Wednesday, April 3, 2013

ಅಲ್ಲಿ ನೋಡಿ ದೀಪ ಬೆಳಗುತ್ತಿದೆ

ಅಲ್ಲಿ ನೋಡಿ 
ದೀಪ ಬೆಳಗುತ್ತಿದೆ 
ಕತ್ತಲಾಗಲಿಲ್ಲ ನೋಡಿ 
ನೋಡಿ ನೋಡಿ ಎಷ್ಟೆಷ್ಟೋ ದೀಪಗಳು

ತನ್ನ ಬೆಳಕನ್ನು ನೀಡಿ ಹೋದ ನೋಡಿ 
ಈ ಎಲ್ಲ ದೀಪಗಳಿಗೆ
ತನ್ನ ಕಾಂತಿ ಬೀರಿ ಎಂದು
ಆಶಿರ್ವಾದ ನೀಡಿ ಹೋದ ನೋಡಿ 

ರವಿ ನಿಷ್ಠುರನೆಂದು
ಹೇಗೆ ಹೇಳಲಿ
ಅವನು ಜನಿಸುವುದೇ
ಅಸ್ತನಾಗಲು

ಆಘಾತವಾಯಿತೆ, ಹೌದೇ
ಆದರೆ ಕಣ್ಣೀರನ್ನು ತಡೆಯಿರಿ
ಅವನು ನೀಡಿದ
ಬೆಳಕನ್ನು ಆರಿಸದಿರಿ

ಜ್ಞಾನ ಪ್ರಕಾಶಿಸಲಿ
ಸಂತೋಷವಾಗುವುದು ಅವನಿಗೆ
ಖುಷಿ ಪಡುವನು ಅವನು
ಇದೇ ಅವನ ಆಶಯವಾಗಿತ್ತು
by ಹರೀಶ್ ಶೆಟ್ಟಿ, ಶಿರ್ವ

ನೀನು ಪ್ರತಿಯೊಬ್ಬನಾಗು

ರೂಮಿ 
" ನೀನಿರುವಾಗ ಎಲ್ಲರೊಂದಿಗೆ 
ಆದರೆ ನನಗೆ, ನೀನಿಲ್ಲ ಯಾರೊಂದಿಗೂ 
ನೀನಿರದಾಗ ಯಾರೊಂದಿಗೂ
ಆದರೆ ನನಗೆ, ನೀನಿರುವೆ ಎಲ್ಲರೊಂದಿಗೆ 
ನೀನಿಷ್ಟು ಸಮರ್ಪಿತನಾಗಿರುವುದಕ್ಕಿಂತ ಎಲ್ಲರೊಂದಿಗೆ 
ನೀನು ಪ್ರತಿಯೊಬ್ಬನಾಗು 
ನೀನು ಅನೇಕನಾದಾಗ
ನೀನು ಏನೂ ಇಲ್ಲ, ಖಾಲಿ" 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
Rumi
“When you are with everyone
but me,you're with no one.
When you are with no one but me,
you're with everyone.
Instead of being so bound up with everyone,
be everyone. When you
become that many, you're nothing. Empty.”

Monday, April 1, 2013

ನೀನು ಹೀಗೆ ಮರೆಯಲಾರೆ ನನ್ನನ್ನು


!! ನೀನು ಹೀಗೆ ಮರೆಯಲಾರೆ ನನ್ನನ್ನು
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು
ಎಂದಾದರೂ ಕೇಳಿದರೆ ನನ್ನ ಹಾಡನ್ನು
ಒಟ್ಟೊಟ್ಟಿಗೆ ನೀನು ಗುನುಗುನಿಸುವೆ ಹಾಡನ್ನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು

!!ಆ ವಸಂತ ಋತು
ಆ ರಾತ್ರಿ ಹುಣ್ಣಿಮೆಯ
ನಾವು ನುಡಿದ ಮಾತುಗಳು ಪ್ರೀತಿಯ  -೨
ಆ ನೋಟಗಳೆಲ್ಲ ನೆನಪಾಗುವುದು
ವಿಚಾರದಲಿ ನೀನು ತಂದಾಗ ನನ್ನನ್ನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು

!!ನನ್ನ ಕೈಯಲ್ಲಿ ನಿನ್ನ ಚಹರೆ ಇತ್ತು
ಯಾವುದೇ ಗುಲಾಬಿ ಹೂವು ಇದ್ದಂತೆ  -೨
ಮತ್ತೆ ನಿನ್ನ ಬಾಹುಗಳ ಆಧಾರ ಪಡೆದಿದ್ದೆ
ಹೇಗೆ ಮರೆಯುವೆ ಆ ಸಂಜೆಯನ್ನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು

!!ನನ್ನನ್ನು ನೋಡದಿದ್ದರೆ
ನಿನಗೆ ನೆಮ್ಮದಿ ಇರುತ್ತಿರಲಿಲ್ಲ
ಒಂದು ಅಂತಹ ಸಮಯವೂ ಕಳೆದೋಗಿದೆ -೨
ಸುಳ್ಳೆಂದರೆ ಕೇಳು ಹೃದಯದಿಂದ
ನಾನು ಹೇಳಿದರೆ ಮುನಿಸುವೆ ನನ್ನಿಂದ ನೀನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ :ಶಂಕರ್ ಜೈ ಕಿಶನ್
ಚಿತ್ರ : ಪಗಲ ಕಹಿ ಕ

तुम मुझे यूँ भुला ना पाओगे
हाँ तुम मुझे यूँ भुला ना पाओगे
जब कभी भी सुनोगे गीत मेरे
संग संग तुम भी गुनगुनाओगे
हाँ तुम मुझे यूँ भुला ना पाओगे
हो तुम मुझे यूँ ...

(वो बहारें वो चांदनी रातें
हमने की थी जो प्यार की बातें ) \- २
उन नज़ारों की याद आएगी
जब खयालों में मुझको लाओगे
हाँ तुम मुझे यूँ भुला ना पाओगे
हो तुम मुझे यूँ ...

(मेरे हाथों में तेरा चेहरा था
जैसे कोई गुलाब होता है ) \- २
और सहारा लिया था बाहों का
वो शाम किस तरह भुलाओगे
हाँ तुम मुझे यूँ भुला ना पाओगे
हो तुम मुझे यूँ ...

(मुझको देखे बिना क़रार ना था
एक ऐसा भी दौर गुज़रा है ) \- २
झूठ मानूँ तो पूछलो दिल से
मैं कहूंगा तो रूठ जाओगे
हाँ तुम मुझे यूं भुला ना पाओगे

जब कभी भी ...
http://www.youtube.com/watch?v=3WQAfAfxFoI

ಒಹ್ ನನ್ನ ಆಯ್ಕೆಯ ಸುಂದರಿಯೇ

Rumi
“O my choice beauty
You've gone
But your love remains in my heart
Your image in my eye
O guide on my winding road
I keep turning round and round in the hopes of
Finding you” 
ರೂಮಿ 
ಒಹ್ ನನ್ನ ಆಯ್ಕೆಯ ಸುಂದರಿಯೇ 
ನೀನು ಹೋದೆ
ಆದರೆ ನಿನ್ನ ಪ್ರೀತಿ ನನ್ನ ಹೃದಯದಲಿ ಉಳಿದಿದೆ
ನಿನ್ನ ಚಿತ್ರ ನನ್ನ ಕಣ್ಣಿನಲ್ಲಿದೆ
ಒಹ್ 
ಮಾರ್ಗದರ್ಶನ ನೀಡಿ ನನ್ನ ಅಂಕುಡೊಂಕಾದ ಹಾದಿಯಲಿ 
ನಾನು ನಿನ್ನನ್ನು ಕಂಡುಹಿಡಿಯುವ ಭರವಸೆಯಲಿ ಸುತ್ತು ಸುತ್ತು ತಿರುಗುತ್ತಿದ್ದೇನೆ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಜೀವನ

ಜೀವನ ಹೀಗೆಯೇ 
ನಿಲ್ಲುವುದಿಲ್ಲ 
ಹೊಸ ಸೂರ್ಯದ ಆಗಮನ 
ನಮಗೆ ಸೂಚಿಸುತ್ತದೆ 
ಜೀವನ ಇನ್ನೂ ಬಾಕಿ ಇದೆ ಎಂದು
by ಹರೀಶ್ ಶೆಟ್ಟಿ,ಶಿರ್ವ 

ಹೃದಯದ ಜ್ವಾಲೆ

ಸುಲಭ ಅಲ್ಲ ಹೃದಯದ ಜ್ವಾಲೆಯನ್ನು ತಣಿಸುವುದು 
ಇದು ಆಕಾಶದಿಂದ ಸುರಿಯವ ಮಳೆಗೂ ತಿಳಿದಿದೆ
by ಹರೀಶ್ ಶೆಟ್ಟಿ, ಶಿರ್ವ 

ಅಲ್ಲಿ ಮಳೆಯಂತೆ

ಅಲ್ಲಿ ಮಳೆಯಂತೆ 
ಇಲ್ಲಿ ಮರುಳ ಅಲೆಯಂತೆ 
ಎಲ್ಲ ಮೇಲೆ ಕೂತವನ ಇಚ್ಚೆಯಂತೆ
by ಹರೀಶ್ ಶೆಟ್ಟಿ, ಶಿರ್ವ 

ಸಿದ್ಧಿದಾತ್ರಿ