Monday, August 13, 2012

ಬಂಡೆ

"ಪ್ರೀತಿ"

ತೊಂದರೆ

ಅಸಾಧಾರಣ ಪ್ರೀತಿ

ನಿನ್ನೆ ಅವಳು
ನನ್ನ ಕನಸಲಿ ಬಂದಿದ್ದಳು
ಅವಳ ಮುಖದಲಿ
ಮೊದಲಿನ ಆ ತೇಜಸ್ಸು ಕಾಣಲಿಲ್ಲ
ತುಂಬಾ ದುಃಖದಲ್ಲಿ ಇದ್ದಂತೆ ಕಂಡಳು !

ನನ್ನನ್ನೆ ನೋಡುತ ನಿಂತಿದ್ದಳು
ಕಣ್ಣಿಂದ ಅಶ್ರು ಧಾರೆ ಸುರಿದು
ಅವಳ ಕಪಾಳದಲ್ಲಿ ಹರಿಯುತ್ತಿತ್ತು
ಹೃದಯದಲ್ಲಿ ಏನೋ ವೇದನೆ
ಇದ್ದಂತೆ ಬಾಸವಾಯಿತು !

ನಾನು ಮೌನವಾಗಿದ್ದೆ
ಅವಳಲ್ಲಿ ನೀನೇಕೆ ಹೀಗೆ ಎಂದು
ಕೇಳಲು ನನಗೆ ಧೈರ್ಯ ಆಗಲಿಲ್ಲ
ನನಗೆ ಗೊತ್ತಿತ್ತು ನನ್ನ ಈ ದೀನ ಅವಸ್ಥೆ ಕಂಡು
ಅವಳಿಗೆ ದುಃಖ ಉಕ್ಕಿ ಬಂದಿತೆಂದು !

ಮೆಲ್ಲನೆ ಹೇಳಿದೆ
ಬೇಸರಿಸ ಬೇಡ
ನಾನು ನನ್ನನ್ನು ಸಾವರಿಸುವೆ
ಅವಳು ಉತ್ತರಿಸಲಿಲ್ಲ
ನನ್ನನ್ನೆ ನೋಡುತ್ತಿದ್ದಳು !

ಕಡೆಗೆ ಕೇವಲ
ಎರಡೆ ಶಬ್ದ ನುಡಿದು
ನಡೆದಳು
ನೀನು ದುಃಖದಲ್ಲಿದ್ದರೆ
ನಾನು ಸುಖದಲ್ಲಿ ಇರಲಾರೆ ಎಂದು !
by ಹರೀಶ್ ಶೆಟ್ಟಿ, ಶಿರ್ವ

Tuesday, August 7, 2012

ಲೋಭ

ಮನುಜ...
ಲೋಭ
ಸರ್ವ ನಾಶಕ
ಸ್ವಾರ್ಥ ಘಾತಕ
ಪಾಪದ ಕಾರಕ
ಹಿಂಸೆ, ಸುಳ್ಳು, ವ್ಯಭಿಚಾರ, ಸಂಚು, ಕೋಪ, ದ್ವೇಷ ಇದರ ಉತ್ಪಾದಕ
ಲೋಭಿ ವ್ಯಕ್ತಿಯ ಹತ್ತಿರ ಇರುವುದಿಲ್ಲ ಸದ್ಗುಣದ ಅಸ್ತಿತ್ವ
ಲೋಭ ಸಮಸ್ತ ಸದ್ಗುಣಗಳ ಹಂತಕ
ಲೋಭ ಮಾಡದಿರು, ಇದರಿಂದ ದೂರವಿರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಶವ

ಮುಚ್ಚಿದ ಕೋಣೆ
ಒಳಗಿಂದ ಗಬ್ಬು ವಾಸನೆ
ದೊಡ್ಡ ಬೀಗ ದ್ವಾರದಲಿ

ಕಾರಣ ಅರಿವಿಲ್ಲ
ಯಾರಿಗೂ ಗೋಚರವಿಲ್ಲ
ಎಲ್ಲರೂ ಮಗ್ನ ತನ್ನದೇ ಲೋಕದಲಿ

ರಾತ್ರಿಯ ಸಮಯ
ಕಳ್ಳನ ಗಮನ ಆ ಮನೆಯಲಿ

ಕದಿಯುವ ವಿಚಾರ ಅವನಲಿ

ಒಡೆದ ಬೀಗ
ಒಳಗೆ ಒಂದು ಕೊಳೆತ ಹೆಣ್ಣು ಶರೀರ
ಮೈ ತುಂಬಾ ಒಡವೆಗಳು

ಬಂತು ವಾಕರಿಕೆ ಕಳ್ಳನಿಗೆ
ಭಯದಿಂದ ಕಾಲು ನಡುಗಿತು
ಅಲ್ಲೇ ಕುಸಿದು ಬಿದ್ದ

ಬಂದಿದ ಕದಿಯಲು
ಸಂಪತ್ತಿಗೆ ಇರಲಿಲ್ಲ ಯಾವುದೇ ಕಾವಲು
ಆದರೂ ಧೈರ್ಯ ಬರಲಿಲ್ಲ ಕದಿಯಲು
by ಹರೀಶ್ ಶೆಟ್ಟಿ, ಶಿರ್ವ

ಭಾವ

ಗೆಳತಿ...
ನಾನು ಬರೆದ
ಕವಿತೆಗಳಲ್ಲಿ ಭಾವ ಇಲ್ಲವಂತೆ
ಹೇಗೆ ಇರುವುದು
ಅದರಲ್ಲಿ ಯಾವುದೇ
ಭಾವನೆ ಇಲ್ಲದೆ
ನನ್ನನ್ನು ಬಿಟ್ಟು ಹೋದ ನೀನಿದ್ದೆ
by ಹರೀಶ್ ಶೆಟ್ಟಿ , ಶಿರ್ವ

ಸಿದ್ಧಿದಾತ್ರಿ