Monday, 17 November, 2014

ಒರೆಸಿ ಕಣ್ಣೀರನ್ನು

ಒರೆಸಿ ಕಣ್ಣೀರನ್ನು
ತನ್ನ ಕಣ್ಣಿಂದ
ನಗು ಬೀರಿದರೆ ಚೆನ್ನ
ತಲೆ ತಗ್ಗಿಸುವುದರಿಂದ
ಏನಾಗುವುದಿಲ್ಲ
ತಲೆ ಎತ್ತಿಕೊಂಡರೆ ಚೆನ್ನ

ಜೀವನ ಭಿಕ್ಷೆಯಲಿ ಸಿಗುವುದಿಲ್ಲ
ಜೀವನ ಮುಂದೆ ಬಂದು
ಕಸಿದು ಕೊಳ್ಳಬೇಕಾಗುತ್ತದೆ
ತನ್ನ ಹಕ್ಕನ್ನು
ಆತ್ಮರಹಿತ ಜಗತ್ತಿಂದ
ಕಸಿದುಕೊಂಡರೆ ಚೆನ್ನ
ತಲೆ ತಗ್ಗಿಸುವುದರಿಂದ...

ವರ್ಣ ಮತ್ತು ಭೇದ
ಜಾತಿ ಮತ್ತು ಧರ್ಮ
ಯಾವುದೇ ಇರಲಿ
ಮನುಷ್ಯನಿಂದ ಕಡಿಮೆಯೇ
ಈ ಸತ್ಯವನ್ನು ನೀನೂ ನನ್ನ ಹಾಗೆ
ಒಪ್ಪಿಕೊಂಡರೆ ಚೆನ್ನ
ತಲೆ ತಗ್ಗಿಸುವುದರಿಂದ...

ದ್ವೇಷದ ಪ್ರಪಂಚದಲಿ ನಮಗೆ
ಪ್ರೀತಿಯ ನಗರ ನೆಲೆಸಲಿದೆ
ದೂರ ಇರುವುದರಲ್ಲಿ
ಯಾವುದೇ ಚಾತುರ್ಯ ಇಲ್ಲ
ಸನಿಹ ಬಂದರೆ ಚೆನ್ನ
ತಲೆ ತಗ್ಗಿಸುವುದರಿಂದ...

ಮೂಲ : ಸಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಏನ್ .ದತ್ತ
ಚಿತ್ರ : ನಯ ರಾಸ್ತ

ponchh kar ashq apni aankhon se
ponchh kar ashq apni aankhon se
muskuraao to koyi baat bane
sar jhukaane se kuchh nahin hoga
sar uthaao to koyi baat bane
ponchh kar ashq apni aankhon se
muskuraao to koyi baat bane

zindagi bheekh mein nahin milti
zindagi bheekh mein nahin milti
zindagi badh ke chheeni jaati hai
zindagi badh ke chheeni jaati hai
apnaa haq sangdil zamaane se
cheen paao to koyi baat bane
sar jhukaane se kuchh nahin hogaa
sar uthaao to koyi baat bane

rang aur nasl jaat aur mazhab
rang aur nasl jaat aur mazhab
jo bhi ho aadmi se kamtar hai
jo bhi ho aadmi se kamtar hai
is haqeeqat ko tum bhi meri tarah
maan jaao to koyi baat bane
sar jhukaane se kuchh nahin hoga
sar uthaao to koyi baat bane

nafraton ke jahaan mein hamko
nafraton ke jahaan mein hamko
pyaar ki bastiyaan basaani hain
pyaar ki bastiyaan basaani hain
door rahnaa koyi kamaal nahin
paas aao to koyi baat bane
ponchh kar ashq apni aankhon se
muskuraao to koyi baat bane
sar jhukaane se kuchh nahin hogaa
sar uthaao to koyi baat bane
http://www.youtube.com/watch?v=cShR7ArQRTU

Thursday, 13 November, 2014

ಅಮ್ಮ

ದೊಡ್ಡವನಾಗಿದ್ದ ಅವನು,
ಮುದಿ ಅಮ್ಮನ
ಮಾತು
ಅರ್ಥವಾಗಲಿಲ್ಲ
ಆ ಮಗನಿಗೆ
ಅರ್ಥೈಸಲು
ಪ್ರಯತ್ನ ಸಹ ಮಾಡಲಿಲ್ಲ

ಪುಟ್ಟ ಮಗುವಿದ್ದಾಗ
ಅವನ
ತೊದಲು ನುಡಿಗಳನ್ನು
ಸರಿಯಾಗಿ
ಅರ್ಥ ಮಾಡಿಕೊಳ್ಳುತ್ತಿದ್ದಳು
ಆ ಅಮ್ಮ

by ಹರೀಶ್ ಶೆಟ್ಟಿ, ಶಿರ್ವ 

Monday, 3 November, 2014

ಧಿಕ್ಕಾರ

ಏನೆಲ್ಲಾ ನಡೆಯುತ್ತಿದೆ ಈ ದೇಶದಲಿ
ಮಾನವ ಕಾಣುತ್ತಿದ್ದಾನೆ ವಿಧ ವಿಧದ ವೇಷದಲಿ
ಪುಟ್ಟ ಬಾಲಕಿಯರು ಬಲಿಯಾಗುತ್ತಿದ್ದಾರೆ
ಕಾಮ ಕುರುಡರ ಈ ಹೀನ ವಿಕೃತಿಯಲಿ
ಜನಸಾಮಾನ್ಯರು ಭಯದಲಿ
ಪೋಷಕರು ಆಘಾತದಲಿ
ವಿದೂಷಕರು ಕುಳಿತ್ತಿದ್ದಾರೆ ಅಧಿಕಾರದಲಿ
ಭಕ್ಷಕರಾಗಿದ್ದಾರೆ ರಕ್ಷಕರು ಇಲ್ಲಿ
ಕಪ್ಪು ಪಟ್ಟಿ ನ್ಯಾಯ ದೇವಿಯ ಕಣ್ಣಲ್ಲಿ
ಎಲ್ಲಿ ಕಳೆದುಕೊಂಡಿದ್ದಾರೆ ಮಾನವೀಯತೆಯನ್ನು ಇವರು
ಹೇಗೆ ಮರೆಯುತ್ತಾರೆ ತನ್ನ ಕರ್ತವ್ಯವನ್ನು ಇವರು
ನನ್ನ ಲೇಖನಿಯೂ ಕಂಪಿಸುತ್ತಿದೆ
ಇಂತಹ ನತದೃಷ್ಟರಿಗೆ ನನ್ನ  
ಧಿಕ್ಕಾರ ಧಿಕ್ಕಾರ ಧಿಕ್ಕಾರ
ಎಂದು ಕಣ್ಣೀರು ಹಾಕುತ್ತಿದೆ

by ಹರೀಶ್ ಶೆಟ್ಟಿ, ಶಿರ್ವ