Monday, March 16, 2015

ವಾತಾವರಣ ಪ್ರೇಮಮಯವಾಗಿದೆ

ಚಿತ್ರಕೃಪೆ : Google 
ಹಾಡಿನ ಕೊಂಡಿ: You Tube 
!!ವಾತಾವರಣ ಪ್ರೇಮಮಯವಾಗಿದೆ
ಹೇ ಮನಸ್ಸೇ ಎಲ್ಲಿಂದಲೂ ಅವರನ್ನು
ಇಂತಹದರಲ್ಲಿ ಹುಡುಕಿಕೊಂಡು ಬರಬೇಕಾಗಿದೆ!!
ವಾತಾವರಣ...

!!ಹೇಳು ಋತು ಯೌವನವಾಗಿದೆ
ಹಾಗು ಇದು ನನ್ನನ್ನು ಹಂಬಲಿಸುತ್ತಿದೆ
ಕರಿ ಮೇಘದ ನೆರಳು
ಅಗಲಿಕೆಯಲ್ಲಿದ್ದ ನನ್ನನ್ನು ಭಯ ಪಡಿಸುತ್ತಿದೆ
ಈ ಪರಿಸ್ಥಿತಿ ನನ್ನನ್ನು ಕೊಲ್ಲಬಹುದೆಂಬ
ಹೆದರಿಕೆ ನನ್ನನ್ನು ಸತಾಯಿಸುತ್ತಿದೆ
ವರ್ಷ ಋತುವಿನ ಎಲ್ಲಿ ಏನು ಭರವಸೆ?
ಯಾವುದೇ ಸಮಯವೂ ಆಗಮಿಸಲಿದೆ!!
ವಾತಾವರಣ...

!!ಸೂರ್ಯ ಎಲ್ಲಿಯೂ ಹೋಗಲಿ
ನಿನಗೆ ಸೋಕದಿರಲಿ ಬಿಸಿಲು
ನಿನ್ನನ್ನು ಕರೆಯುತ್ತಿದೆ
ಈ ಕೇಶಗಳ ನೆರಳು
ಬಂದೇ ಬಿಡು
ನಿನಗೆ ಛಾಯೆ ನೀಡಲು
ನನ್ನ ಕಣ್ರೆಪ್ಪೆ ತವಕದಲ್ಲಿದೆ!!
ವಾತಾವರಣ...

!!ತಿರುಗುತ್ತಿದ್ದೇನೆ ಒಬ್ಬಂಟಿ ನಾನಿಲ್ಲಿ
ಬಾಹುಗಳಲ್ಲಿ ಯಾರಾದರೂ ಬಂಧಿಸಲಿ
ಯಾರು ಎಷ್ಟು ಸಮಯ
ಈ ಏಕಾಂತದಲಿ ಕಳೆಯಲಿ
ಹಗಲು ದುಷ್ಟವಾಗಿದೆ
ರಾತ್ರಿ ಕೊಲ್ಲುತ್ತಿದೆ!!
ವಾತಾವರಣ...

!!ಈ ರಾತ್ರಿ ಈ ಮೌನ
ಈ ಸ್ವಪ್ನದ ನೋಟಗಳು
ಇದು ಮಿಂಚುಳುಗಳಾ?
ಅಥವಾ ಭೂಮಿಗೆ ಇಳಿದು ಬಂದಿದೆಯ ತಾರೆಗಳು
ನಿದ್ರೆಯಲಿ ನನ್ನ ಕಂಗಳು
ಅಮಲಲಿ ಎಲ್ಲ ಜಗತ್ತಿದೆ!!
ವಾತಾವರಣ...

ಮೂಲ : ಕಮಲ್ ಅಮ್ರೋಹಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಗುಲಾಮ್ ಮೊಹಮ್ಮದ್
ಚಿತ್ರ : ಪಾಕೀಜಾ

मौसम है आशिकाना
ऐ दिल कहीं से उनको ऐसे में ढूंढ लाना

कहना के रुत जवां है, और हम तरस रहे हैं
काली घटा के साये, बिरहन को डस रहे हैं
डर है ना मार डाले, सावन का क्या ठिकाना

सूरज कही भी जाये, तुम पर ना धूप आये
तुम को पुकारते हैं, इन गेसूओं के साये
आ जाओ मैं बना दू, पलकों का शामियाना

फिरते हैं हम अकेले, बाहों में कोई ले ले
आखिर कोई कहा तक तनहाईयों से खेले
दिन हो गये हैं ज़ालिम, राते हैं कातिलाना

ये रात ये खामोशी, ये ख्व़ाब से नज़ारें
जुगनू हैं या जमींपर उतरे हुये हैं तारें
बेख़ाब मेरी आँखे, मदहोश है ज़माना
https://www.youtube.com/watch?v=LXW6OEbx7GQ

2 comments:

  1. ಗುಲಾಮ್ - ಅಮ್ರೋಹಿ - ಲತಾಜೀ ಅವರಿಂದ ಅತ್ಯುತ್ತಮ ಗೀತೆ.
    'ನಿನಗೆ ಛಾಯೆ ನೀಡಲು
    ನನ್ನ ಕಣ್ರೆಪ್ಪೆ ತವಕದಲ್ಲಿದೆ!!'
    ಒಳ್ಳೆಯ ಭಾವಾನುವಾದ.

    ಪಾಕಿಜಾ ಚಿತ್ರಕ್ಕೆ ಜರ್ಮನಿ ಸಂಜಾತ, ಮುಂಬೈನಲ್ಲಿ ತೀರಿಕೊಂಡ ಜೋಸೆಫ್ ವ್ರಿಸ್ಚಿಂಗ್ ಅವರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...