Saturday, February 16, 2019

ಕೋಟಿ ಕೋಟಿ ನಮನ

ರಜೆಯಲ್ಲಿ ಮನೆ ಹೋಗಿ
ತಾಯಿಯ ಮಡಿಲಲ್ಲಿ
ಮಲಗುವ ಆಸೆ ಇತ್ತು
ಅವನಿಗೆ
ಮಾತೃಭೂಮಿಯ
ಮಡಿಲಲ್ಲಿ ಮಲಗಿಬಿಟ್ಟ,
ತಾಯಿಯ ಸೆರಗು
ಕಣ್ಣೀರಿಂದ ಒದ್ದೆ ಒದ್ದೆ,
ಅವಳ ಕೈಯಲ್ಲಿ
ಮಗ ಸೈನಿಕನ
ಪಾರ್ಥಿವ ಶರೀರದ ಮುದ್ದೆ,
ತಾಯಿಯ ಪಾಲಿಗೆ
ಅವನ ಶರೀರವೂ ಬರಲಿಲ್ಲ ಪೂರ್ಣ,
ಅಂತಹ ಅನೇಕ ದೇಶದ ವೀರರಿಗೆ ಕೋಟಿ ಕೋಟಿ ನಮನ🙏🙏🙏
ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...