Sunday, October 9, 2011

ಅಭಿವ್ಯಕ್ತಿಗಳು

ಆತ್ಮಿಯರ ಕಣ್ಣಿರ ಹನಿ
ವಿವರಿಸುತ್ತದೆ ಅನೇಕ ವಿಷಯಗಳು

ಗೆಳೆಯರ ಮೌನ
ಮಾತನಾಡುತ್ತದೆ ಅನೇಕ ಮಾತುಗಳು 

ಪುಸ್ತಕದ ಹಾಳೆ
ಹೇಳುತ್ತದೆ ಅನೇಕ ಕಥೆಗಳು

ಸಣ್ಣ ಅಜ್ಞಾನ
ಉಂಟಾಗುತ್ತದೆ ಹಲವು ಹಾನಿಗಳು

ಕೋಪದ ನಿರ್ಣಯ
ಮುರಿಯುತ್ತದೆ ಅನೇಕ ಸಂಬಂಧಗಳು

ಹೃದಯದಿಂದ ನಕ್ಕ ನಗು
ಪ್ರದರ್ಶಿಸುತ್ತದೆ ಸಂತೋಷಗಳು

ಮನಸ್ಸಿನ ವೇದನೆ
ತೋರಿಸುತ್ತದೆ  ನೋವುಗಳು

ಕವಿಯ ಬರಹ 
ಹೊರ ಚಿಮ್ಮುತ್ತದೆ ಮನಸ್ಸಿನ ಭಾವನೆಗಳು
by ಹರೀಶ್ ಶೆಟ್ಟಿ, ಶಿರ್ವ

ಸಂತಸದ ಹಾದಿ

ಯಾವ ಹಾದಿಯಲಿ ಹೋಗಲಿ
ಯಾವ ಹಾದಿಯಲಿ ನಡೆಯಲಿ

ಬಾಲ್ಯವೆಲ್ಲ ಕಳೆದೆ ಆಡಿ ಓಡಿ ನಿದ್ರೆಯಲಿ 
ಯೌವನ ಕಳೆಯಿತು ತಿರುಗಾಟದಲಿ

ಮದುವೆ ಆಗಿ ಸಿಲುಕಿದೆ ದಾಂಪತ್ಯದ ಚಕ್ರವ್ಯೂಹದಲಿ
ಇನ್ನೂ ಬರಲಿಲ್ಲ ಬುದ್ದಿ ಅಲೆಯುತ್ತಿದ್ದೇನೆ ಪಶ್ಚಾತ್ತಾಪದಲಿ

ಹೇಗೋ ಸಾಗಿಸುತ್ತಿದ್ದೇನೆ ಜೀವನ ಕಷ್ಟದಲಿ
ಜೀವನದ ಅಭಾವ ಕಾಣುತ್ತಿದ್ದೇನೆ ನನ್ನ ಮಕ್ಕಳಲಿ

ಸಂತಸದ ಹಾದಿಯ ಹುಡುಕಿ ಹುಡುಕಿ ಬಿದ್ದಿದ್ದೇನೆ ದುಃಖದಲಿ
ಗೃಹಸ್ಥ ಜೀವನದಿಂದ ಸನ್ಯಾಸ ಒಳ್ಳೆಯದೆಂಬ ಭಾವ ಹುಟ್ಟಿತು ಮನದಲಿ

ಜೀವನದಲಿ ಜಿಗುಪ್ಸೆ ಉಂಟಾಗಿ ಹುಟ್ಟಿತು ವೈರಾಗ್ಯ ಮನದಲಿ
ಹೋದೆ ಸನ್ಯಾಸಿಯಾಗಲು ಪ್ರಖ್ಯಾತ ಗುರುಗಳಲ್ಲಿ

ಏಕೆ ನಿನಗೆ ಸನ್ಯಾಸ ದೀಕ್ಷೆ ಎಂದು ಕೇಳಿದರವರು ನನ್ನಲ್ಲಿ
ಇದೆ ಎಲ್ಲಕಿಂತ ದೊಡ್ಡ ವೈರಾಗ್ಯ ಈ ಗೃಹಸ್ಥ ಧರ್ಮದಲಿ

ತನ್ನ ಕುಟುಂಬಕ್ಕೆ ಸುಖ ನೀಡದವನು ಹೇಗೆ ಸಂತೋಷ ತರುವನು ಸಮಾಜದಲಿ
ವೈರಾಗ್ಯ ಜೀವನ ಆನಂದಿಸಬಹುದು ನೀನು ಒಟ್ಟಿಗೆ ಇದ್ದು ಪರಿವಾರದಲಿ

ಅವರ ಮಾತು ಕೇಳಿ ಬದಲಾವಣೆ ಆಯಿತು ನನ್ನ ವಿಚಾರದಲಿ
ಜೀವನದ ಸತ್ಯ ತಿಳಿದು ನಂಬಿಕೆ ಮೂಡಿತು ಗೃಹಸ್ಥ ಧರ್ಮದಲಿ
by ಹರೀಶ್ ಶೆಟ್ಟಿ, ಶಿರ್ವ

Saturday, October 8, 2011

ಮರಳಿ ಬಾ

ಏಕೆ ನಾನಿಷ್ಟು ಕೊರಗುವೆ ?
ನಿನ್ನದೇ ಯೋಚನೆಯಲಿ ಏಕೆ ಮುಳುಗುವೆ ?
ನನ್ನ ಹೃದಯ ಏಕೆ ನಿನ್ನ ದಾಸ  ?
ಏಕೆ ಅಲ್ಲಿ ನಿನ್ನದೇ ವಾಸ ?

ನಿನ್ನ ಕೋಪಕ್ಕೆ ನಾ ಏಕೆ ಹೆದರುವೆ ?
ನಿನ್ನ ಅಗಲಿಕೆಯಿಂದ ನಾ ಏಕೆ ಕಷ್ಟ ಪಡುವೆ ?
ನನ್ನ ಚಿಂತೆ ನಿನಗಿಲ್ಲವೇ ?
ಸ್ವಲ್ಪವು ವ್ಯಥೆ ನಿನಗಾಗುದಿಲ್ಲವೇ ?

ಈ ಸಂಬಂಧಕ್ಕೆ ಯಾವ ಹೆಸರು ಕೊಡಲಿ
ಮನಸ್ಸಿನ ನೆಮ್ಮದಿ ಹೇಗೆ ಪುನಃ ಪಡೆಯಲಿ
ಈ  ಮೋಹದ ಕಾರಣ ಎಲ್ಲಿ ಹುಡುಕಲಿ
ಇದರ ಉತ್ತರವಿಲ್ಲ ನಿನ್ನಲ್ಲಿ ನನ್ನಲ್ಲಿ

ದುಂಬಿ ಹೂವನ್ನು ಬಿಟ್ಟು ಇರಬಹುದೇ ?
ಸಸಿ ನೀರಿಲ್ಲದೆ ಬದುಕಬಹುದೇ ?
ನನ್ನ ಕಣ್ಣಿರು ಹೇಳದೆ ಕೇಳದೆ ಬರುತಿದೆ
ನನ್ನ ಹೃದಯ ನಿನ್ನನ್ನೇ "ಮರಳಿ ಬಾ" ಎಂದು ಕರೆಯುತಿದೆ
by ಹರೀಶ್ ಶೆಟ್ಟಿ, ಶಿರ್ವ

ಪ್ರಾಮುಖ್ಯತೆ

ಮುಗ್ಧ ಜೀವಿ ನಾನು
ಬಡಿತದೆ ಹೃದಯ ನನ್ನದೂ
ನಗುವ ಆಸೆ ನನ್ನದೂ

ಮೊಗ್ಗು ಹೂವು ನಾನು
ಸುವಾಸನೆ ತುಂಬಿದ ಜೀವ ನನ್ನದೂ
ಅರಳುವ ಬಯಕೆ ನನ್ನದೂ

ಗೂಡು ಹಕ್ಕಿ ನಾನು
ರೆಕ್ಕೆ ಕಾಯುತ್ತಿದೆ ನನ್ನದೂ
ಹಾರುವ ಇಚ್ಛೆ ನನ್ನದೂ

ಸೂರ್ಯ ಚಂದ್ರ ಅಲ್ಲ ನಾನು
ಪ್ರಪಂಚದಲಿ ಪುಟ್ಟ ಸ್ಥಾನ ನನ್ನದೂ
ತೋರಿಸುವೆ ಪ್ರಾಮುಖ್ಯತೆ ನನ್ನದೂ
by ಹರೀಶ್ ಶೆಟ್ಟಿ, ಶಿರ್ವ

ಬೆಳಗುವ ದೀಪ

ಬೆಳಗುವ ದೀಪಕ್ಕೆ
ಕತ್ತಲೆಯ ಹೆದರಿಕೆ ಯಾಕೆ ?
ಅರಳುವ ಹೂವಿಗೆ
ಸೂರ್ಯಾಸ್ತದ ಚಿಂತೆ ಯಾಕೆ ?
ಜೇನು ಒಟ್ಟು ಮಾಡುವ ದುಂಬಿಗೆ
ಜೇನು ಕಳ್ಳರ ಭಯ ಯಾಕೆ ?
ಸತ್ಯದ ಮಾತಿಗೆ
ಸುಳ್ಳು ನುಡಿಗಳ ಅರ್ಥ ಯಾಕೆ ?
ಹರಿಯುವ ನದಿಗೆ
ಸಮುದ್ರದ ಅಲೆಗಳ ಲೆಕ್ಕ ಯಾಕೆ?
by ಹರೀಶ್ ಶೆಟ್ಟಿ, ಶಿರ್ವ

Thursday, October 6, 2011

ರಾವಣ ದಹನ

ಒಂದು ಕಿಡಿ ಸಾಕು
ರಾವಣನ ಅಹಂಕಾರ ಮುರಿಯಲು
ದುಷ್ಟ ಶಕ್ತಿಯನ್ನು ಮುಗಿಸಲು
ಅಸತ್ಯ ಅಳಿಸಲು

ಪ್ರತಿ ವರುಷ ರಾವಣನ ದಹನ
ನೀಡುತ್ತದೆ ನಮಗೆ ಜ್ಞಾನ
ಸತ್ಯವೇ ಮಹಾನ
ಅಹಂಕಾರಕ್ಕೆ ಇಲ್ಲ ಸ್ಥಾನ
by ಹರೀಶ್ ಶೆಟ್ಟಿ, ಶಿರ್ವ

ರಾಮ ರಾವಣ

ರಾಮ ರಾವಣ ಇಬ್ಬರು ತುಲಾ ರಾಶಿಯವರಂತೆ
ಇಬ್ಬರಲ್ಲಿ ಒಂದೇ ರಾಶಿಯ ಗುಣವಂತೆ 
ರಾಮ ಸತ್ಯ ಬ್ರಹ್ಮ,ನಂತೆ
ರಾವಣ ಮಾಯಾವಿಯಂತೆ

ರಾಮನ ಜೀವನ ವಾಸ್ತವಿಕವಂತೆ 
ಅವನು ಈಶ್ವರನಂತೆ
ರಾವಣನೂ ಈಶ್ವರ ಭಕ್ತನಂತೆ 
ಅವನು ಅಸುರನಂತೆ 

ರಾಮನ ಅಯೋಧ್ಯದ ಅರಮನೆ ಭವ್ಯವಂತೆ 
ಆದರೆ ರಾವಣನ ಲಂಕಾ ಅತಿ ಭವ್ಯವಂತೆ
ಅಯೋದ್ಯದ ಅರಮನೆ ಸತ್ಯ ಪ್ರತೀಕವಂತೆ  
ಸ್ವರ್ಣ ಲಂಕಾ ಒಂದು ಭ್ರಮೆ ಸತ್ಯ ಅಲ್ಲವಂತೆ

ರಾಮನ ಭಾವುಕ ಮನಸ್ಸಂತೆ 
ಕಾಡಲ್ಲಿ ಅಲೆದ ಸಾಧಾರಣ ಮನುಷ್ಯನಂತೆ 
ರಾವಣ ಅಹಂಕಾರಿಯಂತೆ 
ಐಶ್ವರ್ಯದಲ್ಲಿರುವ ದೊಡ್ಡ ಮನುಷ್ಯನಂತೆ 

ರಾವಣ ಮಾಡಿದ ಸೀತಾಹರಣ ಅಂತೆ
ರಾಮ ತುಂಬಾ ಅತ್ತನಂತೆ
ಆದರೆ ರಾಮ ಶುಭಕಾರಿಯಂತೆ
ರಾವಣ ದುರಹಂಕಾರಿಯಂತೆ

ಯುದ್ಧದಲಿ ರಾಮ ರಾವಣನನ್ನು ಸೋಲಿಸಿದನಂತೆ 
ರಾವಣನ ಅಲ್ಲಿಗೆ ಅಂತ್ಯವಾಯಿತಂತೆ
ಸುಳ್ಳು ಸತ್ಯಕ್ಕೆ ಶರಣಾಯಿತಂತೆ
ಸತ್ಯದ  ವಿಜಯವಾಯಿತಂತೆ  

ಸೀತೆಯ ಅಗಲಿಕೆ ರಾಮನ ರಾಜ ಪರೀಕ್ಷೆಯಂತೆ 
ಸೀತೆಯ ಅಗ್ನಿ ಪರೀಕ್ಷೆ ರಾಮನ ವಿರಹವಂತೆ
ರಾಮ ಮಾಡಿದ್ದು ತನ್ನ ಇಚ್ಛೆಯ ತ್ಯಾಗವಂತೆ 
ಮಾನವರಿಗೆ ಕೊಟ್ಟ ದಾಂಪತ್ಯ ಜೀವನದ ಇದೇ ಸಂದೇಶವಂತೆ
by ಹರೀಶ್ ಶೆಟ್ಟಿ, ಶಿರ್ವ
 

ಸಿದ್ಧಿದಾತ್ರಿ