Sunday, January 13, 2013

ಪತ್ರ ಬಂದಿತು

ಪತ್ರ ಬಂದಿತು 
ಕೇವಲ ಎರಡೇ ಸಾಲು 
"ಯುದ್ದ ಶುರು ಆಗಿದೆ 
ರಜೆಯಲ್ಲಿ ಮನೆಗೆ ಬರಲಾರೆ " 
by ಹರೀಶ್ ಶೆಟ್ಟಿ, ಶಿರ್ವ

Saturday, January 12, 2013

ಹೇಗೆ ಹೇಳಲಿ


!!ಹೇಗೆ ಹೇಳಲಿ
ಪ್ರೀತಿಯು ನನ್ನೊಂದಿಗೆ
ಆಟವಾಡಿತು ಏನೇನೆಂದು
ಹೀಗೆ ಲಜ್ಜಿಸಿತು ಭಾಗ್ಯ ನನ್ನಿಂದ
ಲಜ್ಜಿಸಿದೆ ನನ್ನಿಂದಲೇ ನಾನಿಂದು !!

!!ಹೂದೋಟವನ್ನು ಶರತ್ಕಾಲ ದೋಚುತ್ತದೆ
ದೋಚಿತು ನನ್ನನ್ನು ವಸಂತದ ಋತುವೇ
ಜನ ಸಾಯುವರು ಮೃತ್ಯು ಬಂದಾಗಲೇ
ಆದರೆ ನನ್ನನ್ನು ಕೊಂದಿತ್ತು ಪ್ರೀತಿಯೇ
ನನ್ನ ಈ ಅವಸ್ಥೆ ಇದೆ
ಪ್ರವಾಸದ ಮಧ್ಯದಲ್ಲಿ ಬಂದು
ಯಾರೋ ದೋಚಿ ಹೋಗುವಂತೆ !!
ಹೇಗೆ ಹೇಳಲಿ...

!!ನಿನಗೇನೂ ಗೊತ್ತು ಏನನ್ನು ಬಯಸಿದೆ ನಾನು
ಏನನ್ನು ತಂದೆ ನಾನು
ತುಂಡಾದ ಕನಸು
ಗಾಯಗೊಂಡ ಕವನ
ಸ್ವಲ್ಪ ಜ್ವಾಲೆ ಸ್ವಲ್ಪ ಇಬ್ಬನಿಯನ್ನು
ಅದೆಷ್ಟು ಪಡೆದೆ ನಾನು
ಹೇಳಿದರೆ ಹೇಳಲಾಗದು !!
ಹೇಗೆ ಹೇಳಲಿ...

!!ಹೀಗೆ ವಾದಿಸಿತು ಶಹನಾಯಿ ಮನೆಯಲಿ
ಈಗ ತನಕ ಮಲಗಲಾಗಲಿಲ್ಲ ನನಗೆ
ನನ್ನವರೆ ನನ್ನನ್ನು ಇಷ್ಟು ಸತಾಯಿಸಿದರು
ಅತ್ತರೂ ಅಳಲಾಗಲಿಲ್ಲ  ನನಗೆ
ಈಗ ಹೀಗೆ ಮಾಡಿ ಗೆಳೆಯರೇ
ಪ್ರಜ್ಞೆ ಬರದಿರಲಿ ನನಗೆ !!
ಹೇಗೆ ಹೇಳಲಿ...


ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಸಚಿನ್ ದೇವ್ ಬರ್ಮನ್
ಚಿತ್ರ : ಶರ್ಮಿಲೀ

कैसे कहे हम  प्यार ने हम को
क्या क्या खेल दिखाए
यूँ शरमाई किस्मत हम से
खुद से हम शरमाये

बागों को तो पतझड़ लुटे
लूटा हमे बहार ने
दुनियाँ मरती मौत से
लेकिन मारा हम को प्यार ने
अपना वो हाल है, बीच सफ़र में
जैसे कोई लूट जाए

तुम क्या जानो, क्या चाहा था
क्या लेकर आये हम
टूटे सपने, घायल नग्में
कुछ शोले कुछ शबनम
कितना कुछ हैं पाया हम ने
कहे तो कहा ना जाए

ऐसी बजी शहनाई घरमे
अब तक सो ना सके हम
अपनों ने हम को इतना सताया
रोये तो रोना सके हम
अब तो करो कुछ ऐसा यारो
होश ना हम को आये

ಮನಸ್ಸಿನ ವನದಲ್ಲಿ

ಮನಸ್ಸಿನ ವನದಲ್ಲಿ 
ಅನೇಕ
ನೆನಪಿನ 
ಗಿಡ ಮರ
ಕೆಲವು ಸಿಹಿ ಹಣ್ಣು ನೀಡುವುದು 
ಕೆಲವು ಕಹಿ ಹಣ್ಣು ನೀಡುವುದು 
by ಹರೀಶ್ ಶೆಟ್ಟಿ, ಶಿರ್ವ

ಅಗಲಿಕೆಯ ಬೀಜ

ಗೆಳತಿ...
ನೀ ನೀಡಿದ 
ಅಗಲಿಕೆಯ ಬೀಜ 
ಮೊಳಕೆ ಒಡೆದು 
ಏಕಾಂತ ವೇದನೆಯ 
ಮರವಾಗಿ 
ಪ್ರತಿನಿತ್ಯ 
ಕಣ್ಣೀರ ಹಣ್ಣು ಕೊಡುತ್ತಿದೆ 
by ಹರೀಶ್ ಶೆಟ್ಟಿ, ಶಿರ್ವ

ಮಾಡಿದರೆ ನೆನಪು


ಮಾಡಿದರೆ ನೆನಪು
ಪ್ರತಿಯೊಂದು ಮಾತು ನೆನಪಾಗುವುದು
ಹಾದುಹೋಗುವ ಸಮಯದ
ಪ್ರತಿಯೊಂದು ತರಂಗ ನಿಲ್ಲುವುದು !

ಈ ಚಂದ್ರ ಕಳೆದೋದ ಜಗದ
ಕನ್ನಡಿಯಾಗುವುದು
ಅಲೆಯುವ ಮೋಡದಲಿ
ಮುಖ ಯಾವುದೇ ಮೂಡಬಹುದು
ಬೇಸರ ಹಾದಿ
ಯಾವುದೇ ಕಥೆ ಹೇಳಬಹುದು !

ಸುರಿಯುವ ನೆನೆಯುವ
ನಿಸರ್ಗ ಹೊಗೆ ಹೊಗೆಯಾಗಬಹುದು
ಕರಗುವ ದೀಪಗಳಲ್ಲಿ
ನನ್ನ ಹೃದಯದ ಆಭಾಸವಿರಬಹುದು
ಕೈಯ ಮೆಹಂದಿ
ನೆನಪು ಏನೋ ಕೊಡಬಹುದು !

ಗಲ್ಲಿಯ ತಿರುವಿನಲ್ಲಿ
ಖಾಲಿಯಾದ ಒಂದು ಬಾಗಿಲು
ಹಂಬಲಿಸುವ ಕಣ್ಣಿನಿಂದ
ಯಾರನ್ನೋ ಕಾಯಬಹುದು
ದೃಷ್ಟಿ ದೂರ ತನಕ
ಹೋಗಿ ಹಿಂತಿರುಗುವುದು !

ಮೂಲ : ಬಶರ್ ನವಾಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಭೂಪೇಂದ್ರ
ಸಂಗೀತ : ಖಯಾಮ್
ಚಿತ್ರ : ಬಾಜಾರ್

करोगे याद तो, हर बात याद आयेगी
गुजरते वक्त की, हर मौज ठहर जायेगी

ये चाँद बीते जमानो का आईना होगा
भटकते अब्र में चेहरा कोई बना होगा
उदास राह कोई दास्ताँ सुनाएगी

बरसता भीगता मौसम धुवा धुवा होगा
पिघलती शम्मो पे दिल का मेरे गुमा होगा
हथेलियों की हिना, याद कुछ दिलायेगी

गली के मोड़ पे, सूना सा कोई दरवाजा
तरसती आँखों से, रास्ता किसी का देखेगा
निगाह दूर तलक, जा के लौट आयेगी
http://www.youtube.com/watch?v=MHqMBAo6WM8

Friday, January 11, 2013

ತ್ಯಾಗ ಮಾಡಿ ತೆರಳುತ್ತಿದ್ದೇವೆ ನಾವು

!!ತ್ಯಾಗ ಮಾಡಿ ತೆರಳುತ್ತಿದ್ದೇವೆ ನಾವು
ಜೀವ ದೇಹ ಗೆಳೆಯರೇ
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ !!

!!ಉಸಿರು ನಿಲ್ಲತೊಡಗಿತು 

ಪ್ರಜ್ಞೆ ಶೂನ್ಯವಾಯಿತು
ಆದರೂ ಸಾಗುವ ಕಾಲನ್ನು ನಿಲ್ಲಲು ಬಿಡಲಿಲ್ಲ
ತಲೆ ಕಡಿದು ಬಿದ್ದರೂ ನಮ್ಮ 

ಯಾವುದೇ ದುಃಖವಿಲ್ಲ
ತಲೆ ಹಿಮಾಲಯದ ತಗ್ಗಲು ಬಿಡಲಿಲ್ಲ
ಸಾಯುವಾಗ ನಮ್ಮ ಮಾನ ಉಳಿಯಿತು ಗೆಳೆಯರೇ !!
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ


!!ತ್ಯಾಗ ಮಾಡಿ ತೆರಳುತ್ತಿದ್ದೇವೆ ನಾವು
ಜೀವ ದೇಹ ಗೆಳೆಯರೇ 
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ !!

!!ಜೀವ ಇರುವ ಕಾಲ ಅನೇಕ ಇದೆ
ಜೀವ ನೀಡುವ ಋತು ಪ್ರತಿ ದಿನ ಬರುವುದಿಲ್ಲ
ಪ್ರೀತಿ ಮತ್ತು ಸೌಂದರ್ಯ

ಎರಡನ್ನೂ ಲಜ್ಜೆಗೊಳಿಸಬಹುದು  
ಆನು ವೇಳೆ ಈ 
ಯೌವನ ರಕ್ತದಲಿ ಮೀಯದಿದ್ದರೆ
ತನ್ನ ತಲೆಗೆ ಕಟ್ಟಿ ಶವಾಚ್ಛಾದನ ಗೆಳೆಯರೇ!!
ಈಗ ನಿಮ್ಮ ಶರಣ ದೇಶ ಗೆಳೆಯರೇ

!!ತ್ಯಾಗ ಮಾಡಿ ತೆರಳುತ್ತಿದ್ದೇವೆ ನಾವು
ಜೀವ ದೇಹ ಗೆಳೆಯರೇ 
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ !!

!!ಹಾದಿ ತ್ಯಾಗದ ಎಂದೂ ಬರಿದಾಗದಿರಲಿ
ನೀವು ಅಲಂಕರಿಸುತ ಇರಿ ನವೀನ ಗುಂಪನ್ನು 
ಜಯದ ಆಚರಣೆ ಈ ಆಚರಣೆಯ ನಂತರ ಇದೆ
ಅಪ್ಪಿ ಕೊಳ್ಳುತ್ತಿದೆ ಜೀವನ ಮರಣವನ್ನು 
ಇಂದು ಭೂಮಿ ಆಗಿದೆ ಮದುಮಗಳು ಗೆಳೆಯರೇ !!
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ

!!ತ್ಯಾಗ ಮಾಡಿ ತೆರಳುತ್ತಿದ್ದೇವೆ ನಾವು
ಜೀವ ದೇಹ ಗೆಳೆಯರೇ 
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ !!

!!ಎಳೆಯಿರಿ ರಕ್ತದಿಂದ ಭೂಮಿಯಲಿ ರೇಖೆ
ಈ ಬದಿ ಬರದಿರಲಿ ರಾವಣ ಯಾರೂ
ಮುರಿಯಿರಿ ಕೈ ಒಂದುವೇಳೆ ಕೈ ಎತ್ತಿದರೆ
ಸ್ಪರ್ಶಿಸದಿರಲಿ ಸೀತೆಯ ಸೆರಗು ಯಾರೂ
ರಾಮ ನೀವೇ , ನೀವೇ ಲಕ್ಷ್ಮಣ ಗೆಳೆಯರೇ !!
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ

!!ತ್ಯಾಗ ಮಾಡಿ ತೆರಳುತ್ತಿದ್ದೇವೆ ನಾವು
ಜೀವ ದೇಹ ಗೆಳೆಯರೇ 
ಈಗ ನಿಮ್ಮ ಶರಣ ಈ ದೇಶ ಗೆಳೆಯರೇ !!


ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ :ಮದನ್ ಮೋಹನ್
ಚಿತ್ರ : ಹಕಿಕತ್

(कर चले हम फ़िदा जान-ओ-तन साथियों
अब तुम्हारे हवाले वतन साथियों ) - 2

साँस थमती गई नब्ज़ जमती गई
फिर भी बढ़ते कदम को न रुकने दिया
कट गये सर हमारे तो कुछ ग़म नहीं
सर हिमालय का हमने न झुकने दिया
मरते मरते रहा बाँकापन साथियों अब तुम्हारे हवाले वतन साथियों

कर चले हम फ़िदा जान-ओ-तन साथियों
अब तुम्हारे हवाले वतन साथियों

ज़िंदा रहने के मौसम बहुत हैं मगर
जान देने की रुत रोज़ आती नहीं
हुस्न और इश्क़ दोनों को रुसवा करे
वो जवानी जो खूँ में नहाती नहीं
बाँध लो अपने सर पर कफ़न साथियों, अब तुम्हारे हवाले वतन साथियों

कर चले हम फ़िदा जान-ओ-तन साथियों
अब तुम्हारे हवाले वतन साथियों

राह क़ुर्बानियों की न वीरान हो
तुम सजाते ही रहना नये क़ाफ़िले
फ़तह का जश्न इस जश्न के बाद है
ज़िंदगी मौत से मिल रही है गले
आज धरती बनी है दुल्हन साथियों, अब तुम्हारे हवाले वतन साथियों

कर चले हम फ़िदा जान-ओ-तन साथियों
अब तुम्हारे हवाले वतन साथियों
खींच दो अपने खूँ से ज़मीं पर लकीर
इस तरफ़ आने पाये न रावण कोई
तोड़ दो हाथ अगर हाथ उठने लगे
छूने पाये न सीता का दामन कोई
राम भी तुम तुम्हीं लक्ष्मण साथियों, अब तुम्हारे हवाले वतन साथियों

कर चले हम फ़िदा जान-ओ-तन साथियों
अब तुम्हारे हवाले वतन साथियों
www.youtube.com/watch?v=O0lDHi5u3as

Thursday, January 10, 2013

ಡಾನ್ಸ್

ಮಗ ಹೇಳಿದ 
"ಡಾನ್ಸ್ ಕಲಿಸಿ ನನಗೆ 
ಶಾಲೆಯಲ್ಲಿದೆ 
ಡಾನ್ಸ್ ಕಾಂಪೆಟಿಷನ್ನು" 
ನಾ ಹೇಳಿದೆ 
"ಹೇಗೆ ಕಲಿಸಲಿ 
ಡಾನ್ಸ್ ನಿನಗೆ,
ನಿನ್ನಮ್ಮ ಕೊಟ್ಟ 
ಮನೆಕೆಲಸ ಮಾಡಿ 
ತುಂಡಾಗಿದೆ ಈ ಬೆನ್ನು" 
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ