Sunday, March 22, 2015

ಹಾರಿ ಹೋಗು ಓ ಹಕ್ಕಿಯೇ

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
!!ಹಾರಿ ಹೋಗು ಓ ಹಕ್ಕಿಯೇ, 
ದೇಶ ಈ ಪರಕೀಯ ಇನ್ನು!!

!!ನೀನು ಕದಿರು ಕದಿರು ಒಟ್ಟುಗೂಡಿಸಿ 
ನಗರ ಈ ನೆಲೆಸಿದ್ದೆ,
ಮಳೆಯಲಿ ನಿನ್ನ ರೆಕ್ಕೆ ಒದ್ದೆಯಾದವು, 
ಬಿಸಿಲಿನ ತಾಪ ಸಹಿಸಿದೆ,
ದುಃಖಿಸದಿರು ನಿನ್ನ ದುಡಿಮೆ 
ನಿನ್ನ ಉಪಯೋಗಕ್ಕೆ
ಬರಲಿಲ್ಲವೆಂದು,
ಕೊಂಡೊಯ್ಯುವುದಕ್ಕಿಂತ 
ಕೊಟ್ಟೋಗುವುದೇ ಚೆನ್ನ ಇನ್ನು!!
ಹಾರಿ ಹೋಗು ಓ ಹಕ್ಕಿಯೇ...

!!ಮರೆ ಈಗ ಆ ತಂಗಾಳಿ
ಹಾರುವುದು ಶಾಖೆಯಿಂದ ಶಾಖೆಗೆ
ಜಗದ ಕಣ್ಣಿಗೆ ನೋಡಲಾಗಲಿಲ್ಲ
ನಿನ್ನ ಸುಂದರ ಆಕರ್ಷಕ ನಡಿಕೆ,
ಲೋಕ ಯಾಕೆ ತಲೆ ಕೆಡಿಸಿಕೊಳ್ಳುವರು
ಮಾಲಿಯೇ ಇಲ್ಲದ ಈ ತೋಟಕ್ಕೆ, 
ನಿನ್ನ ಹಣೆಯಲ್ಲಿಯೇ ಬರೆದಿದೆ, 
ಬದುಕಿನಲ್ಲೇ ಸಾಯುವುದನ್ನು!!
ಹಾರಿ ಹೋಗು ಓ ಹಕ್ಕಿಯೇ...

!!ಅಳುತ್ತಿದ್ದಾರೆ ಆ ಪಕ್ಷಿಗಳು ಈಗ,
ನಿನ್ನ ಜೊತೆಯಲ್ಲಿ ಆಡಿಕೊಂಡವರು,
ಅವರೊಂದಿಗೆ ಕಟ್ಟಿಕೊಂಡಿದೆ ನೀನು
ಅದೆಷ್ಟೋ ಬಯಕೆಗಳು,
ತೇವಗೊಂಡ ಕಣ್ಣಿಂದಲೇ ಇಂದು
ಅವರಿಗೆ ವಿದಾಯ ಹೇಳು ನೀನು,
ಯಾರಿಗೆ ತಿಳಿದಿದೆ ಇನ್ಯಾವಾಗ 
ಆಗಮನ ಆಗಲಿದೆ ನಿನ್ನ ಇನ್ನು!!  
ಹಾರಿ ಹೋಗು ಓ ಹಕ್ಕಿಯೇ..

ಮೂಲ : ರಾಜೇಂದ್ರ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ ರಫಿ
ಸಂಗೀತ : ಚಿತ್ರಗುಪ್ತ್
ಚಿತ್ರ : ಭಾಬಿ

चल उड़ जा रे पंछी, के अब ये देस हुआ बेगाना

तू ने तिनका तिनका चुनकर नगरी एक बसायी
बारीश में तेरी भीगी पाख़े, धूप में गर्मी खायी
ग़म ना कर जो तेरी मेहनत तेरे काम ना आई
अच्छा हैं कुछ ले जाने से दे कर ही कुछ जाना

भूल जा अब वो मस्त हवा, वो उड़ना डाली डाली
जग की आँख का कांटा बन गयी चाल तेरी मतवाली
कौन भला उस बाग को पूछे, हो ना जिसका माली
तेरी किस्मत में लिखा हैं, जीते जी मर जाना

रोते हैं वो पंख पखेरू, साथ तेरे जो खेले
जिनके साथ लगाये तू ने अरमानों के मेले
भीगी आखियों से ही उन की आज दूवायें ले ले
किस को पता अब इस नगरी में कब हो तेरा आना
https://www.youtube.com/watch?v=3OeBpYBDvig

2 comments:

  1. 'ಯಾರು ಯಾಕೆಂದು ತಲೆ ಕೆಡಿಸಿಕೊಳ್ಳುವರು
    ಮಾಲಿಯೇ ಇಲ್ಲದ ಈ ತೋಟಕ್ಕೆ'
    Classic ಭಾವಾನುವಾದ.
    ರಫೀ ಸಾಬ್ ultimate.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...