Saturday, January 17, 2015

ಕವಿ

ಒಬ್ಬ ಬರಹಗಾರನಿದ್ದ ನನ್ನೊಳಗೆ
ಆದರೆ ಇತ್ತೀಚಿನ ದಿನಗಳಲ್ಲಿ
ಅವನು ಕಾಣುವುದಿಲ್ಲ

ಸರಿ, ಇರಲಿ
ಕಂಡು ಬಂದು ಸಹ
ಕೇವಲ ಉಪದ್ರವ
ಬೇರೇನಿಲ್ಲ
ಅದೇ ದಿನನಿತ್ಯ
ಬೇಡಾದ ಕವಿತೆ ಕಟ್ಟುವುದು
ಅದೇ ನೆನಪಿನ ಕಥೆ
ಅದೇ ಬದುಕಿನ ಪಾಠ
ಅದೇ ಸತ್ಯದ ಅನಾವರಣ

ಇತರರಿಗೆ ಏನಾಗಬೇಕು
ಈ ಕವಿಯ ಗೋಳು ಕೇಳಿ
ಸುಮ್ಮನೆ ಇರಬಾರದೆ

ಈಗ ಅಡಗಿ ಕೂತಿದ್ದಾನೆ
ಹೊರ ಬರಲು ಇಚ್ಛೆ ಇಲ್ಲ ಬಹುಶಃ
ನನಗಂತೂ  ಖುಷಿ
ಸುಮ್ಮನೆ ಸ್ವಲ್ಪ ಸಮಯದ ಉಳಿತಾಯ
ಮನೆಯಲ್ಲಿ ಸಹ ಸಂತೋಷ
ಈಗ ಸ್ವಲ್ಪ ಅವರ ಮಾತೂ ಕೇಳುತ್ತೇನೆ ಎಂದು
ಇಲ್ಲಾದರೆ ನನ್ನಲ್ಲಿ ಕವಿ ನಿರತ ಇದ್ದರೆ
ಮನೆಯಲ್ಲಿ ಇದ್ದು ಸಹ ಇಲ್ಲದಂತೆ

ಆದರೆ ಕೆಲವೊಮ್ಮೆ
ಸಮಾಜದ ಕೆಲವು ದುರಂತ
ಜಗತ್ತಿನಲ್ಲಿ ನಡೆಯುವ
ಆಸಾಧಾರಣ ಘಟನೆ
ವಿಚಿತ್ರ ಆಗು ಹೋಗುಗಳನ್ನು ನೋಡಿ
ಕವಿ ಹೊರ ಬರಲು ಬಯಸುತ್ತಾನೆ
ಆದರೆ ಪುನಃ ನಿಲ್ಲುತ್ತಾನೆ
ಹೊರಗೆ ಬರುವುದಿಲ್ಲ
ಒಳಗೆ ಕೂತು ಕಣ್ಣೀರಿಡುತ್ತಾನೆ
ಬಹುಶಃ ಕವಿ ಒಳಗೆ ಬಂಧಿಯಾಗಿದ್ದಾನೆ
by ಹರೀಶ್ ಶೆಟ್ಟಿ,ಶಿರ್ವ

2 comments:

  1. ನನ್ನೊಳಗಣ ಕವಿಯದೂ ಇದೇ ಪಾಡು! :-(

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...