Tuesday, July 2, 2013

ಕನ್ನಡಿಯ ನೂರು ತುಂಡು

!!ಕನ್ನಡಿಯ ನೂರು ತುಂಡು
ಮಾಡಿ ನಾನು ನೋಡಿದೆ
ಒಂದರಲ್ಲೂ ಏಕಾಂಗಿಯಾಗಿದ್ದೆ
ನೂರಲ್ಲಿಯೂ ಒಂಟಿಯಾಗಿದ್ದೆ !!

!!ಇದ್ದ ಒಂದು ಸಂಗಾತಿ
ಅದೂ ಬಿಟ್ಟು ಹೋಗಿದೆ
ವಿಶ್ವಾಸ ಘಾತಕ ಅಲ್ಲದೆ
ಅದೇಕೆ ನನ್ನಿಂದ ಮುನಿಸಿದೆ
ಬಾಡಿ ಹೋದ ಕಣ್ಣಲ್ಲಿ
ಕಣ್ಣೀರ ಸಂತೆಗಳಿದೆ
ಒಂದರಲ್ಲೂ ಏಕಾಂಗಿಯಾಗಿದ್ದೆ
ನೂರಲ್ಲಿಯೂ ಒಂಟಿಯಾಗಿದ್ದೆ!!

!!ಅವಳ ಅವಸ್ಥೆ ಏನಿರಬಹುದು
ಇದೇ ದುಃಖ ಸತಾಯಿಸುತ್ತಿದೆ
ನಿದ್ರೆ ಸಹ ಬರುವುದಿಲ್ಲ
ವೇದನೆ ಏರುತ ಹೋಗುತ್ತಿದೆ
ಜೀವನದ ಹಾದಿಯಲಿ
ನನ್ನಿಂದ ಆಟವಾಡುವುದು
ಜನರ ಸ್ವಭಾವವಾಗಿದೆ 
ಒಂದರಲ್ಲೂ ಏಕಾಂಗಿಯಾಗಿದ್ದೆ
ನೂರಲ್ಲಿಯೂ ಒಂಟಿಯಾಗಿದ್ದೆ!!

!!ಎಲ್ಲ ಕಡೆ ಬೆಳಕಿದೆ
ಹೃದಯದಲ್ಲೊಂದೆ ಕತ್ತಲೆ ಇದೆ
ಅದ್ಯಾವಾಗ ಬೆಳಕಾಗುವುದು 
ಏಕೆ ಮುಂಬೆಳಗು ಅಡಗಿದೆ
ನನ್ನ ಹೃದಯದ ಧೈರ್ಯ ನೋಡಿ
ಎಷ್ಟು ನೋವು ಸಹಿಸಿದೆ
ಒಂದರಲ್ಲೂ ಏಕಾಂಗಿಯಾಗಿದ್ದೆ
ನೂರಲ್ಲಿಯೂ ಒಂಟಿಯಾಗಿದ್ದೆ!!

ಮೂಲ : ಹಸರತ್ ಜೈಪುರಿ ????
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕುಮಾರ್ ಸಾನು
ಸಂಗೀತ : ಅನು ಮಲಿಕ್
ಚಿತ್ರ : ಮಾ

aaine ke sau tukade kar ke ham ne dekhe hai
ek me bhee tanha the, sau me bhee akele hai

jo bana ek sathee, woh bhee ham se chhuta hai
bewafa nahee jab woh, fir kyo ham se ruthha hai
khoyee khoyee aakhon me, aasuon ke mele hai

usaka hal kya hoga, yahee gam satata hai
nind bhee nahee aatee, dard badhata jata hai
jindagee kee raaho me, log hamse khele hai

har taraf ujala hai, dil me ek andhera hai
samane kab aayega, kyo chhupa savera hai
meraa dil jigar dekho, kitane dard jele hai
http://www.youtube.com/watch?v=ud1KWDqU9Lo



No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...