!!ಮೆಲ್ಲಮೆಲ್ಲನೆ ಹಗಲು ರಾತ್ರಿ
ಕಣ್ಣೀರಿಡುವುದು ನೆನಪಿದೆ
ನನಗೆ ಈ ತನಕ ಪ್ರೀತಿಯ
ಆ ಸಮಯ ನೆನಪಿದೆ!!
ಮೆಲ್ಲಮೆಲ್ಲನೆ ....
!!ನಿನ್ನಿಂದ ಭೇಟಿ ಆದಾಗ
ಆ ಅತಿ ಉತ್ಸಾಹ ನನ್ನ
ಮತ್ತೆ ನೀನು ನಾಚಿ ಬೆರಳನ್ನು
ಕಚ್ಚುವುದು ನೆನಪಿದೆ!!
ಮೆಲ್ಲಮೆಲ್ಲನೆ ....
!!ಗುಟ್ಟಾಗಿ ಬಂದು ನೀನು
ನನ್ನನ್ನು ಭೇಟಿಯಾಗಿದ್ದ ಆ ಸ್ಥಳ
ಕಾಲ ಕಳೆಯಿತು ಆದರೂ
ಈ ತನಕ ಆ ಸ್ಥಾನ ನೆನಪಿದೆ!!
ಮೆಲ್ಲಮೆಲ್ಲನೆ ....
!!ಎಳೆದು ನನ್ನ
ಪರದೆಯ ಕೋನ ಹಠಾತ್ತನೆ
ಮತ್ತೆ ಸೆರಗಿನಲ್ಲಿ
ನಿನ್ನ ಮುಖ ಅಡಗಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ....
!!ನಿನ್ನನ್ನು ಏಕಾಂತದಲಿ ಕಂಡರೆ
ಲಜ್ಜೆಯಿಂದ ನಿನ್ನ ಮುಖ ಕೆಂಪೇರಿ
ಮನಸ್ಸ ಸ್ಥಿತಿಯನ್ನು
ಮಾತು ಮಾತಲ್ಲಿ ತಿಳಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ ....
!!ಅಗಲಿಕೆಯ ಉಲ್ಲೇಖ
ಎಂದಾದರೂ ಬಂದರೆ ಪ್ರೀತಿಯ ರಾತ್ರಿಯಲಿ
ಅದು ನಿನ್ನ ಅತ್ತು ಅತ್ತು ನನ್ನನ್ನೂ
ಅಳುವಂತೆ ಮಾಡುವುದು ನೆನಪಿದೆ!!
ಮೆಲ್ಲಮೆಲ್ಲನೆ ...
!!ಮಧ್ಯಾಹ್ನದ ಬಿಸಿಲಲ್ಲಿ
ನನ್ನನ್ನು ಕರೆಯಲು
ಅದು ನಿನ್ನ ಅಂಗಳದಲ್ಲಿ
ಬರಿ ಕಾಲು ಬರುವುದು ನೆನಪಿದೆ !!
ಮೆಲ್ಲಮೆಲ್ಲನೆ ....
!!ಅನ್ಯರ ಕಣ್ಣು ತಪ್ಪಿಸಿ
ಎಲ್ಲರ ಇಚ್ಚೆಯ ವಿರುದ್ಧ
ಅದು ನಿನ್ನ ರಾತ್ರಿಯಲ್ಲಿ
ಗುಟ್ಟಾಗಿ ಅಡಗಿ ಬರುವುದು ನೆನಪಿದೆ!!
ಮೆಲ್ಲಮೆಲ್ಲನೆ ....
!!ಸಾವಿರಾರೂ ತಳಮಳ
ಹಾಗೂ ಲಕ್ಷಗಟ್ಟಲೆ ಬಯಕೆಯೊಂದಿಗೆ
ನಿನಗೆ ಮೊಟ್ಟ ಮೊದಲು
ನನ್ನ ಹೃದಯ ನೀಡಿದ್ದು ನೆನಪಿದೆ!!
ಮೆಲ್ಲಮೆಲ್ಲನೆ ....
!!ಅನಾಸಕ್ತಿಯಿಂದ
ನನ್ನ ಹೃದಯದ ಮಾತನ್ನು ಕೇಳಿ
ಅದು ನಿನ್ನ ಕೈಯ ಬಳೆಗಳನ್ನು
ತಿರುಗಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ ....
!!ಬಿಟ್ಟು ಹೋಗುವಾಗ
ವಿದಾಯ ಹೇಳುವಾಗ
ಆ ನಿನ್ನ ಒಣಗಿದ ತುಟಿಗಳ
ಕಂಪಿಸುವುದು ನೆನಪಿದೆ !!
ಮೆಲ್ಲಮೆಲ್ಲನೆ ....
ಮೂಲ : ಹಸನ್ ಕಮಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಗುಲಾಮ್ ಅಲಿ
ಸಂಗೀತ : ರವಿ
ಚಿತ್ರ :ನಿಕಾಹ್
चुपके चुपके रात दिन आँसू बहाना याद है
हम को अब तक आशिकी का वो ज़माना याद है
तुझ से मिलते ही वो कुछ बेबाक हो जाना मेरा
और तेरा दांतों में वो उंगली दबाना याद है
चोरी-चोरी हम से तुम आ कर मिले थे जिस जगह
मुद्दतें गुजरीं पर अब तक वो ठिकाना याद है
खैंच लेना वो मेरा परदे का कोना दफ्फातन
और दुपट्टे से तेरा वो मुंह छुपाना याद है
तुझ को जब तनहा कभी पाना तो अज राह-ऐ-लिहाज़
हाल-ऐ-दिल बातों ही बातों में जताना याद है
आ गया गर वस्ल की शब् भी कहीं ज़िक्र-ए-फिराक
वो तेरा रो-रो के भी मुझको रुलाना याद है
दोपहर की धुप में मेरे बुलाने के लिए
वो तेरा कोठे पे नंगे पांव आना याद है
गैर की नज़रों से बचकर सब की मर्ज़ी के ख़िलाफ़
वो तेरा चोरी छिपे रातों को आना याद है
बा हजारां इस्तिराब-ओ-सद-हजारां इश्तियाक
तुझसे वो पहले पहल दिल का लगाना याद है
बेरुखी के साथ सुनना दर्द-ऐ-दिल की दास्तां
वो कलाई में तेरा कंगन घुमाना याद है
वक्त-ए-रुखसत अलविदा का लफ्ज़ कहने के लिए
वो तेरे सूखे लबों का थर-थराना याद है
www.youtube.com/watch?v=GWd7QXL3I7M