Saturday, August 24, 2013

ಬೆಳ್ಳಿಯ ಗೋಡೆಯನ್ನು

!!ಬೆಳ್ಳಿಯ ಗೋಡೆಯನ್ನು ಮುರಿಯಲಿಲ್ಲ
ಮುರಿದರು ಪ್ರೀತಿ ತುಂಬಿದ ಹೃದಯವನ್ನು
ಒಂದು ಸಿರಿವಂತನ ಮಗಳು
ತೊರೆದಳು ಒಬ್ಬ ನಿರ್ಧನನನ್ನು!!

!!ಕಷ್ಟದಲಿ ನಿನ್ನ
ಜೊತೆಯಲ್ಲಿರುವೆಯೆಂದು
ನಿನ್ನೆ ತನಕ ಆಣೆ ಇಡುತ್ತಿದ್ದವಳು
ಇಂದು ತನ್ನ
ಸುಖಗೋಸ್ಕರ
ಒಬ್ಬ ಅಪರಿಚಿತನನ್ನು ವರಿಸಿದಳು
ಶಹನಾಯಿಯ ಧ್ವನಿಯಲಿ
ತೇಲಿ ಹೋದವು
ಪ್ರೇಮಿಯ ನೋವುಗಳು  
ಸಿರಿವಂತರು ಮರುಳನ ವೇದನೆಯಿಂದ
ಜೋಡಿಸಿದರು ಸಂಬಂಧವನ್ನು!!
ಒಂದು ಸಿರಿವಂತನ ಮಗಳು.....

!!ಅವರಿಗೆಲ್ಲ ಹೇಗೆ
ಅರ್ಥವಾಗುವುದು ಪ್ರೀತಿ
ಅವರಿಗೆಲ್ಲವೂ
ಬೆಳ್ಳಿ ಬಂಗಾರವಾಗಿದೆ
ಸಿರಿವಂತರ ಈ ಜಗದಲಿ
ಹೃದಯ ಒಂದು ಆಟಿಕೆಯಾಗಿದೆ
ಶತಮಾನದಿಂದಲೂ ಇದು
ಮುರಿಯುತ್ತಾ ಬಂದಿದೆ
ಹೃದಯದ ಇದೇ ದುಃಖವಾಗಿದೆ
ಮನಸಿದ್ದ ತನಕ ಹೃದಯದಿಂದ ಆಡಿದರು
ಮನಸ್ಸು ತುಂಬಿದ ನಂತರ ಮುರಿದರು ಹೃದಯವನ್ನು !!
ಒಂದು ಸಿರಿವಂತನ ಮಗಳು.....

ಮೂಲ : ಗುಲಶನ್ ಬಾವರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ವಿಶ್ವಾಸ್

Chandi Ki Deewar Na Todi
Pyar Bhara Dil Tod Diya
Ek Dhanwan Ki Beti Ne
Nirdhan Ka Daman Chhodh Diya
Chandi Ki Deewar...

Kal Tak Jisne Kasme Khai
Dukh Mein Saath Nibhane Ki
Aaj Woh Apne Sukh Ki Khatir
Ho Gayi Ek Begaane Ki
Shehnaiyon Ki Goonj Mein Dab Ke
Reh Gayi Aah Deewane Ki
Dhanwano Ne Deewane Ka
Gam Se Rishta Jod Diya
Ek Dhanwan Ki Beti Ne...

Woh Kya Samjhe Pyar Ko Jinka
Sab Kuch Chandi Sona Hai
Dhanwano Ki Is Duniya Mein
Dil To Ek Khilon Hai
Sadiyon Se Hi Toot-ta Aaya
Dil Ka Bas Yeh Rona Hai
Jab Tak Chaha Dil Se Khela
Aur Jab Chaha Tod Diya
Ek Dhanwan Ki Beti Ne ...
www.youtube.com/watch?v=dbv7C59SgX4

Wednesday, August 21, 2013

ಹೃದಯದ ಬಯಕೆ


!!ಹೃದಯದ ಬಯಕೆ
ಕಣ್ಣೀರಲ್ಲಿ ಹರಿದೋಗಿದೆ-೩
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿಯೇ ಉಳಿದೆ !!
ಹೃದಯದ ಬಯಕೆ ....

!!ಜೀವನ ಬರಿ
ತೃಷೆಯಾಗಿ ಉಳಿದಿದೆ -೨
ಪ್ರೀತಿಯ ಕಥೆಗಳೆಲ್ಲ
ಅಪೂರ್ಣ ಉಳಿದಿದೆ-೨
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿ ಉಳಿದೆ !!
ಹೃದಯದ ಬಯಕೆ ....

!!ಬಹುಶಃ ಇದು ಅವರ
ಕೊನೆಯ ಇರಬೇಕು ಯಾತನೆ -೨
ಪ್ರತಿ ಯಾತನೆಯನ್ನು
ನಾನಿದೇ ಯೋಚಿಸಿ ಸಹಿಸಿದೆ-೨
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿ ಉಳಿದೆ !
ಹೃದಯದ ಬಯಕೆ ....

!!ಸ್ವತಃ ತನ್ನನ್ನು ಸಹ
ನಾನು ಮುಗಿಸಿದೆ ಆದರೆ -೨
ಬಳಿಯಲ್ಲಿದ್ದ
ದೂರತನ ಉಳಿದಿದೆ-೨
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿ ಉಳಿದೆ!!
ಹೃದಯದ ಬಯಕೆ ....

ಮೂಲ : ಹಸನ್ ಕಮಾಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಸಲ್ಮಾ ಆಗಾ
ಸಂಗೀತ : ರವಿ
ಚಿತ್ರ : ನಿಕಾಹ್


Dil ke armaan aansuon mein beh gaye
Dil ke armaan aansuon mein beh gaye
Dil ke armaan aansuon mein beh gaye
Hum wafa karke bhi tanha reh gaye
Dil ke armaan aansuon mein beh gaye

Zindagi ek pyaas bankar reh gayi
Zindagi ek pyaas bankar reh gayi
Pyar ke kisse adhoore reh gaye
Pyar ke kisse adhoore reh gaye
Hum wafa karke bhi tanha reh gaye
Dil ke armaan aansuon mein beh gaye

Shayad unka aakhri ho ye sitam
Shayad unka aakhri ho ye sitam
Har sitam ye soch kar hum seh gaye
Har sitam ye soch kar hum seh gaye
Hum wafa karke bhi tanha reh gaye
Dil ke armaan aansuon mein beh gaye

Khudko bhi humne mita daala magar
Khudko bhi humne mita daala magar
Faasle jo darmiyan the reh gaye
Faasle jo darmiyan the reh gaye
Hum wafa karke bhi tanha reh gaye
Dil ke armaan aansuon mein beh gaye
Dil ke armaan aansuon mein beh gaye
http://www.youtube.com/watch?v=phm2Tk_AkbY

Tuesday, August 20, 2013

ಮೆಲ್ಲಮೆಲ್ಲನೆ ಹಗಲು ರಾತ್ರಿ


!!ಮೆಲ್ಲಮೆಲ್ಲನೆ ಹಗಲು ರಾತ್ರಿ
ಕಣ್ಣೀರಿಡುವುದು ನೆನಪಿದೆ
ನನಗೆ ಈ ತನಕ ಪ್ರೀತಿಯ
ಆ ಸಮಯ ನೆನಪಿದೆ!!
ಮೆಲ್ಲಮೆಲ್ಲನೆ ....

!!ನಿನ್ನಿಂದ ಭೇಟಿ ಆದಾಗ
ಆ ಅತಿ ಉತ್ಸಾಹ ನನ್ನ
ಮತ್ತೆ ನೀನು ನಾಚಿ ಬೆರಳನ್ನು
ಕಚ್ಚುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಗುಟ್ಟಾಗಿ ಬಂದು ನೀನು
ನನ್ನನ್ನು ಭೇಟಿಯಾಗಿದ್ದ ಆ ಸ್ಥಳ
ಕಾಲ ಕಳೆಯಿತು ಆದರೂ
ಈ  ತನಕ ಆ ಸ್ಥಾನ ನೆನಪಿದೆ!!
ಮೆಲ್ಲಮೆಲ್ಲನೆ ....

!!ಎಳೆದು ನನ್ನ
ಪರದೆಯ ಕೋನ ಹಠಾತ್ತನೆ
ಮತ್ತೆ ಸೆರಗಿನಲ್ಲಿ
ನಿನ್ನ ಮುಖ ಅಡಗಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ....

!!ನಿನ್ನನ್ನು ಏಕಾಂತದಲಿ ಕಂಡರೆ
ಲಜ್ಜೆಯಿಂದ ನಿನ್ನ ಮುಖ ಕೆಂಪೇರಿ
ಮನಸ್ಸ ಸ್ಥಿತಿಯನ್ನು
ಮಾತು ಮಾತಲ್ಲಿ ತಿಳಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಅಗಲಿಕೆಯ ಉಲ್ಲೇಖ
ಎಂದಾದರೂ ಬಂದರೆ ಪ್ರೀತಿಯ ರಾತ್ರಿಯಲಿ
ಅದು ನಿನ್ನ ಅತ್ತು ಅತ್ತು ನನ್ನನ್ನೂ 
ಅಳುವಂತೆ ಮಾಡುವುದು ನೆನಪಿದೆ!!
ಮೆಲ್ಲಮೆಲ್ಲನೆ ...

!!ಮಧ್ಯಾಹ್ನದ ಬಿಸಿಲಲ್ಲಿ
ನನ್ನನ್ನು ಕರೆಯಲು
ಅದು ನಿನ್ನ ಅಂಗಳದಲ್ಲಿ
ಬರಿ ಕಾಲು ಬರುವುದು ನೆನಪಿದೆ !!
ಮೆಲ್ಲಮೆಲ್ಲನೆ ....

!!ಅನ್ಯರ ಕಣ್ಣು ತಪ್ಪಿಸಿ
ಎಲ್ಲರ ಇಚ್ಚೆಯ ವಿರುದ್ಧ
ಅದು ನಿನ್ನ ರಾತ್ರಿಯಲ್ಲಿ
ಗುಟ್ಟಾಗಿ ಅಡಗಿ ಬರುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಸಾವಿರಾರೂ ತಳಮಳ
ಹಾಗೂ ಲಕ್ಷಗಟ್ಟಲೆ ಬಯಕೆಯೊಂದಿಗೆ
ನಿನಗೆ ಮೊಟ್ಟ ಮೊದಲು
ನನ್ನ ಹೃದಯ ನೀಡಿದ್ದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಅನಾಸಕ್ತಿಯಿಂದ
ನನ್ನ ಹೃದಯದ ಮಾತನ್ನು ಕೇಳಿ
ಅದು ನಿನ್ನ ಕೈಯ ಬಳೆಗಳನ್ನು
ತಿರುಗಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಬಿಟ್ಟು ಹೋಗುವಾಗ
ವಿದಾಯ ಹೇಳುವಾಗ
ಆ ನಿನ್ನ ಒಣಗಿದ ತುಟಿಗಳ
ಕಂಪಿಸುವುದು ನೆನಪಿದೆ !!
ಮೆಲ್ಲಮೆಲ್ಲನೆ ....

ಮೂಲ : ಹಸನ್ ಕಮಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಗುಲಾಮ್  ಅಲಿ
ಸಂಗೀತ : ರವಿ
ಚಿತ್ರ :ನಿಕಾಹ್

चुपके चुपके रात दिन आँसू बहाना याद है
हम को अब तक आशिकी का वो ज़माना याद है

तुझ से मिलते ही वो कुछ बेबाक हो जाना मेरा
और तेरा दांतों में वो उंगली दबाना याद है

चोरी-चोरी हम से तुम आ कर मिले थे जिस जगह
मुद्दतें गुजरीं पर अब तक वो ठिकाना याद है

खैंच लेना वो मेरा परदे का कोना दफ्फातन
और दुपट्टे से तेरा वो मुंह छुपाना याद है

तुझ को जब तनहा कभी पाना तो अज राह-ऐ-लिहाज़
हाल-ऐ-दिल बातों ही बातों में जताना याद है

आ गया गर वस्ल की शब् भी कहीं ज़िक्र-ए-फिराक
वो तेरा रो-रो के भी मुझको रुलाना याद है

दोपहर की धुप में मेरे बुलाने के लिए
वो तेरा कोठे पे नंगे पांव आना याद है

गैर की नज़रों से बचकर सब की मर्ज़ी के ख़िलाफ़
वो तेरा चोरी छिपे रातों को आना याद है

बा हजारां इस्तिराब-ओ-सद-हजारां इश्तियाक
तुझसे वो पहले पहल दिल का लगाना याद है

बेरुखी के साथ सुनना दर्द-ऐ-दिल की दास्तां
वो कलाई में तेरा कंगन घुमाना याद है

वक्त-ए-रुखसत अलविदा का लफ्ज़ कहने के लिए
वो तेरे सूखे लबों का थर-थराना याद है
www.youtube.com/watch?v=GWd7QXL3I7M 

Sunday, August 18, 2013

Kabir Doha (ಕಬೀರ ದೋಹ )

ಕಬೀರ ದೋಹ
ಮಹಿಳಾ ಪುರುಷರು ಎಲ್ಲರೂ ಕೇಳಿ, ಗುರುಗಳ ಭೋಧನೆ ಇದು!
ವಿಷ ಫಲ ಬೆಳೆಯುವುದು ಅನೇಕ, ನೋಡಬೇಡಿ ಯಾರೂ ಸವಿದು!!
ಅನುವಾದ by ಹರೀಶ್ ಶೆಟ್ಟಿ, ಶಿರ್ವ
कबीर दोहा
नारी पुरुष सब ही सुनो, यह सतगुरु की साख |
विष फल फले अनेक है, मत देखो कोई चाख ||

Thursday, August 15, 2013

ಹಾಡು ಹಾಡುತ ಸಾಗು

!!ಹಾಡು ಹಾಡುತ ಸಾಗು
ಓ ಸಂಗಾತಿ ಗುನುಗುನಿಸುತ ಸಾಗು
ಓ ಗೆಳೆಯನೆ.....
ನಗು ನಗುತ ಕಳೆದೋಗುವುದು
ಪ್ರತಿ ಕ್ಷಣ ಪ್ರತಿ ಗಳಿಗೆಯೂ!!
ಹಾಡು ಹಾಡುತ ಸಾಗು ....

!!ವಿಶಾಲ ನೀಲ ಅಂಬರ
ಹಸಿರು ಹಸಿರು ಭೂಮಿಯೆಲ್ಲ
ಎಷ್ಟು ನೋಡಿದ್ದರೂ
ಮನಸ್ಸಿಗೆ ತೃಪ್ತಿಯೇ ಇಲ್ಲ
ಸುಂದರ ಸುಂದರ
ಪ್ರತಿಯೊಂದು ರಚನೆಗಳು
ಹೂವು ಹೇಳುತ್ತಿದೆ
ಮುಳ್ಳಳ್ಲಿದ್ದರೂ ಕಲಿ ನೀ ನಗಲು
ಓ ಪಯಣಿಗನೆ....
ಬಾಡದಿರಲಿ ಎಂದೂ ನಿನ್ನ ಮನಸ್ಸು ಮೃದು!!
ಹಾಡು ಹಾಡುತ ಸಾಗು....

!!ಬೆಳ್ಳಿಯಂತೆ ಹೊಳಪುವುದು
ಈ ನದಿಯ ಜಲ
ಜಲದ ಪ್ರತಿಯೊಂದು ಹನಿ
ಕೊಡುವುದು ಜೀವನ ಫಲ
ಅಂಬರದಿಂದ ಸುರಿದು
ಭೂಮಿಯೊಂದಿಗೆ ಮಿಲನವಾಗುವುದು
ಜಲದ ವಿನಾಃ ಅಣ್ಣ
ಏನೂ ಕೆಲಸ ಆಗದು
ಓ ಮೇಘವೇ....
ನೀರಿಲ್ಲದಿದ್ದರೆ ಈ ಜಗ ಹೋಗುತ್ತಿತ್ತು  ಉರಿದು!!
ಹಾಡು ಹಾಡುತ ಸಾಗು ....

!!ಎಲ್ಲಿಂದ ನೀ ಬಂದೆ
ಎಲ್ಲಿಗೆ ಹೋಗಲಿದೆ ನಿನಗೆ
ಸದಾ ಸಂತೋಷವೇ
ಈ ಬಗ್ಗೆ ಅರಿವಿಲ್ಲದವನಿಗೆ
ಸರ ಸರ ಗಾಳಿಯು
ಮಾಡುತ್ತಿದೆ ಸದ್ದು
ಹಾರುವ ಪಕ್ಷಿಗಳು
ಎಳೆಯುತ್ತಿದೆ ತುಡಿತ ಮನಸ್ಸಿನದ್ದು
ಓ ಹಕ್ಕಿಗಳೇ.....
ಹಕ್ಕಿಗಳ ರೆಕ್ಕೆ ಪಡೆದು ಕಾಣೆ ನೀನಾಗು !!
ಹಾಡು ಹಾಡುತ ಸಾಗು ....

ಮೂಲ/ಸಂಗೀತ : ರವಿಂದ್ರ ಜೈನ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಜಸಪಾಲ್  ಸಿಂಗ್
ಚಿತ್ರ : ಗೀತ ಗಾತಾ ಚಲ್

Geet Gaata Chal O Saathi Gungunaata Chal
O Bandhu Re
Hanste Hansate Beete Har Ghadi Har Pal
Geet Gaata Chal...
Khula Khula Gagan Yeh Hari Bhari Dharti
Jitna Bhi Dekho Tabiyat Nahin Bharti
Sunder Se Sunder Har Ek Rachna
Phool Kahen Kaanton Mein Bhi Seekho Hansna
O Raahi Re
Kumhala Na Jaye Kahin Man Tera Komal
Geet Gaata Chal...

Chandi Sa Chamakta Yeh Nadiya Ka Pani
Pani Ki Har Ek Boond Deti Zindagani
Ambar Se Barse Zameen Se Mile
Neer Ke Bina To Bhaiya Kaam Na Chale
O Megha Re
Jal Jo Na Hota To Yeh Jag Jaata Jal
Geet Gaata Chal...

Kahan Se Tu Aaya Aur Kahan Tujhe Jaana Hai
Khush Hai Wahi Jo Is Baat Se Begaana Hai
Chal Chal Chalti Hawayen Karen Shor
Udte Pakheru Kheenche Manva Ki Dor
O Panchi Re
Panchiyon Ke Pankh Le Ke Ho Ja Tu Ojhal
Geet Gaata Chal...

Monday, August 12, 2013

Kabir Doha (ಕಬೀರ ದೋಹ )

ಕಬೀರ ದೋಹ
ನನ್ನ ನನ್ನಲ್ಲಿ ಏನಿಲ್ಲ ,ಇದ್ದದ್ದೆಲ್ಲ ನಿನ್ನ!
ನಿನ್ನ ನಿನಗೆ ನೀಡುವಾಗ, ಏಕೆ ಸಂಕೋಚ ಮನದಲಿ ನನ್ನ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
मेरा मुझ में कुछ नहीं, जो कुछ है सो तोह |
तेरा तुझको सौपता, क्या लागे है मोह ||

Tuesday, July 9, 2013

ಹಾತೊರೆದು ನನ್ನನ್ನು

!!ಹಾತೊರೆದು ನನ್ನನ್ನು
ಹೀಗೆ ಹೋಗಬೇಡ ನೀನು
ನಿನಗೆ ನನ್ನಾಣೆ
ಹಿಂತಿರುಗಿ ಬಾ ನೀನು!!

!!ನೋಡು ಆ
ಕರಿ ಕರಿ ಮೋಡಗಳನ್ನು
ಕದ್ದುಕೊಳ್ಳದಿರಲಿ
ಕೇಶದ ಮುಗಿಲನ್ನು
ಮೆಲ್ಲ ಮೆಲ್ಲನೆ ಬಂದು
ತುಂಟ ಮಿಂಚುಗಳು
ಕದ್ದುಕೊಳ್ಳದಿರಲಿ
ನಿನ್ನ ನಿಖರತೆಯನ್ನು
ಹೀಗೆ ಮುಂದೆ ಹೆಜ್ಜೆಯನ್ನು
ಇಡದಿರು ನೀನು!!
ನಿನಗೆ ನನ್ನಾಣೆ...

!!ನೋಡು ಆ
ಗುಲಾಬಿಯ ಶಾಖೆಗಳನ್ನು
ಚುಂಬಿಸದಿರಲಿ ಮುಂದೆ ಬಂದು
ನಿನ್ನ ಹೆಜ್ಜೆಗಳನ್ನು
ಸೋತು ಹೋದ
ಭ್ರಮರಗಳಿವೆ ಉದ್ಯಾನದಲಿ
ಯಾರೋ ಬಂದು ತನ್ನ ಪ್ರೇಯಸಿ
ಮಾಡದಿರಲಿ ನಿನ್ನನ್ನು
ಅಮಲಲ್ಲಿದ್ದ ದೃಷ್ಟಿಯಿಂದ
ತನ್ನನ್ನು ರಕ್ಷಿಸು ನೀನು!!
ನಿನಗೆ ನನ್ನಾಣೆ....

!!ಜೀವನದ ಹಾದಿ
ವಿಚಿತ್ರವಾಗಿದೆ
ಇದರಲ್ಲಿ ಹೀಗೆ ನಡೆಯಲು
ಕಲಿತುಕೊಳ್ಳು
ಇದರಲ್ಲಿಯೇ ನಿನ್ನ ಒಳಿತಿದೆ
ಯಾರನ್ನೂ ತನ್ನ
ಜೊತೆಗಾರ ಮಾಡು ನೀನು
ಕೇಳಿ ಹೃದಯದ ಮಾತನ್ನು
ಹೀಗೆ ನಗದಿರು ನೀನು!!
ನಿನಗೆ ನನ್ನಾಣೆ...

ಮೂಲ : ಶಕೀಲ್ ಬದಾಯನುವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು/ಸಂಗೀತ : ಹೇಮಂತ್ ಕುಮಾರ್
ಚಿತ್ರ : ಬೀಸ್ ಸಾಲ್ ಬಾದ್

Bekarar karke hume yu naa jayiye, aapko hamari kasam laut aayiye - (2)

 Dekhiye woh kalee kalee badliya, julf kee ghata churana le kahee
 Chori chori aake shokh bijliya, aapki ada churana le kahee
 Yu kadam akele naa aage badhayiye, aapko humari kasam laut aayiye
 Bekarar karke.........

 Dekhiye gulab kee woh daliya, badhke chum le naa aap ke kadam - (2)
 Khoye khoye bhanwre bhee hain bag me, koyee aapko bana naa le sanam
 Behki behki najaro se khud ko bachaiye
 Bekarar karke.........

 Jindagi ke raste ajib hain, inn me iss tarah chalana kijiye
 Khair hai isee me aapki hujur, apna koyee sathi dhund lijiye
 Sunke dil kee bat yu naa muskuraiye, aapko humari kasam laut aayiye
 Bekarar karke.........
http://www.youtube.com/watch?v=K40cgUxtErA


ಸಿದ್ಧಿದಾತ್ರಿ