Monday, February 10, 2014

ವಿವಿಧ

ಶವ ಅಂತ್ಯ ಸಂಸ್ಕಾರ
ಆದ ಮಣ್ಣ ಮೇಲೆ
ಒಂದು
ತುಳಸಿ ಸಸಿ ಬೆಳೆಯುತ್ತಿತ್ತು
___________

ಚಿಗುರಿದ
ನವೀನ ಎಲೆಗೆ
ತಿಳಿದಿಲ್ಲ
ವಸಂತ ಏನೆಂದು

___________

ಮರದಲಿ ಓಡಾಡುವ
ಇಣಚಿಗೆ ಕೇವಲ
ಸಿಹಿ ಹಣ್ಣಿನ
ಹುಡುಕಾಟ

__________

ಜೇನು ನೊಣಗಳು
ಮಕರಂದ ಹೀರಿ
ತನ್ನ ಗೂಡು ಕಡೆ
ಸಾಗಿದವು,
ಗೂಡು ತುಂಡಾಗಿ
ಕೆಳಗೆ ಬಿದ್ದಿತ್ತು
ಜೇನು ಕುಟುಂಬವನ್ನೇ ನಿರ್ನಾಮ ಮಾಡಿ
ಯಾರೋ ಕಟುಕರು ಜೇನು ಕದ್ದು ಹೋಗಿದ್ದರು
__________

ಪೂಜೆ ಗೋಸ್ಕರ
ತಂದಿಟ್ಟ
ಬಾಳೆ ಹಣ್ಣು
ಮಂಗಗಳ ಹೊಟ್ಟೆ ಪಾಲು

by ಹರೀಶ್ ಶೆಟ್ಟಿ, ಶಿರ್ವ

Sunday, February 9, 2014

ಶೋಕ

ಸುಂದರ ಬಣ್ಣಗಳು ಸಹ
ಕತ್ತಲಲ್ಲಿ  ಕಾಣುವುದಿಲ್ಲ
________

ಹಸಿವಿಗೆ
ಶೋಕ ಏನೆಂದು ಗೊತ್ತಿಲ್ಲ
________

ಶೋಕದಲ್ಲಿದ್ದ ಮನುಜನಿಗೆ
ಏಕಾಂತ
ಸ್ವರ್ಗ ಸಮಾನ
________

ಎಲ್ಲೊ ಇಟ್ಟಿದ್ದ ಕಟ್ಟಿಗೆ
ಇಂದು
ಶವದ ಹಾಸಿಗೆಯಾಗಿದೆ
_________

ಜೀವ ಇರುವಾಗ
ಧರಿಸದ ಸೀರೆ
ಇಂದು
ಶವ ವಸ್ತ್ರವಾಯಿತು

_________


ಬೂದಿಯಾದ ದೇಹ
ಅಮ್ಮನ
ತೀರದ ಋಣ
ಮಗನ

by ಹರೀಶ್ ಶೆಟ್ಟಿ,ಶಿರ್ವ 

Saturday, February 8, 2014

ಸಾವಿಗೆ ಬಾರದ ನೆಂಟ

(ಶ್ರೀ.  ಬದರಿನಾಥ್ ಪಳವಲ್ಲಿ ಅವರ ಒಂದು ಕವಿತೆಯಿಂದ ಪ್ರೇರಿತ)

ಸಾವಿಗೆ ಬಾರದ ನೆಂಟ
ಉತ್ತರಕ್ರಿಯೆಯಂದು ಬಂದ
ಆ ದಿವಸ ನಾನು ತುಂಬಾ ಬ್ಯುಸಿ
ಬರಲಿಕ್ಕೆ ಆಗಲಿಲ್ಲ ಎಂದ
ಚಲೋ ಆಗಿದ್ದು ಆಗಿ ಹೋಯಿತು
ಆಗುವುದೆಲ್ಲ ಒಳ್ಳೆಯದಕ್ಕೆ ಎಂದ
ಪ್ರಥಮ ಸಾಲಲ್ಲಿ ಊಟಕ್ಕೆ ಕುಳಿತುಕೊಂಡ
ಹೊಟ್ಟೆ ತುಂಬಾ ಉಂಡ
ಕೊನೆಗೆ ಬಾಯಿ ಚಪ್ಪರಿಸುತ್ತ
ಎರಡು ಮೂರು ಗ್ಲಾಸ್ ಮಜ್ಜಿಗೆ ಕುಡಿದು
ಬದಿಯಲ್ಲಿ ಕುಳಿತ ಸಜ್ಜನರಿಂದ
ವಡೆ ತುಂಬಾ ಚಿಕ್ಕದಾಗಿತ್ತಲ್ಲ ಎಂದು ನೊಂದುಕೊಂಡ
ಹೋಗುವಾಗ ಅಡುಗೆ ಬಟ್ಟನಿಂದ ಕೇಳಿ ಹೋಳಿಗೆ ಕಟ್ಟಿಕೊಂಡ
ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೊರಟ ಆ ಬಂಡ
by ಹರೀಶ್ ಶೆಟ್ಟಿ,ಶಿರ್ವ


Thursday, February 6, 2014

ಬಾಂಧವ್ಯ

ಪ್ರಬಲ ನಂಟಿನ ಗಂಟು 
ದೂರ ದೂರ ಎಲ್ಲರ ನೆಲೆ ಉಂಟು 
ಯಾರೆಲ್ಲಿ, ಯಾರೆಲ್ಲಿ 
ಆದರೆ ಬಾಂಧವ್ಯ ಇದೆ ಇದ್ದಲ್ಲಿ
ಕೋಪ ತಾಪ ಚಲ್ಲಾಪಿಲ್ಲಿ 
ಒಗ್ಗಟ್ಟು ಕಷ್ಟ ಸುಖದಲಿ 
ಮತ್ತೆ ಪುನಃ ಯಾರೆಲ್ಲಿ, ಯಾರೆಲ್ಲಿ 
ಎಲ್ಲರೂ ಪುನಃ ನಿರತ ಬದುಕಿನ ಓಟದಲಿ 
by ಹರೀಶ್ ಶೆಟ್ಟಿ,ಶಿರ್ವ

ಸಹ ಯಾತ್ರಿಗಳು

ಗೆಳೆಯರು ಯಾರಿಲ್ಲ ಇಲ್ಲಿ 
ಕೇವಲ ಸಹ ಯಾತ್ರಿಗಳು
ಒಟ್ಟಿಗೆ ಇದ್ದಷ್ಟು ಸಮಯ ನಿಮ್ಮವರು
ಜೀವನ ಪ್ರಯಾಣ ಎಲ್ಲೆಲ್ಲಿ 
ನಂತರ ಅವರೆಲ್ಲಿ ನೀವೆಲ್ಲಿ 
by ಹರೀಶ್ ಶೆಟ್ಟಿ,ಶಿರ್ವ

Tuesday, December 31, 2013

ನವೀನ ವರ್ಷ ೨೦೧೪

ಬರುತ್ತಿದೆ 
ಹೌದು ಬರುತ್ತಿದೆ 
ನಿನ್ನೆಜ್ಜೆಯ ಸದ್ದು 
ಮೆಲ್ಲ ಮೆಲ್ಲನೆ 

ಗೊತ್ತಿಲ್ಲ ನನಗಾಗಿ 
ಏನು ತಂದಿರುವೆಯೆಂದು 
ಈಗಂತೂ ನಿನ್ನೆಜ್ಜೆಯ ಸದ್ದು 
ಮಧುರವೆನಿಸುತ್ತಿದೆ 

ಸಮಯದ ಚಕ್ರವೆ ಹೀಗೆಯೇ
ಹೋಗುವವರನ್ನು ನಿಲ್ಲಿಸಲಾಗುವುದಿಲ್ಲ
ಬರುವವರನ್ನು ತಡೆಯಲಾಗುವುದಿಲ್ಲ
ಗೊತ್ತಿದೆ ನೀನಂತೂ ಬರುವೆ

ಒಳ್ಳೆಯದು
ನವ ನವೀನ ಕನಸು ತುಂಬಿದೆ
ಕಣ್ಣಲ್ಲಿ ನಿನಗಾಗಿ
ಬಾ ನಿನ್ನನ್ನು ಕಾಯುತ್ತಿರುವೆ

ನವೀನ ವರ್ಷ ೨೦೧೪
ಬಾ ನಿನ್ನನ್ನು ಕಾಯುತ್ತಿರುವೆ
ಹರ್ಷದಿಂದ, ಸಂದೇಹದಿಂದ
ಏನೋ ಸ್ವಲ್ಪ ಭಯದಿಂದಲೂ

ನಿನ್ನನ್ನು ಕಾಯುತ್ತಿರುವೆ
ಬಾ ಕಾಯುತ್ತಿರುವೆ

by ಹರೀಶ್ ಶೆಟ್ಟಿ,ಶಿರ್ವ

ಹೊರಡು ಗೆಳತಿ

!!ಹೊರಡು ಗೆಳತಿ
ಇನ್ನೆಂತಹ ಯೋಚನೆ
ಕಣ್ಣ ಕಾಡಿಗೆ ಹರಿಯದಿರಲಿ
ಅತ್ತು ಅತ್ತು ಸುಮ್ಮನೆ!!
ಹೊರಡು ಗೆಳತಿ.....

!!ಹತಾಶನಾಗಿದ್ದಾನೆ
ಪಶ್ಚಾತಾಪದಲಿ ಅಪ್ಪಯ್ಯ
ಯಾಕೆ ನೀಡಿದೆ ನಾನು ಪರದೇಶ
ಹೃದಯದ ತುಂಡಯ್ಯ
ಕಣ್ಣೀರು ಸುರಿಸುತ್ತ
ದೂರ ನಿಂತು ಕೊರಗುತ್ತಿದ್ದಾನೆ!!
ಹೊರಡು ಗೆಳತಿ.....

!!ಮಮತೆಯ ಸೆರಗು
ಬೊಂಬೆಯ ಬಳೆಗಳ
ಸಣ್ಣ ದೊಡ್ಡ ಸಖಿಯರು
ಮನೆ ಗಲ್ಲಿ ಅಂಗಳ
ಬಿಟ್ಟೋಯಿತು ಬಿಟ್ಟೋಯಿತು
ಬಿಟ್ಟೋಯಿತು ಎಲ್ಲವೂ!!
ಹೊರಡು ಗೆಳತಿ.....

!!ಮದುಮಗಳಾಗಿ
ಪಾಲಕಿ ನಿಂತಿದೆ
ಯಾರಿಲ್ಲ ನಮ್ಮ
ಎಂಥ ಕ್ಷಣ ಇದಾಗಿದೆ
ಯಾರು ಇಲ್ಲಿ ಯಾರು ಅಲ್ಲಿ
ಯಾರು ಎಲ್ಲಿಯೋ!!
ಹೊರಡು ಗೆಳತಿ.....

ಮೂಲ : ಮಜರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಎಸ್ . ಡೀ. ಬರ್ಮನ್
ಚಿತ್ರ : ಬಂಬೈ ಕಾ ಬಾಬು

चल री सजनी अब क्या सोचे
कजरा ना बह जाये रोते-रोते

बाबुल पछताए हाथों को मल के
काहे दिया परदेस टुकड़े को दिल के
आँसू लिये, सोच रहा, दूर खड़ा रे
चल री सजनी...

ममता का आँगन, गुड़ियों का कंगना
छोटी बड़ी सखियाँ, घर गली अंगना
छूट गया, छूट गया, छूट गया रे
चल री सजनी...

दुल्हन बन के गोरी खड़ी है
कोई नही अपना कैसी घड़ी है
कोई यहाँ, कोई वहाँ, कोई कहाँ रे
चल री सजनी...
http://www.youtube.com/watch?v=XuNp_LY13P4

ಸಿದ್ಧಿದಾತ್ರಿ