Tuesday, March 31, 2015

ನಗು ನಗುತ್ತಲೇ ಈ ಪಯಣ ಕಳೆಯಲಿ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ನಗು ನಗುತ್ತಲೇ ಈ ಪಯಣ ಕಳೆಯಲಿ
ಜೀವನ ಹೀಗೆಯೇ ಸಾಗುತ್ತಿರಲಿ
ಸುಖ ಸಿಗಲಿ ಅಥವಾ ದುಃಖವೇ ಸಿಗಲಿ
ಬದಲಾಗುವುದಿಲ್ಲ ನಾವಿಲ್ಲಿ
ಜಗತ್ತು ಬೇಕಾದರೆ ಬದಲಾಗುತ್ತಿರಲಿ!!
ನಗು ನಗುತ್ತಲೇ...

!!ಕಿತ್ತೋದರೂ ಹೂವು ನಗುತ್ತಿರುತ್ತದೆ
ಉರಿಯುವ ಶಹರದಲ್ಲಿಯೂ ಜಲಪಾತ ಸಿಗುತ್ತದೆ
ಬಿರುಗಾಳಿ ಬಂದರೂ ದೀಪ ಅರಳುತ್ತಿರುತ್ತದೆ!!
ನಗು ನಗುತ್ತಲೇ...

!!ಒಪ್ಪಿದೆ ತೆರಳಿದವರು ಹಿಂತಿರುಗಿ ಎಲ್ಲಿ ಬರುತ್ತಾರೆ
ಮುಳುಗಿ ಸೂರ್ಯ ತಾರೆ ಪುನಃ ಜಗ ಬೆಳಗಿಸುತ್ತಾರೆ
ಪ್ರೀತಿ ನಿಜವಾಗಿದ್ದರೆ ಅಗಲಿದವರೂ ಪುನಃ ಸಿಗುತ್ತಾರೆ!!
ನಗು ನಗುತ್ತಲೇ...

ಮೂಲ : ಇಂದೀವರ್
ಅನುವಾದ  : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸಾಧನ ಸರ್ಗಮ್, ಸೊನಾಲಿ ಬಟ್ವಾಡೆಕರ್
ಸಂಗೀತ : ರಾಜೇಶ್ ರೋಶನ್
ಚಿತ್ರ : ಖೂನ್ ಭರಿ ಮಾಂಗ್

hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe
hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe

tode jane par bhi phul hansa karte hai
tapte shehrao me jharne mila karte hai
tufa aane par bhi dip jala karte hai
hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe

mana jane wale lot ke kab aate hai
dub ke suraj tare phir se nikal aate hai
pyar agar sacha hai to bichhade mil jate hai
hanste hanste kat jaye raste,
zindagi yuhi chalti rahe
khushi mile ya gham,
badlenge na hum
duniya chahe badalti rahe
https://www.youtube.com/watch?v=59iyoVvevmU

Monday, March 30, 2015

ಬದಲಾದರೂ ಮಾಲಿ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಬದಲಾದರೂ ಮಾಲಿ
ಹೂದೋಟ ಆಗುವುದಿಲ್ಲ ಖಾಲಿ
ವಸಂತ ಮತ್ತೊಮ್ಮೆ ಆಗಮಿಸುತ್ತದೆ
ವಸಂತ ಮತ್ತೊಮ್ಮೆ ಆಗಮಿಸುವುದು!!
ಬದಲಾದರೂ ಮಾಲಿ...

!!ಆಯಾಸ ಎಂತಹ, ದಣಿವು ಎಂತಹ
ತನ್ನದೇ ಗುಂಗಿನಲಿ ನಡೆ ನೀನಯ್ಯ
ಮುಳ್ಳಲಿ ಅರಳಿಸು ಹೂವನ್ನು
ಅಲಂಕರಿಸು ತನ್ನ ಏಕಾಂಗಿತನವನ್ನು
ಗಾಳಿಯು ತಾಪವನ್ನು ನೀಡಿದರೇನು
ಪರಿಸರ ವಿಷವನ್ನು ಸುರಿಸಿದರೇನು!!
ವಸಂತ ಮತ್ತೊಮ್ಮೆ...

!!ಕತ್ತಲೆಯೇನು, ಬೆಳಕೇನು
ಇದೂ ನಮ್ಮದಲ್ಲ, ಅದೂ ನಮ್ಮದಲ್ಲ
ನಿನ್ನ ಕೆಲಸಕ್ಕೆ ಬರುವುದು
ನಿನ್ನ ಬಯಕೆ, ನಿನ್ನ ಕನಸೇ ಕೇವಲ
ಜಗ ನಿನ್ನನ್ನು ನಿಂದಿಸಿದರೇನು
ವಾತಾವರಣ ಹಾದಿಯನ್ನು ತಡೆದರೇನು!!
ವಸಂತ ಮತ್ತೊಮ್ಮೆ...

ಮೂಲ :ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ಓ . ಪಿ . ನಯ್ಯರ್
ಚಿತ್ರ : ಬಹಾರೆ ಫಿರ್ ಭಿ ಆಯೆಗಿ

badal jaye agar mali chaman hota nahi khali
bahare phir bhi ati hai bahare phir bhi ayegi
badal jaye agar mali chaman hota nahi khali

thakan kaisi ghutan kaisi chal apani dhun me diwane
thakan kaisi ghutan kaisi chal apani dhun me diwane
khila le phul kanto me saja le apane virane
khila le phul kanto me saja le apane virane
hawae ag bhadakae fizae zahar barasae
bahare phir bhi ati hai bahare phir bhi ayegi
badal jaye agar mali chaman hota nahi khali

adhere kya ujale kya na ye apane na wo apane
adhere kya ujale kya na ye apane na wo apane
tere kam ayege pyare tere arama tere sapane
tere kam ayege pyare tere arama tere sapane
zamana tujhase ho baraham na aye rah par mausam
bahare phir bhi ati hai bahare phir bhi ayegi
badal jaye agar mali chaman hota nahi khali
bahare phir bhi ati hai bahare phir bhi ayegi
badal jaye agar mali chaman hota nahi khali

https://www.youtube.com/watch?v=MwpaXBguDlw

Monday, March 23, 2015

ತ್ಯಾಗದ ಬಯಕೆ ಈಗ ನಮ್ಮ ಮನಸ್ಸಲ್ಲಿದೆ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಇಂದು ಶಹೀದ್ ದಿವಸ,  ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮರೆಯಲಾಗದ ಹೆಸರು ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗು ದೇಶಕ್ಕಾಗಿ ಹುತಾತ್ಮರಾದ ಅನೇಕ ವೀರರಿಗೆ ಕೋಟಿ ಕೋಟಿ ನಮನ.
------------------------------------------------------------------------------


ಒಬ್ಬರಿಂದ ಯಾಕೆ ಇನ್ನೊಬ್ಬರು ಮಾತಾಡುವುದಿಲ್ಲ
ಯಾರಿಗೂ ನೋಡಿದರೂ ಅವನು ಮೌನವಾಗಿದ್ದಾನೆ ನಿನ್ನ ಈ ಸಭೆಯಲಿ
ಅವನು ಮೌನವಾಗಿದ್ದಾನೆ ನಿನ್ನ ಈ ಸಭೆಯಲಿ

ತ್ಯಾಗದ ಬಯಕೆ ಈಗ ನಮ್ಮ ಮನಸ್ಸಲ್ಲಿದೆ
ನೋಡ ಬೇಕಾಗಿದೆ ಎಷ್ಟು ಶಕ್ತಿ ಎದುರಾಳಿಯ ಬಾಹುಗಳಲ್ಲಿದೆ
ತ್ಯಾಗದ ಬಯಕೆ...

ಸಮಯ ಬಂದಾಗ ತಿಳಿಸುವೆ ನಿನಗೆ ಓ ಆಕಾಶವೆ
ಈಗಿಂದಲೇ ಏನನ್ನು ತಿಳಿಸಲಿ ಏನು ನಮ್ಮ ಮನಸ್ಸಲ್ಲಿದೆ
ತ್ಯಾಗದ ಬಯಕೆ...

ಎಳೆದು ತಂದಿದೆ ನಮ್ಮನ್ನು ಮಾತೃಭೂಮಿಗೋಸ್ಕರ ಹುತಾತ್ಮರಾಗುವ ಬಯಕೆ
ಹುತಾತ್ಮರಾಗಲು ದೇಶಪ್ರೇಮಿಯರ ಗುಂಪು ಎದುರಾಳಿಯ ಮನೆಯಲಿ ಸೇರಿದೆ
ತ್ಯಾಗದ ಬಯಕೆ...

ಮೂಲ : ರಾಮಪ್ರಸಾದ್ ಬಿಸ್ಮಿಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ, ಮನ್ನಾ ಡೇ, ರಾಜೇಂದ್ರ ಮೆಹತಾ
ಸಂಗೀತ : ಪ್ರೇಮ್ ಧವನ್
ಚಿತ್ರ : ಶಹೀದ್

ek se karta nahi kyo dusra kuchh baat chit
dekhta hu mai jise vo chup teri mehfil me hai
vo chup teri mehfil me hai
sarfaroshi ki tamanna ab hamare dil me hai
dekhna hai zor kitna bazu-e-qatil me hai
sarfaroshi ki tamanna ab hamare dil me hai

vaqt aane par bata dege tujhe o aasman
vaqt aane par bata dege tujhe o aasman
ham abhi se kya bataye kya hamare dil me hai
kya hamare dil me hai
sarfaroshi ki tamanna ab hamare dil me hai

khaich kar layi hai qatal hone ki ummid
khaich kar layi hai qatal hone ki ummid
aashiqo ka aaj jamaghat kucha-e-qatil me hai
kucha-e-qatil me hai
sarfaroshi ki tamanna ab hamare dil me hai
https://www.youtube.com/watch?v=_txCgY4c69g

Sunday, March 22, 2015

ಹಾರಿ ಹೋಗು ಓ ಹಕ್ಕಿಯೇ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಹಾರಿ ಹೋಗು ಓ ಹಕ್ಕಿಯೇ, 
ದೇಶ ಈ ಪರಕೀಯ ಇನ್ನು!!

!!ನೀನು ಕದಿರು ಕದಿರು ಒಟ್ಟುಗೂಡಿಸಿ 
ನಗರ ಈ ನೆಲೆಸಿದ್ದೆ,
ಮಳೆಯಲಿ ನಿನ್ನ ರೆಕ್ಕೆ ಒದ್ದೆಯಾದವು, 
ಬಿಸಿಲಿನ ತಾಪ ಸಹಿಸಿದೆ,
ದುಃಖಿಸದಿರು ನಿನ್ನ ದುಡಿಮೆ 
ನಿನ್ನ ಉಪಯೋಗಕ್ಕೆ
ಬರಲಿಲ್ಲವೆಂದು,
ಕೊಂಡೊಯ್ಯುವುದಕ್ಕಿಂತ 
ಕೊಟ್ಟೋಗುವುದೇ ಚೆನ್ನ ಇನ್ನು!!
ಹಾರಿ ಹೋಗು ಓ ಹಕ್ಕಿಯೇ...

!!ಮರೆ ಈಗ ಆ ತಂಗಾಳಿ
ಹಾರುವುದು ಶಾಖೆಯಿಂದ ಶಾಖೆಗೆ
ಜಗದ ಕಣ್ಣಿಗೆ ನೋಡಲಾಗಲಿಲ್ಲ
ನಿನ್ನ ಸುಂದರ ಆಕರ್ಷಕ ನಡಿಕೆ,
ಲೋಕ ಯಾಕೆ ತಲೆ ಕೆಡಿಸಿಕೊಳ್ಳುವರು
ಮಾಲಿಯೇ ಇಲ್ಲದ ಈ ತೋಟಕ್ಕೆ, 
ನಿನ್ನ ಹಣೆಯಲ್ಲಿಯೇ ಬರೆದಿದೆ, 
ಬದುಕಿನಲ್ಲೇ ಸಾಯುವುದನ್ನು!!
ಹಾರಿ ಹೋಗು ಓ ಹಕ್ಕಿಯೇ...

!!ಅಳುತ್ತಿದ್ದಾರೆ ಆ ಪಕ್ಷಿಗಳು ಈಗ,
ನಿನ್ನ ಜೊತೆಯಲ್ಲಿ ಆಡಿಕೊಂಡವರು,
ಅವರೊಂದಿಗೆ ಕಟ್ಟಿಕೊಂಡಿದೆ ನೀನು
ಅದೆಷ್ಟೋ ಬಯಕೆಗಳು,
ತೇವಗೊಂಡ ಕಣ್ಣಿಂದಲೇ ಇಂದು
ಅವರಿಗೆ ವಿದಾಯ ಹೇಳು ನೀನು,
ಯಾರಿಗೆ ತಿಳಿದಿದೆ ಇನ್ಯಾವಾಗ 
ಆಗಮನ ಆಗಲಿದೆ ನಿನ್ನ ಇನ್ನು!!  
ಹಾರಿ ಹೋಗು ಓ ಹಕ್ಕಿಯೇ..

ಮೂಲ : ರಾಜೇಂದ್ರ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ ರಫಿ
ಸಂಗೀತ : ಚಿತ್ರಗುಪ್ತ್
ಚಿತ್ರ : ಭಾಬಿ

चल उड़ जा रे पंछी, के अब ये देस हुआ बेगाना

तू ने तिनका तिनका चुनकर नगरी एक बसायी
बारीश में तेरी भीगी पाख़े, धूप में गर्मी खायी
ग़म ना कर जो तेरी मेहनत तेरे काम ना आई
अच्छा हैं कुछ ले जाने से दे कर ही कुछ जाना

भूल जा अब वो मस्त हवा, वो उड़ना डाली डाली
जग की आँख का कांटा बन गयी चाल तेरी मतवाली
कौन भला उस बाग को पूछे, हो ना जिसका माली
तेरी किस्मत में लिखा हैं, जीते जी मर जाना

रोते हैं वो पंख पखेरू, साथ तेरे जो खेले
जिनके साथ लगाये तू ने अरमानों के मेले
भीगी आखियों से ही उन की आज दूवायें ले ले
किस को पता अब इस नगरी में कब हो तेरा आना
https://www.youtube.com/watch?v=3OeBpYBDvig

Saturday, March 21, 2015

ನಿನಗೇಗೆ ಹೇಳಲಿ ವ್ಯಥೆ ನನ್ನ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ನಿನಗೇಗೆ ಹೇಳಲಿ ವ್ಯಥೆ ನನ್ನ
ಯಾವುದರಲ್ಲೂ ಮನಸ್ಸಿಲ್ಲ ವಿನಃ ನಿನ್ನ
ನಿನಗೇನು ತಿಳಿದಿದೆ ಪ್ರೀತಿ ನನ್ನ
ನಾನು ನಿರೀಕ್ಷೆಯಲ್ಲಿದ್ದೇನೆ ನಿನ್ನ
ನೀನೇ ಹೃದಯ ನೀನೇ ಜೀವನ!!
ನಿನಗೇಗೆ ಹೇಳಲಿ...

!!ಆರಿಸಿದೆ ಹೃದಯ ನನ್ನ
ನಿನ್ನ ಹೃದಯದ ಪಥವನ್ನ
ನೀನೊಂದು ವೇಳೆ ಜೊತೆಯಲ್ಲಿದ್ದರೆ ನನ್ನ
ಸುಗಮವಾಗುತ್ತಿತ್ತು ಈ ನನ್ನ ಜೀವನ
ಓ ನನ್ನ ಜೀವನ..... ಈಗಂತೂ ನಿನ್ನ
ಮಾಡುವುದಾದರೂ ಏನು ಚಿನ್ನ
ನಂಬು ನೀನು ನನ್ನನ್ನ
ನಾನು ನಿರೀಕ್ಷೆಯಲ್ಲಿದ್ದೇನೆ ನಿನ್ನ
ನೀನೇ ಹೃದಯ ನೀನೇ ಜೀವನ!!
ನಿನಗೇಗೆ ಹೇಳಲಿ...

!!ಈ ರೀತಿ ಮಾಡುವುದು ಸರಿಯಲ್ಲ ಚಿನ್ನ
ಹೀಗೆ ಮುರಿದು ಹೃದಯ ನನ್ನ
ಪಶ್ಚಾತಾಪ ಪಡುತ್ತಿದೆ ಕಂಗಳು ನನ್ನ
ನಿನ್ನ ಜೊತೆ ಮಾಡಿ ಪ್ರೀತಿಯನ್ನ
ಎಲ್ಲಿಗೆ ಹೋಗಲಿ ಬಿಟ್ಟು ನಿನ್ನನ್ನ
ನೆರಳಾಗಿರುವೆ ನೀನು ನನ್ನ
ಕೇವಲ ನಿನ್ನ ಮುಖದಲ್ಲೇ ಚಿನ್ನ
ನಾನು ಕಾಣುವೆ ನನ್ನ ದೇವರನ್ನ
ಬಯಕೆಯಾಗಿದೆ ಇದು ನನ್ನ
ಸದಾ ಪೂಜಿಸುವೆ ನಿನ್ನನ್ನ
ಸ್ವೀಕರಿಸು ನನ್ನ ಒಪ್ಪಿಗೆಯನ್ನ
ನಾನು ನಿರೀಕ್ಷೆಯಲ್ಲಿದ್ದೇನೆ ನಿನ್ನ
ನೀನೇ ಹೃದಯ ನೀನೇ ಜೀವನ!!
ನಿನಗೇಗೆ ಹೇಳಲಿ..

ಮೂಲ : ಅಹ್ಮದ್ ಅನೀಸ್, ಕುಮಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಶ್ರೇಯಾ ಘೋಶಾಲ್ /ಅರ್ಜಿತ್ ಸಿಂಗ್
ಮೂಲ ಸಂಗೀತ ರಚನೆ : ಜಾವಾದ್ ಅಹ್ಮದ್, ಸಂಗೀತ ಪುನಾರಚನೆ  : ಶರಿಬ್ -ತೋಷಿ
ಚಿತ್ರ : ಹಂಪ್ಟಿ ಶರ್ಮ ಕಿ ದುಲನಿಯಾ
Main tenu samjhawan ki
Na tere bina lagda jee

Main tenu samjhawan ki
Na tere bina lagda jee

Tu ki jaane pyaar mera
Main karoon intezar tera
Tu dil, tunhion jaan meri

Main tenu samjhawan ki
Na tere bina lagda jee
Tu ki jaane pyaar mera
Main karoon intezar tera
Tu dil, tunhion jaan meri

Main tenu samjhawan ki
Na tere bina lagda jee

Mere dil ne chun laiya ne
Tere dil diyan rahaan
Tu jo mere naal tu rehnta
Turpe meriyaan saaha
Jeena mera haye
Hun hai tera, ki main karaan
Tu kar eitbaar mera
Main karoon intezar tera
Tu dil, tunhion jaan meri!

Main tenu samjhawan ki
Na tere bina lagda jee

Ve changa nahion keeta beeba,
Ve changa nahion keeta beeba
Dil mera tod ke
Ve bada pachtaiyaan akhaan,
Ve bada pachtaiyaan akhaan
Naal tere jod ke

Tenu chadd ke kitthe jawaan tu mera parchanwa
Tere mukhde vich hi main taan
Rabb nu apni pawaan
Meri duya haye, sajda tera, karti sada
Tu sun ekraar mera
Main karoon intezar tera
Tu dil, tunhion jaan meri

Main tenu samjhawan ki
Na tere bina lagda jee

Tuesday, March 17, 2015

ರವಿ ಅಸ್ತನಾದ

ಬೆಳಕನು ಬೀರಲೆಂದು ಬಂದ
ಜಗಕೆ ಮುಖ ತೋರಿಸಿ ಹೋದ 
ಮಸುಕಾಯಿತು
ರವಿ ಅಸ್ತನಾದ
ಕರಿ ಮೋಡಗಳು
ಕ್ಷಣಿಕ ಸಮಯಕ್ಕಾಗಿ ಮುತ್ತಿಟ್ಟವು
ಅವರಿಗೆ ಅನಿಸಿತು
ರವಿ ಅಸ್ತನಾದ
ಪ್ರಕೃತಿಯ ನಿಯಮದ ಅರಿವಿಲ್ಲ ಅವರಿಗೆ
ಪುನಃ ಉದಯ ನಿಶ್ಚಿತವೆಂದು ಮರೆತರು
ತಿಳಿದರು
ರವಿ ಅಸ್ತನಾದ
ರವಿ ಎಂಬುದಕ್ಕೆ ಸಾವಿಲ್ಲ
ಪ್ರತಿ ನಿತ್ಯ ಜನ್ಮ ಅದರ
ಕೇವಲ ತುಸು ಸಮಯಕ್ಕಾಗಿ
ರವಿ ಅಸ್ತನಾದ
by ಹರೀಶ್ ಶೆಟ್ಟಿ, ಶಿರ್ವ

Monday, March 16, 2015

ವಾತಾವರಣ ಪ್ರೇಮಮಯವಾಗಿದೆ

ಚಿತ್ರಕೃಪೆ : Google 
ಹಾಡಿನ ಕೊಂಡಿ: You Tube 
!!ವಾತಾವರಣ ಪ್ರೇಮಮಯವಾಗಿದೆ
ಹೇ ಮನಸ್ಸೇ ಎಲ್ಲಿಂದಲೂ ಅವರನ್ನು
ಇಂತಹದರಲ್ಲಿ ಹುಡುಕಿಕೊಂಡು ಬರಬೇಕಾಗಿದೆ!!
ವಾತಾವರಣ...

!!ಹೇಳು ಋತು ಯೌವನವಾಗಿದೆ
ಹಾಗು ಇದು ನನ್ನನ್ನು ಹಂಬಲಿಸುತ್ತಿದೆ
ಕರಿ ಮೇಘದ ನೆರಳು
ಅಗಲಿಕೆಯಲ್ಲಿದ್ದ ನನ್ನನ್ನು ಭಯ ಪಡಿಸುತ್ತಿದೆ
ಈ ಪರಿಸ್ಥಿತಿ ನನ್ನನ್ನು ಕೊಲ್ಲಬಹುದೆಂಬ
ಹೆದರಿಕೆ ನನ್ನನ್ನು ಸತಾಯಿಸುತ್ತಿದೆ
ವರ್ಷ ಋತುವಿನ ಎಲ್ಲಿ ಏನು ಭರವಸೆ?
ಯಾವುದೇ ಸಮಯವೂ ಆಗಮಿಸಲಿದೆ!!
ವಾತಾವರಣ...

!!ಸೂರ್ಯ ಎಲ್ಲಿಯೂ ಹೋಗಲಿ
ನಿನಗೆ ಸೋಕದಿರಲಿ ಬಿಸಿಲು
ನಿನ್ನನ್ನು ಕರೆಯುತ್ತಿದೆ
ಈ ಕೇಶಗಳ ನೆರಳು
ಬಂದೇ ಬಿಡು
ನಿನಗೆ ಛಾಯೆ ನೀಡಲು
ನನ್ನ ಕಣ್ರೆಪ್ಪೆ ತವಕದಲ್ಲಿದೆ!!
ವಾತಾವರಣ...

!!ತಿರುಗುತ್ತಿದ್ದೇನೆ ಒಬ್ಬಂಟಿ ನಾನಿಲ್ಲಿ
ಬಾಹುಗಳಲ್ಲಿ ಯಾರಾದರೂ ಬಂಧಿಸಲಿ
ಯಾರು ಎಷ್ಟು ಸಮಯ
ಈ ಏಕಾಂತದಲಿ ಕಳೆಯಲಿ
ಹಗಲು ದುಷ್ಟವಾಗಿದೆ
ರಾತ್ರಿ ಕೊಲ್ಲುತ್ತಿದೆ!!
ವಾತಾವರಣ...

!!ಈ ರಾತ್ರಿ ಈ ಮೌನ
ಈ ಸ್ವಪ್ನದ ನೋಟಗಳು
ಇದು ಮಿಂಚುಳುಗಳಾ?
ಅಥವಾ ಭೂಮಿಗೆ ಇಳಿದು ಬಂದಿದೆಯ ತಾರೆಗಳು
ನಿದ್ರೆಯಲಿ ನನ್ನ ಕಂಗಳು
ಅಮಲಲಿ ಎಲ್ಲ ಜಗತ್ತಿದೆ!!
ವಾತಾವರಣ...

ಮೂಲ : ಕಮಲ್ ಅಮ್ರೋಹಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಗುಲಾಮ್ ಮೊಹಮ್ಮದ್
ಚಿತ್ರ : ಪಾಕೀಜಾ

मौसम है आशिकाना
ऐ दिल कहीं से उनको ऐसे में ढूंढ लाना

कहना के रुत जवां है, और हम तरस रहे हैं
काली घटा के साये, बिरहन को डस रहे हैं
डर है ना मार डाले, सावन का क्या ठिकाना

सूरज कही भी जाये, तुम पर ना धूप आये
तुम को पुकारते हैं, इन गेसूओं के साये
आ जाओ मैं बना दू, पलकों का शामियाना

फिरते हैं हम अकेले, बाहों में कोई ले ले
आखिर कोई कहा तक तनहाईयों से खेले
दिन हो गये हैं ज़ालिम, राते हैं कातिलाना

ये रात ये खामोशी, ये ख्व़ाब से नज़ारें
जुगनू हैं या जमींपर उतरे हुये हैं तारें
बेख़ाब मेरी आँखे, मदहोश है ज़माना
https://www.youtube.com/watch?v=LXW6OEbx7GQ

Thursday, March 12, 2015

ನಿನ್ನ ಚಹರೆಯಲಿ ಆ ಜಾದೂ ಇದೆ

ನಿನ್ನ ಚಹರೆಯಲಿ ಆ ಜಾದೂ ಇದೆ
ಸತತ ನನ್ನನ್ನು ನಿನ್ನತ್ತ ಎಳೆಯುತ್ತದೆ
ಹೋಗಲಿರುತ್ತದೆ ಅದೆಲ್ಲಿಗೋ
ನಿನ್ನತ್ತಲೇ ಈ ಕಾಲು ಸಾಗುತ್ತದೆ
ನಿನ್ನ ಚಹರೆಯಲಿ...
ನಿನ್ನ ವಜ್ರದ ಹಾಗೆ ಕಂಗಳು
ಕಣ್ಣಲ್ಲಿ ಲಕ್ಷಗಟ್ಟಲೆ ಮಾತುಗಳು
ಮಾತಿನಲಿ ಸಿಹಿ ರಸದ ಹನಿಗಳು
ನನ್ನಲ್ಲಿ ಪ್ರೀತಿಯ ದಾಹ ಎಬ್ಬಿಸುತ್ತದೆ
ಬಿದ್ದರೆ ನಿನ್ನ ಒಂದು ದೃಷ್ಟಿಯೂ
ಹೆಣವೂ ಜೀವವಾಗುತ್ತದೆ
ಅಮೃತ ಸೋರುವ ನಿನ್ನ ತುಟಿಯು
ಬದುಕುವ ಆಸೆ ಹುಟ್ಟಿಸುತ್ತದೆ
ನನಗೆ ತಡೆಯಲು ಸಾಧ್ಯವಾಗುವುದಿಲ್ಲ
ನಿನ್ನೊಟ್ಟಿಗೆ ನನ್ನೆಜ್ಜೆ ಸಾಗುತ್ತದೆ
ನಿನ್ನ ಚಹರೆಯಲಿ...
ನಿನ್ನನ್ನು ನೋಡಿದ ಕ್ಷಣದಿಂದ
ನಾನು ದೇವರನು ನಂಬಲು ಆರಂಭಿಸಿದೆ
ಈ ಹೃದಯ ಪದೇ ಪದೇ ಹೇಳುತ್ತಿದೆ
ನನ್ನ ಖುಷಿಯ ಖಜಾನೆ ನಿನ್ನಲ್ಲಿಯೇ ಇದೆ
ಪ್ರೀತಿಯ ಒಪ್ಪಿಗೆ ನೀಡು ಇನ್ನು
ನನ್ನ ಕೊರತೆ ತೀರಿಸು ನೀನು
ನಿನ್ನಿಂದ ಸ್ವಲ್ಪವೂ ಅಂತರ ಇದ್ದರೆ
ನನಗೆ ಹುಚ್ಚು ಹಿಡಿದಂತೆ ಆಗುತ್ತದೆ
ನಿನ್ನನ್ನು ಪಡೆಯುವುದು ಕಷ್ಟವೇ ಆಗಲಿ
ಆದರೂ ಹೃದಯ ಪಡೆಯಲು ಹಾತೊರೆಯುತ್ತದೆ
ನಿನ್ನ ಚಹರೆಯಲಿ...
ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಧರ್ಮಾತ್ಮ
तेरे चेहरे में वो जादू है, बिन डोर खिंचा जाता हूँ
जाना होता है और कही, तेरी ओर चला आता हूँ
तेरी हीरे जैसी आँखें, आँखों में हैं लाखों बातें
बातों में रस की बरसातें, मुझ में प्यार की प्यास जगाये
तू जो एक नज़र डालें, जी उठे मरनेवाले
लब तेरे अमृत के प्याले, दिल में जीने की आस बढ़ाये
चल पड़ते हैं तेरे साथ कदम मैं रोक नही पाता हूँ
जब से तुझ को देखा है, देख के खुदा को माना है
मान के दिल ये कहता है, मेरी खुशियों का तू है खजाना
दे दे प्यार की मंज़ूरी, कर दे कमी मेरी पूरी
तुझ से थोड़ी भी दूरी, मुझ को करती है दीवाना
पाना तुझ को मुश्किल ही सही, पाने को मचल जाता हूँ

Tuesday, March 10, 2015

ಕೈಯ ಹಿಡಿಯದಿರು ಓ ಇನಿಯ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಕೈಯ ಹಿಡಿಯದಿರು ಓ ಇನಿಯ
ಮಾಡದಿರು ನನ್ನಿಂದ ಕಾದಾಟ!!
ಕೈಯ ಹಿಡಿಯದಿರು ಓ ಇನಿಯ

!!ಸರಿಯಬಹುದು ಸೆರಗು ದೇಹದಿಂದ
ನಗಬಹುದು ಬಳೆಗಳು ಅನಿರ್ಬಂಧ
ಆಗಬಹುದು ಶಬ್ದ ಝಣಝಣ!!
ಕೈಯ ಹಿಡಿಯದಿರು...

!!ನನ್ನನು ಬಿಟ್ಟು ಬಿಡು ಅಯ್ಯೋ ನಲ್ಲ
ಹೃದಯ ವೇದನೆಯಿಂದ ಕೂಗಿ ನಲ್ಲ
ನೋಡುತ್ತಿದೆ ನನ್ನನ್ನು!!
ಕೈಯ ಹಿಡಿಯದಿರು...

!!ಸ್ವತಃ ಅಮಲೇರಿದಂತಾಗಿದೆ ನನಗೆ
ನಡೆಯುತ್ತಿದ್ದೇನೆ ನಾನೀಗೆ
ಸುಗಂಧಿತ ಮಲ್ಲಿಗೆಯ ಲತೆಗಳ ಹಾಗೆ!!
ಕೈಯ ಹಿಡಿಯದಿರು...

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ದಸ್ತಕ್

बैयाँ ना धरो ओ बलमा
ना करो मोसे रार
बैयाँ ना धरो ओ बलमा

ढलेगी चुनरिया तन से
हँसेंगी रे चूड़ियाँ छन से
मचेगी झनकार
बैयाँ ना धरो..

मोहे छोड़ो हाय सजना
जिया सीस उठाये सजना
रहा मोहे निहार
बैयाँ ना धरो..

मैं तो आप बहकी
चलूँ जैसे महकी
चमेलिया की डार
बैयाँ ना धरो..
https://www.youtube.com/watch?v=VSERYQGm6fE

Sunday, March 8, 2015

ನಾನೊಂದು ಕನಸು

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ನಾನೊಂದು ಕನಸು
ಈ ಕನಸೊಂದಿಗೆ ನೀನು ಪ್ರೀತಿ ಮಾಡದಿರು
ಪ್ರೀತಿ ಆಗಿದ್ದರೆ ಈ ಪ್ರೀತಿಯನು ವ್ಯಕ್ತಪಡಿಸದಿರು!!
ನಾನೊಂದು ಕನಸು...

!!ಈ ಗಾಳಿಯೂ ಎಂದಾದರೂ ಸದ್ದಿಲ್ಲದೆ ತೆರಳುವುದು
ಮತ್ತೆಂದೂ ಅದು ಹಿಂತಿರುಗಿ ಎಂದಿಗೂ ಈ ಜಗಕ್ಕೆ ಬರಲಾರದು
ತನ್ನ ಕೈಯಲ್ಲಿ ಈ ಗಾಳಿಯನು ಬಂಧಿಸದಿರು!!
ನಾನೊಂದು ಕನಸು...

!!ನಿನ್ನ ಹೃದಯದಲ್ಲಿದೆ,ಪ್ರೀತಿಯ ಭುಗಿಲೇಳುವ ಜ್ವಾಲೆ
ತನ್ನ ಎದೆಯಲಿ ಅಡಗಿಸಿಡು ಈ ಸ್ಪಂದಿಸುವ ಜ್ವಾಲೆ
ಈ ರೀತಿ ಪ್ರೀತಿಯ ಅವಮಾನ ಎಲ್ಲೆಡೆ ಮಾಡದಿರು!!
ನಾನೊಂದು ಕನಸು...

!!ಶಾಖೆಯಿಂದ ಬಿದ್ದು ಹೂವು ಅರಳುತ್ತದೆಯೇನು?
ಹಗಲು ಮತ್ತು ರಾತ್ರಿಯ ಎಂದಾದರೂ ಜಗದಲಿ ಮಿಲನವಾಗುತ್ತದೆಯೇನು?
ಮರೆತು ಹೋಗು, ಹೋಗಲಿ ಬಿಡು, ವಿಧಿಯೊಂದಿಗೆ ವಾದ ಮಾಡದಿರು!!
ನಾನೊಂದು ಕನಸು...

ಮೂಲ : ಕಮರ್ ಜಲಲಾಬಾದಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಹಿಮಾಲಯ್ ಕಿ ಗೋದ್ ಮೇ

मैं तो एक ख्वाब हूँ, इस ख्वाब से तू प्यार ना कर
प्यार हो जाये तो फिर प्यार का इज़हार ना कर

ये हवायें कभी चुपचाप चली जायेंगी
लौट के फिर कभी गुलशन में नहीं आयेंगी
अपने हाथों में हवाओं को गिरफ्तार न कर

तेरे दिल में हैं, मोहब्बत के भड़कते शोले
अपने सीने में छुपा ले ये धड़कते शोले
इस तरह प्यार को रुसवा सर-ए-बाजार ना कर

शाख से टूट के गूंचे भी कही खिलते हैं
रात और दिन भी जमाने में कही मिलते हैं
भूल जा, जाने दे तकदीर से तकरार ना कर
https://www.youtube.com/watch?v=s_jJgXflpUg

Saturday, March 7, 2015

ಹೋಳಿ

ಹೋಳಿಯ ಈ ದಿನ
ಪ್ರತಿಯೊಂದು  ರಂಗು
ಏನಾದರೂ ನುಡಿಯುತ್ತದೆ
ಕೆಂಪು ಗುಲಾಬಿ ನೀಲಿ ಹಳದಿ
ಎಲ್ಲವೂ ಒಂದೊಂದು ಕಥೆ ಹೇಳುತ್ತದೆ
ರಂಗು ರಂಗು ಸೇರಿ
ಒಂದು ಹೊಸ ರಂಗು ನೀಡುತ್ತದೆ
ಆ ರಂಗು
ಅದು ತನ್ನದೇ ಮೋಜು ತೋರಿಸುತ್ತದೆ
ಹೋಳಿಯ ಈ ದಿನ
ಪ್ರತಿಯೊಂದು ರಂಗು
ಏನಾದರೂ ನುಡಿಯುತ್ತದೆ
ರಂಗಿನ ಈ ಜಾದೂ
ವೈರಿಯ ಸಹ ಕೋಪ ಮುನಿಸು
ಮುಗಿಸುವಂತೆ ಮಾಡಿ
ಪ್ರೇಮದ ಪಾಠ ಕಲಿಸುತ್ತದೆ
ಹೋಳಿಯ ಈ ದಿನ
ಪ್ರತಿಯೊಂದು ರಂಗು
ಏನಾದರೂ ನುಡಿಯುತ್ತದೆ
ದಿನ ಇಡೀ
ಹರ್ಷ ಉಲ್ಲಾಸ
ಆಟ ಓಡಾಟ
ತಿಂಡಿ ತಿನಿಸು ಮಿಠಾಯಿ
ಹೋಳಿಯ ಈ ದಿನ
ಈ ರಂಗಿನಲ್ಲಿ
ವರುಷದ ಆಯಾಸ ಮುಗಿಯುತ್ತದೆ
by ಹರೀಶ್ ಶೆಟ್ಟಿ, ಶಿರ್ವ

Tuesday, March 3, 2015

ವಸಂತ ಹೂವನ್ನು ಸುರಿಸು, ನನ್ನೊಲವು ಬಂದಿದ್ದಾಳೆ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ವಸಂತ ಹೂವನ್ನು ಸುರಿಸು, ನನ್ನೊಲವು ಬಂದಿದ್ದಾಳೆ
ಪವನ ರಾಗವನ್ನು ನುಡಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ಓ ಕೆಂಪೆ ಹೂವಿನ ಮೆಹಂದಿ ರಚಿಸು ಈ ಶ್ವೇತ ಕೈಗಳಿಗೆ
ಇಳಿದು ಬಾ ಮೇಘವೇ ಕಜ್ಜಳ ಹಚ್ಚು ಈ ಮೋಹಕ ಕಂಗಳಿಗೆ
ತಾರೆಗಳೆ ಬೈತಲೆ ತುಂಬಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ನೋಟಗಳೆ ಎಲ್ಲೆಡೆ ಹರಡಿ ಬಿಡಿ ಇಂದು ಬೆಳಕಿನ ಓಜಸ್ಸಿ
ತುಂಬಾ ನಾಚಿಕೆ ನನ್ನವಳಿಗೆ ಹೋಗಿ ಬಿಡುವಳು ಲಜ್ಜಿಸಿ
ಸ್ವಲ್ಪ ನೀನು ಹೃದಯ ಚೈತನ್ಯಗೊಳಿಸು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ಅಲಂಕರಿಸಿದ್ದಾರೆ ಎಲೆಮೊಗ್ಗುಗಳೀಗ ಈ ಪ್ರೀತಿಯ ಶಯನ
ಇವುಗಳಿಗೆ ತಿಳಿದಿತ್ತು ಬರುವುದೊಂದು ದಿನ ಋತು ಒಲವಿನ
ನಿಸರ್ಗವೇ ರಂಗನ್ನು ಚೆಲ್ಲು, ನನ್ನೊಲವು ಬಂದಿದ್ದಾಳೆ
ನನ್ನೊಲವು ಬಂದಿದ್ದಾಳೆ...

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸುರಜ್

बहारों फूल बरसाओ, मेरा मेहबूब आया है
हवाओं रागिनी गाओ, मेरा मेहबूब आया है

ओ लाली फूल की मेहंदी लगा इन गोरे हाथों में
उतर आ ऐ घटा काजल लगा इन प्यारी आँखों में
सितारों माँग भर जाओ, मेरा मेहबूब आया है

नज़ारो हर तरफ अब तान दो एक नूर की चादर
बड़ा शर्मिला दिलबर है चला जाए ना शरमा कर
ज़रा तुम दिल को बहलाओ, मेरा मेहबूब आया है

सजाई है जवां कलियों ने अब ये सेज उल्फ़त की
इन्हें मालूम था आएगी एक दिन रुत मोहब्बत की
फजाओं रंग बिखराओं, मेरा मेहबूब आया है
https://www.youtube.com/watch?v=dGuRNfJ1ys0

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...