Friday, March 9, 2012

ಮುಂಜಾನೆ

ಮುಂಜಾನೆ
ಪರಿಮಳ ಹಸಿ ಮಣ್ಣಿನ
ಚಿಲಿಪಿಲಿ ಹಕ್ಕಿಗಳ ಗಾನ
ತಾಜಾ ಪ್ರಶಾಂತ ವಾತಾವರಣ
ನಿರ್ಮಲವಾಯಿತು ತನುಮನ
ಸರ್ವರಿಗೂ ಶುಭ ಮುಂಜಾನೆ .....
by ಹರೀಶ್ ಶೆಟ್ಟಿ, ಶಿರ್ವ

ನಕ್ಷತ್ರ

ಆಕಾಶದಲಿ ನಕ್ಷತ್ರಗಳು ಅನೇಕ
ತುಂಡಾಗಿ ಕೆಳ ಬೀಳುವುದು ಏಕ
ಮನಸ್ಸಲಿ ಭಾವನೆಗಳು ಅನೇಕ
ಕವನ ಆಗಿ ಹೊರ ಬರುವುದು ಏಕ
by ಹರೀಶ್ ಶೆಟ್ಟಿ, ಶಿರ್ವ

ಶೂನ್ಯ

ಶೂನ್ಯ
ಬೆಲೆಯಿಲ್ಲದ
ಬೆಲೆಬಾಳುವ

ಅವನು ಹಾಗೆ
ಮನೆಗೆ ಮಾರಿ
ಊರಿಗೆ ಉಪಕಾರಿ

ವಿಚಿತ್ರ ಅವನ ವರ್ತನ
ವ್ಯವಹಾರದಲ್ಲಿ ದುರ್ಜನ
ಉಪಕಾರದಲ್ಲಿ ಸಜ್ಜನ

ಅನಿರೀಕ್ಷಿತ ಅಭಿವ್ಯಕ್ತಿ ಅವನ
ಅಪರಾಧಿ ಕಾರ್ಯ ಕ್ರಮಣ
ಜನರಲ್ಲಿ ದೇವರ ಸ್ಥಾನ

ಅಲ್ಪಸಮಯದ ಜೀವನ
ಅನೇಕ ಅಪಮಾನ
ಲೆಕ್ಕ ಇಲ್ಲದ ಸನ್ಮಾನ

ಅಂತ ಭಯಂಕರ ಅವನ
ದೂರ ಎಲ್ಲ ಕುಟುಂಬ ಜನ
ಬಹು ದುರಂತ ಮರಣ
by ಹರೀಶ್ ಶೆಟ್ಟಿ, ಶಿರ್ವ

Wednesday, March 7, 2012

ಕೇವಲ ಪತ್ರ

ಕಣ್ಣಲ್ಲಿ
ನನ್ನ
ನಿನ್ನದೆ ಚಿತ್ರ!

ನಿನ್ನ ರೂಪ
ಅಡಗಿದೆ
ಹೃದಯದಲಿ
ಅಲ್ಲವೇ ಇದು ವಿಚಿತ್ರ!

ನಾನು ನಿನ್ನ
ನೀನು ನನ್ನ
ಮನಸ್ಸಲಿ ಪ್ರೇಮದ ಮಂತ್ರ!

ನೀನಿಲ್ಲ
ನನ್ನ ಹತ್ತಿರ
ನಾನಿಲ್ಲ ನಿನ್ನ ಹತ್ತಿರ
ಪ್ರೀತಿಯ ಆಧಾರ ಕೇವಲ ಪತ್ರ !
by ಹರೀಶ್ ಶೆಟ್ಟಿ, ಶಿರ್ವ

Monday, March 5, 2012

ಅಪ್ಸರೆ

ಸುಂದರ ಸುಕನ್ಯೆ
ಸುಕೋಮಲೆ
ಆಚೆ ಈಚೆ ಅಲ್ಲಾಡುವ
ಉಯ್ಯಾಲೆ !

ಅದ್ಭುತ ರೂಪ
ನಯನ ತಾರೆ
ಆಕಾಶದಿಂದ ಇಳಿದ
ಅಪ್ಸರೆ ಬಾಲೆ !

ಧರಿಸಿ ಕೊರಳಲಿ
ಚಿನ್ನದ  ಸಂಕೋಲೆ
ಹೆಣೆದ ಜಡೆಯಲಿ
ಮಲ್ಲಿಗೆಯ ಹೂ ಮಾಲೆ !

ಕನಸಿನ ರಾಣಿ
ಲಾವಣ್ಯ ರೂಪಿಣಿ
ಬುಗ್ಗೆಂದು ಎದ್ದಿತು
ಪ್ರೀತಿಯ ಜ್ವಾಲೆ !
by ಹರೀಶ್ ಶೆಟ್ಟಿ, ಶಿರ್ವ

Sunday, March 4, 2012

ತಿರುವು

ಮುಚ್ಚಿದ ಕಮಲ ಅರಳಿತು
ಸೂರ್ಯನ ಕಿರಣ ದೊರಕಿದ ನಂತರ !
ನಿಸರ್ಗ ಸೌಂದರ್ಯ ಪಸರಿಸಿತು
ಮಂಜಿನ ಹನಿ ಕರಗಿದ ನಂತರ !
ನವಿಲು ತನ್ನ ಗರಿ ತೆರೆಯಿತು
ಮಳೆಯ ಹನಿ ಭೂಮಿಯ ಮೇಲೆ ಬಿದ್ದ ನಂತರ !
ಜೀವನದಲಿ ಒಂದು ತಿರುವು ಬಂತು
ಅವಳ ಪ್ರೀತಿಯ ಆಗಮನದ ನಂತರ !
by  ಹರೀಶ್ ಶೆಟ್ಟಿ,ಶಿರ್ವ

Saturday, March 3, 2012

ನಾನು ಕನ್ನಡ

ನಾನು ಕನ್ನಡ..........
ಅರೆ ಬೆತ್ತಲೆ
ಒಂದು ಗುಂಪು ಬಂದು
ಹರಿದ ಸೀರೆಯ ಹೊದಿಸಿದರು
ಸಾವರಿಸುವಾಗ ತನ್ನ ಮೈಯ ಮುಚ್ಚಿ
ಅವರೇ ನಗ್ನ ಮಾಡಲು ಪ್ರಯತ್ನಿಸಿದರು ನನ್ನ ಕಣ್ಣ ಮುಚ್ಚಿ

ಬೇರೊಂದು ಗುಂಪು ಬಂದು
ತನ್ನ ಶಾಲನ್ನು ಹೊದಿಸಿದರು  
ಮೈ ಮೆರೆತರು ನನಗೆ ಹೊಸ ರೂಪವ ಕೊಟ್ಟು
ಆನಂದಿಸುವಾಗ ನಾ ಪುನಃ ವಸ್ತ್ರ ತೊಟ್ಟು
ಅವರೇ ಶಾಲನ್ನು ಎಳೆಯಲು ಆರಂಬಿಸಿದರು ಹಿಡಿದು ನನ್ನ ಜೊಟ್ಟು

ಇನ್ನೊಂದು ಗುಂಪು ಬಂತು
ನಾ ಪುನಃ ವಸ್ತ್ರ ಅಲಂಕೃತವಾದೆ
ತನ್ನ ಭಾಗ್ಯಕ್ಕೆ ಹೆಮ್ಮೆ ಪಡೆದೆ
ಆದರೆ ಪುನಃ ಅವರ ದುರಹಂಕಾರಕ್ಕೆ ಬಲಿಯಾದೆ
ನಾ ಪೂರ್ಣ ಬೆತ್ತಲೆಯಾಗಿಯೇ ಉಳಿದೆ
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ