Wednesday, October 5, 2011

ನಾನು......ನಾನೇ

ನಾನು .....ನಾನೇ
ಎಲ್ಲ ನಾನೇ
ಎಲ್ಲ ನನ್ನದೇ
ನಾನೇ ಸರ್ವಸ್ವ
ನಾನಿಲ್ಲದೆ ಏನೂ ಇಲ್ಲ
ನನಗೆ ಯಾರ ಅಗತ್ಯವಿಲ್ಲ

ನಾನು......ನಾನೇ... ಎಂದು
ಹಿಟ್ಲರ್ ಹೋದ
ನೆಪೋಲಿಯನ್ ಹೋದ
ಆರಂಗ್ಜೇಬ್ ಹೋದ
ಸದ್ದಾಂ ಹುಸ್ಸನ್ ಇಲ್ಲ
ಒಸಮ ಇನ್ನಿಲ್ಲ
ನಾನು......ನಾನೇ... ಎಂಬ
ಅಹಂಕಾರ ಏಕೆ ?
ನಾನು ನನ್ನ ಎಂಬ ಅಧಿಕಾರ ಏಕೆ ?
ಬೇಡವಾದ ಜಂಬ ಏಕೆ ?
ನಶ್ವರ ಶರೀರದ ಆಸೆ ಏಕೆ? 
ಯಾರದೂ ಆಗದ ಸೊತ್ತು ನಿನಗ್ಯಾಕೆ ? 
 by ಹರೀಶ್ ಶೆಟ್ಟಿ, ಶಿರ್ವ

ಮೊದಲ ಪ್ರೀತಿ

ಏಕೆ ನಿನ್ನ ನೆನಪು ಯಾವಾಗಲು
ಏಕೆ ನಿನ್ನನ್ನು ಮರೆತು ಹೋಗುವುದಿಲ್ಲ

ಆ ದಿನಗಳು ಕಳೆದವು
ಪ್ರೀತಿಯ ಮರಳು ಮನೆ ತುಂಡಾಗಿದೆ
ಹೃದಯ ಮನೆಯಲಿ ನೀ ಹೇಗೆ ಉಳಿದು ಹೋದೆ
ಏಕೆ ನಿನ್ನ ಚಿತ್ರವ ನನ್ನ ಮನಸ್ಸಲಿ ಬಿಟ್ಟು ಹೋದೆ

ಈಗ ನಮ್ಮ ಹಾದಿ ಬೇರೆ ಬೇರೆ
ನಮ್ಮಿಬ್ಬರ ಸಂಸಾರ ಪ್ರತ್ಯೇಕ
ಸುಖ ಸಂತೋಷ ನೆಲೆಸಿದೆ ನಮ್ಮಿಬ್ಬರ ಮನೆಯಲಿ
ಆದರೆ ಏಕೆ ನಿನ್ನ ನೆನಪು ಸದಾ ನನ್ನ ಮನದಲಿ

ಮೊದಲ ಪ್ರೀತಿಯ ಈ ಶಿಕ್ಷೆ ಏಕೆ
ಆ ಕಷ್ಟದ ಅನುಭವ ಈಗಲೂ ಏಕೆ
ಈಗಲೂ ಕಣ್ಣಿರ ಧಾರೆ ಸುರಿಯುವುದು ಏಕೆ
ನಮ್ಮಿಬ್ಬರ ಹೃದಯ ಹೀಗೆಯೇ ಅಳುತಾ ಇರಬೇಕೆ?
by ಹರೀಶ್ ಶೆಟ್ಟಿ, ಶಿರ್ವ

Tuesday, October 4, 2011

ವಿಷ ಅಮೃತ

ಕಾಣದ ಕುರುಡರ
ಜಗ ಕತ್ತಲೆ
ಕಾಣುವ ಕುರುಡರ
ಮನಸ್ಸು ಬೆತ್ತಲೆ

ಮುದ್ದು ಮೂರ್ಖರ 
ದಯನೀಯ ಸ್ಥಿತಿ
ಮೂರ್ಖ ಜಾಣರ
ಗಂಭೀರ ಸ್ಥಿತಿ

ಶೀಘ್ರ  ಕೋಪಿಯ
ಕೋಪ ಕ್ಷಣ ಕಾಲ 
ಉಗ್ರ ಕೋಪಿಯ
ಕೋಪ ಕೆಟ್ಟ ಕಾಲ

ಸಜ್ಜನರು ಕೊಟ್ಟ ಭಾಷೆ
ಕೊನೆಯ ಉಸಿರು ತನಕ
ದುರ್ಜನರು ಕೊಟ್ಟ ಭಾಷೆ
ಮರಳಿ ಹೋಗುವ ತನಕ
by ಹರೀಶ್ ಶೆಟ್ಟಿ, ಶಿರ್ವ

ಪ್ರಯಾಣ

ಎಲ್ಲಿ ನಿಲ್ಲುವುದೋ ನಿನ್ನ ಪ್ರಯಾಣ
ಸಾಗುತ್ತಲೇ ಇದೆ ಗೊತ್ತಿಲ್ಲ ತಾಣ

ನಿನ್ನ ಬಯಕೆಗೆ ಇಲ್ಲಿಲ್ಲ ಸ್ಥಾನ ಮಾನ
ಎಲ್ಲಿ ಜೀವನ ಸಾಗುವುದೋ ಅಲ್ಲಿಯೇ ನಿನ್ನ ಆವಾಸ ಸ್ಥಾನ

ಎಲ್ಲಿ ನಿನ್ನನ್ನು ನೆಲೆಸುವುದೋ ಈ ಪಯಣ
ಯಾವ ಭೂಮಿಯ ಮಣ್ಣಿನಲ್ಲಿಯೋ ನಿನ್ನ ಅವಸಾನ

ಪ್ರಯಾಣ ಮಾಡುವುದೇ ಜೀವನದ ವಿಧಾನ
ಯಾರಿಗೆ ಗೊತ್ತು ಎಲ್ಲಿ ನಿನ್ನ ಗಮ್ಯಸ್ಥಾನ
by ಹರೀಶ್ ಶೆಟ್ಟಿ, ಶಿರ್ವ

ತೋಚುದಿಲ್ಲ

ತೋಚುದಿಲ್ಲ ಮನದಲಿ ಏನೂ
ಗೀಚುವುದು ಹೇಗೆ
ಪದಗಳು ಸುಮ್ಮನಿದ್ದವೇ
ಅದನ್ನು ಕಲಕುದು ಹೇಗೆ
ಭಾವನೆಗಳು ಮೌನವಾಗಿದೆ
ಹೊರ ತೆಗೆಯುವುದು ಹೇಗೆ
ಪೆನ್ನು ನಿದ್ದೆಯಲ್ಲಿ ಇದೆ
ಅದನ್ನು ಎಚ್ಚರಿಸುವುದು ಹೇಗೆ
byಹರೀಶ್ ಶೆಟ್ಟಿ, ಶಿರ್ವ

Monday, October 3, 2011

ಸಾಹಿತ್ಯದ ಮಹತ್ವ

ಕಟ್ಟಿದ ಕೈ
ಮುಕ್ತವಾಯಿತು
ಮನಸ್ಸಿನ ತಳಮಳ
ದೂರವಾಯಿತು

ಪುಸ್ತಕದ ಹಾಳೆಗಳು
ಕಾಯುತ್ತಿದ್ದವು
ಪುನಃ ಪುನಃ ನನ್ನನ್ನು
ಕರೆಯುತ್ತಿದ್ದವು
ಪೆನ್ನಿನ ಆಸೆ
ಈಡೇರಿತು

ಭಾವನೆಗಳ ಅಲೆಗಳು
ಏರು ತಗ್ಗುತ್ತಿದ್ದವು
ಕನಸುಗಳ ದೋಣಿ
ಮುಳುಗುತ್ತಿದ್ದವು
ಬರಹದ ಇಚ್ಛೆ
ತೀರಕ್ಕೆ ಸೇರಿತು

ಕವಿಯ ಹೃದಯ
ಅಳುತ್ತಿದ್ದವು
ಆತ್ಮಿಯ ಗೆಳೆತನ
ಕೊರಗುತ್ತಿದ್ದವು
ಸಾಹಿತ್ಯದ ಮಹತ್ವ
ಎಲ್ಲರಿಗೂ ತಿಳಿಯಿತು
by ಹರೀಶ್ ಶೆಟ್ಟಿ, ಶಿರ್ವ

Saturday, October 1, 2011

ಕ್ಷಣಿಕ ವ್ಯಾಮೋಹ

ಅರಳುವ ಮುನ್ನ
ಹೂವಿನ ಮೊಗ್ಗನ್ನು 
ಕೈಯಿಂದ ಉಜ್ಜಿ 
ಅದರ ಬಾಳನ್ನು ಮುಗಿಸಿ
ಕೈ ಸುಗಂಧಿಸುವವನೇ

ಅದರ ಸುಗಂಧ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಹಣಕಾಗಿ ಹೆಣವಾಗಿ
ದೂರ ಇದ್ದು ಬಾಳಿ
ಮಮತೆಯ ಕೊಂದು
ಮಗುವನ್ನು ದೂರ ಇಟ್ಟು
ನೊಂದುವ ತಾಯಿಯೇ

ಹಣದ ಈ ಮಾಯೆ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಆಡಿ ನಲಿದಾಡಿ
ಅಲ್ಲಿ ಇಲ್ಲಿ ಓಡುವ
ಕೋಳಿಯನ್ನು ಕೊಂದು
ಅದರ ಸಾರನ್ನು
ರುಚಿಸುವವನೇ

ಅದರ ಸವಿ ರುಚಿ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ತನ್ನ ಸ್ವಾರ್ಥಕ್ಕಾಗಿ
ಮಿತ್ರ ಎಂದು ಹೇಳಿ
ಮುಗ್ಧ ಜೀವಿಯನ್ನು
ಬಲು ಸುಲಭವಾಗಿ
ಮೂರ್ಖ ಮಾಡುವವನೇ

ನಿನ್ನ ಸ್ವಾರ್ಥದ ಲಾಭ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಮರವನ್ನು ಕಡಿದು
ನಿಸರ್ಗವನ್ನು ಬೆತ್ತಲೆ ಮಾಡಿ
ತನ್ನ ಮನೆಯನ್ನು
ಸುಂದರವಾಗಿ 
ಅಲಂಕರಿಸುವವನೇ

ಆ  ಪೀಠೋಪಕರಣಗಳು 
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ