Tuesday, February 24, 2015

ನಿನ್ನ ಸಣ್ಣದೊಂದು ತಪ್ಪಿನಿಂದಾಗಿ

ಚಿತ್ರಕೃಪೆ : Google 
ಹಾಡಿನ ಕೊಂಡಿ: You Tube 
ನಿನ್ನ ಸಣ್ಣದೊಂದು ತಪ್ಪಿನಿಂದಾಗಿ
ಎಲ್ಲಾ ಉದ್ಯಾನ ನಾಶವಾಯಿತು!
ಇನ್ನು ಮತ್ತೊಮ್ಮೆ ಘಮಘಮಿಸಬಹುದೇ ಹೂವು?
ಇನ್ನು ಮತ್ತೊಮ್ಮೆ ವಸಂತ ಬರಬಹುದೇ?
ನಿನ್ನ ಸಣ್ಣದೊಂದು...

ಎಂಥ ಪದ್ಧತಿ ಇದು?  
ಯಾರೋ ಮಾಡುವುದು
ಯಾರೋ ಅನುಭವಿಸುವುದು
ನ್ಯಾಯ ಅಲ್ಲ ಅನ್ಯಾಯ ಇದು
ದೋಷಿ ಬದುಕಿಕೊಂಡಿರುವುದು
ನಿರ್ದೋಷಿ ಸಾಯುವುದು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ಕತ್ತಲೆಯನ್ನು ನೀಡಿ
ನೀನು ಇವನಿಗೆ
ಕಸಿದುಕೊಂಡೆ ನಯನದ ನಗುವನ್ನು
ಸಂಧ್ಯಾ ಮುಂಜಾವು
ಹಗಲು ಇರುಳು
ಇವನಿಗೆ ಒಂದೇ ಸಮಾನ ಇನ್ನು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ನಿನ್ನ ಚಲನೆಯ
ಬಿರುಗಾಳಿಯಿಂದ
ನೋಡು ಎಷ್ಟು ಮನೆ ಕಸಿದೋಯಿತು
ಚೂರುಚೂರಾಯಿತು
ಸಂಬಂಧಗಳು
ಭಾಗಿ ಬದುಕಿನ ಬಿಟ್ಟೋಯಿತು!
ಕೇಳು ನೀನಯ್ಯ
ನಿನ್ನಿಂದ ಹೇಳುತ್ತಿದೆ ನಿನ್ನ ಹೃದಯ
ನಿನ್ನ ಸಣ್ಣದೊಂದು...

ಮೂಲ : ಗೌಹರ್ ಕಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಶಿಕ್ಷಾ
Teri Chhoti Si Ek Bhuul Ne Saaraa Gulshan Jalaa Diyaa
Kyaa MahakeNge Phir Phuul Kabhi, Kyaa Phir Se BahaareN AaeNgi
Jaane KahaaN Ki Rit Hai Ye, Koi Kare Aur Koi Bhare
Nyaaya NahiN Anyaaya Hai Ye, Doshi Ji_E, Nirdosh Mare
Sun Le Tuu Ai QaafilTujhase Kahe Teraa Dil
Teri Chhoti Si 
Tuune ANdhere De Ke Ise, Chhin Li NainoN Ki Muskaan
SaaNjh Savere, Raat Aur Din, Isake Lie Ek Samaan
Sun Le Tuu Ai Qaafil, Tujhase Kahe Teraa Dil
Teri Chhoti Si 
Tere Chalan Ki AaNdhi Ne, Dekh Le Kitane Ghar Luute
Bikhar Gae Rishte Naate, Jivan Ke Saathi Chhuute
Sun Le Tuu Ai Qaafil, Tujhase Kahe Teraa Dil
Teri Chhoti Si
https://www.youtube.com/watch?v=kwVlCrBGKKs

2 comments:

  1. ಗೌಹರ್ ಕಾನ್ಪುರಿ ಅವರ ಮೂಲಕ್ಕೆ ಅಮೋಘವಾದ ಭಾವಾರ್ಥ ಕೊಟ್ಟಿದ್ದೀರ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.”

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...