Thursday, February 5, 2015

ಹೆಸರು

ಆ ಸಮಯ ಕಳೆದೋಯಿತು
ಈಗ ನಾನು ನಾನಾಗಿ ಉಳಿಯಲಿಲ್ಲ
ನೀನು ನೀನಾಗಿ ಉಳಿಯಲಿಲ್ಲ
ಆದರೆ ಆ ಸವಿ ಕಹಿ ನೆನಪು ಅದೇಕೋ ಉಳಿದೋಯಿತು

ವಿರಹ ಅಗ್ನಿಯ ಜ್ವಾಲೆಯೂ
ನಂದಿ ಹೋಯಿತು
ಕಿಡಿ ಸಹ ಉಳಿಯಲಿಲ್ಲ
ಆದರೆ ಪ್ರೀತಿಯ ಅವಶೇಷ ಉಳಿದೋಯಿತು

ಪ್ರೀತಿಯ ಮರಳ ಮನೆ
ಸಾಗರದ ತರಂಗಗಳು ಕೊಚ್ಚಿ ಹೋದವು
ಆದರೆ ತೀರದಲ್ಲಿದ್ದ ಬಂಡೆಗಳ ಮೇಲೆ ಬರೆದ
ನಮ್ಮಿಬ್ಬರ ಹೆಸರು ಉಳಿದೋಯಿತು

by ಹರೀಶ್ ಶೆಟ್ಟಿ, ಶಿರ್ವ 

Wednesday, February 4, 2015

ಮೌನ-ಧ್ಯಾನ

ಹೂವಿನ ಪಕಳೆಗಳು
ಒಂದೊಂದಾಗಿ ಬೀಳುತ್ತಿವೆ
ದುಂಬಿ ರಸ ಸವಿಯುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

ಆಧಾರ

ಆ ತೋಟದ ಅಂದಕ್ಕೆ
ನಾವು ಕಾರಣ ಎಂದು
ಹೂಗಳು ಮೆರೆಯುತ್ತಿದ್ದವು
ಮಾಲಿ ಗಿಡಗಳಿಗೆ ನೀರೆರೆಯುವುದರಲಿ ಮಗ್ನ!
---
ಧಾನ್ಯದ ಪಾಲಿಗೋಸ್ಕರ
ರೈತನ ಕುಟುಂಬದ ಮಧ್ಯೆ ಜಗಳ
ರೈತ ಹೊಲದಲ್ಲಿ ಶ್ರಮಿಸುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

Sunday, February 1, 2015

ಸಾಮರ್ಥ್ಯ ದೇಶದ ನಿಮ್ಮಿಂದ ಇದೆ

!!ಸಾಮರ್ಥ್ಯ ದೇಶದ ನಿಮ್ಮಿಂದ ಇದೆ
ಶೌರ್ಯತೆ ದೇಶದ ನಿಮ್ಮಿಂದ ಇದೆ
ಘನತೆ ದೇಶದ ನಿಮ್ಮಿಂದ ಇದೆ
ಮಾನವ ಕುಲದ ನೀವು ರಕ್ಷಕರು!!

!!ಸಾಮರ್ಥ್ಯ ದೇಶದ ನಮ್ಮಿಂದ ಇದೆ
ಶೌರ್ಯತೆ ದೇಶದ ನಮ್ಮಿಂದ ಇದೆ
ಘನತೆ ದೇಶದ ನಮ್ಮಿಂದ ಇದೆ
ಮಾನವ ಕುಲದ ನಾವು ರಕ್ಷಕರು!!

!!ಕಾವಲುಗಾರರು ಹಿಮಾಲಯದ
ಬಿರುಸು ನಾವು ಬಿರುಗಾಳಿಯ
ಘರ್ಜನೆ ಕೇಳಿ ನಮ್ಮದು
ಸೀಳಾಗುತ್ತದೆ ಎದೆ ಬಂಡೆಯ!!
ಸಾಮರ್ಥ್ಯ ದೇಶದ...

!!ಉಕ್ಕಿನ ಎದೆ ನಮ್ಮದು
ಹೂವಿನಂತಹ ಹೃದಯ
ದೇಹದಲಿ ಬಲವಿದೆ ಪರ್ವತದ
ಮನಸ್ಸಲಿ ಸೌದರ್ಯವಿದೆ ನದಿಯ!!
ಸಾಮರ್ಥ್ಯ ದೇಶದ...

!!ನೀಡಿ ನಮ್ಮ ರಕ್ತವನ್ನು
ದೇಶದ ಹೂ ಉಪವನವನ್ನು ರಕ್ಷಿಸುವವರು ನಾವು
ಕೊಳಲಿಂದ ಬಂದೂಕು ಮಾಡುವಂತಹ
ಪ್ರೇಮ ಪೂಜಾರಿಗಳು ನಾವು!!
ಸಾಮರ್ಥ್ಯ ದೇಶದ...

!!ಬಂದು ಸಹೋದರಿಯ ರಾಖಿ
ಕೊಟ್ಟು ಹೋದವು ನಮಗೆ ಆಣೆಯನ್ನು
ನೀಡುವೆವು ತನ್ನ ಶಿರವನ್ನು
ನೀಡಲಾರೆವು ದೇಶದ ಮಣ್ಣನ್ನು!!
ಸಾಮರ್ಥ್ಯ ದೇಶದ...

!!ಅಪಾಯದಲ್ಲಿದೆ ದೇಶ
ಆಗಂತೂ ಹೋರಾಡುವುದೇ ಕೇವಲ ಧರ್ಮ
ಸಾವಂದರೆ ಏನು ವಸ್ತು
ಮಾನವ ಪಡೆಯುವನು ಹೊಸ ಜನುಮ!!
ಸಾಮರ್ಥ್ಯ ದೇಶದ...

!!ಒಂದೇ ಜೀವ, ಒಂದೇ ಪ್ರಾಣ
ನಮ್ಮ ಎಲ್ಲಾ ದೇಶದವರು
ನದಿಗಳು ಸೋತು ಹೋದವು
ಆದರೆ ನಿಲ್ಲಲಿಲ್ಲ ಗಂಗೆಯ ನೀರು!!
ಸಾಮರ್ಥ್ಯ ದೇಶದ...

ಮೂಲ: ನೀರಜ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಮನ್ನಾ ಡೇ ಇತರರು
ಸಂಗೀತ : ಎಸ್. ಡೀ , ಬರ್ಮನ್

ताकत वतन की हमसे है
हिम्मत वतन की हमसे है
इज्ज़त वतन की हमसे है
इंसान के हम रखवाले

पहरेदार हिमालय के हम, झोंके हैं तूफ़ान के
सुनकर गरज हमारी सीने फट जाते चट्टान के
ताकत वतन की हमसे है...

सीना है फौलाद का अपना, फूलों जैसा दिल है
तन में विन्ध्याजल का बल है, मन में ताजमहल है
ताक़त वतन की हमसे है...

देकर अपना खून सींचते देश की हम फुलवारी
बंसी से बन्दूक बनाते हम वो प्रेम पुजारी
ताकत वतन की हमसे है...

आकर हमको कसम दे गई, राखी किसी बहन की
देंगे अपना शीश, न देंगे मिट्टी मगर वतन की
ताक़त वतन की हमसे है...

खतरे में हो देश अरे तब लड़ना सिर्फ धरम है
मरना है क्या चीज़ आदमी लेता नया जनम है
ताकत वतन की हमसे है...

एक जान है, एक प्राण है सारा देश हमारा
नदियाँ चल कर थकी रुकी पर कभी न गंगा धरा
ताक़त वतन की हमसे है...
https://www.youtube.com/watch?v=-a641b2vjKc

Thursday, January 29, 2015

ಅನುಭೂತಿ

ಇಂದು ಸ್ವಲ್ಪ ಹೆಚ್ಚು ಸಮಯ
ನಾನಲ್ಲಿ ಕಳೆದೆ
ಆ ನೀಲ ಪರ್ವತ
ಅದೇಕೋ ಇಂದು ಬಹಳ ಸುಂದರವಾಗಿ ಕಂಡು ಬರುತ್ತಿತ್ತು
ಏಕಾಂತದಲಿ ಆ ತಂಪು ಪವನ
ಅದೇಕೋ ಇಂದು ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡುತ್ತಿತ್ತು
ಇದು ಅವಳ ಸ್ಪರ್ಶವೇ?
ಅಥವಾ ನನ್ನ ಭ್ರಮೆಯೆ?
ಏನಿದು?
ಏಕಾಂತದ ಅಭ್ಯಾಸ ಮಾಡಿಕೊಂಡಿದ
ನನಗೆ
ಇಂದು ಯಾಕೆ ಎಲ್ಲವೂ
ಸುಂದರವಾಗಿ ಕಾಣುತ್ತಿತ್ತು
ಒಹ್! ಹೌದು
ಇಂದು ಅವಳ ಮತ್ತು ನನ್ನ
ಮೊದಲ ಭೇಟಿಯ ದಿನ ತಾನೇ
ಅದಕ್ಕೆ ಈ ರೀತಿಯ ಅನುಭೂತಿ ಆಗುತ್ತಿದೆ
ಈ ಏಕಾಂತದಲ್ಲೂ
ನಾನು ಏಕಾಂಗಿಯಾಗಿ ಇರಲಿಲ್ಲ
ಎಂಬ ಸಂದೇಶ ನೀಡುತ್ತಿದೆ

by ಹರೀಶ್ ಶೆಟ್ಟಿ, ಶಿರ್ವ  

Wednesday, January 28, 2015

ಒಂದು ಅಪಚರಿತ ಸುಂದರಿ ಜೊತೆ

ಒಂದು ಅಪರಿಚಿತ ಸುಂದರಿ ಜೊತೆ
ಹೀಗೆಯೇ ಭೇಟಿಯಾಯಿತು
ಮತ್ತೇನಾಯಿತು
ಇದು ಕೇಳದಿರಿ
ಹೀಗೊಂದು ಸಂಗತಿ ನಡೆಯಿತು
ಒಂದು ಅಪರಿಚಿತ....

ಅವಳು ಇದ್ದಕಿದ್ದಂತೆ ಬಂದಳು
ಹೀಗೆ ಕಣ್ಣ ಮುಂದೆ ಅಂದರೆ
ಮೇಘಗಳ ಮರೆಯಿಂದ ಚಂದಿರ ಬಂದಂತೆ
ಚಹರೆಯಲಿ ಕೇಶ ಹರಡಿಕೊಂಡಿತ್ತು
ಹಗಲಲಿ ರಾತ್ರಿಯಾಯಿತು
ಒಂದು ಅಪರಿಚಿತ....

ಓ ಪ್ರೀಯತೆಮೆ, ಓ ನನ್ನವಳೇ
ಕವಿಯಾಗಿದ್ದರೆ ನಾನೊಂದು ವೇಳೆ
ಹಾಡುತ್ತಿದ್ದೆ ಘಜಲ್ ನಿನ್ನ ಸೌಂದರ್ಯದ ಕುರಿತು
ನಾನಿದನ್ನು ಹೇಳಿದಾಗ ನನ್ನಿಂದ
ನನ್ನೊಲವು ಮುನಿಸಿಕೊಂಡಾಯಿತು
ಒಂದು ಅಪರಿಚಿತ....

ಸುಂದರ ವಿಷಯ ಇದು
ನಾಲ್ಕು ಕ್ಷಣದ ಜೊತೆ ಇದು
ಇಡೀ ಜೀವನ ನನ್ನ ನೆನಪಲ್ಲಿರುವುದು
ಏಕಾಂಗಿ ನಾನಿದ್ದೆ ಸಂಗಾತಿ ಅವಳಾದಳು
ಅವಳ ನನ್ನ ಜೊತೆಯಾಯಿತು
ಒಂದು ಅಪರಿಚಿತ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಅಜ್ನಬಿ

एक अजनबी हसीना से, यूँ मुलाक़ात हो गई
फिर क्या हुआ, ये ना पूछो, कुछ ऐसी बात हो गई

वो अचानक आ गई, यूँ नजर के सामने
जैसे निकल आया घटा से चाँद
चेहरे पे जुल्फे बिखरी हुई थी, दिन में रात हो गई

जान-ए-मन, जान-ए-जिगर, होता मैं शायर अगर
कहता गज़ल तेरी अदाओं पर
मैंने ये कहा तो, मुझको से खफा वो, जान-ए-हयात हो गई

खुबसूरत बात ये, चार पल का साथ ये
सारी उमर मुझको रहेगा याद
मैं अकेला था मगर, बन गई वो हमसफ़र, वो मेरे साथ हो गई
https://www.youtube.com/watch?v=QaXUGcJs8Mg

Saturday, January 24, 2015

ಮೊನಿಫಾ

ಮೊನಿಫಾ
-------------
ಇಲ್ಲ, ಅವಳು ಇಂದೂ ಕಾಣಲಿಲ್ಲ, ಮನಸ್ಸಿನಲ್ಲಿ ಕಳವಳ.
ಯಾಕೆ ಬರಲಿಲ್ಲ? ಅವಳಿಗೆ ಏನು ಆಗಲಿಲ್ಲ ತಾನೇ?
ಛೇ ಛೇ, ಬೇಡದ ವಿಷಯ ಯಾಕೆ ಈ ಹಾಳು ಮನಸ್ಸಿನಲ್ಲಿ ಬರುತ್ತದೆ.
ದಿನಾ ಜಾಗಿಂಗ್ ಮಾಡಲು ಬರುತ್ತಿದ ಅವಳು ನಾಲ್ಕು ದಿನದಿಂದ ಯಾಕೆ ಬರಲಿಲ್ಲ, ಚಿಂತೆ ಉಂಟಾಯಿತು, ಯಾಕೆ ಗೊತ್ತಿಲ್ಲ, ಛೇ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲು ಮರೆತು ಹೋದೆ.
ಇದ್ದಕಿದ್ದಂತೆ ಸ್ವಲ್ಪ ದಿವಸ ಮುಂಚೆ ನಡೆದ ಘಟನೆ ಮನಪಟಲದಲ್ಲಿ ಓಡಲಾರಂಭಿಸಿತು.
ಪತ್ನಿ ಸುಮಾಳ ಒತ್ತಾಯಕ್ಕೆ ದಿನಾ ೫ ಗಂಟೆಗೆ ಎದ್ದು ಬದಿಯ ಪಾರ್ಕಿಗೆ ಜಾಗಿಂಗ್ ಹೋಗುತ್ತಿದ್ದ ನಾನು ಒಂದು ದಿನ ಮನಸಿಲ್ಲದ್ದೆ ಓಟ ನಿಲ್ಲಿಸಿ ಹಾಗೆಯೇ ಪಾರ್ಕಲ್ಲಿ ಇದ್ದ ಬೆಂಚಲ್ಲಿ ಸುಸ್ತಾಯಿಸುತ್ತಿದ್ದೆ. ಆಗ ಓಡುತ್ತಿದ್ದ ಅವಳು......
ಅವಳು ೨೦/೨೧ ಹರೆಯದ ಆಫ್ರಿಕನ್ ಹುಡುಗಿ, ದಿನನಿತ್ಯ ಅದೇ ವೇಳೆಗೆ ಜಾಗಿಂಗ್ ಮಾಡಲು ಬರುವ ಅವಳ ಮತ್ತು ನನ್ನ ಸಮಾಗಮವಾಗುತ್ತಿತ್ತು, ಆದರೆ ನಾನಾಗಲಿ, ಅವಳಾಗಲಿ ಯಾವಾಗಲು ಪರಸ್ಪರ ಮಾತನಾಡಲಿಲ್ಲ.
ಆದರೆ ಅಂದು ನಾನು ಕುಳಿತ್ತಿದ್ದುದನ್ನು ನೋಡಿ ಅವಳು ಇಂಗ್ಲಿಷಲ್ಲಿ
"ಹ್ಯೇ ಅಂಕಲ್, ಟೈರ್ಡ್?" (ಹ್ಯೇ ಅಂಕಲ್ ಸುಸ್ತಾಯಿತಾ?).
ನಾನು ನಗು ಬೀರಿ "ನೋ, ಜಸ್ಟ್ ರಿಲೆಕ್ಷಿಂಗ್" (ಇಲ್ಲ, ಸ್ವಲ್ಪ ವಿಶ್ರಮಿಸುತ್ತಿದ್ದೇನೆ).
ಅವಳು ನಕ್ಕು "ಒಹ್, ಒಳ್ಳೆಯದು, ಆದರೆ ನಿಮಗೆ ಮನೆಗೆ ಹೋಗಿ ವಿಶ್ರಾಂತಿ ಪಡೆಯಬಹುದಲ್ಲ?"
ನಾನು "ಬೇಗ ಮನೆಗೆ ಹೋದರೆ ಹೆಂಡತಿ ಮನೆಯೊಳಗೆ ನುಗ್ಗಲು ಬಿಡಲ್ಲಿಕ್ಕಿಲ್ಲ" ಎಂದು ತಮಾಷೆಯಿಂದ ಹೇಳಿದೆ.
ಅವಳು "ಒಹ್, ಹಾಗೆಯ" ಎಂದು ನಕ್ಕಳು, ಕರಿ ಬಣ್ಣದ ಆ ಮುದ್ದು ಹುಡುಗಿ ನಕ್ಕಾಗ ನನಗೆ ಸುಂದರ ದೇವದೂತೆಯಂತೆ ಕಂಡು ಬಂದಳು.
ಇದು ನನ್ನ ಮತ್ತು ಅವಳ ಮೊದಲ ಪರಿಚಯ, ಈ ಮೊದಲ ಪರಿಚಯದಲ್ಲಿ ಅವಳು ತನ್ನ ಹೆಸರು "ಮೊನಿಫಾ" ಅಂತ ಹಾಗು ಆಫ್ರಿಕಾದಿಂದ ಬಂದವರು, ಇಲ್ಲಿ ಅವಳು ತನ್ನ ತಂದೆಯ ಜೊತೆ ಇರುವುದು ಎಂದು ತಿಳಿಯಿತು.

ನಾನು ಅವಳ ಹೆಸರ ಅರ್ಥ ಕೇಳಿದಕ್ಕೆ ಅವಳು ಅದರ ಅರ್ಥ "ನಾನು ತುಂಬಾ ಭಾಗ್ಯಶಾಲಿ" ಎಂದು ಹೇಳಿ ನಕ್ಕಳು.
ಇದರ ನಂತರ ಹೀಗೆಯೇ ಏನಾದರು ಒಂದು ವಿಷಯದ ಬಗ್ಗೆ ನಾವು ಜಾಗಿಂಗ್ ಮಾಡುವ ಮಧ್ಯೆ ಸ್ವಲ್ಪ ಕುಳಿತು ಮಾತನಾಡುತ್ತಿದ್ದೆವು.
ಒಂದು ದಿನ ನನಗೆ ಅವಳು ಸ್ವಲ್ಪ ಬೇಸರದಲ್ಲಿ ಇದ್ದಂತೆ ಕಂಡು ಬಂತು, ನಾನು ಕೇಳಿದಕ್ಕೆ....
ಅವಳು " ನಿಮಗೆ ತಿಳಿದಿದೆಯ ಅಂಕಲ್, ನನಗೆ ನನ್ನ ಅಪ್ಪನ ಬಗ್ಗೆ ತುಂಬಾ ಬೇಜಾರಾಗುತ್ತಿದೆ."
ನಾನು "ಯಾಕೆ, ಏನಾಯಿತು, ಯಾಕೆ ನೀನಿಷ್ಟು ಅಸಮಾಧಾನದಲ್ಲಿ ಇರುವೆ?"
ಅವಳು "ನನ್ನ ಅಪ್ಪ ಏಕಾಂತದಲ್ಲಿ ತುಂಬಾ ಅಳುತ್ತಾರೆ, ನಾನು ಹಲವು ಸಲ ನೋಡಿದೆ ಅವರನ್ನು ಅವರ ಬೆಡ್ರೂಮಿನಲ್ಲಿ ಅಳುವುದನ್ನು".
ನಾನು ಆಶ್ಚರ್ಯದಿಂದ " ಆದರೆ ಯಾಕೆ? ಯಾಕೆ ಅವರು ಅಳುತ್ತಾರೆ?"
ಅವಳು ಸಹಜವಾಗಿ "ನನಗೆ ಕ್ಯಾನ್ಸರ್ ಕಾಯಿಲೆ ಇದೆಯಲ್ಲ, ಅದಕ್ಕೆ...."
ನನಗೆ ತೀವ್ರ ಆಘಾತವಾಯಿತು "ಏನು?"
ಅವಳು ನಿರಾಸೆಯಲ್ಲಿ "ಹೌದು ಅಂಕಲ್, ನನಗೆ ಕ್ಯಾನ್ಸರ್ ಆಗಿದೆ ಹಾಗು ನಾನು ಹೆಚ್ಚು ಸಮಯ ಬದುಕುವುದಿಲ್ಲ ಎಂದು ಡಾಕ್ಟರ ಹೇಳಿದ್ದಾರೆ."
ನಾನು ಸ್ತಬ್ದಗೊಂಡು ಅವಳನ್ನು ನೋಡಿದೆ.
ಅವಳು ಮುಂದುವರಿಸಿದಳು "ನನ್ನ ಮುಂದೆ ನನ್ನಪ್ಪ ತುಂಬಾ ಖುಷಿಯಲ್ಲಿರುತ್ತಾರೆ, ನನ್ನನ್ನು ಸಂತೋಷಗೊಳಿಸಲು ಯಾವಗಲು ನನ್ನ ಮುಂದೆ ನಗುತ್ತಲೇ ಇರುತ್ತಾರೆ, ಆದರೆ ಅವರು ಏಕಾಂತದಲ್ಲಿ ತುಂಬಾ ಅಳುತ್ತಾರೆ, ಅವರನ್ನು ನೋಡಿ ನನ್ನ ಹೃದಯಕ್ಕೆ ತುಂಬಾ ನೋವಾಗುತ್ತದೆ, ಪಾಪ, ಅಮ್ಮ ತೀರಿ ಹೋದ ನಂತರ ಎಷ್ಟು ಕಾಳಜಿಯಿಂದ ನನ್ನನ್ನು ಸಾಕಿದರು, ಆದರೆ ಈಗ ನಾನು ಕೇವಲ ಸ್ವಲ್ಪ ದಿನವೇ ಈ ಜಗದಲ್ಲಿ ಇರುವೆ ಎಂದು ಗೊತ್ತಾದ ನಂತರ ಅವರು ತುಂಬಾ ಅಶಕ್ತರಾಗಿದ್ದಾರೆ, ಕೇವಲ ನನ್ನ ಮುಂದೆ ನಗುತ ಇರುತ್ತಾರೆ, ಆದರೆ...."
ಇದನ್ನು ಕೇಳಿ ನನ್ನ ಅವಸ್ಥೆ ಹಾಳಾಯಿತು, ನನಗೆ ಅವಳಿಗೆ ಹೇಗೆ ಸಮಾಧಾನ ನೀಡುವುದು ಎಂದು ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಆಘಾತದಲ್ಲಿ ಕುಳಿತು ನಾನು ಅವಳಿಗೆ "ಚಿಂತಿಸ ಬೇಡ, ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿ ಅವಳ ಹತ್ತಿರ ಬೇರೆ ವಿಷಯ ಮಾತಾಡಿ ಅವಳನ್ನು ಸ್ವಲ್ಪ ನಗಿಸಿ ಅಂದು ಕಳಿಸಿದೆ.
ಮಾರನೆ ದಿವಸ ನಾನು ಅವಳಿಗೆ "ಡಿಯರ್, ನನ್ನ ಹೆಂಡತಿಯ ಊರಿನಲ್ಲಿ ಒಂದು ಸ್ವಾಮೀಜಿ ಇದ್ದಾರಂತೆ, ಅವರು ಈ ಕ್ಯಾನ್ಸರ್ ಕಾಯಿಲೆಗೆ ಮದ್ದು ಕೊಡುತ್ತಾರಂತೆ, ಆ ಮದ್ದಿನಿಂದ ತುಂಬಾ ಜನರ ಕಾಯಿಲೆ ನಿವಾರಣ ಆಗಿದೆಯಂತೆ".
ಅವಳು ಕ್ಷೀಣ ನಗು ಬೀರಿ "ನಿಜವಾಗಿಯೂ."
ನಾನು " ಎಸ್ ಡಿಯರ್, ಬಹುಶಃ ಆ ಮದ್ದಿನಲ್ಲಿ ದೈವಿಕ ಶಕ್ತಿ ಇರಬೇಕು, ನಾನು ನಾಳೆ ಇಂಡಿಯಾ ಹೋಗಿ ಊರಿನಿಂದ ನಿನಗೋಸ್ಕರ ಆ ಮದ್ದು ತರುತ್ತೇನೆ".
ಅವಳು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
ನಾನು ಕೋಪದಿಂದ "ನೋ, ನಥಿಂಗ್ ವಿಲ್ ಹ್ಯಾಪ್ಪೆನ್ ಟು ಯು" ("ಇಲ್ಲ, ನಿನಗೆ ಏನ್ ಆಗಲ್ಲ"), ನೀನು ಒಂದು ವಾರ ನನ್ನ ವೇಟ್ ಮಾಡು, ನಾನು ಬೇಗನೆ ಇಂಡಿಯಾ ಹೋಗಿ ಬರುತ್ತೇನೆ".
ಅವಳು "ನೋ ಅಂಕಲ್, ಯಾಕೆ ನೀವು ಇಷ್ಟು ಕಷ್ಟ ತೆಗೆದುಕೊಳ್ಳುತ್ತಿದ್ದಿರಿ, ಪ್ಲೀಸ್ ಡೊಂಟ್ ಗೋ"
ನಾನು " ನೋ , ಐ ವಿಲ್ ಗೋ, ಈ ವಾಂಟ್ ಯು ಟು ಬಿ ಪರ್ಫೆಕ್ಟ್" (ಇಲ್ಲ, ನಾನು ಹೋಗುವೆ, ನನಗೆ ನೀನು ಸರಿಯಾಗಬೇಕು)".
ಅವಳ ಕಣ್ಣಿಂದ ಕಣ್ಣೀರು ಹರಿಯಿತು "ಯು ಆರ್ ಲೈಕ್ ಏಂಜಲ್ ಫಾರ್ ಮಿ ಅಂಕಲ್" ( ನೀವು ನನಗೆ ದೇವದೂತರಂತೆ ಅಂಕಲ್").
ನಾನು "ನೋ ಡಿಯರ್, ಯು ಆರ್ ಅ ಏಂಜಲ್ ಬೇಬಿ, ವೇಟ್ ಫಾರ್ ಮಿ " (ಇಲ್ಲ ಡಿಯರ್, ನೀನು ದೇವದೂತೆ ಮಗು, ನನ್ನನ್ನು ಕಾಯು).
ಅಂದು ಅವಳು ಕಣ್ಣಲ್ಲಿ ಕಣ್ಣೀರು ತುಂಬಿ ನನಗೆ ವಿದಾಯ ಹೇಳಿದಳು.
ಆದರೆ ನಾನು ಹಿಂತಿರುಗಿ ನಾಲ್ಕು ದಿನವಾದರೂ ಅವಳು ಕಾಣದ ಕಾರಣ ನನಗೆ ಅವಳ ಬಗ್ಗೆ ಚಿಂತೆ ಮೂಡಿತು. ಅವಳಿಗೋಸ್ಕರ ತಂದ ಮದ್ದು ಕೈಯಲ್ಲಿ ಹಿಡಿದು ದಿನಾ ಬೆಳಿಗ್ಗೆ ಹುಚ್ಚನಂತೆ ಪಾರ್ಕಲ್ಲಿ ಅವಳನ್ನು ಹುಡುಕುತ್ತಿದ್ದೆ, ಆದರೆ ಅವಳು ಸಿಗಲಿಲ್ಲ. ಮನಸ್ಸಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿತು.
ಎಲ್ಲಿ ಹೋದಳು? ಮರಳಿ ಆಫ್ರಿಕಾ ಹೋದಳ? ಅಯ್ಯೋ ಯಾಕೆ ಅವಳ ಮೊಬೈಲ್ ನಂಬರ್ ತೆಗೆದುಕೊಳ್ಳಲಿಲ್ಲ.
ಹೇಗೋ ತನ್ನನು ತಾನು ಸಾವರಿಸಿದೆ, ಆದರೆ ದಿನನಿತ್ಯದ ಕೆಲಸದ ಮಧ್ಯೆ ಸಹ ಅವಳ ಯೋಚನೆ ಬರುತ್ತಿತ್ತು.
ಆ ದಿನ ಬೆಳಿಗ್ಗೆ ಆಫೀಸ್ ಬಂದು ಕೂತು ದಿನಪತ್ರಿಕೆ ನೋಡುತ್ತಿದ್ದಾಗ, ಹೀಗೆಯೇ ಒಂದು ಕಡೆ ನನ್ನ ಗಮನ ಹೋಯಿತು.
Sad demise (ದುಖಃ)
ಕೆಳಗೆ ಆ ಮುದ್ದು ಹುಡುಗಿಯ ಚಿತ್ರ ಇತ್ತು.
ನನ್ನ ಕಣ್ಣಿಂದ ಧಾರಾಳವಾಗಿ ಕಣ್ಣೀರು ಹರಿದು ಅವಳ ಚಿತ್ರದ ಮೇಲೆ ಬೀಳಲಾರಂಭಿಸಿತು, ದಿನಪತ್ರಿಕೆ ಹಿಡಿದು ಬ್ಯಾಗಲ್ಲಿ ಇಟ್ಟಿದ ಅವಳ ಮದ್ದು ಕಟ್ಟು ಕೈಯಿಂದ ತೆಗೆದೆ, ಅವಳು ಹೇಳಿದ ಮಾತು ನೆನಪಾಯಿತು " ಒಹ್ ಅಂಕಲ್, ಕಮ್ ಆನ್, ಇಟ್ಸ್ ನಾಟ್ ವರ್ಕ್ಸ್ ಫಾರ್ ಮಿ, ಮೈ ಡೆತ್ ಡೇಟ್ ಹ್ಯಾಸ್ ಬೀನ್ ಫಿಕ್ಸೆಡ್ ಬಯ್ ಗಾಡ್ " (ಒಹ್ ಅಂಕಲ್ ಇರಲಿ, ಇದರಿಂದ ನನಗೆ ಪ್ರಯೋಜನವಾಗದು, ದೇವರು ನನ್ನ ಸಾವಿನ ದಿನವನ್ನು ನಿಶ್ಚಿತಗೊಳಿಸಿದ್ದಾರೆ)"
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ