Tuesday, 28 April, 2015

ಪ್ರಕೃತಿ

ನಾಶವಾಯಿತು ನಗರ
ಅಲ್ಲಲ್ಲಿ ನಡೆಯುತ್ತಿದೆ ಶವ ಸಂಸ್ಕಾರ
ಬೆಂಕಿಯ ಜ್ವಾಲೆ ಏರಿದೆ ಆಕಾಶ ಎತ್ತರ
ಭೂಮಿಗೆ ಇಂದು ಬೂದಿ ಸಿಂಗಾರ
---
ಭಾವರಹಿತ ಮುಖ
ಸೋತು ಹೋದ ಕಂಗಳು
ಜೀವರಹಿತ ದೇಹ
ಹೋದರು ನನ್ನವರೆನ್ನುವವರೆಲ್ಲ
ಅಯ್ಯೋ
ಆದರೆ ಬದುಕು ಬಾಕಿ ಇದೆಯಲ್ಲ
---
ಅನಾಥ ನಯನ
ಏನಾಯಿತು ಎಂದು ಅರಿವಿಲ್ಲ
ಅಮ್ಮ ಇಲ್ಲ ಅಪ್ಪನೂ ಇಲ್ಲ
ಅಲ್ಲಲ್ಲಿ ಓಡುತ್ತಿದ್ದಾರೆ ಎಲ್ಲ
ಯಾರಿಗೂ ಮುದ್ದು ಕೂಸಿನ ಗೋಚರವಿಲ್ಲ
---
ಪ್ರಕೃತಿ ಮೌನವಾಗಿದೆ
ಅಲ್ಲೆಲ್ಲೋ ಹಕ್ಕಿಯ ಕಲರವ ಕೇಳುತ್ತಿದೆ
ಗಗನ ಕೆಂಪೇರಿದೆ
ಪುನಃ ಹೊಸ ಸೂರ್ಯ ಮೂಡಿ ಬಂದಿದೆ
by ಹರೀಶ್ ಶೆಟ್ಟಿ, ಶಿರ್ವ

Monday, 27 April, 2015

ವಾಸ್ತವಿಕತೆ

ಮಂದಿರವೂ ಬಿತ್ತು
ಮಸೀದಿಯೂ ಬಿತ್ತು
ಆಚೆ ಈಚೆ ಶವಗಳು ಬಿದ್ದಿತ್ತು
ಎಲ್ಲೆಡೆ ಇಟ್ಟಿಗೆಯ ತುಂಡುಗಳ ರಾಶಿ ಇತ್ತು
ಮಂದಿರದ ಅವಶೇಷ  ಹಾಗು
ಮಸೀದಿಯ ಅವಶೇಷ ಒಟ್ಟಿಗೆ ಮಣ್ಣ ಪಾಲಾಯಿತು
ಪಂಡಿತ ಮೌಲವಿ ಇಬ್ಬರೂ
ಒಬ್ಬರನೊಬ್ಬರನ್ನು ಅಪ್ಪಿಕೊಂಡು ನಿಂತಿದ್ದರು ಅದರ ಮೇಲೆ
ಇಬ್ಬರ ಕಣ್ಣಿನಿಂದಲೂ ಧಾರಾಳವಾಗಿ ಅಶ್ರು ಹರಿಯುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ 

Sunday, 26 April, 2015

ಪ್ರಕೃತಿಯ ವಿಕೋಪ

ಮನೆ ಕಟ್ಟಿದರು
ಅರಮನೆ ಕಟ್ಟಿದರು
ಪ್ರೀತಿಗೋಸ್ಕರ ತಾಜಾ ಮಹಲ್ ಕಟ್ಟಿದರು
ಕನಸು ಕಟ್ಟಿದರು
ನನಸು ಮಾಡಿ ಮೆರೆದರು 
ಅಹಂ ನೆತ್ತಿಗೇರಿ ದೇವರನ್ನೂ ಮರೆದರು
ಮನುಜರೆ ಮಾನವೀಯತೆಯ ವೈರಿಯಾದರು
ಆದರೆ ಪ್ರಕೃತಿಯ ವಿಕೋಪದ ಮುಂದೆ ನಡೆಯದು ಈ ಎಲ್ಲ ಆಟ
ನಾಲ್ಕು ದಿನದ ಜೀವನ ನಾಲ್ಕು ದಿನದ ವೈವಾಟ
ನಮ್ಮ ಕೈಯಲ್ಲಿಯೇ ಇದೆ ನಮ್ಮ ಕರ್ಮ ಧರ್ಮ
ಎಂದೂ ಮರೆಯದಿರಿ ಈ ಜೀವನದ ಮರ್ಮ
ಕೇವಲ ಕೆಲವೇ ಸೆಕೆಂಡ್ ಬೇಕು ಎಲ್ಲವೂ ಮುಗಿಯಲು
ಉಸಿರು ಉಳಿಯದು ನಂತರ ಪಶ್ಚಾತಾಪ ಪಡೆಯಲು
by ಹರೀಶ್ ಶೆಟ್ಟಿ, ಶಿರ್ವ

ಈ ಹೃದಯ ಈ ಮರುಳು ಹೃದಯ ನನ್ನ

ಚಿತ್ರ ಕೃಪೆ : Google 
ಘಝಲ್ ಕೊಂಡಿ : Dailymotion
!!ಈ ಹೃದಯ ಈ ಮರುಳು ಹೃದಯ ನನ್ನ
ಯಾಕೆ ಬಾಡಿ ಹೋಯಿತು ಏಕಾಂಗಿತನ
ಈ ಮರುಭೂಮಿಯಲಿ ಒಂದು ಶಹರ ಇತ್ತು
ಅದೇನಾಯಿತು ಏಕಾಂಗಿತನ!!
ಈ ಹೃದಯ...

!!ನಿನ್ನೆ ಇರುಳಲ್ಲಿ ನನ್ನನ್ನು
ಗುಪ್ತ ಸ್ವರವೊಂದು ಚಕಿತಗೊಳಿಸಿತು
ನಾನು ಕೇಳಿದೆ ನೀನ್ಯಾರೆಂದು
ಅದು ಹೇಳಿತು ಏಕಾಂಗಿತನ!!
ಈ ಹೃದಯ...

!!ಒಂದು ನೀನು
ಶತಮಾನಗಳಿಂದ ನನ್ನ
ಸಹಯಾತ್ರಿ ಹಾಗು ಅಪ್ತ ಸ್ನೇಹಿತೆ
ಒಂದು ನಾನು
ನಿನ್ನ ಉಪಸ್ಥಿತಿಯಿಂದಲೇ ಅಜ್ಞಾನಿ ಏಕಾಂಗಿತನ!!
ಈ ಹೃದಯ...

!!ಒಂದು ಅಪರಿಚಿತ ತಂಗಾಳಿ
ನನ್ನಲ್ಲಿ ಕೇಳಿದಾಗ
ನನ್ನ ಅಳಲಿನ ಕಾರಣ
ಒದ್ದೆ ಮರುಳಲಿ ನಾನು ಬರೆದೆ ಏಕಾಂಗಿತನ!!
ಈ ಹೃದಯ...

!!ಈ ವೇದನೆಯ ಏಕಾಂತತೆ
ಈ ಮರುಭೂಮಿಯ ನೀರಸ ಪ್ರವಾಸ
ನಾನಂತೂ ಸೋತೋದೆ
ತನ್ನ ಹೇಳು ಏಕಾಂಗಿತನ!!
ಈ ಹೃದಯ..

!!ಜನರೇ ನಾನೇಗೆ
ಆ ಶಹರದಲಿ ಬದುಕಲಿ
ಮುಕ್ತವಾಗಿ ಯೋಚಿಸುವುದು
ಅಪರಾಧವೆಂದು ಪರಿಗಣಿಸಿದಲ್ಲಿ
ಆದರೆ ಅದರ ಸಜೆ ಏಕಾಂಗಿತನ!!
ಈ ಹೃದಯ...

!!ನಿನ್ನೆ ರಾತ್ರಿ
ಏಕಾಂಗಿ ಚಂದಿರನನ್ನು ನೋಡಿದೆ
ನಾನು ಸ್ವಪ್ನದಲಿ
ಬಹುಶಃ ಇದು ನನಗೆ
ಇಷ್ಟವಾಗಬಹುದು ಸದಾ ಏಕಾಂಗಿತನ!!
ಈ ಹೃದಯ...
(ಏಕಾಂಗಿತನ = ಅಲೆಮಾರಿತನ )

ಮೂಲ : ಮೊಹಸಿನ್ ನಕ್ವಿ
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗುಲಾಮ್ ಅಲಿ
ಆಲ್ಬಮ್ : ಮಾಟಿ ಮಾಂಗೆ ಖೂನ್  

Ye dil ye paagal dil mera, kyun bujh gayaa awaargi
is dasht mein ek sheher tha, woh kya hua aawaargi..

Kal shab mujhe beshakl ki awaaz ne chaunka diya,
Main ne kaha tu kaun hai, usne kaha aawaargi..

Ik tuu ki sadiyon se mere, hamraah bhi hamraaz bhi,
Ik main ki tere naam se naa aashnaa aawaargi..

Ek ajnabi jhaunke ne jab poocha mere gham ka sabab
sehera ki bheegi ret per, maine likha aawaargi..

Ye dard ki tanhaiyaan, ye dasht kaa viraan safar
hum log to ukta gaye apni suna, aawaargi..

Logon bhala us sheher mein kaise jiyenge hum jahaan
ho jurm tanhaa sochnaa, lekin sazaa aawaargi..

Kal raat tanha chaand ko dekha tha maine khwaab mein
“Mohsin” mujhe raas aayegii shaayad sada aawaargi..


Ye dil ye paagal dil mera, kyun bujh gayaa awaargi
is dasht mein ek sheher tha, woh kya hua aawaargi..
http://www.dailymotion.com/video/x193b8a_yeh-dil-yeh-pagal-dil-mera-by-ghulam-ali_music

Saturday, 25 April, 2015

ಅವಶ್ಯಕತೆ

ಗೆಳತಿ,
ಈ ಸಣ್ಣ ಪುಟ್ಟ ವಿಷಯಕ್ಕೆಲ್ಲ
ಮುನಿಸಿ ಕೂತು
ನಮ್ಮಲ್ಲಿ ಅಂತರ ಬೆಳಸದಿರು,
ನನಗೆಷ್ಟು ನಿನ್ನ 
ಅವಶ್ಯಕತೆ ಇದೆಯೋ,
ಅಷ್ಟೇ ನಿನಗೂ ನನ್ನ
ಅವಶ್ಯಕತೆ ಇದೆ ಎಂಬ ಸತ್ಯ ಮರೆಯದಿರು.
by ಹರೀಶ್ ಶೆಟ್ಟಿ, ಶಿರ್ವ

Thursday, 23 April, 2015

ಒಬ್ಬ ರೈತ ಸಾಯುತ್ತಾನೆ

ಮಳೆ ಬರದಿದ್ದಾಗ
ಭೂಮಿ ಬಂಜರಾದಾಗ  
ಆಕಾಶವನ್ನು ಸತತ ದಿಟ್ಟಿಸಿ ನೋಡುವ ಕಣ್ಣುಗಳು ಸೋತು ತಗ್ಗಿದಾಗ
ಪರಿವಾರದ ಮಕ್ಕಳು ತುತ್ತು ಅನ್ನಕ್ಕಾಗಿ ಅತ್ತಾಗ
ಹೆಂಗಸರು ನೆರೆಹೊರೆಯಲಿ ಧಾನ್ಯಕ್ಕಾಗಿ ಓಡಾಡುವಾಗ
ಬ್ಯಾಂಕಿನ ಸಾಲದ ಕಂತು ತುಂಬಿಸದೆ
ಅವರಿಂದ ಬೆದರಿಕೆ ಬಂದಾಗ
ಒಬ್ಬ ರೈತ ಸಾಯುತ್ತಾನೆ

ಜಗಕ್ಕೆ ಅನ್ನ ನೀಡುವವನು
ದಿನ ರಾತ್ರಿ ದುಡಿಯುವವನು
ಯಾವುದೇ ಕಷ್ಟವನ್ನು ಸಹಿಸಿ
ತನ್ನ ನೋವು ದುಡಿಮೆಯಿಂದ ಭೂಮಿಗೆ ಅರ್ಪಿಸುವನು
ಇದ್ದಕ್ಕಿದ್ದಂತೆ ಆಪತ್ತು ಬಂದಾಗ
ಯಾವುದೇ ಹಾದಿ ಕಾಣದಾಗ
ಜೀವನದಿಂದ ಹತಾಶೆ ಉಂಟಾದಾಗ
ಒಬ್ಬ ರೈತ ಸಾಯುತ್ತಾನೆ

ಅನ್ನದಾತ ಅವನು
ಜಗತ್ತಿನ ಹೊಟ್ಟೆ ಕಾಪಾಡುವವನು
ಪುಷ್ಕಲ ನೀಡಿ ಸ್ವಲ್ಪ ಪಡೆಯುವವನು
ಯಾವುದೇ ಹಂಗಿಲ್ಲದೆ ಜೀವಿಸುವವನು
ಪರಿಶ್ರಮವೇ ಭಗವಂತ ಎನ್ನುವವನು
ಮಣ್ಣನ್ನು ಪೂಜಿಸುವವನು
ಮಣ್ಣೇ ಕಲ್ಲಾದಾಗ
ಒಬ್ಬ ರೈತ ಸಾಯುತ್ತಾನೆ

ನಮ್ಮನ್ನು ಕಾಪಾಡಿ ಎನ್ನುವನು ಅವನು
ನಮಗೋಸ್ಕರ ಹೋರಾಡಿ ಎನ್ನುವನು ಅವನು
ಕೇವಲ ಸಹಾಯ ಹಸ್ತ ನೀಡಿ ಎನ್ನುವನು ಅವನು
ಕೇವಲ ನಮ್ಮ ಶ್ರಮಕ್ಕೆ ತಕ್ಕ ಬೆಲೆ ಕೊಡಿ ಎನ್ನುವನು ಅವನು
ಇಲ್ಲವಾದರೆ
ದುಡಿಮೆ ವ್ಯರ್ಥವಾಯಿತೆಂದು ತಿಳಿದು ಬಂದಾಗ
ಬೆವರಿನ ಬೆಲೆ ಸಿಗದೇ ಇದ್ದಾಗ
ತಾನು ಮಾಡಿದ ಉತ್ಪನ್ನದಿಂದ
ಇನ್ಯಾರೋ ಹಣ ಸಂಪಾದಿಸುವುದನ್ನು ಕಂಡು
ಕಣ್ಣಿಂದ ಧಾರಾಳವಾಗಿ ಅಶ್ರು ಸುರಿದಾಗ
ಪ್ರತಿದಿನವೂ
ಒಬ್ಬ ರೈತ ಸಾಯುತ್ತಾನೆ

by ಹರೀಶ್ ಶೆಟ್ಟಿ, ಶಿರ್ವ 

Wednesday, 22 April, 2015

ಜಗತ್ತನ್ನು ಸೃಷ್ಟಿಸಿದವನೆ

ಚಿತ್ರಕೃಪೆ : Google 
ಹಾಡಿನ ಕೊಂಡಿ :You Tube 
!!ಜಗತ್ತನ್ನು ಸೃಷ್ಟಿಸಿದವನೆ
ಮನಸ್ಸಲ್ಲಿ ನಿನ್ನ ಬಂತು ಅದೇನು
ಯಾಕೆ ಸೃಷ್ಟಿಸಿದೆ ಜಗತ್ತನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

!!ಯಾಕೆ ಸೃಷ್ಟಿಸಿದೆ ನೀನು ಮಣ್ಣಿನ ಗೊಂಬೆಗಳನ್ನು
ಧರತಿ ಇದು ಸುಂದರ ಸುಂದರ
ತೇಜಸ್ವಿ ಮುಖಗಳನ್ನು
ಯಾಕೆ ಸೃಷ್ಟಿಸಿದೆ ಜಗತ್ತಿನ ಆಟಗಳನ್ನು
ಅದರಲಿ ನಡೆಸಿದೆ ಯೌವನದ ಜಾತ್ರೆಗಳನ್ನು  
ಮೌನದಿ ತಮಾಷೆ ನೋಡುವೆ
ನಿನ್ನ ವಿಧಿಯ ಗಮ್ಮತ್ತನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

!!ನೀನೂ ನೋವನ್ನು ಅನುಭವಿಸಿರಬೇಕು ಮನಸ್ಸನ್ನು ನಿರ್ಮಿಸಿ
ಬಿರುಗಾಳಿ ಈ ಪ್ರೀತಿಯ ಮನಸ್ಸಲ್ಲಿ ಅಡಗಿಸಿ
ಯಾವುದಾದರು ಚಿತ್ರ ಇರಬೇಕು ಕಣ್ಣಲ್ಲಿ ನಿನ್ನ
ಕಣ್ಣೀರು  ಸುರಿದಿರಬೇಕು ಕಣ್ಣಿಂದ ನಿನ್ನ
ಹೇಳು ಏನು ಕಲ್ಪನೆ ಬಂತು ನಿನಗೆ
ಯಾಕೆ ಹುಟ್ಟಿಸಿದೆ ಪ್ರೀತಿಯನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

!!ಪ್ರೀತಿ ಸೃಷ್ಟಿಸಿ ನೀನು ಬದುಕುವುದನ್ನು ಕಲಿಸಿದೆ
ನಗುವುದನ್ನು ಕಲಿಸಿದೆ, ಅಳುವುದನ್ನು ಕಲಿಸಿದೆ
ಜೀವನದ ಪಥದಲಿ ಸಂಗಾತಿ ನೀಡಿದೆ
ಸಂಗಾತಿ ನೀಡಿ ಕನಸು ಹುಟ್ಟಿಸಿದೆ
ಕನಸು ಹುಟ್ಟಿಸಿ ನೀನು
ಯಾಕೆ ನೀಡಿದೆ ಅಗಲಿಕೆಯ ನೋವನ್ನು!!
ಯಾಕೆ ಸೃಷ್ಟಿಸಿದೆ ಜಗತ್ತನ್ನು

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ತೀಸ್ರಿ ಕಸಮ್

दुनियाँ बनाने वाले, क्या तेरे मन में समायी
काहे को दुनियाँ बनायी, तूने काहे को दुनियाँ बनायी

काहे बनाये तू ने माटी के पुतले
धरती ये प्यारी प्यारी, मुखड़े ये उजले
काहे बनाया तू ने दुनियाँ का खेला
जिस में लगाया जवानी का मेला
गुपचुप तमाशा देखे, वाह रे तेरी खुदाई

तू भी तो तड़पा होगा मन को बनाकर
तूफां ये प्यार का मन में छुपाकर
कोई छबी तो होगी आँखों में तेरी
आँसू भी छलके होंगे पलकों से तेरी
बोल क्या सूझी तुझ को, काहे को प्रीत जगाई

प्रीत बना के तू ने जीना सिखाया
हसना सिखाया, रोना सिखाया
जीवन के पथ पर मीत मिलाये
मीत मिला के तू ने सपने जगाये
सपने जगा के तू ने, काहे को दे दी जुदाई
https://www.youtube.com/watch?v=V2npO5E7IBM

Tuesday, 21 April, 2015

ಫೇಸ್ಬುಕ್

ವಿಚಿತ್ರ ಈ ಫೇಸ್ಬುಕ್ ತಾಣ
ಅವರವರ ಮಟ್ಟಿಗೆ ಅವರೇ ಜಾಣ
ತಕ್ಷಣ ಕಳಿಸುತ್ತಾರೆ ಗೆಳೆತನದ ಆಮಂತ್ರಣ
ಕೆಲವು ದಿನ ನಮಸ್ಕಾರ ಪ್ರಣಾಮ
ಮತ್ತೊಂದು ದಿನ ಗೆಳೆತನದ ಪಟ್ಟಿಯಲ್ಲಿ ಅವರ ಇರುವುದಿಲ್ಲ ನಾಮ

ಆರಂಭದಲ್ಲಿ ಎಲ್ಲೆಲ್ಲಿಂದ ಒದಗಿ ಬರುತ್ತದೆ ನಂಟು
ಪ್ರೀತಿ ಮೋಹ ಗಮ್ಮತ್ತು
ಲೈಕುಗಳ ವರ್ಷ, ಕಮೆಂಟು ಬರುವುದಕ್ಕೆ ಇಲ್ಲ ಪುರುಸೊತ್ತು
ಜನ್ಮ ದಿನದಂದು ಕೇಕ್, ಉಪಹಾರ, ಜನ್ಮ ದಿನದ ಕವಿತೆ
ದಿನ ರಾತ್ರಿ ಸಂದೇಶ ಮಾತುಕತೆ

ನಂತರ ಕಾರಣವಿಲ್ಲದೆ ಅವರಾಗುತ್ತಾರೆ ದೂರ ದೂರ
ನಮ್ಮ ಸಂದೇಶಕ್ಕೂ ಅವರ ಇರುವುದಿಲ್ಲ ಉತ್ತರ
ನಮ್ಮ ಬರಹಕ್ಕೆ ಅವರ ಲೈಕು ಕಮೆಂಟುಗಳ ಬರಗಾಲ
ಜನ್ಮ ದಿನದಂದು ಸಾದಾ ಶುಭಾಶಯವೂ ಇಲ್ಲ
ವಿಚಿತ್ರ ಏನೆಂದರೆ ಗೆಳೆತನದ ಪಟ್ಟಿಯಲ್ಲಿ ಇದ್ದು ಸಹ ಅವರಿಲ್ಲ

ಕೆಲವು ಮಿತ್ರರ ವಿಚಿತ್ರ ನಡುವಳಿಕೆ
ನಂಬದ ವ್ಯಥೆ ನಂಬದ ಕಥೆ
ಕೆಲವರಿಗೆ ಬೇಕು ದಾನ
ಕೆಲವರು ಕೇಳುತ್ತಾರೆ ಸಾಲ
ನಾವು ಮೌನ ಧರಿಸಿದಾಗ ಸಿಗುತ್ತದೆ ಅವರ ಬೈಗುಳ

ಹಳೆಯಾದಂತೆ ಹತ್ತಿರದ ಗೆಳೆಯರು ಕಣ್ಮರೆ
ನಮ್ಮ ತಲೆಯಲ್ಲಿ ಎಂತೆಂತಹ ಯೋಚನೆ
ಇದೇ ಫೇಸ್ಬುಕ್ ಮಾಯೆ
ಇದೇ ಫೇಸ್ಬುಕ್ ಗೆಳೆತನದ ಅರ್ಥ
ಒಂದೊಂದು ವೇಳೆ ಅನಿಸುತ್ತದೆ ಇದು ಕೇವಲ ಸಮಯ ವ್ಯರ್ಥ

ಆದರೆ ಇದನ್ನು ಹೊರತು
ಇಲ್ಲಿ ಒಳ್ಳೆಯವರೂ ಇದ್ದಾರೆ
ಸ್ನೇಹದ  ಸಂಬಂಧದ ಅರ್ಥ ತಿಳಿದಿದ್ದಾರೆ
ಅವರಿಂದಲೇ ಈಗಲೂ ಫೇಸ್ಬುಕ್ ಆಗಿದೆ ಇಷ್ಟದ ಹವ್ಯಾಸ
ಹೊರಗಿನ ಜಗ ಹಾಗು ಫೇಸ್ಬುಕ್ ಇದರಲ್ಲಿ ಇಲ್ಲ ಹೆಚ್ಚು ವ್ಯತ್ಯಾಸ

by ಹರೀಶ್ ಶೆಟ್ಟಿ, ಶಿರ್ವ 

Friday, 17 April, 2015

ಒಂದು ಗೆರೆ ಎಳೆಯಿರಿ

ಒಂದು ಗೆರೆ ಎಳೆಯಿರಿ
ಎಲ್ಲವೂ ಬೇಕೆಂದು ಹೇಳದಿರಿ
ನಿಯಮ ಇರಲಿ
ನಿಯಂತ್ರಣವಿರಲಿ
ತನಗೆ ಅವಶ್ಯಕ ಏನೆಂದು ತಿಳಿದಿರಲಿ
ಒಂದು ಗೆರೆ ಎಳೆಯಿರಿ

ತನಗೆ ಏನು ಒಳ್ಳೆಯದು
ಏನು ಒಳ್ಳೆಯದಲ್ಲ
ಇದರ ಅರಿವಿರಲಿ
ಅನುಭವ ನುಡಿಯಲಿ
ನುರಿತ ಮೈಯಲ್ಲಿ ಯೌವನ ಉಳಿದಿರಲಿ
ಒಂದು ಗೆರೆ ಎಳೆಯಿರಿ

ಹಾದಿಯಲ್ಲಿ ರೇಶಮಿ ಹಾಸಿಗೆಯೇನಿಲ್ಲ
ಕಲ್ಲು ಮುಳ್ಳುಗಳು ಅಧಿಕ
ಮುಂದಾಲೋಚಿಸಿ ಹೆಜ್ಜೆಯನ್ನಿಡಿ
ಒಂದು ವೇಳೆ ತಪ್ಪಿ ಬಿದ್ದರೂ
ಎದ್ದೇಳಲು ಶಕ್ತಿ ಉಳಿದಿರಲಿ
ಒಂದು ಗೆರೆ ಎಳೆಯಿರಿ

ಜರ್ಜರ ಮನೆಯೆಂದು
ಕಲ್ಲು ಎಸೆಯುವವರ ಸಂಖ್ಯೆ ಹೆಚ್ಚು
ಕಿಟಕಿ ಗಾಜು ಮುರಿದರೆ ಹೆದರದಿರಿ
ಧೈರ್ಯದಿಂದಿರಿ
ಚೆನ್ನಾಗಿ ನಿರ್ವಹಿಸಲ್ಪಟ್ಟ ಇಟ್ಟಿಗೆ ಎಂದೂ ಮುರಿಯದು
ಸಲ್ಲದ ಮಾತಿಗೆ ಪ್ರತಿಕ್ರಿಯಿಸದಿರಿ
ಒಂದು ಗೆರೆ ಎಳೆಯಿರಿ

by ಹರೀಶ್ ಶೆಟ್ಟಿ, ಶಿರ್ವ 

Saturday, 4 April, 2015

ಯಾರನ್ನು ಮರೆಯಲು ಬಯಸುತ್ತೇನೋ

!!ಯಾರನ್ನು ಮರೆಯಲು ಬಯಸುತ್ತೇನೋ
ಅವರ ಪದೇ ಪದೇ ನೆನಪಾಗುತ್ತದೆ
ಹಾಳಾಗಿ ಹೋಗಲಿ ಈ ಪ್ರೀತಿ
ಅವರ ಯಾಕೆಂದು ನೆನಪಾಗುತ್ತದೆ!!
ಯಾರನ್ನು ಮರೆಯಲು...

!!ಮರೆಯುವುದಾದರೆ ಮರೆಯುವುದು ಹೇಗೆ
ಅದೆಂದೋ ಕುಡಿದಿದ್ದೆ ಆ ಕಂಗಳಿಂದ
ಈ ಅಶ್ರು ಹರಿದು ಬಂದಾಗ
ಆ ಸಾಗರ ನೆನಪಾಗುತ್ತದೆ!!
ಯಾರನ್ನು ಮರೆಯಲು...

!!ಯಾರದ್ದೋ ಉರಿಯುವ ಅಧರವಾಗಿತ್ತೆ
ಅಥವಾ ಯಾವುದೇ ದೀಪ ಪ್ರಜ್ವಲಿಸುತ್ತಿತ್ತೆ
ಅದೆಂದೋ ಪೂಜಿಸುತ್ತಿದ್ದ ಆ ಸ್ಥಾನ
ಆ ದೃಶ್ಯ ನೆನಪಾಗುತ್ತದೆ!!
ಯಾರನ್ನು ಮರೆಯಲು...

!!ಹೇ ದೀಪವೆ ಬೆಳಗುತ್ತಿರು
ಬೇಡುತ್ತಿದೆ ಈ ಪತಂಗೆ
ಸುಡುವುದೇ ಯಾರ ಭಾಗ್ಯವೋ
ಸುಟ್ಟು ಸಹ ಅವರ ನೆನಪಾಗುತ್ತದೆ!!
ಯಾರನ್ನು ಮರೆಯಲು...

ಮೂಲ : ಜಿ. ಎಸ್. ರಾವಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ ; ಸೋನಿಕ್ ಓಮಿ
ಚಿತ್ರ : ಆರ್ಜೂ
Jinhe hum bhoolna chahen
Woh aksar yaad aate hain
Jinhe hum bhoolna chahen
Woh aksar yaad aate hain
Bura ho is mohabbat ka
Bura ho is mohabbat ka
Woh kyun kar yaad aate hain
Jinhe hum bhoolna chahen
Woh aksar yaad aate hain

Bhulayen kis tarah unko
Kabhi pee thi un aankhon se
Bhulayen kis tarah unko
Kabhi pee thi un aankhon se
Kabhi pee thi un aankhon se
Chhalak jaate hain jab aansu
Chhalak jaate hain jab aansu
Woh sagar yaad aate hain
Jinhe hum bhoolna chahen
Woh aksar yaad aate hain

Kisi ke surkh lab the ya
Diye ki lau machalati thi
Kisi ke surkh lab the ya
Diye ki lau machalati thi
Diye ki lau machalati thi
Jahan ki thi kabhi puja
Jahan ki thi kabhi puja
Woh manzar yaad aate hain
Jinhe hum bhoolna chahen
Woh aksar yaad aate hain

Rahe aye shamma tu roshan
Dua deta hai parwana
Rahe aye shamma tu roshan
Dua deta hai parwana
Jinhe kismat mein jalna hai
Jinhe kismat mein jalna hai
Woh jal kar yaad aate hain

Jinhe hum bhoolna chahen
Woh aksar yaad aate hain
Bura ho is mohabbat ka
Bura ho is mohabbat ka
Woh kyun kar yaad aate hain
Jinhe hum bhoolna chahen
Woh aksar yaad aate hain
Jinhe hum bhoolna chahen.
https://www.youtube.com/watch?v=OO4HEoV_5EI