Tuesday, January 31, 2012

ನನ್ನದು ಏನಿಲ್ಲ

ನನ್ನದು ಏನಿಲ್ಲ ಈಗ ಈ ಮನೆಯಲ್ಲಿ
ಅವಳು ಹೋಗುವಾಗ ಸುಖ, ನೆಮ್ಮದಿ, ಎಲ್ಲವೂ ಒಟ್ಟಿಗೆ ಹೊರಟು ಹೋಗಿದೆ
by ಹರೀಶ್ ಶೆಟ್ಟಿ, ಶಿರ್ವ

ನನ್ನ ಪ್ರೀತಿ

ಪ್ರೀತಿಯನ್ನು ಹುಡುಕುತ್ತಿದ್ದೆ
ಅವಳು ಹೋದ ನಂತರ ತಿಳಿಯಿತು
"ಅವಳೇ ನನ್ನ ಪ್ರೀತಿಯೆಂದು "
by ಹರೀಶ್ ಶೆಟ್ಟಿ, ಶಿರ್ವ

ಬಂಗಾರದ ಒಡವೆ

ಕಪಾಟಿನಲ್ಲಿ ಅವಳ ಬಂಗಾರದ ಒಡವೆಗಳನ್ನು ಕಂಡೆ
ಅವಳು ತನ್ನ ಎಲ್ಲ ಒಡವೆಗಳನ್ನು ಬಿಟ್ಟು ಹೋಗಿದ್ದಳು
ನನಗೆ ಅವಳು ಹೇಳಿದ ಮಾತು ನೆನಪಾಯಿತು
"ನೀವೆ ನನ್ನ ಬಂಗಾರ, ಈ ಒಡವೆಗಳಲ್ಲ " ವೆಂದು..
by ಹರೀಶ್ ಶೆಟ್ಟಿ, ಶಿರ್ವ

Monday, January 30, 2012

ಅವಳು ಬಂದಳೆಂದು

ಬಾಗಿಲ ಶಬ್ದ ಕೇಳಿ ಅವಳು ಬಂದಳೆಂದು ಓಡೋಡಿ ಹೋದೆ
ಅಂಚೆ ಅಣ್ಣ ಬಂದಿದ....ಅವಳ ಕಾಗದ ಕೊಡಲು ಅಲ್ಲ....
ದೀಪಾವಳಿಯ ಕೊಡುಗೆ ಕೇಳಲು ...
by ಹರೀಶ್ ಶೆಟ್ಟಿ, ಶಿರ್ವ

ಶಾಂತ ಒಲೆ

ಅಡುಗೆ ಮನೆಯಲ್ಲಿ ಶಾಂತ ಒಲೆ
ಅವಳಿಲ್ಲದೆ ಪಸರಿದೆ ಶಾಂತತೆಯ ಅಲೆ
by ಹರೀಶ್ ಶೆಟ್ಟಿ, ಶಿರ್ವ

ನನ್ನದೇ ಚಿಂತೆ

ಅವಳು ಬಿಟ್ಟು ಹೋಗುವಾಗಲು ನನ್ನದೇ ಚಿಂತೆ
ಹೇಳಿದು ಇಷ್ಟೇ ....
"ದಯವಿಟ್ಟು ನಿಮ್ಮ ಆರೋಗ್ಯದ ಕಾಳಜಿ ಇಡಿ "
by ಹರೀಶ್ ಶೆಟ್ಟಿ, ಶಿರ್ವ

ಅಪರಿಚಿತರು

ಅವರಿಗೆ ಈಗ ನಾನು ಅಪರಿಚಿತ
ನನಗೂ ಅವರು ಅಪರಿಚಿತರು
ಆಪ್ತ ಮಿತ್ರರು
ಒಂದೇ ದೋಣಿಯ ನಾವಿಕರು
ಪ್ರೀತಿಯ ದೋಣಿಯನ್ನು ಮುಳುಗಿಸಿದರು

ಕಂಡು ಕಾಣದಂತೆ ಮನೋಭಾವ ಅವರ
ಒಟ್ಟಿಗೆ ಇದ್ದು ಪ್ರತ್ಯೇಕ ವ್ಯವಹಾರ
ಸಾಮಿಪ್ಯ ಪಡೆದರು ಹೊಸ ಮಿತ್ರರ
ಮುನಿದು ಕಣ್ಣಿಗೆ ಬಟ್ಟೆ ಕಟ್ಟಿದರು
ಕಣ್ಣಿದ್ದು ಅಂಧರಾದರು

ನಾನು ಈಗಲೂ ನಾನೇ
ಅವರು ಈಗಲೂ ಅವರೇ
ಒಬ್ಬ ಸ್ನೇಹಿತ ಇದ್ದನೆಂದು ಮರೆತರು
ಸ್ನೇಹದ ಬಂಧನ ಮುರಿದರು
ಅವರ ಮಟ್ಟಿಗೆ ಅವರು ಸ್ವತಂತ್ರರಾದರು
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ