ಬೆಟ್ಟದ ಹೂವು,
ದೇವರ ಮುಡಿಗೇ,
ನಶ್ವರ ಜೀವ,
ಕಾಣದ ಕಡಲಿಗೆ,
ಕಾಣದಂತೆ ಮಾಯವಾದನವನು,
ಬಿಟ್ಟು ಹೋದ ಕಣ್ಣೀರ ಸಾಗರದಲಿ ನಮ್ಮನ್ನು,
ಹೆಸರಂತೆ ನಡೆ ನುಡಿ ಇತ್ತು ಅವನ,
ಪುನೀತ ಪಾವನ,
ಎಂಥ ವಿಧಿಯ ಆಟ,
ಅಯ್ಯೋ,ಇಷ್ಟೇನಾ ಜೀವನ???
by ಹರೀಶ್ ಶೆಟ್ಟಿ, ಶಿರ್ವ
ಬೆಟ್ಟದ ಹೂವು,
ದೇವರ ಮುಡಿಗೇ,
ನಶ್ವರ ಜೀವ,
ಕಾಣದ ಕಡಲಿಗೆ,
ಕಾಣದಂತೆ ಮಾಯವಾದನವನು,
ಬಿಟ್ಟು ಹೋದ ಕಣ್ಣೀರ ಸಾಗರದಲಿ ನಮ್ಮನ್ನು,
ಹೆಸರಂತೆ ನಡೆ ನುಡಿ ಇತ್ತು ಅವನ,
ಪುನೀತ ಪಾವನ,
ಎಂಥ ವಿಧಿಯ ಆಟ,
ಅಯ್ಯೋ,ಇಷ್ಟೇನಾ ಜೀವನ???
by ಹರೀಶ್ ಶೆಟ್ಟಿ, ಶಿರ್ವ
ವಿಜಯದಶಮಿಯ ಈ ಪಾವನ ದಿವಸ,
ಮನೆಮನೆಯಲ್ಲಿ ಹರ್ಷೋಲ್ಲಾಸ,
ಸತ್ಯದ ಗೆಲುವಿನ ಹರ್ಷ,
ಸುಳ್ಳಿನ ಆಗಿದೆ ಭಸ್ಮ,
ಜಯ ಜಯ ಎನ್ನುವ,
ಸತ್ಯಕ್ಕೆ ಜೈ ಎನ್ನುವ,
ರಾವಣನ ದರ್ಪಕ್ಕೆ ಸೋಲು,
ರಾಮನ ದಿಟತನಕ್ಕೆ ಗೆಲುವು,
ಸತ್ಯದ ಜಯ ಎಂದೆಂದಿಗೂ,
ಸುಳ್ಳಿನ ಪರಾಜಯ ಯಾವಾಗಲೂ,
ಜಯ ಜಯ ಎನ್ನುವ,
ಸತ್ಯಕ್ಕೆ ಜೈ ಎನ್ನುವ,
ಬನ್ನಿ, ಸತ್ಯದ ಪತಾಕೆ ಹಾರಿಸುವ,
ಸುಳ್ಳಿನ ಪ್ರತಿಮೆ ಸುಟ್ಟುಹಾಕುವ,
ಮನಸ್ಸಿನ ಕಲ್ಮಶವನ್ನು ಕೊಲ್ಲುವ,
ನಿರ್ಮಲ ಮನಸ್ಸಿನಿಂದ ಸಾಗುವ,
ಜಯ ಜಯ ಎನ್ನುವ,
ಸತ್ಯಕ್ಕೆ ಜೈ ಎನ್ನುವ,
ಬನ್ನಿ, ವಿಜಯೋತ್ಸವ ಆಚರಿಸುವ,
ದೀಪಗಳನ್ನು ಹಚ್ಚುವ,
ನಕ್ಕು ನಲಿದು ಕುಣಿಯುವ,
ಅನ್ನ ಪ್ರಸಾದ ಹಂಚುವ,
ಜಯ ಜಯ ಎನ್ನುವ,
ಸತ್ಯಕ್ಕೆ ಜೈ ಎನ್ನುವ,
by ಹರೀಶ್ ಶೆಟ್ಟಿ, ಶಿರ್ವ
ಅಮ್ಮ ನೀನು ನೆಲೆಸು ನನ್ನ ಮನದಲಿ,
ಇರಲಿ ನಿನ್ನ ವಾಸ ನನ್ನ ಮನೆಯಲಿ,
-
ಬೆನ್ನ ಹಿಂದೆ ನೀನು ನಿಂತಿರು ನನ್ನ ಕಷ್ಟದಲಿ,
ಹೃದಯದಲ್ಲಿರು ನೀನು ನನ್ನ ಆನಂದದಲಿ,
ಸದಾ ನಿನ್ನ ಸ್ಮರಣೆ ಇರಲಿ ನನ್ನ ಬದುಕಲಿ,
ಅಮ್ಮ ನೀನು ನೆಲೆಸು ನನ್ನ ಮನದಲಿ....
-
ನವರಾತ್ರಿಯ ನವದುರ್ಗೆ ಅವತಾರದ ನಿನ್ನ ಗುಣಗಳು,
ನಿನ್ನ ಶಕ್ತಿ ಸಾಹಸದ ಅನೇಕ ಕಥೆಗಳು,
ಸದಾ ನನ್ನಲಿದ್ದು ನನ್ನನ್ನು ಪ್ರೇರಿಸಲಿ,
ಅಮ್ಮ ನೀನು ನೆಲೆಸು ನನ್ನ ಮನದಲಿ....
-
ಕೋಟಿ ಕೋಟಿ ಜನರಿಗೆ ನೀನು ಸ್ಫೂರ್ತಿ,
ದಿನ ನಿತ್ಯ ಮಾಡುವರು ನಿನ್ನ ಬಕುತಿ,
ಸದಾ ಭಕ್ತರಲ್ಲಿ ನಿನ್ನ ಅನುಗ್ರಹ ಇರಲಿ,
ಅಮ್ಮ ನೀನು ನೆಲೆಸು ನನ್ನ ಮನದಲಿ....
-
by ಹರೀಶ್ ಶೆಟ್ಟಿ, ಶಿರ್ವ
ಕರ್ಮ ಎಲ್ಲ ನಿನ್ನ ಕೃಪೆಯಿಂದಲೇ,
ಭಾಗ್ಯ ಎಲ್ಲ ನಿನ್ನ ಕೃಪೆಯಿಂದಲೇ,
ಮಹಿಮೆ ಎಲ್ಲಾ ನಿನ್ನದೇ ಓ ಅಮ್ಮ,
ನಾವೆಲ್ಲಾ ನಿನ್ನ ಕೈಗೊಂಬೆ,
ಆಟ ಎಲ್ಲಾ ನಿನ್ನದೇ ಓ ಅಮ್ಮ....
-
ಬ್ರಹ್ಮ, ವಿಷ್ಣು, ಸದಾಶಿವ,
ಎಲ್ಲರಲ್ಲಿ ನಿನ್ನ ಸತ್ವ,
ನಿನ್ನದೇ ಶಕ್ತಿ ಓ ಅಮ್ಮ,
ಆಟ ಎಲ್ಲಾ ನಿನ್ನದೇ ಓ ಅಮ್ಮ....
-
ಗೌರಿ, ಕಾಳಿ, ಜಗದಂಬೆ,
ನೂರಾರು ರೂಪ ನಿನ್ನ,
ನಿನ್ನದೇ ಅವತಾರ ಓ ಅಮ್ಮ,
ಆಟ ಎಲ್ಲಾ ನಿನ್ನದೇ ಓ ಅಮ್ಮ....
-
ಸೂರ್ಯ, ಚಂದ್ರ, ತಾರೆಗಳು,
ಎಲ್ಲವೂ ನಿನ್ನದೇ ಸೃಷ್ಟಿ,
ಕಣ ಕಣದಲ್ಲಿ ನಿನ್ನ ವಾಸ ಓ ಅಮ್ಮ,
ಆಟ ಎಲ್ಲಾ ನಿನ್ನದೇ ಓ ಅಮ್ಮ....
-
by ಹರೀಶ್ ಶೆಟ್ಟಿ, ಶಿರ್ವ
ಧನ್ಯನಾದೆ ನಾನು ಧನ್ಯನಾದೆ,
ಅಮ್ಮ ನಿನ್ನ ದರ್ಶನದಿಂದ ನಾನು ಧನ್ಯನಾದೆ,
ಹೇಳಲಾರದ ನೆಮ್ಮದಿ ನಾನು ಪಡೆದೆ,
ದಿವ್ಯಾನಂದ ಎನಗೆ ಇಂದು ಸಿಕ್ಕಿದೆ,
ಧನ್ಯನಾದೆ ನಾನು ಧನ್ಯನಾದೆ.....
-
ನನ್ನ ಕಲ್ಪನೆಯ ದೇವಿ ನೀನು,
ಹೃದಯದಲಿ ಸ್ಥಾಪಿಸಿದ ಪ್ರತಿಮೆ ನೀನು,
ಆಹಾ ಎಂತಹ ಸಂಯೋಗ ಒದಗಿ ಬಂದಿದೆ,
ಕಲ್ಪಿಸಿದ ಮೂರ್ತಿಯ ದರ್ಶನ ಪಡೆದೆ,
ಧನ್ಯನಾದೆ ನಾನು ಧನ್ಯನಾದೆ.....
-
ಬಾಲ್ಯದಿಂದಲೇ ನಿನ್ನನ್ನು ಆರಾಧಿಸುತ್ತ ಬಂದಿದೆ,
ಸಮಯ ಸಮಯ ಎಲ್ಲವೂ ಕೊಟ್ಟೆ ನೀನು ಕೇಳದೆ,
ಇನ್ನು ಕೇಳಲು ಬಯಕೆ ನನ್ನಲ್ಲಿ ಎಲ್ಲಿದೆ,
ನಿನ್ನ ರೂಪ ನೋಡಿಯೇ ಮೆಚ್ಚಿ ಹೋದೆ,
ಧನ್ಯನಾದೆ ನಾನು ಧನ್ಯನಾದೆ.....
-
ಯಾವ ಜನ್ಮದ ಪುಣ್ಯವೋ ಇದು,
ಕಣ್ತುಂಬಾ ಅಮ್ಮ ನಿನ್ನನ್ನು ನೋಡುವ ಭಾಗ್ಯ ನನ್ನದು,
ಅಮೃತ ಸಮಾನ ತೀರ್ಥ ಪ್ರಸಾದ ಪಡೆದೆ,
ಮನತುಂಬಾ ಸಂತೃಪ್ರಿ ನನಗೆ ಸಿಕ್ಕಿದೆ,
ಧನ್ಯನಾದೆ ನಾನು ಧನ್ಯನಾದೆ.....
by ಹರೀಶ್ ಶೆಟ್ಟಿ, ಶಿರ್ವ
ಅಮ್ಮ ನಿನ್ನ ಸ್ವಾಗತದಲಿ
ಹರ್ಷೋಲ್ಲಾಸ ಎಲ್ಲಾ ಮಂದಿರದಲಿ,
ಅಮ್ಮ ಈ ನವರಾತ್ರಿಯಲ್ಲಿ,
-
ಆಹಾ ಎಷ್ಟು ಸುಂದರ ಅಮ್ಮನ ಮುಖದ ಅಂದ, ನೋಡಲು ಅಮ್ಮನನು ಎಷ್ಟು ಚಂದ,
ಭಕ್ತರ ಹೃದಯ ಮನಸ್ಸಲ್ಲಿ ತುಂಬಿದೆ ಆನಂದ,
ಹಾಡುತ ನಲಿಯುತ್ತಿದ್ದಾರೆ ಉತ್ಸಾಹದಲ್ಲಿ,
ದೀಪ ಬೆಳಗಿದೆ.....
-
ಮಲ್ಲಿಗೆ ಮೆರೆಯುತ್ತಿದೆ ಹರ್ಷದಲಿ,
ಅದು ಅಲಂಕಾರವಾಗಿದೆ ಅಮ್ಮನ ಕೊರಳಲಿ,
ಭಕ್ತರ ಉಲ್ಲಾಸ ಉತ್ತುಂಗದಲಿ,
ಆಹಾ ಅದೆಂಥ ಪರಿಮಳ ಹರಡಿದೆ ಈ ವಾತಾವರಣದಲ್ಲಿ,
ದೀಪ ಬೆಳಗಿದೆ.....
-
ಕೋಗಿಲೆ ಹಾಡುತ್ತಿದೆ ಅಮ್ಮನ ಭಕ್ತಿಯ ಗಾನ,
ಹಕ್ಕಿಗಳ ಚಿಲಿಪಿಲಿಯ ಸುಂದರ ತಾನ,
ಅಂಬಾ ಅಂಬಾ ಎಂಬ ದನಗಳ ಕೂಗಾನ,
ಆಹಾ ಅದೆಂಥ ಅಮಲೇರಿದೆ ಈ ಪರಿಸರದಲಿ,
ದೀಪ ಬೆಳಗಿದೆ.....
-
by ಹರೀಶ್ ಶೆಟ್ಟಿ, ಶಿರ್ವ
ನಾನು ಆರತಿ ಮಾಡುವೆ ಅಮ್ಮ,
ಅಂಬೆ ಜಗದಂಬೆ,
-
ನಿನ್ನ ಮಹಿಮೆ ತುಂಬಾ ಅದ್ಭುತ,
ನಿನ್ನ ಕೃಪೆಯಿಂದ ವಿಷವೂ ಆಗುವುದು ಅಮೃತ,
ಸದಾ ನಿನ್ನ ಅನುಗ್ರಹ ಇರಲಿ ಅಮ್ಮ,
ಅಂಬೆ ಜಗದಂಬೆ,
-
ದುರ್ಬಲರಿಗೆ ಶಕ್ತಿಯ ನೀನು ರೂಪ,
ದುಷ್ಟರಿಗೆ ನೀನೊಂದು ವಿಕೋಪ,
ಸದಾ ಪಾಪಕೃತ್ಯದಿಂದ ಕಾಪಾಡು ಅಮ್ಮ,
ಅಂಬೆ ಜಗದಂಬೆ,
-
ಸಗುಣ ಅಡಗಿದೆ ನಿನ್ನ ಕೋಪದಲಿ,
ಕೇವಲ ಮಮತೆ ನಿನ್ನ ಹೃದಯದಲ್ಲಿ,
ಕರುಣಾಮಯಿ ನೀನು ಅಮ್ಮ,
ಅಂಬೆ ಜಗದಂಬೆ
-
ಕ್ಷಮೆಯೇ ನಿನ್ನ ಆಭರಣ,
ಬೇಡಿದ್ದನ್ನು ನೀಡುವೆ ಕ್ಷಣ ಕ್ಷಣ,
ನಿನ್ನ ಉಪಕಾರ ಮರೆಯಲಾರೆ ಅಮ್ಮ,
ಅಂಬೆ ಜಗದಂಬೆ.
-
by ಹರೀಶ್ ಶೆಟ್ಟಿ, ಶಿರ್ವ
ಕರುಣಿಸೋ ಅಮ್ಮ,
ಭಕ್ತಿಯಿಂದ ಪೂಜಿಸುವೆ ನಿನ್ನ,
ಕರುಣಿಸೋ ಅಮ್ಮ,
ಭಕ್ತಿಯಿಂದ ಪೂಜಿಸುವೆ ನಿನ್ನ,
ನಿನ್ನಾರಾಧನೆಯ ಈ ನವರಾತ್ರಿಯ ದಿವಸ,
ಮನೆ ಮನೆಯಲ್ಲಿ ತರುತ್ತದೆ ಹರುಷ,
ದಯಪಾಲಿಸೋ ಅಮ್ಮ,
ಮನಸ್ಸ ಇಚ್ಛೆ ಪೂರೈಸು ಅಮ್ಮ,
ಕರುಣಿಸೋ ಅಮ್ಮ.....
ನಿನ್ನಲಾಂಕರ ನೋಡಲು ಎನಗೆ,
ನೂರು ಕಣ್ಣುಗಳು ಸಾಲದು ನನಗೆ,
ನಿನ್ನ ರೂಪ ಎಷ್ಟು ಚೆನ್ನ,
ಮನಮಂದಿರದಲ್ಲಿ ನೆಲೆಸುವೆ ನಿನ್ನ,
ಕರುಣಿಸೋ ಅಮ್ಮ.....
ಕಷ್ಟ ಸುಖಗಳು ಎಲ್ಲವೂ ನಿನ್ನ,
ನಿನ್ನ ವಿನಃ ಏನಿದೆ ಇಲ್ಲಿ ನನ್ನ,
ನಿನ್ನ ದಯೆಯಿಂದಲೇ ಸಾಗಿದೆ ಜೀವನ,
ಹೀಗೆಯೇ ದಯೆ ಇರಲಿ ನಿನ್ನ,
ಕರುಣಿಸೋ ಅಮ್ಮ.....
by ಹರೀಶ್ ಶೆಟ್ಟಿ, ಶಿರ್ವ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...