Tuesday, March 17, 2015

ರವಿ ಅಸ್ತನಾದ

ಬೆಳಕನು ಬೀರಲೆಂದು ಬಂದ
ಜಗಕೆ ಮುಖ ತೋರಿಸಿ ಹೋದ 
ಮಸುಕಾಯಿತು
ರವಿ ಅಸ್ತನಾದ
ಕರಿ ಮೋಡಗಳು
ಕ್ಷಣಿಕ ಸಮಯಕ್ಕಾಗಿ ಮುತ್ತಿಟ್ಟವು
ಅವರಿಗೆ ಅನಿಸಿತು
ರವಿ ಅಸ್ತನಾದ
ಪ್ರಕೃತಿಯ ನಿಯಮದ ಅರಿವಿಲ್ಲ ಅವರಿಗೆ
ಪುನಃ ಉದಯ ನಿಶ್ಚಿತವೆಂದು ಮರೆತರು
ತಿಳಿದರು
ರವಿ ಅಸ್ತನಾದ
ರವಿ ಎಂಬುದಕ್ಕೆ ಸಾವಿಲ್ಲ
ಪ್ರತಿ ನಿತ್ಯ ಜನ್ಮ ಅದರ
ಕೇವಲ ತುಸು ಸಮಯಕ್ಕಾಗಿ
ರವಿ ಅಸ್ತನಾದ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಆದರೂ ಈ ಸಾವು ನ್ಯಾಯವೇ? :-(

    ReplyDelete
  2. ಈ ರಾಜಕಾರಣಿಗಳು ಪೂರ್ಣವಾಗಿ ಮಾನವೀಯತೆಯನ್ನು ತೊರೆದಿದ್ದಾರೆ, ನ್ಯಾಯ ಅನ್ಯಾಯದ ಅರಿವು ಅವರಿಂದ ಎಷ್ಟೋ ದೂರ, ಈ ಹಾಳು ರಾಜಕಾರಣಿಗಳನ್ನು ದೇವರೇ ಕಾಪಾಡಲಿ. ನಮ್ಮಿಂದ ಅಗಲಿದ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...