Monday, April 27, 2015

ವಾಸ್ತವಿಕತೆ

ಮಂದಿರವೂ ಬಿತ್ತು
ಮಸೀದಿಯೂ ಬಿತ್ತು
ಆಚೆ ಈಚೆ ಶವಗಳು ಬಿದ್ದಿತ್ತು
ಎಲ್ಲೆಡೆ ಇಟ್ಟಿಗೆಯ ತುಂಡುಗಳ ರಾಶಿ ಇತ್ತು
ಮಂದಿರದ ಅವಶೇಷ  ಹಾಗು
ಮಸೀದಿಯ ಅವಶೇಷ ಒಟ್ಟಿಗೆ ಮಣ್ಣ ಪಾಲಾಯಿತು
ಪಂಡಿತ ಮೌಲವಿ ಇಬ್ಬರೂ
ಒಬ್ಬರನೊಬ್ಬರನ್ನು ಅಪ್ಪಿಕೊಂಡು ನಿಂತಿದ್ದರು ಅದರ ಮೇಲೆ
ಇಬ್ಬರ ಕಣ್ಣಿನಿಂದಲೂ ಧಾರಾಳವಾಗಿ ಅಶ್ರು ಹರಿಯುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ನಾಮ ಹಲವು ದೇವನೊಬ್ಬನೇ. ವಿಕೋಪಾನಂತರ ಸಮತಟ್ಟು ಮಾನವತಾವಾದ!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...