Saturday, June 7, 2014

ಸರ್ಕಸ್

ಸರ್ಕಸ್
-----
ಕೊನೆ ಉಸಿರೆಳೆಯುವ ಸರ್ಕಸ್
ಮೌನ ವಿಧೂಷಕ

----
ಹಾಸ್ಯಗಾರನ ಮೇಲೆ ವ್ಯಂಗ
ಮುಗಿದ ಹಾಸ್ಯಗಾರ
ಅಹಂ ಜನ್ಮ

----
ಸರ್ಕಸ್ ಪ್ರಾಣಿಗಳಿಗೆ
ಆಹಾರದ ಕೊರತೆ
ದುಃಖಿತ ರಿಂಗ್ ಮಾಸ್ಟರ್

---
ಸರ್ಕಸ್'ಲ್ಲಿ
ಹಾರುವ ರಾಣಿಗೆ
ವೀಲ್ ಚೇರ್ ಆಸರೆ

---
ಸರ್ಕಸ್'ಲ್ಲಿ ಇದ್ದ
ಸೈಕಲ್ ಮಾರಾಟ
ಕರಡಿ ಈಗ ಪಾದಚಾರಿ

---

ಮಗು : ಸರ್ಕಸ್ ಅಂದರೆ ಏನು ಅಪ್ಪ ?
ಅಪ್ಪ : ನಿಜ ಬಡ ಕಲಾವಿದರ ಕಲೆಯ ಪ್ರದರ್ಶನ.
ಮಗು : ಈಗ ಎಲ್ಲಿದೆ ಆ ಸರ್ಕಸ್ ಹಾಗು ಕಲಾವಿದರು?
ಅಪ್ಪ : ಸಮಯದ ಚಕ್ರದಲ್ಲಿ ಮರೆಯಾದರು.

by ಹರೀಶ್ ಶೆಟ್ಟಿ, ಶಿರ್ವ  

ನಿನ್ನ ನನ್ನ ಕನಸು

ನಿನ್ನ ನನ್ನ ಕನಸು
ಈಗ ಒಂದೇ ವರ್ಣದಲಿ
ಈ ಹಾದಿ ಎಲ್ಲಿಯೂ ಕೊಂಡೋಯ್ಯಲಿ
ನಾವು ಜೊತೆಯಲಿ

ನನ್ನ ನಿನ್ನ ಹೃದಯದ
ನಿಶ್ಚಿತವಾಗಿತ್ತು ಒಂದು ದಿನ ಭೇಟಿಯಾಗುವುದು
ವಸಂತ ಬರುವಾಗ
ನಿಸ್ಚಿತವಾದಂತೆ ಹೂವು ಅರಳುವುದು
ಓ ನನ್ನ ಬದುಕ ಸಂಗಾತಿ
ನಿನ್ನ ನನ್ನ ಕನಸು
ಈಗ ಒಂದೇ ವರ್ಣದಲಿ
ಈ ಹಾದಿ ಎಲ್ಲಿಯೂ ಕೊಂಡೋಯ್ಯಲಿ
ನಾವು ಜೊತೆಯಲಿ

ನಿನ್ನ ದುಃಖ ಈಗ ನನ್ನ
ನನ್ನ ಸುಖ ಈಗ ನಿನ್ನ
ನಿನ್ನ ಈ ಎರಡು ಕಂಗಳು
ಚಂದ್ರ ಸೂರ್ಯ ನನ್ನ
ಓ ನನ್ನ ಬದುಕ ಸಂಗಾತಿ
ನಿನ್ನ ನನ್ನ ಕನಸು
ಈಗ ಒಂದೇ ವರ್ಣದಲಿ
ಈ ಹಾದಿ ಎಲ್ಲಿಯೂ ಕೊಂಡೋಯ್ಯಲಿ
ನಾವು ಜೊತೆಯಲಿ

ಎಷ್ಟೇ ಪ್ರೇರಿಸಲಿ ಪ್ರಪಂಚ
ಜೊತೆ ಇದು ಪ್ರತ್ಯೇಕವಾಗದು
ಬಂದು ನನ್ನ ಕೈಯಲ್ಲಿ
ಕೈ ಇದು ಬಿಟ್ಟು ಹೋಗದು
ಓ ನನ್ನ ಬದುಕ ಸಂಗಾತಿ
ನಿನ್ನ ನನ್ನ ಕನಸು
ಈಗ ಒಂದೇ ವರ್ಣದಲಿ
ಈ ಹಾದಿ ಎಲ್ಲಿಯೂ ಕೊಂಡೋಯ್ಯಲಿ
ನಾವು ಜೊತೆಯಲಿ

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಎಸ್. ಡೀ . ಬರ್ಮನ್
ಚಿತ್ರ : ಗೈಡ್

tere mere sapne abb ek rang hain
ho jaha bhi le jaye raahe, ham sang hain
ho tere mere sapne abb ek rang hain
ho jaha bhi le jaye raahe, ham sang hain

mere tere dil ka, tay tha ek din milna
jaise bahar aane par, tay hain phul ka khilna
mere tere dil ka, tay tha ek din milna
jaise bahar aane par, tay hain phul ka khilna
o mere jivan sathi
tere mere sapne abb ek rang hain
ho jaha bhi le jaye raahe, ham sang hain

tere dukh abb mere, mere sukh abb tere
tere yeh do naina, chand aur suraj mere
tere dukh abb mere, mere sukh abb tere
tere yeh do naina, chand aur suraj mere
o mere jivan sathi
tere mere sapne abb ek rang hain
ho jaha bhi le jaye raahe, ham sang hain

lakh mana le duniya, saath na yeh chhutega
aa ke mere hatho me, haath na yeh chhutega
lakh mana le duniya, saath na yeh chhutega
aa ke mere hatho me, haath na yeh chhutega
o mere jivan sathi
tere mere sapne abb ek rang hain
ho jaha bhi le jaye raahe, ham sang hain
ho tere mere sapne abb ek rang hain

Thursday, June 5, 2014

ಮುಳ್ಳಿಂದ ಎಳೆದು ಈ ಸೆರಗನ್ನು

!!ಮುಳ್ಳಿಂದ ಎಳೆದು ಈ ಸೆರಗನ್ನು
ಮುರಿದು ಬಂಧಿಸಿದ ಗೆಜ್ಜೆಯನ್ನು
ಯಾರೂ ನಿಲ್ಲಿಸದಿರಿ ಈ ಹೃದಯದ ಹಾರಾಟವನ್ನು
ನೋಡಿ ಹೃದಯ ಹೊರಟಿತು
ಇಂದು ಪುನಃ ಬದುಕುವ ಬಯಕೆ ಇದೆ
ಇಂದು ಪುನಃ ಸಾಯುವ ಇರಾದೆ ಇದೆ!!

!!ಸ್ವತಹ ನನ್ನದೇ ನಿಯಂತ್ರಣದಲ್ಲಿಲ್ಲ ನಾನು
ಹೃದಯ ಎಲ್ಲಿಯೋ ಇದೆ ಎಲ್ಲಿಯೋ ನಾನು
ಅದೇನನ್ನು ಪಡೆದು ನನ್ನ ಜೀವನ
ನಕ್ಕು ನುಡಿಯಿತು
ಇಂದು ಪುನಃ ಬದುಕುವ ಬಯಕೆ ಇದೆ
ಇಂದು ಪುನಃ ಸಾಯುವ ಇರಾದೆ ಇದೆ!!

!!ಬಿರುಗಾಳಿಯೆ ಅಥವಾ ಚಂಡಮಾರುತವೆ ನಾನೊಂದು
ಯಾರಾದರು ಹೇಳಲಿ ನಾನೆಲ್ಲಿರುವೆಯೆಂದು 
ಭಯವಾಗಿದೆ ಈ ಪ್ರಯಾಣದಲ್ಲಿ ಮರೆಯಾಗುವೆಯೆಂದು
ಹಾದಿ ಹೊಸತು
ಇಂದು ಪುನಃ ಬದುಕುವ ಬಯಕೆ ಇದೆ
ಇಂದು ಪುನಃ ಸಾಯುವ ಇರಾದೆ ಇದೆ!!

!!ನಿನ್ನೆಯ ಅಂಧಕಾರದಿಂದ ಹೊರಬಂದು
ನೋಡಿದೆ ಕಣ್ಣನ್ನು ಉಜ್ಜಿ ಉಜ್ಜಿಕೊಂಡು
ಸುಮ ಸುಮಗಳೇ ಜೀವನ ವಸಂತ
ನಿರ್ಧರಿಸಿದೆ
ಇಂದು ಪುನಃ ಬದುಕುವ ಬಯಕೆ ಇದೆ
ಇಂದು ಪುನಃ ಸಾಯುವ ಇರಾದೆ ಇದೆ!!

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಎಸ್. ಡೀ . ಬರ್ಮನ್
ಚಿತ್ರ : ಗೈಡ್

Oooo Kaanto se khinch ke ye aanchal
Tod ke bandhan baandhee paayal
Ooo koee naa roko dil kee udaan ko,
Dil wo chalaa Aaaaaaa
Aaj phir jeene kee tamannaa hain
Aaj phir marane kaa iraadaa hain
Aaj phir jeene kee tamannaa hain
Aaj phir marane kaa iraadaa hain

Apane hee bas mein naheen mai,
Dil hain kahee to hoo kahee main
Ooo Apane hee bas mein naheen mai,
Dil hain kahee to hoo kahee main
Ooo jaane kyaa paa ke meree jindagee ne,
Has kar kahaa ha ha aaa
Aaj phir jeene kee tamannaa hain
Aaj phir marane kaa iraadaa hain
Aaj phir jeene kee tamannaa hain
Aaj phir marane kaa iraadaa hain

Main hoo gubaar yaa toofaan hoo,
Koee bataaye main kahaa hoo
Oooo Main hoo gubaar yaa toofaan hoo,
Koee bataaye main kahaa hoo
Dar hain safar mein kahee kho naa jaaoo mai,
Rastaa nayaa aaaa
Aaj phir jeene kee tamannaa hain
Aaj phir marane kaa iraadaa hain
Aaj phir jeene kee tamannaa hain
Aaj phir marane kaa iraadaa hain

Kal ke andheron se nikal ke,
Dekhaa hain aankhe malate malate
Ooo Kal ke andheron se nikal ke,
Dekhaa hain aankhe malate malate
Oooo Phool hee phool jindagee bahaar hain,
Taykar liyaa aaa
Aaj phir jeene kee tamannaa hain
Aaj phir marane kaa iraadaa hain
Aaj phir jeene kee tamannaa hain
Aaj phir marane kaa iraadaa hain
http://www.youtube.com/watch?v=1odcNKyfZJU

Wednesday, June 4, 2014

ಪ್ರತಿಕ್ರಮ

ಸಂತೆಯಲಿ ಗದ್ದಲ
ಅವನ
ಖಾಲಿ ಕಿಸೆ ಮೌನ

---
ದಾರಿಯ ಅಂಗಡಿಯಲ್ಲಿ
ದರೋಡೆ ಆಗುತಿತ್ತು
ಶಾಲೆಗೆ  ಹೋಗುತ್ತಿದ್ದ
ಪುಟ್ಟ ಹುಡುಗ
ಅಪ್ಪ ಕೊಟ್ಟ ನಾಲ್ಕಾಣೆ
ಅಂಗೈಯಲ್ಲಿ ಗಟ್ಟಿ ಹಿಡಿದ

----
ಅಂಗಡಿಯಲ್ಲಿ
ತುಂಬಾ ಮಿಠಾಯಿ
ಗಿರಾಕಿಯಿಂದ
ವಾದ ಮಾಡುವ
ಅಂಗಡಿಯವನ
ಮನಸ್ಸು ಕಹಿ ಕಹಿ

---

ಶಾಲೆಯ ಕ್ಯಾಂಟೀನ್'ಲ್ಲಿ
ಮಕ್ಕಳ ಗುಂಪು
ಪ್ರಥಮ ಸಲ
ಅಮ್ಮ ಕೊಟ್ಟ
ಒಂದು ರೂಪಾಯಿ ತಂದ
ಹುಡುಗನ ಮನಸ್ಸಲ್ಲಿ
ಸಂತಸ ಮತ್ತು ಗೊಂದಲ
ಏನು ಕೊಂಡು ತಿನ್ನಲಿ ಎಂದು

by ಹರೀಶ್ ಶೆಟ್ಟಿ, ಶಿರ್ವ 

Tuesday, June 3, 2014

ಯಾರನ್ನು ಮರೆಯಬೇಕೆಂದು ಬಯಸಿದ್ದೇನೆ

!!ಯಾರನ್ನು ಮರೆಯಬೇಕೆಂದು ಬಯಸಿದ್ದೇನೆ
ಬಾರಿ ಬಾರಿ ಅವಳ ನೆನಪಾಗುತ್ತದೆ
ಹಾಳಾಗಿ ಹೋಗಲಿ ಈ ಪ್ರೀತಿ
ಯಾಕೆಂದು ಅವಳ ನೆನಪಾಗುತ್ತದೆ!!
ಯಾರನ್ನು ಮರೆಯ...

!!ಮರೆಯಲಿ ಹೇಗೆಂದು ಅವಳನ್ನು
ಅದೆಂದೋ ಕುಡಿದಿದ್ದೆ ಆ ಕಂಗಳಿಂದ
ಹರಿದಾಗ ಈ ಕಣ್ಣೀರು
ಆ ಸಾಗರ ನೆನಪಾಗುತ್ತದೆ!!
ಯಾರನ್ನು ಮರೆಯ...

!!ಯಾರದ್ದೋ ಬೆಚ್ಚನೆಯ ಅಧರವಾಗಿತ್ತ
ಅಥವಾ ದೀಪದ ಜ್ವಾಲೆ ಉರಿಯುತ್ತಿತ್ತೆ
ಎಲ್ಲಿ ನಾನು ಅದೆಂದೋ ಪೂಜಿಸಿದ್ದೇನೋ
ಆ ದೇವಾಲಯ ನೆನಪಾಗುತ್ತದೆ!!
ಯಾರನ್ನು ಮರೆಯ...

!!ದೀಪ ನೀನು ಬೆಳಗುತ್ತಿರು
ಪತಂಗೆ ಹರಸುತ್ತಿದೆ
ಉರಿಯುವುದೇ  ಭಾಗ್ಯ ಎಂದಾದರೆ
ಸುಟ್ಟು ಹೋದ ನಂತರವೂ ನೆನಪಾಗುತ್ತದೆ!!
ಯಾರನ್ನು ಮರೆಯ...

ಮೂಲ : ಜಿ . ಎಲ್. ರಾವಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ :ಸೋನಿಕ್ ಓಮಿ
ಚಿತ್ರ : ಆಬ್ರೂ

Jinhen hum bhoolana chahe,
wo aksar yaad aate hain
buraa ho is mohabbat kaa,
wo kyon kar yaad aate hain

bhoolaaye kis tarah un ko,
kabhee pee thee un aankhon se
chhalak jaate hain jab aansoo,
wo saagar yaad aate hain

kisee ke sunrkha lab the yaa
diye kee lau machalatee thee
jahaa kee thee kabhee poojaa,
wo mandar yaad aate hain

rahe aye shammaa too roshan
duwaan detaa hain parawaanaa
jinhe kismat mein jalanaa hain,
wo jalakar yaad aate hain
http://www.youtube.com/watch?v=OO4HEoV_5EI

Sunday, June 1, 2014

ನಿನ್ನ ನನ್ನ ಮಿಲನದ ಈ ರಾತ್ರಿಯು

ನಿನ್ನ ನನ್ನ ಮಿಲನದ ಈ ರಾತ್ರಿಯು
ಹೊಸವೊಂದು ಹೂ ಅರಳಿಸುವುದು
ಅದಕ್ಕೆ ಪ್ರಸನ್ನ ಈ ನಿನ್ನ ನಯನವೂ
ನೋಡು
ನೋಡು
ನಿನ್ನ ನನ್ನ ಮಿಲನದ ಈ ರಾತ್ರಿಯು

ಸಣ್ಣದೊಂದು ಹೂ ಅರಳುವುದು
ಈ ಅಂಗಳ
ಖಾಲಿ ಉದ್ಯಾನ ಅಂದಗೊಳ್ಳುವುದು ನಲ್ಲ
ಚಂದಿರ ಮೇಘ ಜೊತೆ
ಆಡುವಂತೆ ಆಕಾಶದಲಿ
ಆಡುವನು ಅವನು ನಿನ್ನ ಮಡಿಲಲಿ
ಬೆಳದಿಂಗಳು ಹಾಡುವುದು
ಅದಕ್ಕೆ ಪ್ರಸನ್ನ ಈ ನಿನ್ನ ನಯನವೂ
ನೋಡು
ನೋಡು
ನಿನ್ನ ನನ್ನ ಮಿಲನದ ಈ ರಾತ್ರಿಯು

ನಿನ್ನನ್ನು ಅಪ್ಪಿಕೊಂಡು
ನನ್ನ ಬಾಹುಗಳಲಿ
ನಾನು ಭೇಟಿಯಾಗುವೆ
ಮೋಹಕ ರಾತ್ರಿಯಲಿ
ಅನೇಕ ಭಾವನೆಗಳನ್ನು ಹುಟ್ಟಿಸಿ
ನಿನ್ನ ಹೃದಯದಲಿ
ತುಂಬುವೆ ಪ್ರೀತಿ ನಿನ್ನ ಜೀವನದಲಿ
ಸತಾಯಿಸುವೆ ಹೊಸ ಶೈಲಿಯಲಿ
ಅದಕ್ಕೆ ಪ್ರಸನ್ನ ಈ ನಿನ್ನ ನಯನವೂ
ನೋಡು
ನೋಡು
ನಿನ್ನ ನನ್ನ ಮಿಲನದ ಈ ರಾತ್ರಿಯು

ಮೂಲ : ಮಜ್ರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್ /ಕಿಶೋರ್ ಕುಮಾರ್
ಸಂಗೀತ : ಎಸ್ . ಡೀ . ಬರ್ಮನ್
ಚಿತ್ರ : ಅಭಿಮಾನ್

tere mere milan kee yeh raina 
naya koyi gul khilayegi, tabhi toh chanchal hain tere naina, dekho naa 
dekho naa, tere mere milan kee yeh raina 

nanha sa gul khilega angna, sooni baiya sajegi sajna 
jaise khele chanda badal me, khelega woh tere aanchal me 
chandaniya gungunayegi tabhi toh chanchal hain tere naina, dekho naa 

tujhe thame kai hatho se, milunga madbhari rato me 
jagake ansuni si dhadkan, balamwa bhar dungi tera mann 
nayi ada se satayegi, tabhi toh chanchal hain tere naina, dekho naa
http://www.youtube.com/watch?v=wJIacQ4Uito

ಒಲವು

ಗೆಳತಿ 

ನೀ ನೀಡುವ ಪ್ರತಿ ನೋವನ್ನು 
ಸಹಿಸುವೆ 
ನೀ ಕೊಡುವ ಪ್ರತಿ ಬೈಗುಳ 
ಸ್ವೀಕರಿಸುವೆ 
ಒಂದು ವೇಳೆ 
ನನ್ನ ಅಗತ್ಯವಿದೆಯೆಂದು ಎನಿಸಿ 
ನೀನು ಕರೆದರೆ 
ಓಡೋಡಿ ಬರುವೆ 
---
ಗೆಳತಿ 

ನಿನ್ನ ನನ್ನ ನಡು 
ಯಾವ ರೀತಿಯ ಪ್ರತಿಸ್ಪರ್ಧೆ 
ನಾನು ನಿನ್ನ ಪ್ರತಿಸ್ಪರ್ಧಿ ಅಲ್ಲ 
ನಾನು ನಿನ್ನ ಹಿತೈಷಿ 
ನಮ್ಮಲ್ಲಿ ಬೇಡ ಸೋಲು ಗೆಲುವು 
ಇರಲಿ ಒಲವು 
---
ಗೆಳತಿ 

ಜೀವನವಿಲ್ಲದ 
ಅನೇಕ ಸಂಬಂಧಗಳನ್ನು ಇಟ್ಟು
ಏನು ಪ್ರಯೋಜನ, 
ಇದ್ದ ಸ್ವಲ್ಪವೇ ಸಂಬಂಧದಲ್ಲಿ 
ಜೀವನ ಇರುವುದು ಅತ್ಯಗತ್ಯ 
---
ಗೆಳತಿ 

ಆ ಮಲ್ಲಿಗೆಯ ತೋಟಕ್ಕೂ 
ನಿನ್ನ ಅಗತ್ಯವಿದೆ ಎನಿಸುತ್ತದೆ 
ಬಹುಶಃ ನಿನ್ನ ಆರೈಕೆಯ ಕೊರತೆ ಉಂಟಾಗಿದೆ 
ಈಗ ಅಲ್ಲಿ ಮೊದಲ 
ಉತ್ಸಾಹಭರಿತ ವಾತಾವರಣ 
ಕಂಡು ಬರುವುದಿಲ್ಲ 
by ಹರೀಶ್ ಶೆಟ್ಟಿ,ಶಿರ್ವ

ಸಿದ್ಧಿದಾತ್ರಿ