Monday, February 9, 2015

ನಿನ್ನನ್ನು ಪಡೆದು

                                                      ಚಿತ್ರಕೃಪೆ/ಹಾಡಿನ ಕೊಂಡಿ : Google

ನಿನ್ನನ್ನು ಪಡೆದು
ಹೀಗೆ ಅನಿಸಿತು ನಿನ್ನನ್ನು ಪಡೆದು
ಬಯಕೆ ಈಡೇರಿತು ಹೃದಯದ್ದು
ಓ ನನ್ನ ಪ್ರೀತಿಯೇ,
ನಿನ್ನ ನನ್ನ ನನ್ನ ನಿನ್ನ ಒಂದೇ ಜೀವ
ನಿನ್ನ ಜೊತೆ ಇರುವೆ ಸದಾ
ಎಂದೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ನನ್ನೊಲವೆ ನಿನ್ನಾಣೆ
ಬಿಡಲಾರೆ ನಿನ್ನ ಈ ಕೈಯನ್ನು
ಈ ಜೀವನ ಕಳೆಯುವುದೀಗ
ಪ್ರಿಯತಮೆ ನಿನ್ನದೇ ಜೊತೆಯಲಿ ಇನ್ನು
ನೀಡುವೆ ವಚನದ ಬಂಧ
ಎಂದೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ನಾ ಮಾಡಿದೆ ಹಗಲು ರಾತ್ರಿ
ಕೇವಲ ನಿರೀಕ್ಷೆ ನಿನ್ನದೇ
ನೀನಲ್ಲದೆ ಸಿಗುವುದಿಲ್ಲ
ಒಂದು ಕ್ಷಣವೂ ನೆಮ್ಮದಿ ನನಗೆ
ನನ್ನೊಲವು ಸಿಕ್ಕಿದಾಗಿದೆ ನನ್ನಿಂದ
ಈಗಂತೂ ಅಗಲಲಾರೆ ನಿನ್ನಿಂದ
ನಿನ್ನನ್ನು ಪಡೆದು ...

ಮೂಲ : ಖುರ್ಷಿದ್ ಹಾಲೌರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಆಶಾ ಭೋಂಸ್ಲೆ, ಸುರೇಶ ವಾಡ್ಕರ್
ಸಂಗೀತ : ಆರ್. ಡೀ. ಬರ್ಮನ್
ಚಿತ್ರ : ಪರಿಂದಾ


तुम से मिल के, ऐसा लगा, तुम से मिल के
अरमां हुए पुरे दिल के, ए मेरी जान-ए-वफ़ा
तेरी मेरी, मेरी तेरी, एक जान है
साथ तेरे रहेंगे सदा, तुम से ना होंगे जुदा

मेरे सनम, तेरी कसम, छोड़ेंगे अब ना ये हाथ
ये जिन्दगी, गुजरेगी अब, हमदम तुम्हारे ही साथ
अपना ये वादा रहा, तुम से ना होंगे जुदा

मैंने किया, हैं रातदिन, बस तेरा ही इंतज़ार
तेरे बीना, आता नहीं, एक पल मुझे अब करार
हमदम मेरा मिल गया, हम तुम ना होंगे जुदा
हमदम मेरा मिल गया, अब हम ना होंगे जुदा
https://www.youtube.com/watch?v=ivVikjr7hIM

ಮರಳ ಮೇಲೆ ನಿನ್ನ ಸುಂದರ ಚಿತ್ರ


                                                        ಚಿತ್ರಕೃಪೆ : Google

ನೀನು ಬಾರದೆ ಇದ್ದ ಆ ಸಂಜೆ
ನಿನ್ನನ್ನು ಕಾಯುತ್ತಾ ನಾನು
ಕಡಲ ಮರಳ ಮೇಲೆ
ನಿನ್ನ ಒಂದು
ಸುಂದರ ಚಿತ್ರ ಬರೆದಿದ್ದೆ

ಕತ್ತಲು ಕವಿದರೂ
ನೀನು ಬಾರದಿದ್ದಾಗ
ಮರಳ ಮೇಲೆ ಬರೆದ
ನಿನ್ನ ಚಿತ್ರವನ್ನು
ಹೀಗೆಯೇ ಬಿಟ್ಟು ಹೋಗಲು
ಮನಸ್ಸು ಒಪ್ಪಿರಲಿಲ್ಲ

ಆದರೆ ಅಂದು ಕಡಲು
ತನ್ನ ರೌದ್ರ ರೂಪ ತಾಳಿ
ತನ್ನ  ಪ್ರವಾಹದಿಂದ
ನಾ ಬರೆದ ನಿನ್ನ
ಚಿತ್ರವನ್ನು ಕೊಚ್ಚಿಹೋದವು

ನನಗಾದ
ತೀವ್ರ ವೇದನೆಯಿಂದ
ಆಗಸಕ್ಕೂ ಬೇಸರವಾಯಿತೇನೋ
ಅದೂ ತನ್ನ ಕಣ್ಣೀರು ಸುರಿಸಿ
ತನ್ನ ಸಂವೇದನೆ ಸೂಚಿಸಿದವು

ಆ ನಂತರ ಹೇಗೋ
ಭಾರ ಹೃದಯದಿಂದ
ಮೆಲ್ಲ ಮೆಲ್ಲನೆ
ಹೆಜ್ಜೆ ಇಟ್ಟು
ಮನೆಯತ್ತ ನಡೆದಿದ್ದೆ

ನಾನು
ಪೂರ್ಣ ಒದ್ದೆಯಾಗಿದ್ದರಿಂದ
ನನ್ನ ಕಣ್ಣೀರು
ಮನೆಯಲ್ಲಿ
ಯಾರಿಗೂ ಕಂಡು ಬಂದಿರಲಿಲ್ಲ

by ಹರೀಶ್ ಶೆಟ್ಟಿ, ಶಿರ್ವ 

Saturday, February 7, 2015

ವಸಂತವೆ ನನ್ನ ಬದುಕನ್ನೂ ಸಿಂಗಾರಿಸು ನೀನು

                                                                ಚಿತ್ರಕೃಪೆ :Google



!!ವಸಂತವೆ ನನ್ನ ಬದುಕನ್ನೂ
ಸಿಂಗಾರಿಸು ನೀನು
ಯಾರೋ ಬರಲಿ ಎಲ್ಲಿಂದಲೂ-೨
ಹೀಗೆ ಕೂಗಿ ಕರೆ ನೀನು!!
ವಸಂತವೆ...

!!ನಿನ್ನಿಂದಲೇ ಹೃದಯ ಕಲಿತಿದೆ ಚಡಪಡಿಕೆಯನ್ನು-೨
ನಿನ್ನನ್ನೇ ದೂರುವೆ-೨
ನಿನ್ನನ್ನೇ ದೂರುವೆ
ಓ ಈ ಸುಂದರ ನೋಟಗಳನ್ನು!!
ವಸಂತವೆ...

!!ರಚಿಸು ಯಾವುದೇ ಕಜ್ಜಳ ತಾ ಹೂಮಾಲೆ-೨
ಬಳುಕುವ ಲತೆ ನೀನು
ಬಳುಕುವ ಲತೆ ನೀನು
ಅರಳಿದ ಹೂವನ್ನು ಚೆಲ್ಲು ನೀನು!!
ವಸಂತವೆ...

!!ಹಚ್ಚು ನನ್ನ ಈ ಕೈಗಳಿಗೆ ಮೆಹಂದಿ-೨
ಸಿಂಗರಿಸು ಕುಂಕುಮ ಹಣೆಗೆ
ಸಿಂಗರಿಸು ಕುಂಕುಮ ಹಣೆಗೆ
ಅಲ್ಲದೆ ಹೊರಟುಹೋಗು ನೀನು!!
ವಸಂತವೆ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ಆಖ್ರೀ ಖತ್

बहारों मेरा जीवन भी सवारों
कोई आये कही से, यूँ पुकारो

तुम ही से दिल ने सीखा हैं तड़पना
तुम ही को दोष देंगी , ऐ नज़ारों

रचाओ कोई कजरा, लाओ गजरा
लचकती डालियों तुम  फूल वारों

लगाओ मेरे इन हाथों में मेहंदी
सजाओ माँग मेरी, या सिधारो
http://www.dailymotion.com/video/xn2m3s_baharo-mera-jeevan-bhi-sanwaro-koi-aye-kahin-se-lata-mangeshkar-khayyam_music

Thursday, February 5, 2015

ಹೆಸರು

ಆ ಸಮಯ ಕಳೆದೋಯಿತು
ಈಗ ನಾನು ನಾನಾಗಿ ಉಳಿಯಲಿಲ್ಲ
ನೀನು ನೀನಾಗಿ ಉಳಿಯಲಿಲ್ಲ
ಆದರೆ ಆ ಸವಿ ಕಹಿ ನೆನಪು ಅದೇಕೋ ಉಳಿದೋಯಿತು

ವಿರಹ ಅಗ್ನಿಯ ಜ್ವಾಲೆಯೂ
ನಂದಿ ಹೋಯಿತು
ಕಿಡಿ ಸಹ ಉಳಿಯಲಿಲ್ಲ
ಆದರೆ ಪ್ರೀತಿಯ ಅವಶೇಷ ಉಳಿದೋಯಿತು

ಪ್ರೀತಿಯ ಮರಳ ಮನೆ
ಸಾಗರದ ತರಂಗಗಳು ಕೊಚ್ಚಿ ಹೋದವು
ಆದರೆ ತೀರದಲ್ಲಿದ್ದ ಬಂಡೆಗಳ ಮೇಲೆ ಬರೆದ
ನಮ್ಮಿಬ್ಬರ ಹೆಸರು ಉಳಿದೋಯಿತು

by ಹರೀಶ್ ಶೆಟ್ಟಿ, ಶಿರ್ವ 

Wednesday, February 4, 2015

ಮೌನ-ಧ್ಯಾನ

ಹೂವಿನ ಪಕಳೆಗಳು
ಒಂದೊಂದಾಗಿ ಬೀಳುತ್ತಿವೆ
ದುಂಬಿ ರಸ ಸವಿಯುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

ಆಧಾರ

ಆ ತೋಟದ ಅಂದಕ್ಕೆ
ನಾವು ಕಾರಣ ಎಂದು
ಹೂಗಳು ಮೆರೆಯುತ್ತಿದ್ದವು
ಮಾಲಿ ಗಿಡಗಳಿಗೆ ನೀರೆರೆಯುವುದರಲಿ ಮಗ್ನ!
---
ಧಾನ್ಯದ ಪಾಲಿಗೋಸ್ಕರ
ರೈತನ ಕುಟುಂಬದ ಮಧ್ಯೆ ಜಗಳ
ರೈತ ಹೊಲದಲ್ಲಿ ಶ್ರಮಿಸುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

Sunday, February 1, 2015

ಸಾಮರ್ಥ್ಯ ದೇಶದ ನಿಮ್ಮಿಂದ ಇದೆ

!!ಸಾಮರ್ಥ್ಯ ದೇಶದ ನಿಮ್ಮಿಂದ ಇದೆ
ಶೌರ್ಯತೆ ದೇಶದ ನಿಮ್ಮಿಂದ ಇದೆ
ಘನತೆ ದೇಶದ ನಿಮ್ಮಿಂದ ಇದೆ
ಮಾನವ ಕುಲದ ನೀವು ರಕ್ಷಕರು!!

!!ಸಾಮರ್ಥ್ಯ ದೇಶದ ನಮ್ಮಿಂದ ಇದೆ
ಶೌರ್ಯತೆ ದೇಶದ ನಮ್ಮಿಂದ ಇದೆ
ಘನತೆ ದೇಶದ ನಮ್ಮಿಂದ ಇದೆ
ಮಾನವ ಕುಲದ ನಾವು ರಕ್ಷಕರು!!

!!ಕಾವಲುಗಾರರು ಹಿಮಾಲಯದ
ಬಿರುಸು ನಾವು ಬಿರುಗಾಳಿಯ
ಘರ್ಜನೆ ಕೇಳಿ ನಮ್ಮದು
ಸೀಳಾಗುತ್ತದೆ ಎದೆ ಬಂಡೆಯ!!
ಸಾಮರ್ಥ್ಯ ದೇಶದ...

!!ಉಕ್ಕಿನ ಎದೆ ನಮ್ಮದು
ಹೂವಿನಂತಹ ಹೃದಯ
ದೇಹದಲಿ ಬಲವಿದೆ ಪರ್ವತದ
ಮನಸ್ಸಲಿ ಸೌದರ್ಯವಿದೆ ನದಿಯ!!
ಸಾಮರ್ಥ್ಯ ದೇಶದ...

!!ನೀಡಿ ನಮ್ಮ ರಕ್ತವನ್ನು
ದೇಶದ ಹೂ ಉಪವನವನ್ನು ರಕ್ಷಿಸುವವರು ನಾವು
ಕೊಳಲಿಂದ ಬಂದೂಕು ಮಾಡುವಂತಹ
ಪ್ರೇಮ ಪೂಜಾರಿಗಳು ನಾವು!!
ಸಾಮರ್ಥ್ಯ ದೇಶದ...

!!ಬಂದು ಸಹೋದರಿಯ ರಾಖಿ
ಕೊಟ್ಟು ಹೋದವು ನಮಗೆ ಆಣೆಯನ್ನು
ನೀಡುವೆವು ತನ್ನ ಶಿರವನ್ನು
ನೀಡಲಾರೆವು ದೇಶದ ಮಣ್ಣನ್ನು!!
ಸಾಮರ್ಥ್ಯ ದೇಶದ...

!!ಅಪಾಯದಲ್ಲಿದೆ ದೇಶ
ಆಗಂತೂ ಹೋರಾಡುವುದೇ ಕೇವಲ ಧರ್ಮ
ಸಾವಂದರೆ ಏನು ವಸ್ತು
ಮಾನವ ಪಡೆಯುವನು ಹೊಸ ಜನುಮ!!
ಸಾಮರ್ಥ್ಯ ದೇಶದ...

!!ಒಂದೇ ಜೀವ, ಒಂದೇ ಪ್ರಾಣ
ನಮ್ಮ ಎಲ್ಲಾ ದೇಶದವರು
ನದಿಗಳು ಸೋತು ಹೋದವು
ಆದರೆ ನಿಲ್ಲಲಿಲ್ಲ ಗಂಗೆಯ ನೀರು!!
ಸಾಮರ್ಥ್ಯ ದೇಶದ...

ಮೂಲ: ನೀರಜ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಮನ್ನಾ ಡೇ ಇತರರು
ಸಂಗೀತ : ಎಸ್. ಡೀ , ಬರ್ಮನ್

ताकत वतन की हमसे है
हिम्मत वतन की हमसे है
इज्ज़त वतन की हमसे है
इंसान के हम रखवाले

पहरेदार हिमालय के हम, झोंके हैं तूफ़ान के
सुनकर गरज हमारी सीने फट जाते चट्टान के
ताकत वतन की हमसे है...

सीना है फौलाद का अपना, फूलों जैसा दिल है
तन में विन्ध्याजल का बल है, मन में ताजमहल है
ताक़त वतन की हमसे है...

देकर अपना खून सींचते देश की हम फुलवारी
बंसी से बन्दूक बनाते हम वो प्रेम पुजारी
ताकत वतन की हमसे है...

आकर हमको कसम दे गई, राखी किसी बहन की
देंगे अपना शीश, न देंगे मिट्टी मगर वतन की
ताक़त वतन की हमसे है...

खतरे में हो देश अरे तब लड़ना सिर्फ धरम है
मरना है क्या चीज़ आदमी लेता नया जनम है
ताकत वतन की हमसे है...

एक जान है, एक प्राण है सारा देश हमारा
नदियाँ चल कर थकी रुकी पर कभी न गंगा धरा
ताक़त वतन की हमसे है...
https://www.youtube.com/watch?v=-a641b2vjKc

ಸಿದ್ಧಿದಾತ್ರಿ