Thursday, January 22, 2015

ಯಾರು ನನ್ನ

ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು
ಸಂಯಮ ಕಳೆದುಕೊಳ್ಳುವೆ ಯಾಕೆ ನಾನು
ಸನಿಹ ಇದ್ದಾಗ ನೀನು
ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು

ಬಿಟ್ಟು ಎಲ್ಲಿಯೋ ದೂರ ಈಗ ಹೋಗಬೇಡ ನೀನು
ನಿನಗೆ ನನ್ನಾಣೆ
ಜೊತೆಯಲ್ಲಿರು ಯಾರೆ ಆಗಲಿ ನೀನು
ಸುಳ್ಳೋ ಸತ್ಯನೋ ಅಥವಾ ಇದು ಭ್ರಮೆಯೋ
ನನ್ನವನಾಗಿ ಮಾಡಲು ಮನಸ್ಸನು
ಗಟ್ಟಿ ಮಾಡಿರುವೆ ಈಗಂತೂ
ಕೈಯನ್ನಿಡಿದು ನಡೆ ಇಂದಿನಿಂದ
ನಾನೇಳುವೆ ಎಲ್ಲರಿಂದ

ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು
ಸಂಯಮ ಕಳೆದುಕೊಳ್ಳುವೆ ಯಾಕೆ ನಾನು
ಸನಿಹ ಇದ್ದಾಗ ನೀನು
ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು

ಹುಡುಕಿ ಕೊಳ್ಳುವೆ ಎಲ್ಲ ಕಡೆ ಈಗಂತೂ ನೀನು
ತಿಳಿದಿರುವೆ ನಾನಿದು
ನಿನ್ನಾಗಿದ್ದೇನೆ ಎಂದಿನಿಂದ ತೇಲುತ್ತಿರುವೆ ನಾನು
ನಿನ್ನದೇ ಪ್ರಭಾವ ಇದು
ಸನಿಹ ಇರುವೆ ಪ್ರಜ್ಞೆಯಲಿ
ನೆನಪಲಿ ನಾನು ನಿನ್ನ
ನನ್ನ ನೆಲೆಯಾಗಿದೆ ಉಸಿರಲಿ ನಿನ್ನ

ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು
ಸಂಯಮ ಕಳೆದುಕೊಳ್ಳುವೆ ಯಾಕೆ ನಾನು
ಸನಿಹ ಇದ್ದಾಗ ನೀನು
ಯಾರು ನನ್ನ
ನನಗೇನಾಗಬೇಕು ನೀನು
ಯಾಕೆ ಬಂಧಿಸುವೆ
ಮನಸ್ಸೊಂದಿಗೆ ಮನಸ್ಸನು

ಮೂಲ : ಇರ್ಶಾದ್ ಕಾಮೀಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಚೈತ್ರ ಅಂಬಡಿಪುಡಿ, ಪಪೋನ್, ಸುನಿಧಿ ಚೌಹನ್
ಸಂಗೀತ : ಎಂ  ಎಂ ಕ್ರೀಮ್
ಚಿತ್ರ : ಸ್ಪೆಷಲ್ ೨೬

Kaun mera, mera kya tu laage
Kyun tu baandhe, man ke man se dhaage
Bas chale naa kyun mera tere aage
Kaun mera, mera kya tu laage
Kyun tu baandhe, man ke man se dhaage

Chhod kar na tu kahin bhi door ab jaana
Tujhko kasam hai
Saath rehna jo bhi hai tu
Jhooth ya sach hai, ya bharam hai
Apna banaane ka jatan kar hi chuke ab to
Baiyan pakad kar aaj chal
Main du bata sabko

Kaun mera, mera kya tu laage
Kyun tu baandhe, man ke man se dhaage
Bas chale naa kyun mera tere aage
Kaun mera, mera kya tu laage
Kyun tu baandhe, man ke man se dhaage

Dhoond hi loge mujhe tum har jagah ab to
Mujhko khabar hai
Ho gaya hun tera jab se Main hawa mein hoon
Tera asar hai
Tere paas hoon, ehsaas mein, main yaad mein teri
Tera thikana ban gaya ab saans mein meri

Kaun mera, mera kya tu laage
Kyun tu baandhe, man ke man se dhaage
Bas chale naa kyun mera tere aage
Kaun mera, mera kya tu laage
Kyun tu baandhe, man ke man se dhaage

Wednesday, January 21, 2015

ಜೀವನದ ತಿರುವು

ಜೀವನದ ತಿರುವು
------------------

ಯಾವಾಗಲೊಮ್ಮೆ ಈಗಲೂ ನಗುತ್ತಿದ್ದ ಅವನು, ಆದರೆ ಹೆಚ್ಚಾಗಿ ಈಗ ಅವನ ಮುಖದಲ್ಲಿ ಗಂಭೀರತೆ ಕಂಡು ಬರುತಿತ್ತು.  

ಗತಕಾಲವನ್ನು ನೆನೆದು ದುಖಃ ಉಮ್ಮಳಿಸಿ ಬರುತಿತ್ತು ಅವನಿಗೆ, ಜೀವನದ ಸ್ವರ್ಣಕಾಲವನ್ನು ಹೀಗೆಯೇ ವ್ಯರ್ಥ ಅಲೆದು ಕಳೆದದ್ದಕ್ಕೆ. 

ಅಮ್ಮ ತಮ್ಮ, ಅವರ ಇವರ ಸಹಾಯದಿಂದ ಹೇಗೋ ತನ್ನ ಕುಟುಂಬದ ಭಾರವನ್ನು ವಹಿಸಿಕೊಂಡಿದ್ದ ಅವನ ಮಕ್ಕಳೂ ದೊಡ್ಡವರಾಗಿದ್ದರು, ಹೇಗೋ ಜೀವನದ ಬಂಡಿ ಮೆಲ್ಲ ಮೆಲ್ಲನೆ ನಡೆಯುತ್ತಿತ್ತು. 

"ಆದರೆ ಇನ್ನೆನು......ಈ ಹಾಳು ರೋಗ ಹೇಗೆ ನನಗೆ ಬಂತು" ಎಂದು ಯೋಚಿಸಿ ಯೋಚಿಸಿ ಅವನಿಗೆ ಹುಚ್ಚು ಹಿಡಿದಂತೆ ಆಗುತ್ತಿತ್ತು.

ತುಂಬಾ ಯೋಚಿಸಿ ತಮ್ಮನನ್ನು ಸಂಪರ್ಕಿಸಿದ, ಎಲ್ಲವನ್ನು ಬೇಗನೆ ಹೇಳಿ ಮುಗಿಸಿ ಬಿಟ್ಟ. ತಮ್ಮ ಇವನಿಂದ ಕೋಪಗೊಂಡಿದ್ದರೂ, ವಿಷಯ ಕೇಳಿ ತಮ್ಮನಿಗೆ ತೀವ್ರ ಆಘಾತವಾಯಿತು. 

ಯಾವಾಗಲು ಅವನಿಗೆ ಬುದ್ದಿ ಹೇಳಿ ಬೈಯ್ಯುತ್ತಿದ್ದ ತಮ್ಮ ಅವನ ಕಾಯಿಲೆಯ ಬಗ್ಗೆ ಕೇಳಿ ಸ್ತಬ್ದನಾದ, ಒಂದು ಧೀರ್ಘ ಉಸಿರೆಳೆದು ಅವನಿಗೆ ಸಮಾಧಾನದಿಂದ ಧೈರ್ಯ ಇಟ್ಟುಕೊಳ್ಳಲು ಹೇಳಿದ.

"ನಾನೀಗ ಎಲ್ಲ ಹಾಳು ಅಭ್ಯಾಸ ಬಿಟ್ಟು ಬಿಟ್ಟಿದ್ದೇನೆ" ಎಂದು ಹೇಳಿ ಅತ್ತ ಅವನು.

ತಮ್ಮ "ಏನು ಪ್ರಯೋಜನ, ಈಗ ತಡವಾಯಿತಲ್ಲ" ಎಂದು ಹೇಳಬೇಕೆಂದು ಬಯಸಿದ ಆದರೆ ಹೇಳಲಿಲ್ಲ.

"ಅಯ್ಯೋ, ಯಾಕೆ ಇಂತಹ ಕಾಯಿಲೆ ಅವನಿಗೆ ಬಂತು!"

"ಇನ್ನು ಆಯಿತಲ್ಲ ಬಿಡು, ಆಗುವುದೆಲ್ಲ ಆಗಿ ಹೋಯಿತು, ಇನ್ನು ಉಳಿದ ಜೀವನ ವ್ಯರ್ಥ ಮಾಡಬೇಡ, ಎಲ್ಲಾದರೂ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಳ್ಳು,ಆದಷ್ಟು ಸಹಾಯ ನಾನು ಮಾಡುವೆ, ಹೇಗಾದರೂ  ಕಷ್ಟಪಟ್ಟು ಇನ್ನಾದರು ನಿನ್ನ ಕುಟುಂಬವನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳು, ಧೈರ್ಯ ಇಡು, ನಾನಿದ್ದೇನೆ" ಎಂದು ಹೇಳಿ ಅಳು ತಾಳಲಾರದೆ ತಮ್ಮ ಫೋನ್ ಇಟ್ಟು ಬಿಟ್ಟ.

ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿದ್ದ ಅವನು ಧೈರ್ಯ ಇಟ್ಟುಕೊಂಡು ನಡೆದ ಜೀವನದ ಹೊಸ ಹಾದಿಯನ್ನು ಹುಡುಕಲು, ತನ್ನ ಜೀವನಕ್ಕೆ ಒಂದು ಅರ್ಥ ಕೊಡಲು, ಒಂದು ಹೊಸ ಅಧ್ಯಾಯ ಬರೆಯಲು.

by ಹರೀಶ್ ಶೆಟ್ಟಿ, ಶಿರ್ವ 

Tuesday, January 20, 2015

ಓ ನನ್ನೊಲವೆ, ಓ ನನ್ನೊಲವೆ

!!ಓ ನನ್ನೊಲವೆ, ಓ ನನ್ನೊಲವೆ
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು!!

!!ದೇಹವನ್ನರ್ಪಿಸಿದೆ
ಮನಸ್ಸನ್ನರ್ಪಿಸಿದೆ
ಬೇರೇನೂ ನನ್ನಲಿಲ್ಲ
ನಿನ್ನಿಂದ ಇಟ್ಟಿದ ಭರವಸೆಯ ಪ್ರಿಯೆ
ದೇವರಿಂದಲೂ ಅದರ ಬಯಕೆಯಿಲ್ಲ
ಎಂದಿನಿಂದ ಒಂದಾದೆವು ನಾವು
ಈ ಜಗತ್ತಿಂದ ಅಪರಿಚಿತರಾದೆವು ನಾವು!!
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು

!!ಪ್ರೀತಿಯ ಜಗತ್ತಲ್ಲಿ ಹೀಗೆ ಹೇಳುತ್ತಾರೆ
ಎರಡು ಹೃದಯ ಕಷ್ಟದಿಂದ ಸೇರುತ್ತದೆಯೆಂದು
ಅನ್ಯರ ಬಗ್ಗೆ ಏನನ್ನೂ ಹೇಳಲಿ
ಅಲ್ಲಿ ನಮ್ಮವರ ಸಹ ನೆರಳು ಬರಲು ಸಾಧ್ಯವಿಲ್ಲ
ಹಾಗೇನು ನೋಡಿ ಬಿಟ್ಟೆವು ನಾವು
ಏನು ವಿಷಯ, ಯಾಕೆ ಆಶ್ಚರ್ಯದಲ್ಲಿದ್ದೇವೆ ನಾವು!!
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು

!!ನನ್ನವನೇ, ನಮ್ಮ ಈ ಮಿಲನ
ಸಂಗಮವಾಗಿದೆ ಗಂಗೆ ಜಮುನೆಯ
ಸತ್ಯ ಇದ್ದದ್ದು ಬಯಲಿಗೆ ಬಂದಿದೆ
ಕಳೆದದ್ದು ಒಂದು ಸ್ವಪ್ನವಾಗಿತ್ತು
ಇದು ಧರತಿ ಮನುಷ್ಯರ
ಬೇರೇನಲ್ಲ ಮನುಷ್ಯರು ನಾವು!!
ಎರಡು ದೇಹ ಆದರೆ ಒಂದು ಜೀವ ನಾವು
ಒಂದು ಹೃದಯದ ಎರಡು ಕಲ್ಪನೆ ನಾವು

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸಂಗಮ್

O mere sanam o mere sanam
Do jism magar ek jaan hai ham
Ek dil ke do aramaan hai ham
O mere sanam o mere sanam
Do jism magar ek jaan hai ham
Ek dil ke do aramaan hai ham
O mere sanam o mere sanam

Tan saup diyaa, man saup diyaa
Kuchh aur to mere paas nahi
Jo tum se hai mere hamadam
Bhagavaan se bhi vo aas nahi
Bhagavaan se bhi vo aas nahi
Jis din se hue ek duje ke
Is duniya se anajaan hai ham
Ek dil ke do aramaan hai ham
O mere sanam o mere sanam

Sunate hai pyaar ki duniya me
Do dil mushkil se samaate hai
Kya gair vahaa apano tak ke
Saye bhi na aane paate hai
Saye bhi na aane paate hai
Hamane aakhir kya dekh liyaa
Kya baat hai kyo hairaan hai ham
Ek dil ke do aramaan hai ham
O mere sanam o mere sanam

Mere apane, apna ye milan
Sagam hai ye gaga jamunaa ka
Jo sach hai saamane aya hai
Jo bit gayaa ek sapanaa tha
Jo bit gayaa ek sapanaa tha
Ye dharati hai insaano ki
Kuchh aur nahi insaan hai ham
Ek dil ke do aramaan hai ham
O mere sanam o mere sanam
Do jism magar ek jaan hai ham
Ek dil ke do aramaan hai ham
O mere sanam o mere sanam.
http://www.youtube.com/watch?v=EagBXY4TqKI

Sunday, January 18, 2015

ಪರುಷಮಣಿ

ಇಲ್ಲ ಈಗ
ಆ ಪರುಷಮಣಿ ನನ್ನತ್ತಿರ
ಕಳೆದು ಹೋಗಿದೆ ನನ್ನಿಂದ
ಕಷ್ಟ ಎಂಬುದು
ಬರಲೇ ಇಲ್ಲ ಎಂದು ಹೇಳಲಾರೆ
ಆದರೆ
ಒಳ್ಳೆ ರೀತಿಯಲ್ಲಿ
ಸಾಗುತ್ತಿತ್ತು ಈ ಬದುಕು
ಆ ಪರುಷಮಣಿಯ ಮಾಯೆಯಿಂದ

ಬದುಕು ಈಗಲೂ ಸಾಗುತ್ತಿದೆ
ಆದರೆ
ನೀರಸ
ಕೇವಲ ಪ್ರಾಯೋಗಿಕ
ಒಮ್ಮೆ ಒಮ್ಮೆ
ಸ್ವತಃ ತನ್ನನ್ನೇ ತೆಗಳಬೇಕೆಂದಾಗುತ್ತದೆ
ಛೇ...!
ಯಾಕೆ ಕಳೆದುಕೊಂಡೆ
ಆ ಪರುಷಮಣಿಯನ್ನು

ಕಷ್ಟ ಈಗಲೂ
ಅಷ್ಟೇನಿಲ್ಲ
ಆದರೆ ಜೀವನದಲಿ
ಒಂದು ಖಾಲಿತನ ತುಂಬಿದೆ
ಆ ಪರುಷಮಣಿಯನ್ನು
ಹುಡುಕಲಿಲ್ಲ ವೆಂದೆನಿಲ್ಲ
ಹುಡುಕಿದೆ
ಆದರೆ ಸ್ವತಹ ಕಳೆದುಕೊಂಡ
ಬಹುಮೂಲ್ಯ ವಸ್ತು
ಎಲ್ಲಿ ಪುನಃ ಪಡೆಯಲಾಗುತ್ತದೆ

ಸಾಗಿದೆ ಬದುಕು
ಒಂದೇ ದಾಟಿಯಲಿ
ಗುರಿ ಎಂಬದು ಯಾವುದೇ ಇಲ್ಲ
ಕೇವಲ ಕೆಲವು
ಜವಾಬ್ದಾರಿ ಇದೆ
ಅದನ್ನು ಒಳ್ಳೆಯ
ರೀತಿಯಿಂದ ನಿಭಾಯಿಸಿದರೆ ಆಯಿತು
ಇನ್ನೊಬ್ಬರ ಜೀವನಕ್ಕೆ
ನಾನೊಂದು ಪರುಷಮಣಿ ಆಗಿ
ಬದುಕಿಗೆ ಒಂದು ಅರ್ಥ
ನೀಡಿದರೆ ಸಾಕು
ಜೀವನ ಸಫಲ

by ಹರೀಶ್ ಶೆಟ್ಟಿ, ಶಿರ್ವ  

Saturday, January 17, 2015

ಕವಿ

ಒಬ್ಬ ಬರಹಗಾರನಿದ್ದ ನನ್ನೊಳಗೆ
ಆದರೆ ಇತ್ತೀಚಿನ ದಿನಗಳಲ್ಲಿ
ಅವನು ಕಾಣುವುದಿಲ್ಲ

ಸರಿ, ಇರಲಿ
ಕಂಡು ಬಂದು ಸಹ
ಕೇವಲ ಉಪದ್ರವ
ಬೇರೇನಿಲ್ಲ
ಅದೇ ದಿನನಿತ್ಯ
ಬೇಡಾದ ಕವಿತೆ ಕಟ್ಟುವುದು
ಅದೇ ನೆನಪಿನ ಕಥೆ
ಅದೇ ಬದುಕಿನ ಪಾಠ
ಅದೇ ಸತ್ಯದ ಅನಾವರಣ

ಇತರರಿಗೆ ಏನಾಗಬೇಕು
ಈ ಕವಿಯ ಗೋಳು ಕೇಳಿ
ಸುಮ್ಮನೆ ಇರಬಾರದೆ

ಈಗ ಅಡಗಿ ಕೂತಿದ್ದಾನೆ
ಹೊರ ಬರಲು ಇಚ್ಛೆ ಇಲ್ಲ ಬಹುಶಃ
ನನಗಂತೂ  ಖುಷಿ
ಸುಮ್ಮನೆ ಸ್ವಲ್ಪ ಸಮಯದ ಉಳಿತಾಯ
ಮನೆಯಲ್ಲಿ ಸಹ ಸಂತೋಷ
ಈಗ ಸ್ವಲ್ಪ ಅವರ ಮಾತೂ ಕೇಳುತ್ತೇನೆ ಎಂದು
ಇಲ್ಲಾದರೆ ನನ್ನಲ್ಲಿ ಕವಿ ನಿರತ ಇದ್ದರೆ
ಮನೆಯಲ್ಲಿ ಇದ್ದು ಸಹ ಇಲ್ಲದಂತೆ

ಆದರೆ ಕೆಲವೊಮ್ಮೆ
ಸಮಾಜದ ಕೆಲವು ದುರಂತ
ಜಗತ್ತಿನಲ್ಲಿ ನಡೆಯುವ
ಆಸಾಧಾರಣ ಘಟನೆ
ವಿಚಿತ್ರ ಆಗು ಹೋಗುಗಳನ್ನು ನೋಡಿ
ಕವಿ ಹೊರ ಬರಲು ಬಯಸುತ್ತಾನೆ
ಆದರೆ ಪುನಃ ನಿಲ್ಲುತ್ತಾನೆ
ಹೊರಗೆ ಬರುವುದಿಲ್ಲ
ಒಳಗೆ ಕೂತು ಕಣ್ಣೀರಿಡುತ್ತಾನೆ
ಬಹುಶಃ ಕವಿ ಒಳಗೆ ಬಂಧಿಯಾಗಿದ್ದಾನೆ
by ಹರೀಶ್ ಶೆಟ್ಟಿ,ಶಿರ್ವ

Tuesday, January 13, 2015

ಸಂಕ್ರಾಂತಿ

ಗೆಳತಿ,
ಅದೆಷ್ಟೋ ಸಂಕ್ರಾಂತಿ
ಬಂದೋಯಿತು
ಆದರೆ ಎಷ್ಟೋ ವರ್ಷ ಮುಂಚೆ
ನೀ ಕೊಟ್ಟ
ಸಿಹಿ ಎಳ್ಳಿನ ರುಚಿ ಇನ್ನೂ ಸಿಗಲಿಲ್ಲ

ಹರೀಶ್ ಶೆಟ್ಟಿ, ಶಿರ್ವ  

ಶಾಯರಿ

ಒಳ್ಳೆಯವರು ಒಳ್ಳೆತನ
ಕೆಟ್ಟವರು ಕೆಟ್ಟತನ ಕಂಡರು ನನ್ನ
ಯಾಕೆಂದರೆ
ಯಾರಿಗೆ ಎಷ್ಟು ಅವಶ್ಯಕತೆ ಇತ್ತು
ಅಷ್ಟೇ ಅವರು ಗುರುತಿಸಿದರು ನನ್ನನ್ನ
(ಒಂದು ಉರ್ದು ಶಾಯರಿಯ ಅನುವಾದ)
ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ