Tuesday, February 17, 2015

ಯಾರು ಇದನ್ನೇಗೆ ಹೇಳಲಿ ಅವನು ಏಕಾಂಗಿ ಯಾಕೆ ?

ಚಿತ್ರಕೃಪೆ : Google 
ಹಾಡಿನ ಕೊಂಡಿ : You Tube 
ಯಾರು ಇದನ್ನೇಗೆ ಹೇಳಲಿ ಅವನು ಏಕಾಂಗಿ ಯಾಕೆ ?
ನಮ್ಮದಾಗಿ ಇದ್ದವರು, ಅವರೇ ಇನ್ಯಾರ ಯಾಕೆ?
ಇದೇ ಪ್ರಪಂಚವೆಂದಾದರೆ ಹೀಗೆ ಈ ಪ್ರಪಂಚ ಯಾಕೆ ?
ಇದೇ ಆಗುತ್ತಿದೆಯೆಂದಾದರೆ ಇದೇ ಆಗುತ್ತಿದೆ ಯಾಕೆ ?

ಸ್ವಲ್ಪವೊಂದು ಕೈಯನ್ನು ನೀಡಿದರೆ, ಹಿಡಿಯುತ್ತಾರೆ ಸೆರಗನ್ನು
ಅವರ ಎದೆಯಲಿ ಸ್ಪಂದಿಸುತ್ತದೆ ಹೃದಯ ಮಿಡಿತ ನಮ್ಮದು
ಇಷ್ಟೊಂದು ನಂಟಿದ್ದರೆ ಈ ಅಂತರವಿದೆ ಯಾಕೆ?

ಪ್ರೀತಿಯ ಭಗ್ನತೆಯಿಂದ ಹೊರ ಬಂದಿಲ್ಲ ಈ ತನಕ ಯಾರೂ
ಒಂದು ಪಾಳು ಮನೆಯ ಕದ ತಟ್ಟುತ್ತಿರುತ್ತಾರೆ ಯಾರೋ
ಮುರಿದ ಆಸೆ ಪುನಃ ಜಾಗೃತವಾಗುತ್ತದೆ ಯಾಕೆ?

ನೀನು ಸುಖದ ಅಥವಾ ಇದನ್ನೇಳು ದುಃಖದ ನಂಟು
ಹೇಳುತ್ತಾರೆ ಪ್ರೀತಿಯ ನಂಟು ಅಂದರೆ ಅದು ಜನುಮದ ನಂಟು
ಜನುಮದ ನಂಟಾದರೆ ಇದು ಬದಲಾಗುವುದು ಯಾಕೆ ?

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಜಗಜಿತ್ ಸಿಂಗ್
ಸಂಗೀತ : ಕುಲ್ದಿಪ್ ಸಿಂಗ್
ಚಿತ್ರ : ಅರ್ಥ್

Koi Ye Kaise Bataaye Ke Wo Tanha KyooN Hai
Wo Jo Apna Thaa Wahi Aur Kisi Ka KyooN Hai
Yahi Duniya Hai To Phir Aisee Ye Duniya KyooN Hai
Yahi Hota Hai To Aakhir Yahi Hota KyooN Hai

Ik Zara Haath BaDha DeN To PakaD Le Daaman
Uske Seene MeiN Sama Jaaye Hamari DhaDkan
Itni Kurbat Hai To Phir Faaslaa Itna KyooN Hai

Dil-E-Barbaad Se Nikla NahiN Ab Tak Koi
Ik Loote Ghar Pe Diya Karta Hai Dastak Koi
Aas Jo TooT Gayee Phir Se Bandhaata KyooN Hai

Tum Asarrat Ka KahO Ya Ise Gham Ka Rishta
Kehte Hain Pyaar Ka Rishta Hai Janam Ka Rishta
Hai Janam Ka Jo Ye Rishta To Badalta KyooN Hai
https://www.youtube.com/watch?v=K-oUL81qe50

2 comments:

  1. ನನಗೂ ಇಷ್ಟವಾದ ಚಿತ್ರವಿದು.
    ಒಳ್ಳೆಯ ಭಾವಾನುವಾದ.
    ಪ್ರವೀಣ್ ಭಟ್ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...