Monday, September 3, 2012

ಪ್ರೀತಿಯ ಆ ದಿನಗಳು

ಪ್ರೀತಿಯ ಆ ದಿನಗಳು
ಈಗ ಸ್ವಪ್ನವಾಗಿ ಉಳಿದಿದೆ
ಸಂಬಂಧದಲ್ಲಿ ಈಗ ಒಂದು
ಕಹಿ ಸೇತುವೆ ನಿರ್ಮಾಣವಾಗಿದೆ

ನನ್ನ ಮೌನ
ಈಗ ನಿನಗೆ ರೇಗಿಸುವುದಿಲ್ಲ
ನನ್ನ ಮಾತು
ಈಗ ನಿನಗೆ ರುಚಿಸುವುದಿಲ್ಲ

ಮಾತಾಡಲು ಪ್ರಯತ್ನಿಸಿದರೆ 

ನೀ ನಿನ್ನ ಕೆಲಸದಲ್ಲಿ ಮಗ್ನವಾಗುವೆ
ನನಗೆ ಏನಾದರು ಬೇಕಾದಾಗ
ನೀ ಕೇಳಿ ಕೇಳದ ಹಾಗೆ ಮಾಡುವೆ

ನಾ ಕಚೇರಿಯಿಂದ ಬಂದಾಗ
ನಿನಗೆ ಖುಷಿ ಆಗುವುದಿಲ್ಲ
ನಾನು ಪ್ರವಾಸಕ್ಕೆ ಹೋಗುವಾಗ
ನಿನ್ನ ಹೃದಯ ಹೆದರುವುದಿಲ್ಲ

ನಾನು ತುಂಬಾ ಪ್ರಯತ್ನ ಮಾಡಿ
ಏನೋ ಹೇಳಿದಾಗ
ನೀ ನಿನ್ನ ತಾಳ್ಮೆ ಕಳೆದು
ಏನೇನೊ ಉತ್ತರಿಸುವೆ

ಜೀವನದ ಚಕ್ರ
ನಿಂತು ಹೋಗಿದೆ
ಆ ಸುಂದರ ದಿನಗಳು
ಎಲ್ಲಿ ಮಾಯವಾಗಿದೆ

ಆದರೂ ಪ್ರಯತ್ನಿಸುವೆ
ಈ ಕಹಿ ಸೇತುವೆಯನ್ನು ಮುರಿಯಲು
ಸಿಹಿ ಬಾಂಧವ್ಯ ನಿರ್ಮಿಸಲು
ಪುನಃ ಪ್ರಯತ್ನಿಸುವೆ ನಿನ್ನನ್ನು ಪಡೆಯಲು
by ಹರೀಶ್ ಶೆಟ್ಟಿ, ಶಿರ್ವ

ನೆನಪಿನ ದರ್ಬಾರು


ಗೆಳತಿ...
ಪ್ರೀತಿಯ ಯುದ್ಧದಲ್ಲಿ
ನಿನ್ನಿಂದ ಸೋತು
ಎಲ್ಲವೂ ಕಳೆದು ಕೊಂಡೆ
ಆದರೂ ಈಗ ನನ್ನ
ಮನಸ್ಸ ಸಾಮ್ರಾಜ್ಯದಲ್ಲಿ
ಕೇವಲ ನಿನ್ನದೆ ಆಡಳಿತ
by ಹರೀಶ್ ಶೆಟ್ಟಿ, ಶಿರ್ವ

Sunday, September 2, 2012

ಗೆಳೆಯ

ಗೆಳೆಯ
ನನ್ನ ನಿನ್ನ ಈ ಸಂಬಂಧಕ್ಕೆ
ಯಾವ ಹೆಸರು ನೀಡಲಿ
ನನಗೆ ನೋವಾದಾಗ
ಕಣ್ಣೀರು ಕಾಣುವೆ ನಾ ನಿನ್ನ ಕಣ್ಣಲ್ಲಿ

ನಾನು ಕಷ್ಟದಲ್ಲಿದ್ದಾಗ
ನೀ ಓಡಿ ಬರುವೆ ನನ್ನಲ್ಲಿ
ಕರೆಯದೆ ಬರುವುದಿಲ್ಲ
ನೀ ಎನ್ನ ಸುಖದಲ್ಲಿ

ನನ್ನಿಂದ ಮುನಿದಾಗ
ನೀ ಬೇಕಂತೆ ಎನ್ನನ್ನು ನಿರ್ಲಕ್ಷಿಸುವೆ
ಸ್ವತಃ ತನಗೆ ಕಷ್ಟ ಕೊಟ್ಟು
ನೀ ಬೇಕಂತೆ ಎನಗೆ ವೇದನೆ ನೀಡುವೆ

ಎನ್ನ ಸ್ನೇಹ ಪವಿತ್ರ ಗೆಳೆಯ
ನನ್ನಿಂದ ಮನಸ್ತಾಪ ಬೇಡ
ನನ್ನಿಂದ ದೂರ ಇರಬೇಡ
ನನ್ನ ಹೃದಯ ನೋವಿಸ ಬೇಡ
by ಹರೀಶ್ ಶೆಟ್ಟಿ, ಶಿರ್ವ

ನನ್ನವಳಲ್ಲ

ಗೆಳತಿ
ಅನೇಕ ವರುಷಗಳ ನಂತರ
ನಿನ್ನನ್ನು ಕಂಡ
ನನ್ನ ಕಣ್ಣುಗಳಿಗೆ ಆಶ್ಚರ್ಯ
ಹೃದಯಕ್ಕೆ ಸಂತಸ
ಮನಸ್ಸಿಗೆ ನೆಮ್ಮದಿ
ಆದರೆ
ನೀನೀಗ ನನ್ನವಳಲ್ಲ ಎಂಬ ಬೇಸರ
by ಹರೀಶ್ ಶೆಟ್ಟಿ, ಶಿರ್ವ

Saturday, September 1, 2012

ಹನಿ ಹನಿ ಮಳೆ ಬೀಳುತ್ತಿದೆ


ಹನಿ ಹನಿ ಮಳೆ ಬೀಳುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ-೨

ಮೊದಲೂ ಹೀಗೆಯೇ
ಸುರಿದಿತ್ತು ಈ ಮುಗಿಲು
ಮೊದಲೂ ಹೀಗೆಯೇ
ನೆನೆದಿತ್ತು ಈ ಸೆರಗು-೨
ಇದೇ ವರ್ಷ ಯಾಕೆ ಪ್ರಿಯೆ
ಹೀಗೆ ಆಗುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಈ ಸಲ ವರ್ಷ ಋತು
ಉರಿಯುತ್ತಿದೆ
ಈ ಸಲ ವಾತಾವರಣ
ಉನ್ಮತ್ತವಾಗಿದೆ-೨
ತಂಗಾಳಿಯಲಿ
ಮಾದಕತೆ ತುಂಬಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಗೆಜ್ಜೆಯ ಸ್ವರ ಕೇಳುತ್ತಿದೆ
ಮಳೆಯ ಹನಿಯಲ್ಲಿ
ಅವಿತಿರುವ ಬಯಕೆಗಳು
ಕುಣಿಯುತ್ತಿದೆ ಈ ಕಂಗಳಲಿ-೨
ಹೇಗೆ ಕನಸು
ಈ ನಯನ ನೋಡುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಸಭೆಯಲ್ಲಿ ಹೇಗೆ
ಹೇಳಲಿ ಅವರಿಂದ
ಹೃದಯ ಕೂಡಿ ಬರುತ್ತಿದೆ
ಯಾರೋ ಅಪರಿಚಿತರಿಂದ-೨
ಉಪಾಯವಿಲ್ಲದೆ
ಹೃದಯ ಬಳಲುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್ ,ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್

रिमझिम गिरे सावन
सुलग-सुलग जाए मन
भीगे आज इस मौसम में
लगी कैसी ये अगन

पहले भी यूँ तो बरसे थे बादल
पहले भी यूँ तो भीगा था आंचल
अब के बरस क्यूँ सजन, सुलग-सुलग जाए मन
भीगे आज...

इस बार सावन दहका हुआ है
इस बार मौसम बहका हुआ है
जाने पी के चली क्या पवन, सुलग-सुलग जाए मन
भीगे आज...

जब घुंघरुओं सी बजती हैं बूंदे
अरमाँ हमारे पलके न मूंदे
कैसे देखे सपने नयन, सुलग-सुलग जाए मन
भीगे आज...

महफ़िल में कैसे कह दें किसी से
दिल बंध रहा है किस अजनबी से
हाय करें अब क्या जतन, सुलग-सुलग जाए मन
भीगे आज...
www.youtube.com/watch?v=037txJ9TZGg

ಮನಸ್ಸ ವೇದನೆ

ಗೆಳತಿ....
ನನ್ನ
ಮನಸ್ಸ ವೇದನೆ
ಕಣ್ಣೀರಾಗಿ
ನಿನ್ನ ಕಂಗಳಿಂದ
ಹೇಗೆ ಹರಿಯುತ್ತಿದೆ
by ಹರೀಶ್ ಶೆಟ್ಟಿ,ಶಿರ್ವ

ಹೊಸ ಬೆಳಕು


ಹಲವು ಮುಂಜಾನೆಯ ನಂತರ
ಇಂದು ನಾನು ಎಚ್ಚರವಾಗಿದ್ದೇನೆ
ಸತ್ಯದ ಬೆಳಕು ಕಣ್ಣು ಕುಕ್ಕುತಿತ್ತು
ಭಯದ ಚಳಿ ಆವರಿಸಿತು
ಸುಳ್ಳ ಮಬ್ಬು ಕವಿದಿತ್ತು
ವಾಸ್ತವದ ಸೂರ್ಯ ಬೇರೆಯೇ ಕಾಣುತ್ತಿದ್ದ
ತೆರೆದ ಕಣ್ಣಲ್ಲಿ ಸಂತಾಪ ಇತ್ತು
ಜೀವನದ ಬಹುಮೂಲ್ಯ ಸಮಯ ವ್ಯರ್ಥ ಮಾಡಿದ್ದಕ್ಕೆ
ಹೃದಯ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿತ್ತು
ಅದರೂ ಆಶಾದಾಯಕ ಹೊಸ ಬೆಳಕು
ಒಂದು ಅವಕಾಶ ನೀಡುತ್ತಿತ್ತು
ತನ್ನನ್ನು ಸಾವರಿಸಲು
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ