Saturday, December 31, 2011

ಹೊಸ ವರುಷ

ಜೀವನದ ಇನ್ನೊಂದು ಅಧ್ಯಾಯ ಮುಗಿಯಿತು
ಹೊಸ ವರುಷದ ಆಗಮನ ಆಯಿತು
ಹಾಳು ಪ್ರಸಂಗಗಳನ್ನು ಮರೆತು ಆಯಿತು
ಒಳ್ಳೆಯ ನೆನಪಿನೊಂದಿಗೆ ಜೀವನ ಮುಂದುವರಿಸಲಾಯಿತು

ಇನ್ನೂ ಬೇಡ ದ್ರೋಹ, ಹಗರಣ
ಬೇಡ ಅನಾವಶ್ಯಕ ರಕ್ತ ಪಾತ
ಇನ್ನೂ ಬೇಡ ಭ್ರಷ್ಟಾಚಾರದ ಕಾಟ
ಹೊಸ ವರುಷದಲಿ ಮುಗಿಯಲಿ ದುಷ್ಟರ ಆಟ

ಹಸಿವೆಯಿಂದ ನರಳುವ ಮಕ್ಕಳಿಗೆ ಸಿಗಲಿ ಆಹಾರ 
ಸಿಗಲಿ ಅನಾಥ ಮಕ್ಕಳಿಗೆ ವಿದ್ಯೆಯ ದಾನ
ಮುಗಿಯಲಿ ಸ್ತ್ರೀಯರ ಮೇಲೆ ಆಗುವ ಅತ್ಯಾಚಾರ
ಹೊಸ ವರುಷದಲಿ ಆಗಲಿ ದುಷ್ಟರ ಸಂಹಾರ

ಬನ್ನಿ ಹೊಸ ವರುಷದಲಿ ಸಂಕಲ್ಪ ಮಾಡೋಣ
ಹೊಟ್ಟೆ ಪಾಡಿಗಾಗಿ ಕಷ್ಟಪಟ್ಟು ದುಡಿಯೋಣ
ನಿರುದ್ಯೋಗವನ್ನು ಆಚೆ ದೂಡೋಣ
ಹೊಸ ವರುಷದಲಿ ಹೊಸ ಭಾರತ ನಿರ್ಮಾಣ ಮಾಡೋಣ
by ಹರೀಶ್ ಶೆಟ್ಟಿ, ಶಿರ್ವ

ವರ್ಷ ೨೦೧೨

ವರ್ಷ ೨೦೧೨....
ನೀನು ಮೆಲ್ಲ ಮೆಲ್ಲನೆ ಬರಲು ಇಡುವ ಹೆಜ್ಜೆಯಿಂದ
ನಾ ತೀರ್ಮಾನಿಸಲಾರೆ
ನೀನು ಏನು ಆಟ ಆಡುವಿ ಎಂದು...
by ಹರೀಶ್ ಶೆಟ್ಟಿ, ಶಿರ್ವ

ಎಲ್ಲಿದ್ದಿ ನೀ ಮುಕುಂದ ?

ಎಲ್ಲಿದ್ದಿ ನೀ ಮುಕುಂದ ?
ಹುಡುಕುವೆ ಅಲ್ಲಿ ಇಲ್ಲಿ
ಅಲೆಯುತ್ತಿದ್ದೇನೆ ಗಲ್ಲಿ ಗಲ್ಲಿ...
ಹೇ ಕಳ್ಳ....
ನೀನು ಅಡಗಿ ಕುಳಿತ್ತಿದ್ದಿ ನನ್ನ ಹೃದಯದಲ್ಲಿ .
by ಹರೀಶ್ ಶೆಟ್ಟಿ, ಶಿರ್ವ

Thursday, December 29, 2011

ಪ್ರಸಾದ ಹಾಗು ಇತರ ಕಥೆಗಳು

ಪ್ರಸಾದ
_______
ಬಡ ಗಂಡ ಹೆಂಡತಿ ದೇವಸ್ಥಾನಕ್ಕೆ ಬಂದಿದ್ದರು. ಹೆಂಡತಿ ಗಂಡನಿಗೆ "ರೀ , ದೇವರಿಗೆ ಪ್ರಸಾದ ಬೇಡವೇ ಅರ್ಪಿಸುವುದು ".

ಗಂಡ "ಇಲ್ಲಿ ನಿಲ್ಲು ತರುತ್ತೇನೆ" ಎಂದು ಹೇಳಿ ತನ್ನ ಜೇಬಲ್ಲಿ ಕೈ ಹಾಕಿ ಇದ್ದ ಹಣ ತೆಗೆದ "ಕೇವಲ ೧೫ ರೂಪಾಯಿ" ಇತ್ತು, ಆಗಲಿ ಇದು ದೇವರಿಗೆ ಎಂದು ವಿಚಾರಿಸಿ ನಕ್ಕು ಪ್ರಸಾದ ತರಲು ಅಂಗಡಿಗೆ ಹೋದ.

ಆಗಲೇ ಅವನಿಗೆ ಒಂದು ಸಣ್ಣ ಮಗು ಅಳುವ ಶಬ್ದ ಕೇಳಿತು, ರಸ್ತೆಯ ಕೊನೆಯಲ್ಲಿ ಒಂದು ಮಗು ಅಳುತ್ತಿತ್ತು, ಅವನು ಮಗುವ ಬಳಿ ಹೋಗಿ "ಏನು ...ಯಾಕೆ ನೀ ಅಳುವುದು.

ಮಗು ಅಳುತ " ಹಸಿವೆ ಆಗುತ್ತಿದೆ". ಮಗುವನ್ನು ನೋಡಿ ಅವನು " ಪಾಪ" ಎಂದು ಅವನು ಹೋಟೆಲ್ ಹೋಗಿ ತನ್ನಲ್ಲಿ ಇದ್ದ ೧೫ ರೂಪಾಯಿಯ ತಿಂಡಿ ತಂದು ಮಗುವಿಗೆ ಕೊಟ್ಟ.

ಹೆಂಡತಿ ಗಂಡನನ್ನು ಬರಿ ಕೈ ಬರುವುದನ್ನು ನೋಡಿ "ಎಲ್ಲಿ ಪ್ರಸಾದ ಎಲ್ಲಿ"??

ಗಂಡ " ಪ್ರಸಾದ ದೇವರಿಗೆ ಕೊಟ್ಟು ಬಂದೆ, ಬಾ ಇನ್ನು ಒಳಗೆ ಹೋಗಿ ದರ್ಶನ ಮಾಡೋಣ" ಎಂದು ಹೇಳಿ ನಕ್ಕ.
__________________
ಹೂವು
----------
ಅವನು ಬಹಳ ದೂರದಿಂದ ಹೆಂಡತಿ ಒಟ್ಟಿಗೆ ಶಿರಡಿಗೆ ಸಾಯಿ ಬಾಬಾರ  ದರ್ಶನಗೊಸ್ಕರ ಬಂದಿದ್ದ, ಅವರ ಆರ್ಥಿಕ ಪರಿಸ್ಥಿತಿ ಅಷ್ಟು ಸರಿಯಾಗಿರಲಿಲ್ಲ,  ಶಿರಡಿ ದೇವಸ್ಥಾನದ ಅಂಗಡಿಯಲ್ಲಿ ಹೂವಿಗೆ ವಿಪರೀತ ಬೆಲೆ ಹೇಳುತ್ತಾರೆ ಎಂದು ಕೇಳಿದ ಅವನು  ತನ್ನ ಊರಿನ ಪೇಟೆಗೆ ನಡೆದು ಕೊಂಡು ಹೋಗಿ  ೫ ರೂಪಾಯಿಯ ಹೂವು ಒಟ್ಟಿಗೆ ತಂದಿದ.

ಅವನ ಹೆಂಡತಿ " ಏನೂ ನೀವು ಇಷ್ಟು ದೂರ ಹೋಗಿ ಹೂವು ತಂದಿದ್ದೀರಿ ,  ಅಲ್ಲಿ ಸಿಗುದಿಲ್ಲವೇ , ಎಂದು ಹೇಳಿ ನಕ್ಕಳು. 

ದೇವಸ್ಥಾನದಲ್ಲಿ ತುಂಬಾ ಜನರು ದೊಡ್ಡ ದೊಡ್ಡ ಹೂವಿನ ಮಾಲೆ ಪ್ರಸಾದದ ಒಟ್ಟಿಗೆ ಸರದಿ ಸಾಲಲ್ಲಿ ನಿಂತಿದ್ದರು.

ಅರ್ಚಕರು ಎಲ್ಲ ಭಕ್ತರ ಹೂವಿನ ಮಾಲೆ ತೆಗೊಂಡು ಸಾಯಿ ಬಾಬಾರ  ವಿಗ್ರಹದ ಮುಂದೆ ಇದ್ದ ಸಮಾದಿಯ ಮೇಲೆ ಬಿಸಾಡುತ್ತಿದ್ದರು,  ಅವನ ಹೆಂಡತಿ  "ಈ ದೊಡ್ಡ ದೊಡ್ಡ ಹೂವಿನ ಮಾಲೆ ಹೀಗೆ ಬಿಸಾಡುವಾಗ, ನೀವು  ತಂದಿದ ಮುಷ್ಠಿ ಹೂವಿನ ಗತಿ ಏನೋ" ಎಂದು ನಕ್ಕಳು.

ನೂಕು ದೂಡು ಸಹಿಸಿ ಅವರ ಸರದಿ ಬಂತು, ಆಶ್ಚರ್ಯವೆಂದರೆ ಅರ್ಚಕರು ಅವನ ಕೈಯಲ್ಲಿದ್ದ ಹೂವು ತೆಗೊಂಡು ಬಹಳ ಶ್ರದ್ದೆಯಿಂದ ಸಾಯಿ ಬಾಬಾರ ಪಾದದಲ್ಲಿ ಹೋಗಿ ಇಟ್ಟರು ಹಾಗು ಅಲ್ಲಿದ್ದ ಸಿಹಿ ಪ್ರಸಾದ ತಂದು ಅವನಿಗೆ ಕೊಟ್ಟು ಆಶಿರ್ವಾದಿಸಿದರು.

ಇದನ್ನು ನೋಡಿ ಹೆಂಡತಿಯ ಕಣ್ಣಿನಿಂದ ನೀರು ಸುರಿಯಲಾರಂಬಿಸಿತು, ದೇವರು ಇವರ ಭಕ್ತಿ ಮೆಚ್ಚಿದರಲ್ಲವೇ..... ಅವರು  ಶ್ರದ್ದೆಯಿಂದ ಸಾಯಿ ಬಾಬಾರಿಗೆ  ನಮಸ್ಕರಿಸಿ ಹೊರ ಬಂದರು.

______________________
ಆರತಿಯ ಪದ್ಧತಿ
--------------------
ಹೊಸ ಅರ್ಚಕ ದೇವರ ವಿಗ್ರಹದ ಮುಂದೆ ನಿಂತು ಆರತಿ ಮಾಡ ತೊಡಗಿದ, ಇದನ್ನು ಗಮಿನಿಸಿದ ಹಳೆಯ ಅರ್ಚಕ ಪೂಜೆ ಆದ ನಂತರ ಹೊಸ ಅರ್ಚಕನಲ್ಲಿಗೆ ಬಂದು "ನೋಡು ನೀನು ದೇವರ ಮುಂದೆ ನಿಂತು ಆರತಿ ಮಾಡಬಾರದು, ಇದು ಸರಿಯಲ್ಲ, ಯಾವಾಗಲು ನಾವು ದೇವರ ವಿಗ್ರಹದ ಬದಿಯಲ್ಲಿ ನಿಂತು ಆರತಿ ಮಾಡ ಬೇಕು, ಇದರಿಂದ ದೇವರಿಗೆ ಬರಲು ಹಾದಿ ಸುಗಮವಾಗುತ್ತದೆ".

ಇದನ್ನು ಕೇಳಿ ಹೊಸ ಅರ್ಚಕ "ಸ್ವಾಮಿ, ದೇವರು ನನ್ನ ಹೃದಯದಲ್ಲಿ ವಾಸವಾಗಿದ್ದಾರೆ, ದೇವರು ಸುಲಭವಾಗಿ ನನ್ನ ಹೃದಯದಿಂದ ಈ ವಿಗ್ರಹಕ್ಕೆ ಸೇರಿ ನನ್ನ ಪೂಜೆ ಬೇಗ ಸ್ವೀಕರಿಸಲೆಂದು ನಾನು ದೇವರ ವಿಗ್ರಹದ ಮುಂದೆ ನಿಂತು ಆರತಿ ಮಾಡುವುದು" ಎಂದು ಉತ್ತರಿಸಿದ.

by ಹರೀಶ್ ಶೆಟ್ಟಿ, ಶಿರ್ವ

Wednesday, December 28, 2011

ಕೊರತೆ

ಪ್ರೀತಿಸಿ ಅವಳನ್ನು ಬರೆದೆ ಅನೇಕ ಕವನ , ಕಥೆ
"ಪ್ರೀತಿಸುವೆ" ಎಂದು ಅವಳಿಗೆ ಹೇಳಲು ಹೋದಾಗ
ಉಂಟಾಯಿತು ಪದಗಳ ಕೊರತೆ
by ಹರೀಶ್ ಶೆಟ್ಟಿ, ಶಿರ್ವ

ನಿನ್ನದೆ

ನೀ ಬಿಟ್ಟು ಹೋಗಿ ಕಳೆದಿದೆ ಹಲವು ವರ್ಷಗಳು
ಆದರೆ ಹೃದಯದ ದ್ವಾರದಲಿ ಇಂದೂ ನಿನ್ನದೆ ಕಾವಲು

ಮಳೆಯಲ್ಲಿ ಒಟ್ಟಿಗೆ ನೆನೆದು ಉರುಳಿದವು ಬಹಳ ದಿನಗಳು 
ಆದರೆ ಮಳೆಯ ಹನಿಗಳಲ್ಲಿ ಇಂದೂ ನಿನ್ನದೆ ಪ್ರತಿಬಿಂಬಗಳು 

ನೀನಿಲ್ಲದೆ ಬಾಡಿದೆ ಇಂದು ಹೂದೋಟದ ಸುಮಗಳು
ಆದರೆ ಉದ್ಯಾನದಲ್ಲಿ ಇಂದೂ ನಿನ್ನದೆ ಸುಗಂಧಗಳು 

ಮಾಸಿ ಹೋಗಿದೆ ನಿದ್ದೆ ಇಲ್ಲದ ಆ ಅನೇಕ ರಾತ್ರಿಗಳು
ಆದರೆ ರಾತ್ರಿಯ ನಕ್ಷತ್ರಗಳಲ್ಲಿ ಇಂದೂ ನಿನ್ನದೆ ರೂಪಗಳು
by ಹರೀಶ್ ಶೆಟ್ಟಿ ,ಶಿರ್ವ 

Saturday, December 24, 2011

ಕನಸಲ್ಲಿ ಸಂತ ಕ್ಲೋಸ್

ಒಂದು ಮಗು ಚರ್ಚ್ ಗೆ ಬಂದ, ಚರ್ಚ್ ಲ್ಲಿ ತುಂಬಾ ಜನರಿದ್ದರು.
ಮಗು ಬಂದು ಪಾದ್ರಿ ಹತ್ತಿರ ಕೇಳಿದ"ಫಾದರ್ ....ನನಗೆ ಸಂತ ಕ್ಲೋಸ್ ಅವರನ್ನು ಬೇಟಿ ಮಾಡಲಿಕ್ಕಿದೆ".

ಪಾದ್ರಿ ಚರ್ಚಲ್ಲಿ ತುಂಬಾ ಜನರು ಇದ್ದುದ್ದನ್ನು ಕಂಡು  "ಮಗು ....ಅವರು ನಿನ್ನ ಕನಸಲ್ಲಿ ಬರುತ್ತಾರೆ, ಈಗ ನೀನು ಹೋಗು" ಎಂದು ಹೇಳಿ ಅವನನ್ನು ರವಾನಿಸಿದರು. 

ಆ ಮಗು ಪುನಃ ಮರುದಿನ ಚರ್ಚ್ ಬಂದ.

ಪಾದ್ರಿ ಅವನಿಗೆ " ಸಂತ ಬಂದಿದ್ದಾರಾ  ಕನಸಲಿ "?.
ಮಗು "ಹೌದು ಅವರು ಬಂದಿದ್ದರು, ಅವರು ನಿಮ್ಮ ಹತ್ತಿರ ೫೦೦೦೦ ರೂಪಾಯಿ ತೆಗೆದು ಕೊಳ್ಳಬೇಕೆಂದು ಹೇಳಿದ್ದಾರೆ " .

ಈಗ ಪಾದ್ರಿಗೆ ಏನು ಮಾಡ ಬೇಕೆಂದು ಅರ್ಥ ಆಗಲಿಲ್ಲ .

ಹಣ ಕೊಡದ್ದಿದ್ದರೆ ಅವರು ಮಗುವಿಗೆ ಹೀಗೆಯೇ ಲುಭಾಯಿಸಿದು ಎಂದು ಬಯಲಾಗುತ್ತದೆ ಹಾಗು ಎಲ್ಲರ ಎದುರು ಫಜೀತಿ ಆಗುತ್ತದೆ.

ಹಣ ಕೊಟ್ಟರೆ ಅವರ ಹೇಳಿದ ಮಾತಿನ ಮಾನ ಉಳಿಯುತ್ತದೆ.

ಅವರು ಸುಮ್ಮನೆ ಒಳಗೆ ಹೋಗಿ ೫೦೦೦೦ ರುಪಾಯಿ ತಂದು ಮಗುವಿನ ಕೈಯಲ್ಲಿ ಇಟ್ಟರು. ಮಗು ನಗು ನಗುತಲೇ ಅಲ್ಲಿಂದ ಹೊರಟು  ಹೋದ.

by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ