Tuesday, 21 April, 2015

ಫೇಸ್ಬುಕ್

ವಿಚಿತ್ರ ಈ ಫೇಸ್ಬುಕ್ ತಾಣ
ಅವರವರ ಮಟ್ಟಿಗೆ ಅವರೇ ಜಾಣ
ತಕ್ಷಣ ಕಳಿಸುತ್ತಾರೆ ಗೆಳೆತನದ ಆಮಂತ್ರಣ
ಕೆಲವು ದಿನ ನಮಸ್ಕಾರ ಪ್ರಣಾಮ
ಮತ್ತೊಂದು ದಿನ ಗೆಳೆತನದ ಪಟ್ಟಿಯಲ್ಲಿ ಅವರ ಇರುವುದಿಲ್ಲ ನಾಮ

ಆರಂಭದಲ್ಲಿ ಎಲ್ಲೆಲ್ಲಿಂದ ಒದಗಿ ಬರುತ್ತದೆ ನಂಟು
ಪ್ರೀತಿ ಮೋಹ ಗಮ್ಮತ್ತು
ಲೈಕುಗಳ ವರ್ಷ, ಕಮೆಂಟು ಬರುವುದಕ್ಕೆ ಇಲ್ಲ ಪುರುಸೊತ್ತು
ಜನ್ಮ ದಿನದಂದು ಕೇಕ್, ಉಪಹಾರ, ಜನ್ಮ ದಿನದ ಕವಿತೆ
ದಿನ ರಾತ್ರಿ ಸಂದೇಶ ಮಾತುಕತೆ

ನಂತರ ಕಾರಣವಿಲ್ಲದೆ ಅವರಾಗುತ್ತಾರೆ ದೂರ ದೂರ
ನಮ್ಮ ಸಂದೇಶಕ್ಕೂ ಅವರ ಇರುವುದಿಲ್ಲ ಉತ್ತರ
ನಮ್ಮ ಬರಹಕ್ಕೆ ಅವರ ಲೈಕು ಕಮೆಂಟುಗಳ ಬರಗಾಲ
ಜನ್ಮ ದಿನದಂದು ಸಾದಾ ಶುಭಾಶಯವೂ ಇಲ್ಲ
ವಿಚಿತ್ರ ಏನೆಂದರೆ ಗೆಳೆತನದ ಪಟ್ಟಿಯಲ್ಲಿ ಇದ್ದು ಸಹ ಅವರಿಲ್ಲ

ಕೆಲವು ಮಿತ್ರರ ವಿಚಿತ್ರ ನಡುವಳಿಕೆ
ನಂಬದ ವ್ಯಥೆ ನಂಬದ ಕಥೆ
ಕೆಲವರಿಗೆ ಬೇಕು ದಾನ
ಕೆಲವರು ಕೇಳುತ್ತಾರೆ ಸಾಲ
ನಾವು ಮೌನ ಧರಿಸಿದಾಗ ಸಿಗುತ್ತದೆ ಅವರ ಬೈಗುಳ

ಹಳೆಯಾದಂತೆ ಹತ್ತಿರದ ಗೆಳೆಯರು ಕಣ್ಮರೆ
ನಮ್ಮ ತಲೆಯಲ್ಲಿ ಎಂತೆಂತಹ ಯೋಚನೆ
ಇದೇ ಫೇಸ್ಬುಕ್ ಮಾಯೆ
ಇದೇ ಫೇಸ್ಬುಕ್ ಗೆಳೆತನದ ಅರ್ಥ
ಒಂದೊಂದು ವೇಳೆ ಅನಿಸುತ್ತದೆ ಇದು ಕೇವಲ ಸಮಯ ವ್ಯರ್ಥ

ಆದರೆ ಇದನ್ನು ಹೊರತು
ಇಲ್ಲಿ ಒಳ್ಳೆಯವರೂ ಇದ್ದಾರೆ
ಸ್ನೇಹದ  ಸಂಬಂಧದ ಅರ್ಥ ತಿಳಿದಿದ್ದಾರೆ
ಅವರಿಂದಲೇ ಈಗಲೂ ಫೇಸ್ಬುಕ್ ಆಗಿದೆ ಇಷ್ಟದ ಹವ್ಯಾಸ
ಹೊರಗಿನ ಜಗ ಹಾಗು ಫೇಸ್ಬುಕ್ ಇದರಲ್ಲಿ ಇಲ್ಲ ಹೆಚ್ಚು ವ್ಯತ್ಯಾಸ

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಮುಖ ಹೊತ್ತಿಗೆಯ ಒಂದಿಬ್ಬರು ಇಲ್ಲೇ ಸಾಲವನ್ನೂ ಮಾಡಿ ಇಲ್ಲೇ ಉಂಡೇ ನಾಮ ತಿಕ್ಕಿದ ದುರಂತಗಳೂ ಇವೆ!

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete