Saturday, March 31, 2012

ಕಾವಲುಗಾರ

ರಾತ್ರಿ ಚಂದಿರ
ನಿದ್ದೆಯಲಿ ಸೂರ್ಯ
ಬೀಸುತ್ತಿರುವ ಗಾಳಿ
ನಾಯಿಗಳ ಬೊಗಳುವಿಕೆ
ಮೈ ಕಂಪಿಸುವ ನೀರವತೆ
ಕತ್ತಲ ಕಾವಲುಗಾರ ಯಾರು !

ಹರಿಯುತ್ತಿರುವ ಕಣ್ಣೀರು
ಗಾಬರಿಕೆಯ ಅಲೆಗಳು
ನಿರಂತರ ಕಾಯುವಿಕೆ
ಪುರುಷ ದಬ್ಬಾಳಿಕೆ
ಸಂಸಾರ ಪತನಕ್ಕೆ
ಕುಟುಂಬದ ಕಾವಲುಗಾರ ಯಾರು!

ಜೀವನದ ಪಯಣ
ಯೌವನ ಮುಪ್ಪು
ಶ್ವೇತ ಕಪ್ಪು
ಕರ್ಮದ ಪಲಿತಾಂಶ
ಸರಿ ತಪ್ಪು
ಜೀವನದ ಕಾವಲುಗಾರ ಯಾರು !

ಆತ್ಮ ಪರಮಾತ್ಮ
ಸತ್ಯ ಸುಳ್ಳು
ಧರ್ಮ ಅಧರ್ಮ
ಜಾತಿ ಸಂಸ್ಕೃತಿ
ಬೌತಿಕ ಆಧ್ಯಾತ್ಮಿಕ
ಒಳ ಜಗದ ಕಾವಲುಗಾರ ಯಾರು !
by ಹರೀಶ್ ಶೆಟ್ಟಿ, ಶಿರ್ವ




Friday, March 30, 2012

ಅವಳೇ

ಆಕಾಶದಲಿ ಒಂದು ನಕ್ಷತ್ರ ಮಿನುಗಿತು
ಅವಳೇ ನನ್ನನ್ನು ಮೋಡಗಳ ಮರೆಯಿಂದ ನೋಡುತ್ತಿದ್ದಂತೆ ಭಾಸವಾಯಿತು ..
ಶುಭ ರಾತ್ರಿ
by ಹರೀಶ್ ಶೆಟ್ಟಿ, ಶಿರ್ವ

ಸಮುದ್ರ ಹಾಗು ಅವಳು

ಸಮುದ್ರದ ತೀರದಲಿ
ನಡೆತ ನಡೆತ ಮರಳಲ್ಲಿ
ಅಲ್ಲೇ ಕುಳಿತು
ಮರಳಿಂದ ಕನಸ
ಮನೆ ಮಾಡುತ್ತಿದ್ದೆ
ಸಮುದ್ರದ ನೀರ ಅಲೆವೊಂದು
ಬಂದು ಮರಳ ಮನೆಯನ್ನು
ಮುರಿದಾಗ
ಮನದಲ್ಲಿ ಬಂತು ವಿಚಾರ
ಅವಳೂ ಈ ಸಮುದ್ರದ
ನೀರಿನ ಅಲೆಯಂತೆ ಅಲ್ಲವೇ
ಹೀಗೆಯೇ ನನ್ನ
ಜೀವನದಲ್ಲಿ ಬಂದು ನನ್ನ
ಮನೆ ಮುರಿದು ಹೋದಳಲ್ಲ
ನನ್ನ ಕನಸನ್ನು ಚೂರು ಚೂರು ಮಾಡಿದಳಲ್ಲ
ಹಾಗಾದರೆ ಈ ಸಮುದ್ರ
ಸಹ ಅವಳಂತೆ ಅಲ್ಲವೇ
ತನ್ನ ಎಲ್ಲದನ್ನು ಕೊಟ್ಟು
ಒಂದೇ ಕ್ಷಣದಲಿ
ಎಲ್ಲವನ್ನು ಕಸಿದು ಕೊಂಡಂತೆ
ಸಮುದ್ರ ಸಹ ಪರಮ ಉಪಯೋಗಿ ಆಗಿಯೂ
ಮುನಿದರೆ ಎಲ್ಲವನ್ನು ಕಸಿದು ಕೊಳ್ಳುತ್ತದೆ ಅಲ್ಲವೇ...
by ಹರೀಶ್ ಶೆಟ್ಟಿ, ಶಿರ್ವ

ಯಕ್ಷಿಣಿ

ಅವಳು ನನ್ನ ಹೃದಯ ಮಾರ್ಗದಿಂದ  ಬಂದು
ನನ್ನ ಮನಸ್ಸನ್ನು ಕದ್ದು
ಪ್ರೀತಿಯ ಮಾಯಾ ಜಾಲೆಯಿಂದ ನನ್ನನ್ನು ತನ್ನ ವಶ ಪಡಿಸಿದ ಯಕ್ಷಿಣಿ
by ಹರೀಶ್ ಶೆಟ್ಟಿ, ಶಿರ್ವ

Thursday, March 29, 2012

ಮಾರಾಟಕ್ಕೆ ಇದೆ

ರಕ್ತ ಮಾಂಸದಿಂದ
ತುಂಬಿದ ಬಡ ಶರೀರ
ಮುರಿದ ಆಸೆಯಿಂದ 
ತನ್ನ ಯೌವನವನ್ನು ನೀಡುತ
ಕೆಂಪು ಮನೆಯಲಿ
ಕಣ್ಣೀರಿಟ್ಟು ಜೀವಿಸುವ
ಹೆಣ್ಣ ಬಾಳು ಮಾರಾಟಕ್ಕೆ ಇದೆ !

ಮಗುವನ್ನು ಹೆತ್ತು
ಅಮ್ಮ ಎನ್ನುವ ದೈವ
ರಕ್ಕಸ ರೂಪ ತಾಳಿ
ಮೊಲೆ ಹಾಲು ನೀಡದೆ
ಹಸಿದ ಮಗುವನ್ನು
ಕಸದ ಬುಟ್ಟಿಯಲಿ ಬಿಟ್ಟಿದ
ತಾಯಿಯ ಮೊಲೆ ಹಾಲು ಮಾರಾಟಕ್ಕೆ ಇದೆ !

ತನ್ನನ್ನು ಪೋಷಿಸಿದ
ತಂದೆ ತಾಯಿಯ
ಉಪಕಾರವನ್ನು ಮರೆತು
ಅವರ ಸ್ವಪ್ನವನ್ನು ಮುರಿದು 
ಅಪಮಾನ ಮಾಡಿ 
ಮನೆಯಿಂದ ಹೊರ ದೂಡಿ 
ವೃದ್ಧಾಶ್ರಮ ಸೇರಿಸುವ
ಮಕ್ಕಳ ನೀಚ ಸಂಸ್ಕೃತಿ ಮಾರಾಟಕ್ಕೆಇದೆ !
by ಹರೀಶ್ ಶೆಟ್ಟಿ, ಶಿರ್ವ


Wednesday, March 28, 2012

ಬದುಕು

ಬದುಕು
ಜನ್ಮ
ಮತ್ತು 
ಮರಣದ
ಮಧ್ಯೆ
ಇರುವ
ಸೇತುವೆ.....
ನಿಷ್ಠೆಯಿಂದ
ಪ್ರೀತಿಯಿಂದ
ದೈರ್ಯದಿಂದ
ಜೀವನ ಸಾಗಿಸಿ
ಅನೇಕ ಹಾಗೂ
ಹೋಗುಗಳಿವೆ.....
by ಹರೀಶ್ ಶೆಟ್ಟಿ, ಶಿರ್ವ 

Tuesday, March 27, 2012

ಭಾಗ್ಯ

ಮನೆಯಲ್ಲಿ ಏರಿಸಿದ ಕಂದೀಲು
ಆಚೆ ಈಚೆ ಅಳಗಾಡುವ ತೊಟ್ಟಿಲು
ತೊಟ್ಟಿಲಲ್ಲಿ ಆಡುತಿದೆ ಮಗು ಎತ್ತಿ ಕೈ ಕಾಲು
ಹೊರಗೆ ಬಡ ಮಗುವೊಂದು ಅಳುತ್ತಿತ್ತು ಇಲ್ಲ ಹಾಲು !

ಮಗುವಿನ ನಾಮಕರಣ
ಭವ್ಯ ಉತ್ಸವ ವಾತಾವರಣ
ನೆಂಟ ಇಷ್ಟರ ಆಗಮನ
ಹೊರಗೆ ಬಡ ಅಳುವ ಮಗುವಿನ ಬದಿಯಲ್ಲಿ ಇಲ್ಲ ಜನ !

ಸಂಗೀತ ಸಮಾರಂಭ
ಗಾಯನ ವಾದನ
ಉತ್ತಮ ಔತಣ
ಕೇಳಲಿಲ್ಲ ಯಾರಿಗೂ ಹಾಲಿಗಾಗಿ ಅಳುವ ಮಗುವಿನ ರೋದನ !

ಅನೇಕ ಉಡುಗೊರೆ ಮಾನ ಅಭಿನಂದನ
ಐಶ್ವರ್ಯದ ಪ್ರದರ್ಶನ
ವೈಭವದ ಸಮಾಪನ
ಶಾಂತವಾಗಿತ್ತು ಹೊರಗೆ ಅಳುತ್ತಿದ್ದ ಮಗುವಿನ ಗಾನ !
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ