Tuesday, September 6, 2011

ಸೋತ ಪ್ರೇಮ

ಮನೆಯ ಬಿಟ್ಟು ಏನು ಮಾಡಲಿ
ಸಂಜೆಯ ಸಮಯ ಪ್ರಯಾಣ ಮಾಡಿ ಏನು ಮಾಡಲಿ

ನಿನಗೆ ಬಿಡುವಿಲ್ಲವೆಂದು ಅರಿಯುವೆ
ನಾ ಬರುವೆನೆಂದು ಮಾಹಿತಿ ಕೊಟ್ಟು ಏನು ಮಾಡಲಿ 

ನಕ್ಷತ್ರಗಳೇ  ಹೊಂದಿ ಬರುವುದಿಲ್ಲ
ಗಳಿಸಿ ಸೂರ್ಯ ಚಂದ್ರವನ್ನು ಏನು ಮಾಡಲಿ

ಆ ಪ್ರಯಾಣಿಕನಿಗೆ  ಬಿಸಿಲಿನ ಹುಚ್ಚು
ನೆರಳನ್ನು ನೀಡುವ ಮರವನ್ನು ಏನು ಮಾಡಲಿ

ಧೂಳು ಆರಂಭ ಹಾಗು ಅಂತ್ಯವಾಗಿದೆ
ಕಣಗಳ ಆಭರಣಗಳನ್ನು ಮಾಡಿ ಏನು ಮಾಡಲಿ

ತನ್ನ ಮಾರ್ಗವನ್ನು ಮೊದಲೇ ನಿರ್ಧರಿಸಿದೆ ನೀ
ನಿನ್ನ ಹೃದಯದಲ್ಲಿ ಮನೆ ಮಾಡಿ ಏನು ಮಾಡಲಿ

ಪ್ರೀತಿಯು ಎಲ್ಲ ಶಿಷ್ಟಾಚಾರಗಳನ್ನು ಕಲಿಸಿತು
ಸುಂದರಿಯರೊಂದಿಗೆ  ಕೌಶಲ್ಯ ತೋರಿಸಿ ಏನು ಮಾಡಲಿ
(ಪರ್ವೀನ್ ಶಕೀರ್ ಅವರ ಉರ್ದು ಕವಿತೆಯಿಂದ)
by  ಹರೀಶ್ ಶೆಟ್ಟಿ , ಶಿರ್ವ

Monday, September 5, 2011

ಗುರುಗಳ ಉಪಕಾರ

ನಂಬಿದೆ ನಾ ನನ್ನ ಗುರುಗಳನ್ನ
ಅನುಸರಿಸಿದೆ ಅವರು ಕೊಟ್ಟ ಶಿಕ್ಷಣೆಗಳನ್ನ
ತಿಳಿಸಿದರು ಸತ್ಯ ಸುಳ್ಳಿನ ಭೇದವನ್ನ
ತೋರಿಸಿದರು ಸುಕರ್ಮದ ಹಾದಿಯನ್ನ
ತಿದ್ದಿದರು ನಾ ಮಾಡಿದ ತಪ್ಪನ್ನ

ಗುರುಗಳ ರೂಪದಲ್ಲಿ ಕಂಡೆ ನಾ ತಾಯಿಯನ್ನ
ಗುರುಕುಲದಲ್ಲಿ ಕಂಡೆ ನಾ ನನ್ನ ಮನೆಯನ್ನ
ಮರೆಯಲಾರೆ ಜ್ಞಾನ ಕೊಟ್ಟ ಆ ದೇವರನ್ನ

ನೆನಪಿಸುವೆ ಅವರು ಕೊಟ್ಟ ಪೆಟ್ಟಿನ ಪ್ರಸಾದವನ್ನ
ನುಡಿಯುವೆ ಅವರು ನುಡಿದ ಮಾತನ್ನ
ಪಾಲಿಸುವೆ ಅವರು ಕೊಟ್ಟ ವಿದ್ಯದಾನವನ್ನ

ಶಿಲ್ಪಿಯಾಗಿ ರಚಿಸಿದರು ನನ್ನ ಜೀವನವನ್ನ
ತೋರಿಸಿ ಕೊಟ್ಟರು ಕೇವಲ ಸತ್ಯದ ಮಾರ್ಗವನ್ನ
ನೆನೆಯುವೆ ಸದಾ ನಿಮ್ಮ ಉಪಕಾರವನ್ನ
ಸ್ವೀಕರಿಸಿ ಗುರುಗಳೇ ನನ್ನ  ಕೋಟಿ ಕೋಟಿ ನಮನವನ್ನ
ಹೇಗೆ ತೀರಿಸಲಿ ನೀವು ಮಾಡಿದ ತ್ಯಾಗದ ಗುರುದಕ್ಷಿಣೆಯನ್ನ
by  ಹರೀಶ್ ಶೆಟ್ಟಿ, ಶಿರ್ವ

Sunday, September 4, 2011

ದೇವರ ಮಕ್ಕಳು

ಅವಳು ಅವಳ ಯೌವನದಲ್ಲಿದ್ದಳು
ಬಾಲಕಿಯಿಂದ ಹೆಣ್ಣಾದಳು 
ಸುಂದರ ರೂಪ ,ಉದ್ದ ಕೇಶ ,ಅದ್ಭುತ ಕಂಗಳು

ಆದರೆ ಅವಳು ಈಗಲೂ ಪುಟ್ಟ ಮಕ್ಕಳಂತೆ
ಬುದ್ದಿ ಬೆಳೆಯದೆ ಅವಳೊಂದು ಮಗುವಿನಂತೆ
ಅವಳಿಗಿಲ್ಲ ಯಾವುದೇ ಭಯ ,ಚಿಂತೆ

ಸದಾ ಅವಳ ತುಟಿಯಲ್ಲಿ ಮುಗ್ದ ನಗೆ
ಅವಳೆಂದರೆ ತುಂಬಾ ಇಷ್ಟ ನನಗೆ
ಅವಳಿಗೂ ತುಂಬಾ ಪ್ರೀತಿ ನನ್ನ ಬಗೆ

ಅವಳಿಗಿಷ್ಟ ನನ್ನನ್ನು ನೋಡಿ ಕೀಟಲೆ ಮಾಡುವುದು
ಜೋರಾಗಿ ಕೂಗಿ ಕರೆಯುವುದು
ಚಪ್ಪಾಳೆ ತಟ್ಟಿ ಕಿಲಕಿಲನೆ ನಗುವುದು

ನನ್ನ ಹೃದಯ ಅಳುತ್ತಿತ್ತು ನೋಡಿ ಅವಳನ್ನು
ನೋವಾಗುತ್ತಿತ್ತು ಕಂಡು ಅವಳ ಮುಗ್ದತೆಯನ್ನು 
ಜೀವನ ಕಳೆಯುತ್ತಿದ್ದಳು ಅವಳು ಮರೆತು ಜೀವನವನ್ನು

ಅವಳ ತಂದೆ ತಾಯಿಯವರು ಅವಳ ಬಾಳಿನ ದೇವರು
ಅವಳಿಗಾಗಿಯೇ ಜೀವಿಸುತ್ತಿದ್ದರು ಅವರಿಬ್ಬರೂ
ಮಮತೆ, ವಾತ್ಸಲ್ಯದಿಂದ ಅವಳನ್ನು ಸಾಕುತ್ತಿದ್ದರು

ಇವಳಂತ ಮಕ್ಕಳಿಗೆ  ಕನಸ್ಸಿಲ್ಲವೇ ?
ಇವಳಂತ ಮಕ್ಕಳಿಗೆ ಮನಸ್ಸಿಲ್ಲವೇ?
ಇವಳಂತ ಮಕ್ಕಳಿಗೆ ಯಾಕೆ ಈ ಶಿಕ್ಷೆ ?

ನನ್ನ ದೇವರಲ್ಲಿ ಒಂದೇ ಬೇಡಿಕೆ
ಕೊಡ ಬೇಡ ಇಂತಃ ಕಷ್ಟ ಯಾರಿಗೂ 
ಬುದ್ದಿ, ವಿಧ್ಯಾ ಕೊಟ್ಟು ಕಾಪಾಡು ಎಲ್ಲಾ ಮಕ್ಕಳಿಗೂ
by ಹರೀಶ್ ಶೆಟ್ಟಿ, ಶಿರ್ವ

Saturday, September 3, 2011

ಹೊಸ ಜೀವನ

ಮನಸ್ಸಲಿ ತಂಗಾಳಿ ಬೀಸಿದಂತಾಯಿತು
ಹೊಸ ಜೀವನದ ಶುಭಾರಂಭವಾಯಿತು

ಅಂಧಕಾರದಲ್ಲಿತ್ತು ನನ್ನ ಜೀವನ
ಕಣ್ಣಿರಿನಿಂದ ಕರಗುತ್ತಿತ್ತು ನನ್ನ ಯೌವನ
ಎಲ್ಲ ದ್ವಾರ ಮುಚ್ಚಿ ಹೋಗಿತ್ತು ನನ್ನ ಬದುಕಿನ

ಸೋತು ಹೋಗಿದೆ ಮನಸ್ಸು ನೊಂದು ನೊಂದು
ಅರಳಿತು ಆಸೆ ಆಕಾಂಕ್ಷೆಯ ಹೂವೊಂದು  
ಅವನು ದೇವರಂತೆ ನನ್ನ ಜೀವನದಲ್ಲಿ ಬಂದು

ಭಯ ,ಶಂಕೆ, ಹರ್ಷದ ಭಾವನೆ ಮನಸ್ಸಲಿ
ಕಾಲಿಟ್ಟೆ ಭಕ್ತಿಯಿಂದ ಅವನ ಮನೆಯ ಬಾಗಿಲಲಿ
ಪಡೆದೆ ಆಶೀರ್ವಾದ ನನ್ನ ಬಾಳಿನ ದೇವರಲಿ

ಮರೆಯುವೆ ಇನ್ನೂ ಕಳೆದ ದಿವಸಗಳ
ಒಬ್ಬಂಟಿಯಾಗಿ ಬದುಕಿ ಪಡೆದ ಕಷ್ಟಗಳ
ವಿಧವೆ ಎಂಬ ನೋವು ತರುವ ಕರೆಗಳ 

ಕನಸುಗಳೆಲ್ಲ ಪುನರ್ಜೀವಿತ ಆಯಿತು
ಬದುಕು ಒಂದು ಹಾದಿಗೆ ತಲುಪಿತು
ಹೊಸ ಜೀವನದ ಶುಭಾರಂಭವಾಯಿತು
by ಹರೀಶ್ ಶೆಟ್ಟಿ, ಶಿರ್ವ

Friday, September 2, 2011

ವಿಧವೆ

ಬಿಟ್ಟು ಹೋದ ಜೀವನದಲ್ಲಿ ಕತ್ತಲೆಯನ್ನು
ಕುಂಕುಮವ ಒರಸಿ ಬತ್ತಲೆ ಹಣೆಯನ್ನು
ಎಲ್ಲ ಬಣ್ಣವ ಕಸಿದು ಬಣ್ಣರಹಿತ ಶ್ವೇತವನ್ನು

ಕಣ್ಣಿರಿಲ್ಲದೆ ಬತ್ತಿ ಹೋದ ಕಂಗಳನ್ನು
ತುಂಡು ತುಂಡಾಗಿ ಅಳುತ್ತಿದ್ದ ಬಳೆಗಳನ್ನು
ಕೊನೆ ಉಸಿರೆಳೆದು ಮುರಿಯುವ ಕನಸನ್ನು

ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂಬಂಧಿಕರನ್ನು
ಸಾಂತ್ವನ ಕೊಟ್ಟು ಮರೆಯಾಗುವ ಗೆಳೆಯರನ್ನು
ದೂರ ಸರಿಸಿ ತನ್ನ ಪಾಡಿಗೆ ಹೋಗುವ ಜನರನ್ನು

ಈಗ ನಾನು ಏಕಾಂಕಿ
ಕಾಣದಾಗಿದೆ ಜೀವನದ ಹಾದಿ
ಹೇಳಲಿಕ್ಕೆ ಜಗವೆಲ್ಲ ನಮ್ಮವೇ
ಸಾಗಿಸುತ್ತಿದ್ದೇನೆ  ಜೀವನ ಒಬ್ಬಳೇ
ದುಷ್ಟ ಸಭ್ಯ ಜನರಿಂದ ಕಾಪಾಡುತ್ತಿದ್ದೇನೆ ನನ್ನ ಮಾನ 
ಬೆತ್ತಲೆ  ಸಮಾಜದಲ್ಲಿ ನನ್ನಂತ ವಿಧವೆಗೆ ಇಲ್ಲ ಸ್ಥಾನ  
by ಹರೀಶ್ ಶೆಟ್ಟಿ, ಶಿರ್ವ

Thursday, September 1, 2011

ಗಣಪ ನನಗೆ ಲಡ್ಡು ಕೊಡು

ಗಣಪ ನನಗೆ ಲಡ್ಡು ಕೊಡು
ಲಡ್ಡು  ಕೊಡು ಲಡ್ಡು  ಕೊಡು

ಒಂದಲ್ಲ ಎರಡು ಕೊಡು
ಲಡ್ಡು ಕೊಡು ಲಡ್ಡು ಕೊಡು

ಮೂಷಕನಿಗೂ ಒಂದು ಕೊಡು
ಲಡ್ಡು ಕೊಡು ಲಡ್ಡು ಕೊಡು

ಬೇರೆಲ್ಲ ತಿಂಡಿ ನೀನೇ ಇಡು
ಲಡ್ಡು ಕೊಡು ಲಡ್ಡು ಕೊಡು

ಎಲ್ಲ ಲಡ್ಡು ನನಗೆ ಬಿಡು
ಲಡ್ಡು ಕೊಡು ಲಡ್ಡು ಕೊಡು 

ಗಣಪ ನನಗೆ ಲಡ್ಡು ಕೊಡು
ಲಡ್ಡು  ಕೊಡು ಲಡ್ಡು  ಕೊಡು
by ಹರೀಶ್ ಶೆಟ್ಟಿ, ಶಿರ್ವ

ಗಣೇಶ್ ಚತುರ್ಥಿ


ಕೇಳಿದೆ ನಾ ದೇವ ಶ್ರೀ ಗಣೇಶನಿಗೆ
" ನೀನು ನಮ್ಮ ಬಾಳಿನ ದೇವ
೩೬೫ ದಿವಸ ನಾವು ಕೊಡುತ್ತೇವೆ ನಿನಗೆ ಸೇವಾ
ಆದರೂ ಕಾಯುತ್ತೇವೆ ಪ್ರತಿ ವರ್ಷ ನಿನ್ನ ಹಬ್ಬ ಗಣೇಶ್ ಚತುರ್ಥಿಕ್ಕಾಗಿ
ಮನೆಗೆ ನಿನ್ನನು ಕರೆಮಾಡಿ ಪೂಜಿಸುತ್ತೇವೆ ತಲೆಬಾಗಿ
ವಿಶೇಷವಾಗಿ ಆಚಾರಿಸುತ್ತೇವೆ ವರುಷಕ್ಕೊಮ್ಮೆ ನಿನ್ನ ಹಬ್ಬವನ್ನು
ಏಕೆ ನೀ ನಮ್ಮ ಮನೆಯಲ್ಲಿ ೩೬೫ ದಿನ ಇದ್ದು ಕಾಪಾಡ ಬಾರದು ನಮ್ಮನ್ನು"

ದೇವ ಶ್ರೀ ಗಣೇಶ ಹೇಳಿದ ನಕ್ಕು
"ಭಾದ್ರಪದ ಶುಕ್ಲದ ಚೌತಿಯಂದು ನನ್ನ ಆಗಮನ
ಆತ್ಮ ವಿಶ್ವಾಸ, ಸಂಯಮ,ಭಕ್ತಿ, ಧೈರ್ಯ ಮತ್ತು ಸಂಕಲ್ಪ
ಇದನ್ನೆಲ್ಲಾ ಕಳೆದು ಕೊಳ್ಳುತ್ತಿದ್ದರು ಪ್ರತಿ ಜನ
ಸರ್ವೊಚ್ಚ ಸತ್ಯವಾಗಿ ಆಗಮಿಸಿ ನಾನು ಕೊಡುವೆ ನಿಮೆಗೆಲ್ಲ ವರದಾನ
ಸಜೀವ ಹಾಗು ನಿರ್ಜೀವದಲ್ಲಿ ಇದೆ ವಾಸ ನನ್ನ 
ಅಹಂ , ಕೋಪ , ಅಸೂಯೆ ಎಲ್ಲ ಮರೆತು
ಜನರು ತರುವರು ಮನೆಗೆ ನನ್ನ ಮೂರ್ತಿಯನ್ನ
ಎಲ್ಲರು ಒಟ್ಟು ಕೂಡಿ ಪೂಜಿಸುವರು ನನ್ನನ್ನ
ಕಾಣುವಿರಿ ಈ ಸಮಯ ಎಲ್ಲ ಕಡೆ ನೀವು ನನ್ನದೇ  ಮೂರ್ತಿಯನ್ನ"
by ಹರೀಶ್ ಶೆಟ್ಟಿ, ಶಿರ್ವ 

 

ಸಿದ್ಧಿದಾತ್ರಿ