Wednesday, January 8, 2020

ಹೀಗೊಂದು ನನ್ನ ಪತ್ರಕ್ಕೆ

ಹೀಗೊಂದು ನನ್ನ ಪತ್ರಕ್ಕೆ
ಉತ್ತರ ಬಂತು
ಕವರಲ್ಲಿ ಒಂದು ಗುಲಾಬಿ ಬಂತು

ಪರಿಸರದಲ್ಲಿ ಹರಡಿದೆ ಅವಳ ಸುಗಂಧ
ಅವಳ ಸುಗಂಧ
ನಿಶ್ಚಿತವಾಗಿ ಅವಳ ಸಂದೇಶ ಬಂತು
ಹೀಗೊಂದು...

ಮರುಳಾಗದೆ ಇರಲಿ ಈ ನನ್ನ ಹೃದಯ
ನನ್ನ ಹೃದಯ
ಯೌವನ ಅದರಲ್ಲಿ ಉಕ್ಕಿ ಬಂತು
ಹೀಗೊಂದು...

ಯಾರು ಈ ಜಗದಲಿ ಅತಿ ಚೆಲುವೆ
ಅತಿ ಚೆಲುವೆ
ಅವಳ ಹೆಸರು ಆರಿಸಿ ಬಂತು
ಹೀಗೊಂದು...

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಪಂಕಜ್ ಉಧಾಸ್
ಆಲ್ಬಮ್ :  ಮೆಹೆಕ್
Yun mere khat ka jawaab aaya
Yun mere khat ka jawaab aaya
Lifaafe mein ik gulaab aaya
Yun mere khat ka jawaab aaya
Lifaafe mein ik gulaab aaya
Yun mere khat ka jawaab aaya
Hawa mein bikhari hain uski khusboo
Hawa mein bikhari hain uski khusboo
Hain uski khusboo
Jurur uska aadab aaya
Jurur uska aadab aaya
Yun mere khat ka jawaab aaya
Bahek na jaaye ye dil hamara
Bahek na jaaye ye dil hamara
Ye dil hamara
Ghazab ka uspe shabaab aaya
Ghazab ka uspe shabaab aaya
Yun mere khat ka jawaab aaya
Hasee hain duniya mein kaun sabse
Hasee hain duniya mein kaun sabse
Hain kaun sabse
Woh naam uska janaab aaya
Woh naam uska janaab aaya
Yun mere khat ka jawaab aaya
Lifaafe mein ik gulaab aaya
Yun mere khat ka jawaab aaya
Yun mere khat ka jawaab aaya.
ಘಝಲ್ ಕೊಂಡಿ : YOU TUBE

Tuesday, January 7, 2020

ಕೆಂಪು ಬೀದಿ

ಕೆಂಪು ಬೀದಿ
ರಸಹೀನ ಅಧರ
ಶುಷ್ಕ ನಗು
ಬಾಡಿದ ಮುಖ
ಕೃತ್ರಿಮ ಸೌಂದರ್ಯ
ಹೊಲಸು ಮಂಚ
ಸುಳ್ಳು ಪ್ರೀತಿಗೆ ಕರೆ

ಹಣ ಖರ್ಚು ಮಾಡಿ
ಪ್ರೀತಿ ಕೊಳ್ಳುವೀರೋ  ?
ಅನುಮತಿ ಬೇಡ, ನಿಮ್ಮಿಚ್ಛೆ

ಅಭ್ಯಾಸ ಇದೆ ಅವರಿಗೆ
ಇದೇ ಅವರ ವ್ಯವಸಾಯ
ಇದರಲ್ಲಿಯೇ ಅವರ ಆದಾಯ
ಇದು ಅವರ ಅಸಹಾಯಕತೆ
ಹಲವು ಕಣ್ಣೀರ ಕಥೆ
ಕೇಳಬೇಕಾಗಬಹದು ಅವರ ವ್ಯಥೆ
ಸಿದ್ಧರಿದ್ದೀರಾ?

ಹಣ ಖರ್ಚು ಮಾಡಿ
ವಿಶ್ರಾಂತಿ ಪಡೆದುಕೊಳ್ಳುವೀರೋ?
ಅನುಮತಿ ಬೇಡ, ನಿಮ್ಮಿಚ್ಛೆ

ಪ್ರೀತಿ ಆಗಬಹುದು ನಿಮಗೆ
ಕ್ಷಣಿಕ ಸುಖ ಸಿಗಬಹುದು ನಿಮಗೆ
ಇದೇ ಸ್ವರ್ಗವೆಂಬ ಭಾವನೆ ಮೂಡಬಹುದು ನಿಮ್ಮಲ್ಲಿ
ಆದರೆ ಜಾಗೃತೆ,
ಭಾವನಾತ್ಮಕ ಬಂಧನದಲ್ಲಿ ಸಿಕ್ಕಿಬೀಳಬಹುದು ನೀವು
ನಿಮ್ಮ ಮನೆತನವನ್ನೂ ಮರೆಯಬಹುದು ನೀವು
ನಿಮ್ಮನ್ನೂ ನೀವು ಮರೆಯಬಹುದು
ಏನಂತೀರಿ?

ಹಣ ಖರ್ಚು ಮಾಡಿ
ಕೆಂಪು ದಾರಿಯಲಿ ಹೋಗುವೀರೋ ?
ಅನುಮತಿ ಬೇಡ, ನಿಮ್ಮಿಚ್ಛೆ

by ಹರೀಶ್ ಶೆಟ್ಟಿ, ಶಿರ್ವ

Sunday, January 5, 2020

ಕನ್ನಡಿ

ಮನಸ್ಸಲ್ಲಿದ್ದದ್ದು
ತೋರಿಸುವಿಕೆ ಇಲ್ಲ
ಮುಖಸ್ತುತಿ ಮಾಡಬೇಕೆನ್ನುವೆಯಾ
ಕ್ಷಮಿಸು ಅಭ್ಯಾಸವಿಲ್ಲ
ನೇರ ನುಡಿ
ಇಷ್ಟವಾದರೆ
ಸೈ
ಇಷ್ಟವಾಗದಿದ್ದರೆ
ಇರಲಿ,
ನಿನ್ನನ್ನು ಸುಧಾರಿಸಿಕೊಳ್ಳು
ಒರಟು
ಕಠೋರ ಹೃದಯ
ನಿಷ್ಕರುಣಿ
ಏನೆಲ್ಲ ಹೆಸರಿಡುವೆ ಗೊತ್ತು
ಬಿಡು
ಬೇರೇನು ಗೊತ್ತಿಲ್ಲ ನನಗೆ
ಇದೇ ನನ್ನ ಸಹಜ ಸ್ವಭಾವ
ಕ್ಷಮಿಸು
ಸುಳ್ಳು ಹೇಳಲಾರೆ
ತೋರಿಸುವೆ
ನಿನ್ನ ಸ್ಥಿತಿ
ನಿನ್ನದೇ ಆಕೃತಿ
ನಿನ್ನ ನೈಜತನ ತೋರಿಸುವುದೇ
ನನ್ನ ಪ್ರಕೃತಿ

by ಹರೀಶ್ ಶೆಟ್ಟಿ, ಶಿರ್ವ 

Saturday, January 4, 2020

ಇಪ್ಪತ್ತು, ಇಪ್ಪತ್ತು

ಹೊಸ ವರ್ಷ
ಇಪ್ಪತ್ತು, ಇಪ್ಪತ್ತು
ಹಳೆ ಅನುಭವಗಳು
ಅಷ್ಟು, ಇಷ್ಟು
ನವ ನಡಿಗೆ
ಜಾಗರೂಕು,ಜಾಗರೂಕು
ಜವಾಬ್ದಾರಿ
ಬಹಳಷ್ಟು, ಬಹಳಷ್ಟು
ಹೊಸ ಸವಾಲುಗಳು
ಎದುರಿಸು,ಎದುರಿಸು
ಆಮೇಲೆ ನಿನ್ನದೇ
ಯಶಸ್ಸು,ಯಶಸ್ಸು

by ಹರೀಶ್ ಶೆಟ್ಟಿ ,ಶಿರ್ವ

ಕಾವ್ಯ ಲೋಕ

ಮರಳಿ ಬರುತ್ತಿರುವೆ
ಕಾವ್ಯ ಲೋಕದ ಭೂಮಿಗೆ
ಪುನಃ ಬೀಜ ಬಿತ್ತಲು
ಅದು ಗಿಡವಾಗಿ
ಬೆಳೆದು ಹಸಿರು ಹಸಿರಾಗಿ
ಅರಳುತ್ತಿರಲಿ ನನ್ನಲ್ಲಿ ನವ ನಿತ್ಯ ಬರಹದ ಹೂಗಳಾಗಿ
ಮೆರೆಯಲಿ ನಿಮ್ಮಲ್ಲಿ ನನ್ನಲ್ಲಿ ಸಂತಸದ  ಉಸಿರಾಗಿ

by ಹರೀಶ್ ಶೆಟ್ಟಿ, ಶಿರ್ವ

Sunday, March 3, 2019

अभिनन्दन

सुगंध फैला जैसे चन्दन,
ऐसे दिखाया उसने पराक्रम,
ऐसी भरी उसने उड़ान,
दुश्मन धरती पर उठा कम्पन,
जैसे भगवन वीर हनुमान,
ध्वस्त कर दुश्मनो का लंका रुपी विमान,
सीना चौड़ा कर खड़ा रहा दुश्मनो के आँगन,
ऐसा बहाद्दुर भारत का वीर महान,
दुश्मनो का झुका कर शान,
वतन वापिस लौटा हमारा निडर जवान,
पूरा भारत करे जिसका नमन,
वह है हमारा वीर
अभिनन्दन, अभिनन्दन, अभिनन्दन
हरीश शेट्टी
Photo courtesy : krishna

Saturday, February 16, 2019

ಕೋಟಿ ಕೋಟಿ ನಮನ

ರಜೆಯಲ್ಲಿ ಮನೆ ಹೋಗಿ
ತಾಯಿಯ ಮಡಿಲಲ್ಲಿ
ಮಲಗುವ ಆಸೆ ಇತ್ತು
ಅವನಿಗೆ
ಮಾತೃಭೂಮಿಯ
ಮಡಿಲಲ್ಲಿ ಮಲಗಿಬಿಟ್ಟ,
ತಾಯಿಯ ಸೆರಗು
ಕಣ್ಣೀರಿಂದ ಒದ್ದೆ ಒದ್ದೆ,
ಅವಳ ಕೈಯಲ್ಲಿ
ಮಗ ಸೈನಿಕನ
ಪಾರ್ಥಿವ ಶರೀರದ ಮುದ್ದೆ,
ತಾಯಿಯ ಪಾಲಿಗೆ
ಅವನ ಶರೀರವೂ ಬರಲಿಲ್ಲ ಪೂರ್ಣ,
ಅಂತಹ ಅನೇಕ ದೇಶದ ವೀರರಿಗೆ ಕೋಟಿ ಕೋಟಿ ನಮನ🙏🙏🙏
ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ