Thursday, April 23, 2015

ಒಬ್ಬ ರೈತ ಸಾಯುತ್ತಾನೆ

ಮಳೆ ಬರದಿದ್ದಾಗ
ಭೂಮಿ ಬಂಜರಾದಾಗ  
ಆಕಾಶವನ್ನು ಸತತ ದಿಟ್ಟಿಸಿ ನೋಡುವ ಕಣ್ಣುಗಳು ಸೋತು ತಗ್ಗಿದಾಗ
ಪರಿವಾರದ ಮಕ್ಕಳು ತುತ್ತು ಅನ್ನಕ್ಕಾಗಿ ಅತ್ತಾಗ
ಹೆಂಗಸರು ನೆರೆಹೊರೆಯಲಿ ಧಾನ್ಯಕ್ಕಾಗಿ ಓಡಾಡುವಾಗ
ಬ್ಯಾಂಕಿನ ಸಾಲದ ಕಂತು ತುಂಬಿಸದೆ
ಅವರಿಂದ ಬೆದರಿಕೆ ಬಂದಾಗ
ಒಬ್ಬ ರೈತ ಸಾಯುತ್ತಾನೆ

ಜಗಕ್ಕೆ ಅನ್ನ ನೀಡುವವನು
ದಿನ ರಾತ್ರಿ ದುಡಿಯುವವನು
ಯಾವುದೇ ಕಷ್ಟವನ್ನು ಸಹಿಸಿ
ತನ್ನ ನೋವು ದುಡಿಮೆಯಿಂದ ಭೂಮಿಗೆ ಅರ್ಪಿಸುವನು
ಇದ್ದಕ್ಕಿದ್ದಂತೆ ಆಪತ್ತು ಬಂದಾಗ
ಯಾವುದೇ ಹಾದಿ ಕಾಣದಾಗ
ಜೀವನದಿಂದ ಹತಾಶೆ ಉಂಟಾದಾಗ
ಒಬ್ಬ ರೈತ ಸಾಯುತ್ತಾನೆ

ಅನ್ನದಾತ ಅವನು
ಜಗತ್ತಿನ ಹೊಟ್ಟೆ ಕಾಪಾಡುವವನು
ಪುಷ್ಕಲ ನೀಡಿ ಸ್ವಲ್ಪ ಪಡೆಯುವವನು
ಯಾವುದೇ ಹಂಗಿಲ್ಲದೆ ಜೀವಿಸುವವನು
ಪರಿಶ್ರಮವೇ ಭಗವಂತ ಎನ್ನುವವನು
ಮಣ್ಣನ್ನು ಪೂಜಿಸುವವನು
ಮಣ್ಣೇ ಕಲ್ಲಾದಾಗ
ಒಬ್ಬ ರೈತ ಸಾಯುತ್ತಾನೆ

ನಮ್ಮನ್ನು ಕಾಪಾಡಿ ಎನ್ನುವನು ಅವನು
ನಮಗೋಸ್ಕರ ಹೋರಾಡಿ ಎನ್ನುವನು ಅವನು
ಕೇವಲ ಸಹಾಯ ಹಸ್ತ ನೀಡಿ ಎನ್ನುವನು ಅವನು
ಕೇವಲ ನಮ್ಮ ಶ್ರಮಕ್ಕೆ ತಕ್ಕ ಬೆಲೆ ಕೊಡಿ ಎನ್ನುವನು ಅವನು
ಇಲ್ಲವಾದರೆ
ದುಡಿಮೆ ವ್ಯರ್ಥವಾಯಿತೆಂದು ತಿಳಿದು ಬಂದಾಗ
ಬೆವರಿನ ಬೆಲೆ ಸಿಗದೇ ಇದ್ದಾಗ
ತಾನು ಮಾಡಿದ ಉತ್ಪನ್ನದಿಂದ
ಇನ್ಯಾರೋ ಹಣ ಸಂಪಾದಿಸುವುದನ್ನು ಕಂಡು
ಕಣ್ಣಿಂದ ಧಾರಾಳವಾಗಿ ಅಶ್ರು ಸುರಿದಾಗ
ಪ್ರತಿದಿನವೂ
ಒಬ್ಬ ರೈತ ಸಾಯುತ್ತಾನೆ

by ಹರೀಶ್ ಶೆಟ್ಟಿ, ಶಿರ್ವ 

3 comments:

  1. ಅನುಕ್ಷಣ ಅವಜ್ಞೆಗೆ ಒಳಗಾಗುತ್ತಿತುವ ರೈತಾಪಿಯ ಪಾಡು:
    ಉತ್ತರ ಧೃವದಿಂ ದಕ್ಷಿಣ ಧೃವದಿಂ ಚಿತ್ರದಲ್ಲಿ ನಟ ದೊಡ್ಡಣ್ಣ ಉದ್ಗರಿಸುವಂತೆ, 'ವ್ಯವಸಾಯವೆಂದರೆ ನಾನ್ ಸಾಯ ನೀನ್ ಸಾಯ ಅಂತ'

    ಸರ್ಕಾರಗಳ ಅಸಡ್ಡೆ, ದಲಾಳಿಗಳ ಶೋಷಣೆ ಮತ್ತು ನೈಸರ್ಗಿಕ ವಿಪತ್ತುಗಳಿಂದ ರೈತ ಸಾಯುವಂತಾಗುತ್ತಾನೆ!

    ಮನ ಮಿಡಿಯುವ ಕವನ.

    ReplyDelete
  2. ತುಂಬಾ ಧನ್ಯವಾದಗಳು ನಿಮಗೆ ಬದರಿ ಸರ್ .

    ReplyDelete
  3. vaasthavavoo houdu..... harish, raithare namma naadina nijavaada aasthi. duranthavendare, avaru anubhavisuttiruva kashtagalu ashtishtalla. bahala chennagi vivarisiddeeri.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...