂಬೆಗಳನ್ನು
ಧರತಿ ಇದು ಸುಂದರ ಸುಂದರ
ತೇಜಸ್ವಿ ಮುಖಗಳನ್ನು
ಯಾಕೆ ಸೃಷ್ಟಿಸಿದೆ ಜಗತ್ತಿನ ಆಟಗಳನ್ನು
ಅದರಲಿ ನಡೆಸಿದೆ ಯೌವನದ ಜಾತ್ರೆಗಳನ್ನು
ಮೌನದಿ ತಮಾಷೆ ನೋಡುವೆ
ನಿನ್ನ ವಿಧಿಯ ಗಮ್ಮತ್ತನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು
!!ನೀನೂ ನೋವನ್ನು ಅನುಭವಿಸಿರಬೇಕು ಮನಸ್ಸನ್ನು ನಿರ್ಮಿಸಿ
ಬಿರುಗಾಳಿ ಈ ಪ್ರೀತಿಯ ಮನಸ್ಸಲ್ಲಿ ಅಡಗಿಸಿ
ಯಾವುದಾದರು ಚಿತ್ರ ಇರಬೇಕು ಕಣ್ಣಲ್ಲಿ ನಿನ್ನ
ಕಣ್ಣೀರು ಸುರಿದಿರಬೇಕು ಕಣ್ಣಿಂದ ನಿನ್ನ
ಹೇಳು ಏನು ಕಲ್ಪನೆ ಬಂತು ನಿನಗೆ
ಯಾಕೆ ಹುಟ್ಟಿಸಿದೆ ಪ್ರೀತಿಯನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು
!!ಪ್ರೀತಿ ಸೃಷ್ಟಿಸಿ ನೀನು ಬದುಕುವುದನ್ನು ಕಲಿಸಿದೆ
ನಗುವುದನ್ನು ಕಲಿಸಿದೆ, ಅಳುವುದನ್ನು ಕಲಿಸಿದೆ
ಜೀವನದ ಪಥದಲಿ ಸಂಗಾತಿ ನೀಡಿದೆ
ಸಂಗಾತಿ ನೀಡಿ ಕನಸು ಹುಟ್ಟಿಸಿದೆ
ಕನಸು ಹುಟ್ಟಿಸಿ ನೀನು
ಯಾಕೆ ನೀಡಿದೆ ಅಗಲಿಕೆಯ ನೋವನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು
ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ತೀಸ್ರಿ ಕಸಮ್
दुनियाँ बनाने वाले, क्या तेरे मन में समायी
काहे को दुनियाँ बनायी, तूने काहे को दुनियाँ बनायी
काहे बनाये तू ने माटी के पुतले
धरती ये प्यारी प्यारी, मुखड़े ये उजले
काहे बनाया तू ने दुनियाँ का खेला
जिस में लगाया जवानी का मेला
गुपचुप तमाशा देखे, वाह रे तेरी खुदाई
तू भी तो तड़पा होगा मन को बनाकर
तूफां ये प्यार का मन में छुपाकर
कोई छबी तो होगी आँखों में तेरी
आँसू भी छलके होंगे पलकों से तेरी
बोल क्या सूझी तुझ को, काहे को प्रीत जगाई
प्रीत बना के तू ने जीना सिखाया
हसना सिखाया, रोना सिखाया
जीवन के पथ पर मीत मिलाये
मीत मिला के तू ने सपने जगाये
सपने जगा के तू ने, काहे को दे दी जुदाई
https://www.youtube.com/watch?v=V2npO5E7IBM
ಯಾಕೆ ಸೃಷ್ಟಿಸಿದೆ ನೀನು ಮಣ್ಣಿನ ಗೊಂಬೆಗಳನ್ನು ಎಂದು ಸರಿಯಾಗೇ ಪ್ರಶ್ನಿಸಿದ್ದಾರೆ ಹಸರತ್ ಜೈಪುರಿ.
ReplyDeleteಶಂಕರ್ ಜೈ ಕಿಶನ್ ಅವರ ಸಂಗೀತಕ್ಕೆ ಮುಕೇಶ್ ದನಿಯ ಅದ್ಭುತ ಗೀತೆ.
ಭಾವಾನುವಾದಕ್ಕೆ ಫುಲ್ ಮಾರ್ಕ್ಸ್.
ತುಂಬಾ ಧನ್ಯವಾದಗಳು ನಿಮಗೆ ಬದರಿ ಸರ್ .
ReplyDelete