Wednesday, September 3, 2014

ಯಥಾರ್ಥ

ತೆರೆಯಿತು
ಕಣ್ಣಿನ ಕಿಟಕಿ
ಸತ್ಯದ ದ್ವಾರ
ತೆರೆದ ನಂತರ

ನಿಷ್ಠೆ ಎಲ್ಲಿ
ಪ್ರಶ್ನೆ ಉದ್ಭವಿಸಿತು
ದ್ರೋಹ
ಪಡೆದ ನಂತರ

ಹೊಸ ಅಧ್ಯಾಯ
ಪ್ರಾರಂಭ
ಪ್ರೀತಿಯ ಅರ್ಥ
ತಿಳಿದ ನಂತರ

ಇನ್ನೊಂದು ಪಾಠ
ಜೀವನದ
ಯಥಾರ್ಥ
ಅನುಭವಿಸಿದ ನಂತರ

by ಹರೀಶ್ ಶೆಟ್ಟಿ, ಶಿರ್ವ 

ನೀನು ಇನ್ನೊಬ್ಬನನ್ನು

ನಿನಗಿಂದು
ಹೇಳಬೇಕಾಗುತ್ತದೆ
ನಿನ್ನ ಅಸಹಾಯಕತೆಯ ಕಾರಣವನ್ನು
ನೀಡಬೇಕಾಗಿತ್ತು ನೀನು
ಜೀವನ ಪರ್ಯಂತ  ಜೊತೆಯನ್ನು
ನೀಡಿದೆ ನನಗೆ
ಇಡಿ ಜೀವಮಾನದ ಅಂತರವನ್ನು

ಎಷ್ಟು ದೃಡವಾಗಿತ್ತು
ನಿನ್ನ ತೀರ್ಮಾನ
ಸ್ವಲ್ಪ ಸ್ಮರಿಸು
ನಿನ್ನ ನಿಷ್ಠೆಯ ವಚನ
ನೀನು ಹೇಳಿದ್ದೆ ಇಟ್ಟು ಆಣೆ
ಸದಾ ನಿಭಾಯಿಸುವೆ
ಪ್ರೀತಿಯ ಆಚರಣೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದ್ದೆ ಜೀವದ ಗಂಟಾಗಿದ್ದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದ್ದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ

ಪ್ರೀತಿಯ ಮೌಜು
ನೀನು ಬಯಸಲಿಲ್ಲ
ನೀನು ಬಯಸಿದೆ
ಬೆಳ್ಳಿ ಬಂಗಾರವೆಲ್ಲ
ನೀನು ಬೇಕಂತಲೇ ಮುಳುಗಿದೆ 
ಇನ್ಯರಾದ್ದೋ ಕಣ್ಣೀರಿನಲ್ಲೇ
ನಿನಗೆ ಧರಿಸಲ್ಲಿಕ್ಕಿತ್ತು ಮುತ್ತಿನ ಮಾಲೆ
ಹೋ....ನಿನಗೆ  ಧರಿಸಲ್ಲಿಕ್ಕಿತ್ತು ಮುತ್ತಿನ ಮಾಲೆ
ಹೆಜ್ಜೆ ಹೆಜ್ಜೆಯಲಿ ವಿಶ್ವಾಸದ ಬದಲು
ವಂಚಿಸುವುದು ನಿನಗೆ ಶಂಕೆ
ಬೆಂಕಿಯ ಜ್ವಾಲೆಯಲಿ ಆವರಿಸಿದೆ
ನಿನ್ನ ಈ ಸ್ವರ್ಣದ ಲಂಕೆ
ನೀನು ಇನ್ನೊಬ್ಬನನ್ನು...

ಏನು ನಿನ್ನ
ಈ ಸುಖದ ವಸ್ತುಗಳೆಲ್ಲ
ನನ್ನ ನೆನಪನ್ನು ಅಳಿಸಬಹುದ
ನನ್ನ ನೆನಪು
ನಿನ್ನ ನಿದ್ರೆ ಅಪಹರಿಸಿಕೊಂಡಾಗ
ಅದೇನು ನಿನಗೆ ನಿದ್ರಿಸಲು ಬಿಡಬಹುದ
ಹೋ....ನಿನಗೆ ನಿದ್ರಿಸಲು ಬಿಡಬಹುದ
ವಸ್ತುಗಳಲ್ಲಿ ಸುಖ ಇರುವುದಿಲ್ಲ
ಸುಖ ಜೀವದ ಒಂದು ಕೌಶಲವಾಗಿದೆ
ನನ್ನಿಂದಲೇ ನೀನು ಛಲ ಮಾಡಿದೆ
ನಿನ್ನನ್ನೇ ನೀನು ವಂಚಿಸಿದೆ
ನೀನು ಇನ್ನೊಬ್ಬನನ್ನು...

ನಿನಗಾಗಿ ಸದಾ ಬಯಸಿದೆ
ವಸಂತ ನಾನು
ನಿನಗಾಗಿ ತೊರೆದೆ
ಪ್ರಾಣದ ಹಂಗು ನಾನು
ಎರಡು ದಿನವೂ
ನೀನು ಕಾಯಲಿಲ್ಲ ನನ್ನನ್ನು
ಬಿಟ್ಟು ಹೋದೆ
ಏಕಾಂತದಲಿ ನನ್ನನ್ನು  
ಹೋ....ಬಿಟ್ಟು ಹೋದೆ ಏಕಾಂತದಲಿ ನನ್ನನ್ನು  
ನಿನ್ನ ಅಗಲಿಕೆ
ನನ್ನ ಚಿತೆಯಾಗಿದೆ
ದುಃಖದ ಚಿತೆಯಲಿ
ನಾನು ಜ್ವಲಿಸುತ್ತಿರುವೇನು
ಮನಸ್ಸು ನನ್ನ ಉರಿಯುತ್ತಿದೆ
ದಹನಭೂಮಿಯಂತೆ
ಬೆಂಬೂದಿಯ ಮೇಲೆ
ನಾನು ನಡೆಯುತ್ತಿದ್ದೇನೆ
ನೀನು ಇನ್ನೊಬ್ಬನನ್ನು...

ಮೂಲ : ಶೇವನ್ ರಿಜ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಓ ಪಿ ನೈಯ್ಯರ್
ಚಿತ್ರ : ಏಕ ಬಾರ್ ಮುಸ್ಕುರಾ ದೋ

Tujhko Aaj Batana Hoga
Kya Thi Woh Majboori
Saath Umra-Bhar Ka Dena Tha
Dedi Umra-Bhar Ki Doori

Kitne Atal The Tere Iraade
Yaad To Kar Tu Wafa Ke Vaade
Toone Kaha Tha Khaakar Kasmein
Sada Nibhaenge Pyar Ki Rasmein
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi

Pyar Ki Masti Toone Na Chahi
Toone To Chaha Chandi Ka Pyaala
Aasoon Kisike Kya Tu Pehenti
Tujhko Pehen Thi Moti Ki Mala
Ho Tujhko Pehen Thi Moti Ki Mala
Pag Pag Par Vishwaas Ke Badle
Chhala Karegi Tujhko Shanka
Aag Ki Lapton Mein Lipti Hai
Yeh Teri Sone Ki Lanka
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi

Kya Ye Tere Sukh Ke Saadan
Meri Yaad Ko Bhula Sakenge
Meri Yaad Jab Neend Udha Degi
Kya Ye Tujhko Sula Sakenge
Ho Kya Ye Tujhko Sula Sakenge
Saadan Mein Sukh Hota Nahin Hai
Sukh Jeevan Ki Ek Kala Hai
Mujhse Hi Chhal Kiya Na Toone
Apne Ko Toone Aap Chhala Hai
Tu Auron Ki Kyon Ho Gayi
Tu Hamari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi

Tere Liye Mein Laya Baharein
Tere Liye Mein Jaan Pe Khela
Do Din Toone Bhi Raah Na Dekhi
Chhod Ke Chal Di Mujhe Akela
Ho Chhod Ke Chal Di Mujhe Akela
Teri Judaai Meri Chitaah Hai
Gham Ki Chitaah Mein Mein Jal Raha Hoon
Man Mera Deh-Ke Marghat Jaisa
Angaaron Pe Mein Chal Rahan Hoon
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi
http://www.youtube.com/watch?v=BOWJs00FHR0

ತೊರೆದು ಹೋಗುವೆ ಎಲ್ಲಿ

ತೊರೆದು ಹೋಗುವೆ ಎಲ್ಲಿ 
ಈ ಜೀವವನ್ನು 
ಇರಲಿದೆ ಮಾನವನಾಗಿ ನಿನಗೆ 
ಈ ದುಷ್ಟ ಜಗತ್ತಲ್ಲಿ 

ಕಣ್ಣೀರ ನಿರೀಕ್ಷೆ ಏಕೆ 
ಬಂಡೆ ಕಲ್ಲಲ್ಲಿ 
ತಲೆ ಅಪ್ಪಳಿಸಿದರೆ 
ಮಿಂದುವೆ ನೀನು ರಕ್ತದಲಿ 

ಐದು ಬೆರಳಲಿ 
ಒಂದನ್ನು ದಿಟ್ಟಿಸಿದರೆ ಇತರರಲಿ 
ನಾಲ್ಕು ಬೆರಳ ಗುರಿ 
ಇರುವುದು ಕೇವಲ ನಿನ್ನಲ್ಲಿ

ಸಲ್ಲದು ಮಾತಾಡಿ 
ಪ್ರಯೋಜನವೇನು 
ಸುಧಾರಿಸಿಕೋ ಸ್ವತಃ ನಿನ್ನನ್ನೇ 
ನಿನ್ನಿಂದಲೇ ಪರಿವರ್ತನೆ ಬರಲಿ ಈ ಜಗತ್ತಲ್ಲಿ 
by ಹರೀಶ್ ಶೆಟ್ಟಿ, ಶಿರ್ವ

ಹಾತೊರೆದು ನನ್ನನ್ನು

!!ಹಾತೊರೆದು ನನ್ನನ್ನು
ಹೀಗೆ ಹೋಗಬೇಡ ನೀನು
ನಿನಗೆ ನನ್ನಾಣೆ
ಹಿಂತಿರುಗಿ ಬಾ ನೀನು!!

!!ನೋಡು ಆ
ಕರಿ ಕರಿ ಮೋಡಗಳನ್ನು
ಕದ್ದುಕೊಳ್ಳದಿರಲಿ ಕೇಶದ ಮುಗಿಲನ್ನು
ಮೆಲ್ಲ ಮೆಲ್ಲನೆ ಬಂದು
ತುಂಟ ಮಿಂಚುಗಳು
ಕದ್ದುಕೊಳ್ಳದಿರಲಿ ನಿನ್ನ ನಿಖರತೆಯನ್ನು
ಹೀಗೆ ಮುಂದೆ ಹೆಜ್ಜೆಯನ್ನು ಇಡದಿರು ನೀನು!!
ನಿನಗೆ ನನ್ನ ಆಣೆ...

!!ನೋಡು ಆ
ಗುಲಾಬಿಯ ಶಾಖೆಗಳನ್ನು
ಚುಂಬಿಸದಿರಲಿ ಮುಂದೆ ಬಂದು ನಿನ್ನ ಹೆಜ್ಜೆಗಳನ್ನು
ಸೋತು ಹೋದ
ಭ್ರಮರಗಳು ಇದೆ ಉದ್ಯಾನದಲಿ
ಯಾರು ಬಂದು ತನ್ನ ಪ್ರೇಯಸಿ ಮಾಡದಿರಲಿ ನಿನ್ನನ್ನು
ಅಮಲಲ್ಲಿದ್ದ ದೃಷ್ಟಿಯಿಂದ ತನ್ನನ್ನು ರಕ್ಷಿಸು ನೀನು!!
ನಿನಗೆ ನನ್ನ ಆಣೆ....

!!ಜೀವನದ ಹಾದಿ
ವಿಚಿತ್ರವಾಗಿದೆ
ಇದರಲ್ಲಿ ಹೀಗೆ ನಡೆಯಲು ಕಲಿದುಕೊಳ್ಳು
ಇದರಲ್ಲಿಯೇ
ನಿನ್ನ ಒಳಿತಿದೆ
ಯಾರನ್ನಾದರೂ ತನ್ನ ಜೊತೆಗಾರ ಮಾಡು ನೀನು
ಕೇಳಿ ಹೃದಯದ ಮಾತನ್ನು ಹೀಗೆ ನಗದಿರು ನೀನು!!
ನಿನಗೆ ನನ್ನ ಆಣೆ....

ಮೂಲ : ಶಕೀಲ್ ಬದಾಯುನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು/ಸಂಗೀತ : ಹೇಮಂತ್ ಕುಮಾರ್
ಚಿತ್ರ : ಬೀಸ್ ಸಾಲ್ ಬಾದ್

Bekarar karke hume yu naa jayiye, aapko hamari kasam laut aayiye - (2)

 Dekhiye woh kalee kalee badliya, julf kee ghata churana le kahee
 Chori chori aake shokh bijliya, aapki ada churana le kahee
 Yu kadam akele naa aage badhayiye, aapko humari kasam laut aayiye
 Bekarar karke.........

 Dekhiye gulab kee woh daliya, badhke chum le naa aap ke kadam - (2)
 Khoye khoye bhanwre bhee hain bag me, koyee aapko bana naa le sanam
 Behki behki najaro se khud ko bachaiye
 Bekarar karke.........

 Jindagi ke raste ajib hain, inn me iss tarah chalana kijiye
 Khair hai isee me aapki hujur, apna koyee sathi dhund lijiye
 Sunke dil kee bat yu naa muskuraiye, aapko humari kasam laut aayiye
 Bekarar karke.........
http://www.youtube.com/watch?v=L3PnsBniFNM


Tuesday, September 2, 2014

ನೀಲ ನೀಲ ಅಂಬರದಲಿ

ನೀಲ ನೀಲ ಅಂಬರದಲಿ
ಚಂದಿರ ಬಂದಾಗಲೇ
ಪ್ರೀತಿಯ ಆಗುತ್ತದೆ ಸುರಿಮಳೆ
ನನ್ನಿಂದ ಮಾಡುತ್ತದೆ ಕೀಟಲೆ

ಹೀಗೆ ಸಂಗಾತಿ
ಯಾರೊಂದಿದ್ದರೆ
ಹೀಗೆ ಪ್ರೇಮಿ
ಯಾರೊಂದಿದ್ದರೆ
ಮನಸ್ಸ ದಾಹ ತಣಿಸಿ ಹೋದರೆ

ಎತ್ತರ ಎತ್ತರ ಪರ್ವತ
ಚುಂಬಿಸಿದಾಗ ಅಂಬರವನ್ನು
ದಾಹದಲ್ಲಿದ್ದ ಅಂಬರ
ಚುಂಬಿಸುವಾಗ ಸಾಗರವನ್ನು
ಪ್ರೀತಿಯನ್ನು ದೃಡಗೊಳಿಸಲು
ಬಾಹುಗಳಲ್ಲಿ ನೆಲೆಸಲು
ಮನಸ್ಸು ನನ್ನ ಹಾತೊರೆಯುತ್ತದೆ
ಯಾರಾದರು ಬಂದರೆ
ಹೀಗೆ ಸಂಗಾತಿ...

ತಂಪು ತಂಪು ಹೊಯ್ಗಾಳಿ
ಕೂದಲನ್ನು ಮುಟ್ಟಿದಾಗ
ಬೇಗೆಯ ಕಿರಣಗಳು
ಗಲ್ಲವನ್ನು ಸ್ಪರ್ಶಿಸಿದಾಗ
ಉಸಿರ ಬೆಚ್ಚನೆಯನ್ನು
ಕೈಯ ಮೃದುತ್ವವನ್ನು
ಮನಸ್ಸು ನನ್ನ ಹಂಬಲಿಸುತ್ತದೆ
ಯಾರಾದರು ಸ್ಪರ್ಶಿಸಿ ಹೋದರೆ
ಹೀಗೆ ಸಂಗಾತಿ...

ತಣ್ಣನೆಯ ಮಳೆ
ಹನಿಗಳ ಬಾಣ ಬಿಡುತ್ತದೆ
ಸಪ್ತವರ್ಣ ಮಳೆಯಲ್ಲಿ
ತನುಮನ ನೆನೆದಾಗ
ಪ್ರೀತಿಯಲಿ ಮೀಯಲು
ಪ್ರೀತಿಯಲಿ ಮುಳುಗಲು
ಹೃದಯ ಚಡಪಡಿಸುತ್ತದೆ
ಕನಸು ನಿರ್ಮಿಸುತ್ತದೆ
ಹೀಗೆ ಸಂಗಾತಿ...

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಕಲಾಕಾರ್

नीले नीले अंबर पर चाँद जब आये, प्यार बरसाये, हम को तरसाये
ऐसा कोई साथी हो, ऐसा कोई प्रेमी हो, प्यास दिल की बुझा जाये

उँचे उँचे परबत जब चूमते हैं अंबर को, प्यासा प्यासा अंबर जब चूमता हैं सागर को
प्यार से कसने को, बाहों में बसने को, दिल मेरा ललचाये, कोई तो आ जाये
ऐसा कोई साथी हो, ऐसा कोई प्रेमी हो, प्यास दिल की बुझा जाये

ठंडे ठंडे झोंके जब बालों को सहलाये, तपती तपती किरनें जब गालों को छू जाये
साँसों की गर्मी को, हाथों की नर्मी को, मेरा मन तरसाये, कोई तो छू जाये
ऐसा कोई साथी हो, ऐसा कोई प्रेमी हो, प्यास दिल की बुझा जाये

छम छम  करता सावन बूँदो के बान चलाये, सतरंगी बरसातों में जब तनमन भीगा जाये
प्यार में नहाने को, डूब ही जाने को, दिल मेरा तड़पाये, ख्वाब जगा जाये
ऐसा कोई साथी हो, ऐसा कोई प्रेमी हो, प्यास दिल की बुझा जाये
http://www.youtube.com/watch?v=ZUlDWcik6dg

ನೀ ಬಂದೆ ಬೆಳಕಾಯಿತು

ನೀ ಬಂದೆ ಬೆಳಕಾಯಿತು
ಇಲ್ಲದಿದ್ದರೆ ದೀಪದಿಂದ ಜ್ಯೋತಿ ಮರೆಯಾಗುತ್ತಿತ್ತು
ಬದುಕಲು ನಿನ್ನಿಂದಲೇ ಕಾರಣ ಸಿಕ್ಕಿತು
ತುಂಬಾ ಅನಾವಶ್ಯಕ ಜೀವನ ಸಾಗುತ್ತಿತ್ತು

ಎಲ್ಲಿಂದ ಹೊರಟಿದೆ ಅದೆಲ್ಲಿಗೆ
ಇದರ ಅರಿವಿರಲಿಲ್ಲ ಆದರೆ
ತಾಣ ಸಿಕ್ಕಿದಲ್ಲಿ
ನೀನೂ ಸಿಗುವೆ ಎಂದು ತಿಳಿದಿತ್ತು
ಅಂದರೆ ನನ್ನಲ್ಲಿ ನಿನ್ನ
ಬಯಕೆ ಬರುತ್ತಿತ್ತು
ನೀ ಬಂದೆ ಬೆಳಕಾಯಿತು...

ಹಗಲು ಮುಗಿಯಲಿಲ್ಲ
ರಾತ್ರಿ ಕವಿಯಲಿಲ್ಲ
ಇದೆಂತಹ ಪಯಣವೋ
ಕನಸ ದೀಪವನ್ನು
ಕಣ್ಣಲ್ಲಿ ತುಂಬಿ
ನಾನಲ್ಲೇ ಬರುತ್ತಿದ್ದೆ
ಅದೆಲ್ಲಿಂದ ನಿನ್ನ ಧ್ವನಿ ಬರುತ್ತಿತ್ತೋ
ನೀ ಬಂದೆ ಬೆಳಕಾಯಿತು...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್/ಲತಾ ಮಂಗೇಶ್ಕರ್
ಸಂಗೀತ : ಆರ್. ಡಿ. ಬರ್ಮನ್
ಚಿತ್ರ : ಆಂಧಿ

तुम आ गए हो, नूर आ गया है
नहीं तो चरागों से लौ जा रही थी
जीने की तुमसे, वजह मिल गयी है
बड़ी बेवजह जिन्दगी जा रही थी

कहाँ से चले, कहाँ के लिए
ये खबर नहीं थी मगर
कोई भी सिरा, जहाँ जा मिला
वही तुम मिलोगे
के हम तक तुम्हारी दुआ आ रही थी
तुम आ गए हो...

दिन डूबा नहीं, रात डूबी नहीं
जाने कैसा है सफ़र
ख़्वाबों के दीये, आँखों में लिए
वहीँ आ रहे थे
जहाँ से तुम्हारी सदा आ रही थी
तुम आ गए हो…
http://www.youtube.com/watch?v=bTCX_M-meHc

ನೀಲ ಗಗನದ ಅಡಿಯಲಿ

ನೀಲ ಗಗನದ ಅಡಿಯಲಿ
ಧರೆ ಮೆರೆಯುತ್ತಿದೆ ಪ್ರೀತಿಯಲಿ
ನೀಲ ಗಗನದ…

ಹೀಗೆಯೇ ಜಗದಲಿ
ರವಿಯ ಆಗಮನ
ಹೀಗೆಯೇ ನಿರ್ಗಮನ
ಸಂಧ್ಯೆಯಲಿ  
ನೀಲ ಗಗನದ…

ಇಬ್ಬನಿಯ ಮುತ್ತು ಮಾಲೆ
ಅಲಂಕೃತವಾಗಿದೆ ಪುಷ್ಪಗಳ ಮೇಲೆ
ಎರಡರ ಆಸೆಯೂ
ಫಲಿಸುತ್ತಿದೆ ಜೊತೆಯಲಿ
ನೀಲ ಗಗನದ…

ಸುನಮ್ಯ ಲತೆಗಳು
ಹೊಸ ಚೈತನ್ಯದಿ
ವೃಕ್ಷಗಳನ್ನು ಅಪ್ಪಿಕೊಂಡು
ಕುಣಿದಾಡುತ್ತಿದೆ ಮೋಜಿನಲಿ
ನೀಲ ಗಗನದ…

ಹೊಳೆಯ ನೀರು
ನದಿಯ ಜೊತೆ ಕೂಡಿ
ಸೇರಲೋಗುತ್ತಿದೆ
ಸಾಗರದಲಿ
ನೀಲ ಗಗನದ…

ಮೂಲ : ಸಾಹೀರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಹಮ್ರಾಜ್

हे...नीले गगन के तले
धरती का प्यार पले

हे...नीले गगन के तले
धरती का प्यार पले
ऐसे ही जग में आती हैं सुबहें
ऐसे ही शाम ढले
हे...नीले गगन के तले

शबनम के मोती, फूलों पे बिखरे
दोनों की आस फले, हे नीले...

बलखाती बेलें, मस्ती में खेलें
पेड़ों से मिलके गले, हे नीले...

नदियाँ का पानी दरिया से मिलके
सागर की और चले,

हे...नीले गगन के तले
धरती का प्यार पले
http://www.youtube.com/watch?v=pSE9QzQ-EKY

ಸಿದ್ಧಿದಾತ್ರಿ