Saturday, April 18, 2015

ಒಂದು ಗೆರೆ ಎಳೆಯಿರಿ

ಒಂದು ಗೆರೆ ಎಳೆಯಿರಿ
ಎಲ್ಲವೂ ಬೇಕೆಂದು ಹೇಳದಿರಿ
ನಿಯಮ ಇರಲಿ
ನಿಯಂತ್ರಣವಿರಲಿ
ತನಗೆ ಅವಶ್ಯಕ ಏನೆಂದು ತಿಳಿದಿರಲಿ
ಒಂದು ಗೆರೆ ಎಳೆಯಿರಿ

ತನಗೆ ಏನು ಒಳ್ಳೆಯದು
ಏನು ಒಳ್ಳೆಯದಲ್ಲ
ಇದರ ಅರಿವಿರಲಿ
ಅನುಭವ ನುಡಿಯಲಿ
ನುರಿತ ಮೈಯಲ್ಲಿ ಯೌವನ ಉಳಿದಿರಲಿ
ಒಂದು ಗೆರೆ ಎಳೆಯಿರಿ

ಹಾದಿಯಲ್ಲಿ ರೇಶಮಿ ಹಾಸಿಗೆಯೇನಿಲ್ಲ
ಕಲ್ಲು ಮುಳ್ಳುಗಳು ಅಧಿಕ
ಮುಂದಾಲೋಚಿಸಿ ಹೆಜ್ಜೆಯನ್ನಿಡಿ
ಒಂದು ವೇಳೆ ತಪ್ಪಿ ಬಿದ್ದರೂ
ಎದ್ದೇಳಲು ಶಕ್ತಿ ಉಳಿದಿರಲಿ
ಒಂದು ಗೆರೆ ಎಳೆಯಿರಿ

ಜರ್ಜರ ಮನೆಯೆಂದು
ಕಲ್ಲು ಎಸೆಯುವವರ ಸಂಖ್ಯೆ ಹೆಚ್ಚು
ಕಿಟಕಿ ಗಾಜು ಮುರಿದರೆ ಹೆದರದಿರಿ
ಧೈರ್ಯದಿಂದಿರಿ
ಚೆನ್ನಾಗಿ ನಿರ್ವಹಿಸಲ್ಪಟ್ಟ ಇಟ್ಟಿಗೆ ಎಂದೂ ಮುರಿಯದು
ಸಲ್ಲದ ಮಾತಿಗೆ ಪ್ರತಿಕ್ರಿಯಿಸದಿರಿ
ಒಂದು ಗೆರೆ ಎಳೆಯಿರಿ

by ಹರೀಶ್ ಶೆಟ್ಟಿ, ಶಿರ್ವ 

1 comment:

  1. ಅತೀವ ಸಂಯಮವನ್ನು ಮತ್ತು ಒಂದೇ ನಿರ್ಧಾರದತ್ತ ಮನಸನ್ನು ಹುರಿಗೊಳಿಸುವ ಕವನವಿದು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...