Monday, June 4, 2012

ಚಿನ್ನ ನಿನ್ನ ಊರು ಎಷ್ಟು ಚಂದ.......

ಚಿನ್ನ ನಿನ್ನ ಊರು ಎಷ್ಟು ಚಂದ
ಪಡುತ್ತಿದ್ದೇನೆ ಆನಂದ
ಬಂದು ಇಲ್ಲಿಗೆ ಬಂದು ಇಲ್ಲಿಗೆ
ಅದರಲ್ಲಿ ರೂಪ ನಿನ್ನ ಸುಂದರ
ಮೋಹಕ ಅರ್ಧ ಚಂದಿರ
ಅರ್ಧ ಯೌವನ.....ಅರ್ಧ ಯೌವನ 
ಚಿನ್ನ ನಿನ್ನ ಊರು ಎಷ್ಟು ಚಂದ.......

ಮನ ನುಡಿಯುತ್ತದೆ
ನವಿಲ ಕಾಲಿಗೆ ಗೆಜ್ಜೆಯನ್ನು ಧರಿಸಲೆಂದು
ಕುಹೂ ಕುಹೂ ಹಾಡುವ ಕೋಗಿಲೆಗೆ
ಹೂವ ಒಡವೆ ಕೊಡಲೆಂದು
ಇಲ್ಲಿಯೇ ನಮ್ಮ ಮನೆ ಮಾಡಲು
ಹಕ್ಕಿಗಳು ಓಡಾಡುತ್ತಿವೆ  
ಹುಲ್ಲು ಎಳೆ ತರಲು  .....ಹುಲ್ಲು ಎಳೆ ತರಲು
ಚಿನ್ನ ನಿನ್ನ ಊರು ಎಷ್ಟು ಚಂದ.......

ಬಣ್ಣ ಬಣ್ಣದ ಹೂಗಳು ಅರಳಿದೆ
ಜನರೂ  ಹೂಗಳ ಹಾಗೆ
ಒಂದು ಸಲ ಇಲ್ಲಿ ಬಂದ ನಂತರ
ಹೋಗುವನು ಮತ್ತೆ ಹೇಗೆ
ಝರ ಝರ ಜರಿಸುವ  ಜಲಪಾತ
ಮನಸನ್ನು ಸೆಳೆಯುವ ಈ ನೋಟ
ಮತ್ತೆ ಎಲ್ಲಿದೆ...... ಮತ್ತೆ ಎಲ್ಲಿದೆ
ಚಿನ್ನ ನಿನ್ನ ಊರು ಎಷ್ಟು ಚಂದ.......

ಪರದೇಶಿ ಅಪರಿಚಿತನಿಗೆ ಹೀಗೆ
ಯಾರೂ ವಹಿಸುವುದಿಲ್ಲ
ನಿಮ್ಮಿಂದ ಹೀಗೆ ಆಗಿದೆ ಬಂಧ
ಜನ್ಮ ಜನ್ಮದ ಅನುಬಂಧ
ಸರಳ ಸ್ವಚ್ಚ ಮನದ ಜನರೂ
ಹೃದಯ ಭಾಷೆ ನುಡಿಯುವರು
ಪ್ರೀತಿ ಮಾತನ್ನು..... ಪ್ರೀತಿ ಮಾತನ್ನು
ಚಿನ್ನ ನಿನ್ನ ಊರು ಎಷ್ಟು ಚಂದ......

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ :ರವಿಂದ್ರ ಜೈನ್
ಹಾಡಿದವರು : ಯೇಸುದಾಸ್
 http://www.youtube.com/watch?v=vejr2_PXVQo
 
Gori Tera Gaon Bada Pyara
Maein To Gaya Maara, Aake Yahan Re
Us Par Roop Tera Saada 
Chandrama Jyon Aadha, Aadha Jawaan Re
Gori Tera Gaon...

Ji Karta Hai Mor Ke Paon Mein
Payaliya Pehna Doon
Kuhu Kuhu Gaati Koyaliya Ko 
Phoolon Ka Gehna Doon
Yahin Ghar Apna Banane Ko Panchi Kare Dekho
Tinke Jama Re, Tinke Jama Re
Gori Tera Gaon...

Rang Birange Phool Khile Hain 
Log Bhi Phoolon Jaise
Aa Jaye Ek Baar Yahan Jo 
Jayega Phir Kaise
Jhar Jhar Jharte Hue Jharne, Man Ko Lage Harne
Aisa Kahan Re, Aisa Kahan Re
Gori Tera Gaon...

Pardesi Anjaan Ko Aise 
Koi Nahin Apnaata
Tum Logon Se Jud Gaya Jaise 
Janam Janam Ka Naata
Apni Dhun Mein Magan Dole Log Yahan Bole
Dil Ki Zuban Re, Dil Ke Zuban Re
Gori Tera Gaon Bada...


ಗಾಳಿಸುದ್ದಿ

ಮನುಜ...
ಅರಿಯದೆ ನುಡಿಯ ಬೇಡ
ಸ್ವತಃ ನೋಡದೆ ವಿಶ್ವಾಸ ಮಾಡ ಬೇಡ
ತಪ್ಪು ಕಲ್ಪಿಸ ಬೇಡ
ಸುಳ್ಳು ಪ್ರಸರಿಸ ಬೇಡ
ಗಾಳಿಸುದ್ದಿ ಹರಡಿ ಸಂತೋಷ ಪಡುವವನು ದುಷ್ಟ ಆತ್ಮ
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Sunday, June 3, 2012

ಬಹುಮಾನ

ತುಂಬು ಹುರುಪು
ಗೆಲ್ಲುವೆ ಎಂದು
ಆದರೆ ಇದೇನು
ಅವನ ಹೆಸರು ಕರೆಯಲಿಲ್ಲ
ಹಲವರು ಬಂದು
ತನ್ನ ತನ್ನ ಬಹುಮಾನ
ಕೊಂಡು ಹೋದರು!

ಈಗ ಮನಸ್ಸಲ್ಲಿ
ತಳಮಳ ಚಿಂತೆ
ಷೇ... ಅಮ್ಮ ಅಪ್ಪನಿಗೆ
ಎಷ್ಟು ಬೇಜಾರಾಗಬಹುದು
ಸುಮ್ಮನೆ ಅವರಿಗೆ ಹೇಳಿದು
ನನಗೆ ಬಹುಮಾನ
ಸಿಗುತ್ತದೆ ಎಂದು!

ಕಣ್ಣಲ್ಲಿ ನೀರು
ಹತಾಷೆ ನಿರಾಶೆ
ಮೌನ
ಕಂಪಿಸುವ ಕಾಲುಗಳು
ಏನಾಯಿತು
ಯಾಕೆ ಸಿಗಲಿಲ್ಲ
ಅವರಿಂದ ಏನು ತಪ್ಪಾಯಿತೇ!

ಅವಾಗ ಒಮ್ಮೆಲೇ
ಅವನ ಹೆಸರು
ಕರೆಯಲಾಯಿತು
ಪ್ರಥಮ ಬಹುಮಾನ
ಅವನಿಗೆ ಎಂದು
ಆನಂದ ಬಾಷ್ಪ
ಕಣ್ಣ ಮುಂದೆ ತಂದೆ ತಾಯಿಯ
ಆನಂದಮಯ ನಗು ಮುಖ!
by ಹರೀಶ್ ಶೆಟ್ಟಿ, ಶಿರ್ವ

ಏಕಾಂಗಿ

ಕಷ್ಟದ ನೀರ
ಒಸರಿಂದ
ಅಶಕ್ತ  ಗಿಡ
ಇಂದು ಬಲಿಷ್ಠ ಮರವಾಗಿದೆ
ಫಲ ತುಂಬಿದ ಆದರೆ ಏಕಾಂಗಿ  !

ಸುಖದ ದುಃಖದ
ಸಣ್ಣ ಗುಡಿಸಲು
ಇಂದು ಭವ್ಯ ಬಂಗಲೆಯಾಗಿದೆ
ಸುಖ ಸೌಕರ್ಯದಿಂದ ಪರಿಪೂರ್ಣ
ಎಲ್ಲ ಸೌಲಭ್ಯ ಆದರೆ ಅಪೂರ್ಣ  !

ಬಾಲ್ಯ ಕಳೆದ
ಆ ಊರು
ಇಂದು ಅಪರಿಚಿತರ ಪಟ್ಟಣವಾಗಿದೆ
ಕಪಟ ಗೌರವ ಮರ್ಯಾದೆ
ಯಜಮಾನ ಪದವಿ ಆದರೆ ಊರ ನೆಂಟ!

ಬೇಸರ ಮನದ
ಚಿಂತೆ ಯಾರಿಗೆ
ಜೀವನ ಯಂತ್ರ ಚಲಿತವಾಗಿದೆ
ಹೃದಯ ಬಂಡೆ ಕಲ್ಲಾಗಿದೆ
ಸುಂದರ ಪ್ರತಿಮೆ ಆದರೆ ಭಾವನೆ ರಹಿತ !

ನನ್ನತನ
ಉಳಿಯಲಿಲ್ಲ ಈಗ
ಸ್ವಂತ ಬದುಕು ಅನ್ಯರ ವಶವಾಗಿದೆ
ಜೀವನ ಕೈಗೊಂಬೆಯಾಗಿದೆ
ನಾನು ನಾನೇ ಆದರೆ ನಾನಲ್ಲ !
by ಹರೀಶ್ ಶೆಟ್ಟಿ, ಶಿರ್ವ

ನೀನು ಒಳಿತಾದರೆ ಜಗ ಸುಂದರ

ಮನುಜ...
ಜಗದ ಕಲ್ಮಶ ನಿನಗ್ಯಾಕೆ
ನಿನ್ನ ಮನಸ್ಸು ಹೃದಯ ಶುದ್ಧ ಇರಲಿ
ನೀನು ಒಳಿತಾದರೆ ಜಗ ಸುಂದರ
ನಿನ್ನ ಪವಿತ್ರತೆಯಿಂದ ಜಗ ಶುಚಿ ಕಲಿಯಲಿ
ಜಗ ನಿನ್ನಂತೆ ಆಗಲಿ
ಜಗ ನಿನ್ನ ನೀತಿ ಅನುಸರಿಸಲಿ
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Saturday, June 2, 2012

ಜೀವನ ತುಂಬಿದ ನಿನ್ನ ಕಣ್ಣು

ಜೀವನ ತುಂಬಿದ ನಿನ್ನ ಕಣ್ಣು
ಒತ್ತಾಯಿಸುತ್ತಿದೆ  ಜೀವಿಸಲು ...ಜೀವಿಸಲು
ಸಾಗರವೂ ಹಂಬಲಿಸುತ ಇರುತ್ತದೆ
ನಿನ್ನ ರೂಪ ರಸವನ್ನು ಸವಿಯಲು ...ಸವಿಯಲು!

ಯಾರೆಂಥ ಚಿತ್ರ ಬಿಡಿಸಲಿ
ಯಾರು ಬರೆಯಲಿ ನಿನ್ನ ಕುರಿತು ಕವಿತೆ
ಬಣ್ಣ ಪದಗಳಲ್ಲಿ ಬಣ್ಣಿಸಲಾಗದು
ಅದ್ಭುತ ನಿನ್ನ ಸುಂದರತೆ....ಸುಂದರತೆ
ಒಂದು ಸಿಹಿ ಮಿಡಿತ ನೀನು ಹೃದಯದ
ಒಂದು ಜೀವ ನೀನು ಜೀವಿಸಲು....ಜೀವಿಸಲು!
ಜೀವನ ತುಂಬಿದ...

ಹೂದೋಟದ ಸುಗಂಧ ನಿನ್ನ ಶ್ವಾಸದಲಿ
ಕಮಲದ ಸೌಮ್ಯತೆ ನಿನ್ನ ಅಲಿಂಗನದಲಿ
ಕಿರಣದ ತೀವ್ರತೆ ನಿನ್ನ ಮುಖದಲಿ
ಜಿಂಕೆಯಂತೆ ನಿನ್ನ ಚಂಚಲತೆ .......ಚಂಚಲತೆ
ನಿನ್ನ ಸೆರಗಿನ ಅಮೃತ ಗಾಳಿಯೇ ಸಾಕು
ಹೃದಯದ ಅಗ್ನಿ ತಣಿಸಲು ....ತಣಿಸಲು

ಜೀವನ ತುಂಬಿದ ನಿನ್ನ ಕಣ್ಣು
ಒತ್ತಾಯಿಸುತ್ತಿದೆ ಜೀವಿಸಲು ...ಜೀವಿಸಲು

ಮೂಲ ರಚನೆ : ಇಂದೀವರ್, ಚಿತ್ರ : ಸಫರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್

Jeevan Se Bhari Teri Aankhen
Majboor Karen Jeene Ke Liye
Saagar Bhi Taraste Rehte Hain
Tere Hoth Ka Ras Peene Ke Liye

Tasveer Banaye Kya Koi
Kya Koi Likhe Tujh Pe Kavita
Rangon Chhandon Mein Samayegi
Kis Tarah Se Itni Sundarta
Ek Dhadkan Hai Tu Dil Ke Liye
Ek Jaan Hai Tu Jeene Ke Liye
Jeevan Se Bhari Teri Aankhen

Madhuban Ki Sugandh Hai Saanson Mein
Baahon Mein Kamal Ki Komalta
Kirnon Ka Tej Hai Chehre Pe
Hirnon Si Hai Tujh Mein Chanchalta
Aanchal Ka Tere Hai Saar Bahut
Koi Chaak Jigar Seene Ke Liye
Jeevan Se Bhari Teri Aankhen
www.youtube.com/watch?v=W8_Z1pqj558



ಕನಸು

ಮನುಜ.....
ಕನಸು ನಿನ್ನನ್ನು ಹುಡುಕಿ ಬರಲಾರದು
ನೀನು ಕನಸನ್ನು ಹಿಂಬಾಲಿಸು
ನಿರ್ಲಕ್ಷಿಸು ಹಾದಿಯಲ್ಲಿ ಬಂದ ಕಲ್ಲು ಮುಳ್ಳು
ತನ್ನ ಕನಸು ನನಸಾದ ನಂತರ
ಅದನ್ನು ಬಿಗಿಯಾಗಿ ಹಿಡಿದುಕೊಳ್ಳು
ಎಂದ ಶ್ರೀ ಹರಿ.....
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ