Sunday, June 30, 2013

ನಗುವ ಬಯಕೆ

!!ನಗುವ ಬಯಕೆ
ನನಗಿಷ್ಟು ನೋವು ತಂದಿದೆ
ಯಾರೂ ಸಂತೈಸುವವರಿಲ್ಲ
ಕಷ್ಟವೇ ನನ್ನ ನೆರಳಾಗಿದೆ!!

!!ಹೃದಯ ಸಿಲುಕಿಕೊಂಡಿತ್ತು
ಜೀವನದ ಜಂಜಾಟದಲ್ಲಿಯೇ
ಉಸಿರು ಉರಿಯುತ್ತದೆ
ಕೆಲವೊಮ್ಮೆ ರಾತ್ರಿಯ ಸಮಯದಲ್ಲಿಯೇ
ಯಾರದ್ದೋ ಧ್ವನಿ ಇದು
ಈ ನಗು ಯಾರದಾಗಿದೆ
ಯಾರೂ ಸಂತೈಸುವವರಿಲ್ಲ
ಕಷ್ಟ ನನ್ನ ನೆರಳಾಗಿದೆ!!

!!ಕನಸು ನಡೆಯುತ್ತಲೇ ಇತ್ತು
ಪ್ರತಿ ದಿನ ಹೊಸ ಹಾದಿಯಿಂದ
ಯಾರೋ ಜಾರಿದ್ದಾರೆ
ಈಗಾಗಲೇ ಬಾಹುಗಳಿಂದ!!
ಯಾರದ್ದೋ ವೇದನೆಗೆ
ತಾರೆಗಳಿಗೆ ಪ್ರೀತಿ ಉಕ್ಕಿದೆ
ಯಾರೂ ಸಂತೈಸುವವರಿಲ್ಲ
ಕಷ್ಟ ನನ್ನ ನೆರಳಾಗಿದೆ!!

ಮೂಲ : ಕಪಿಲ್ ಕುಮಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮನ್ನಾ ಡೇ
ಸಂಗೀತ : ಕಾನು ರಾಯ್
ಚಿತ್ರ : ಅವಿಷ್ಕಾರ್

Hasne ki chah ne itna mujhe rulaya hai
Koyi hamdard nahi dard mera saya hai

 Dil toh uljha hi raha jindagi ki bato me
 Sanse jalti hain kabhi kabhi rato me
 Kisi ki aahate ye kaun muskuraya hai
 Koyi hamdard nahi, dard mera saya hai

 Sapne chalte hi rahe roj nayi raho se
 Koyi phisla hai abhi abhi baho se
 Kisi ki aah par taro ko pyar aaya hai
 Koyi hamdard nahi, dard mera saya hai
http://www.youtube.com/watch?v=uomu2WP5CAE

Thursday, June 27, 2013

ವರ್ಷ ಋತುವಿನ ಮಾಸ


ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಲತಾ ::
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಮುಕೇಶ್ :
ಹ್ಮ್ಮ್....  ಪವನ ಮಾಡುತ್ತಿದೆ ಗದ್ದಲ

ಲತಾ :ಪವನ ಮಾಡುತ್ತಿದೆ ಗದ್ದಲ

ಮುಕೇಶ್ : ಅರೆ .....ಗದ್ದಲ ಅಲ್ಲ ಗದ್ದಲ, (ಗ ದ್ದ ಲ......)

ಲತಾ : ಪವನ ಮಾಡುತ್ತಿದೆ (ಗ ದ್ದ ಲ.....)

ಮುಕೇಶ್ : ಸರಿ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಲತಾ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಮುಕೇಶ್ :
ರಾಮ ಅದ್ಭುತವಾಗಿದೆ
ಈ ಮೂಡಲ ಗಾಳಿ

ಲತಾ :
ದೋಣಿಯನ್ನು ಹಿಡಿದಿಡು
ಮರೆಯಾಗುವೆ ನೀನೆಲ್ಲಿ -೨

ಮುಕೇಶ್ :
ಓ  ಮೂಡಲ ಗಾಳಿಯ ಮುಂದೆ
ನಡೆಯುವುದಿಲ್ಲ ಯಾರದ್ದೂ ಬಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಲತಾ/ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಲತಾ :
ತರಂಗ ಮಾಡುತ್ತಿದೆ ನನಗೆ
ಇದೆಂತಹ ಇಷಾರೆ

ಮುಕೇಶ್ :
ಹೋಗಲಿದೆಲ್ಲಿಗೆ ಎಂದು
ಕೇಳುತ್ತಿದೆ ನದಿಯ ಧಾರೆ -೨

ಲತಾ :
ಇಚ್ಛೆ ಇದು ನಿನ್ನ ಕೊಂಡೋಗು 
ಎಲ್ಲಿಯೂ ಒಂದು ಸಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಮುಕೇಶ್/ಲತಾ:
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಲತಾ :
ಯಾರ ಪ್ರೇಮಿ ದುಷ್ಟರು
ಹೋಗಿದ್ದಾರೆ ವಿದೇಶ

ಮುಕೇಶ :
ಬಂದದೆ ಅವರಿಗೆ ನೋಡು 
ಪ್ರೀತಿಯ ಸಂದೇಶ-೨

ಲತಾ :
ಹಾಹ  ಎಂತಹ ಈ ಸೊಬಗು
ಮುಗಿಲು ಮಿಂಚುಗಳ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ಲತಾ/ಮುಕೇಶ್ :
ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ
ಹೃದಯ ನಲಿಯುತ್ತಿದೆ ಹೀಗೆ
ನೃತ್ಯ ಮಾಡುತ್ತಿದ್ದಂತೆ ನವಿಲ

ವರ್ಷ ಋತುವಿನ ಮಾಸ
ಪವನ ಮಾಡುತ್ತಿದೆ ಗದ್ದಲ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್/ಮುಕೇಶ್
ಚಿತ್ರ : ಮಿಲನ್

 Hmm hmm hmm hmm hmm hmm hmm.............
 Sawan ka mahina, pawan kare sor
 Sawan ka mahina, pawan kare shor
 Amm hmm, pawan kare sor, pawan kare shor
 Arey baba shor nahin, sor, sor, sor
 Pawan kare sor, haan......
 Jiyara re jhume aise, jaise banama naache mor
 (sawan ka mahina, pawan kare sor
 Jiyara re jhume aise, jaise banama naache mor) - (2)

 (raama gajab dhaaye yeh purwaiyya
 Naiyya sambhalo kit khoye ho khiwaiyya) - (2)
 Hoy purwaiya ke aage chale naa koyi jor
 Jiyara re jhume aise, jaise banama naache mor
 O o o..... sawan ka mahina, pawan kare sor
 Jiyara re jhoome aise, jaise banmaa naache mor

 (maujawa kare kya jaane hamko isaara
 Jaana kaha hai puchhe nadiyaa ki dhaara) - (2)
 Marji hai tumhari le jaao jis or
 Jiyara re jhume re aise re jaise banama naache mor
 O o o..... sawan ka mahina, pawan kare sor
 Jiyara re jhoome aise, jaise banmaa naache mor

 (jinake balam bairi gaye hain bideswa
 Aaye hain leke unake pyaar ka sandeswa) - (2)
 Kaari matwaari ghataaye ghan ghor
 Jiyara re jhume aise jaise banama naache mor
 Sawan ka mahina, pawan kare sor
 Jiyara re jhume aise, jaise banama naache mor
 Jiyara re jhume re aise re jaise banama naache mor

Tuesday, June 25, 2013

Kabir Doha (ಕಬೀರ ದೋಹ )

ಕಬೀರ ದೋಹ
ಹರಿ ರಸ ಕುಡಿದವನೇ ಅರಿಯುವನು, ಅದರ ಅಮಲು ಎಂದೂ ಹೋಗದು!
ಹುಚ್ಚುಹಿಡಿದವನಂತೆ ಅಲೆಯುವನು, ಗೊಡವೆಯೂ ಇರುವುದಿಲ್ಲ ದೇಹದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
हरी रस पीया जानिये, कबहू न जाए खुमार |
मैमता घूमत फिरे, नाही तन की सार ||

Saturday, June 22, 2013

Kabir Doha (ಕಬೀರ ದೋಹ )

ಕಬೀರ ದೋಹ
ನಯನದೊಳಗೆ ಬಾ ನೀನು, ಒಳ ತೆಗೊಂಡು ನಯನ ಮುಚ್ಚುವೆ!  
ಬೇರೆ ಯಾರನ್ನೂ ನೋಡಲಾರೆ, ನಿನಗೂ ನೋಡಲು ಬಿಡಲಾರೆ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा  
नैना अंतर आव तू, नैन झापी तोही लेऊ |
न में देखू और को, न तोही देखन देऊ ||
*ಭಕ್ತನಿಗೆ ದೇವರಲ್ಲದೆ ಇತರ ಯಾವುದರ ಗೋಚರ ಇರುವುದಿಲ್ಲ, ಪ್ರತಿ ಕ್ಷಣ ಅವನು ದೇವರ ಸಾನ್ನಿಧ್ಯ ಪಡೆಯಲು ಬಯಸುವನು. ನಯನ ಹೃದಯಕ್ಕೆ ಹೋಗುವ ಮಾರ್ಗದ ಒಂದು ದ್ವಾರ, ಭಕ್ತ ಯಾವಾಗಲು ದೇವರನ್ನು ತನ್ನ ಕಣ್ಣಲ್ಲಿ ತುಂಬಿ ತನ್ನ ಹೃದಯ ಮಂದಿರದಲ್ಲಿ ನೆಲೆಸುವನು.

Thursday, June 20, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಬೀರ ಚಿಪ್ಪು ಸಮುದ್ರದ, ಅಂಗೀಕರಿಸುವುದಿಲ್ಲ ಉಪ್ಪು ನೀರನ್ನು!
ಕುಡಿಯುವುದು ಸ್ವಾತಿ ಮಳೆನೀರು, ಶೋಭಿಸುವುದು ಸಾಗರವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कबीरा सीप समुंदर की, खरा जल नाही ले |
पानी पिए स्वाति का, शोभा सागर दे ||
*ಚಿಪ್ಪು ಸಮುದ್ರದಲ್ಲಿದ್ದು ಉಪ್ಪು ನೀರನ್ನು ಅಸ್ವೀಕರಿಸಿ ಸ್ವಾತಿ ಮಳೆಕ್ಕಾಗಿ ಕಾದು ಕೇವಲ ಅದನ್ನೇ ಅಂಗೀಕರಿಸುತ್ತದೆ ಹಾಗು ಸಾಗರದ ಸೌಂದರ್ಯವನ್ನು ಏರಿಸುತ್ತದೆ. 

Wednesday, June 19, 2013

Kabir Doha (ಕಬೀರ ದೋಹ )

ಕಬೀರ ದೋಹ
ಹೇಳುವೆ ಆ ಜಾತಿದವನೆಂದು, ಹೇಳಿ ಬಾರಿಸುವೆ ಡೋಲನ್ನು!
ಉಸಿರು ವ್ಯರ್ಥಗೊಳಿಸುವೆ, ಕಳೆದುಕೊಳ್ಳುವೆ ಮೂರು ಲೋಕದ ಮೌಲ್ಯವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कहता हूँ कही जात हूँ, कहत बजाये ढोल |
स्वसा ख़ाली जात है, तीन लोक का मोल ||
*ನೀನು ಜಗಕ್ಕೆಲ್ಲ ನೀನೊಬ್ಬ ಉತ್ತಮ ಜಾತಿದವನೆಂದು ಹೆಮ್ಮೆ ಪಡುವೆ, ಆದರೆ ಈ ರೀತಿಯಲ್ಲಿ ನೀನು ತನ್ನ ಜೀವನ ಶಕ್ತಿ ಉಸಿರನ್ನು ವ್ಯರ್ಥಗೊಳಿಸುವೆ, ಯಾಕೆಂದರೆ ನೀನು ಈ ಉತ್ತಮ ಮಾನವ ಜನ್ಮಕ್ಕೆ ಮೌಲ್ಯ ನೀಡುವುದಿಲ್ಲ, ಈ ಜನ್ಮವನ್ನು ಮೂರು ಲೋಕದಿಂದ ಪಡೆಯುವುದು ತುಂಬಾ ಕಷ್ಟ. ಇಲ್ಲಿ ಕಬೀರರು ಮಾನವ ಜನ್ಮ ಎಷ್ಟು ಅಮೂಲ್ಯವಾಗಿದೆಯೆಂದು ಹಾಗು ಜಾತಿವಾದದ ಮೇಲೆ ಒಂದು ತೀಕ್ಷ್ಣ ಪ್ರಹಾರ ಮಾಡಿದ್ದಾರೆ. 

Tuesday, June 18, 2013

Kabir Doha (ಕಬೀರ ದೋಹ )

ಕಬೀರ ದೋಹ
ದಾಸನಾಗುವುದು ಕಠಿಣ, ದಾಸರ ಸೇವೆ ಮಾಡುವೆ ದಾಸನಾಗಿ!!
ಈಗಂತೂ ಹೀಗೆಯೇ ಇದ್ದಿರುವೆ, ಪಾದ ಅಡಿಯ ಹುಲ್ಲಾಗಿ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीरा दोहा
दास कहावन कठिन है, में दासन का दास |
अब तो ऐसा होए रहू, पाँव तले की घास ||

ಸಿದ್ಧಿದಾತ್ರಿ