ಚಿತ್ರ ಕೃಪೆ : ಗೂಗಲ್
"ಅಮ್ಮ"ಹಿಟ್ಟಿನ ಶುದ್ಧ ರೊಟ್ಟಿಯ ಮೇಲೆ, ಹುಳಿ ಚಟ್ನಿಯ ಹಾಗೆ ಅಮ್ಮ
ನೆನಪಾಗುತ್ತದೆ ಆ ಒಲೆ, ಪಾತ್ರೆ, ಚಿಮ್ಮಟ, ಊದುಕೊಳವೆಯ ಹಾಗೆ ಅಮ್ಮ
ಬಿದಿರಿನ ಮಂಚದ ಮೇಲೆ, ಪ್ರತಿಯೊಂದು ಧ್ವನಿಗೆ ಕಿವಿ ಕೊಟ್ಟು ಕೇಳುವ
ಅರ್ಧ ನಿದ್ರೆಯಲಿ ಅರ್ಧ ಎಚ್ಚರ, ದಣಿದ ಮಧ್ಯಾಹ್ನದ ಹಾಗೆ ಅಮ್ಮ
ಹಕ್ಕಿಗಳ ಕಳರವದಲಿ ಪ್ರತಿಧ್ವನಿಸುವ ರಾಧೆ ಮೋಹನ ಅಲಿ ಅಲಿ
ಕೋಳಿಯ ಕೂಗಿಗೆದ್ದು, ಮನೆಯ ಬಾಗಿಲ ಚಿಲಕದ ಹಾಗೆ ಅಮ್ಮ
ಮಡದಿ,ಮಗಳು,ಸೋದರಿ,ನೆರೆಯವಳು, ಸ್ವಲ್ಪ ಸ್ವಲ್ಪ ಎಲ್ಲರಲ್ಲೂ
ಇಡೀ ದಿನ ಒಂದು ಹಗ್ಗದ ಮೇಲೆ, ನಡೆಯುವ ಪ್ರಬುದ್ಧ ಕಲಾವಿದೆಯಂತೆ ಅಮ್ಮ
ಹಂಚಿಕೊಂಡು ತನ್ನ ಚಹರೆ, ಹಣೆ, ಕಣ್ಣನ್ನು ಅದೆಲ್ಲಿಗೆ ಹೋಗಿ ಬಿಟ್ಟಳು
ಹರಿದು ಹೋದ ಹಳೆ ಒಂದು ಚಿತ್ರ ಪುಸ್ತಕದಲ್ಲಿ ಚಂಚಲ ಹುಡುಗಿಯ ಹಾಗೆ ಅಮ್ಮ
ಮೂಲ : ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
" माँ "
बेसन की सोंधी रोटी पर, खट्टी चटनी जैसी माँ
याद आती है चौका, बासन, चिमटा, फूंकनी जैसी माँ
बांस की खुर्री खाट के ऊपर, हर आहट पर कान धरे
आधी सोई आधी जागी, थकी दोपहरी जैसी माँ
चिड़ियों के चहकार में गूंजे, राधा - मोहन अली- अली
मुर्गी की आवाज़ से खुलती, घर की कुण्डी जैसी माँ
बीवी, बेटी, बहन, पड़ोसन, थोड़ी थोड़ी सब में
दिन भर इक रस्सी के ऊपर, चलती नटनी जैसी माँ
बाँट के अपना चेहरा, माथा, आँखें, जाने कहाँ गयी
फटे पुराने इक एलबम, में चंचल लड़की जैसी माँ...
निदा फ़ाज़ली