Wednesday, October 15, 2014

ಅಪರಿಣತ

ತುಸು ದೂರ ಬಂದು ಬಿಟ್ಟೆ
ಹಿಂತಿರುಗಿ ನೋಡಿದಾಗ
ಹಿಂದೆ ಯಾರೂ ಇರಲಿಲ್ಲ
---
ನಾನು ನಡೆದದ್ದೇ ದಾರಿ ಎನಿಸಿದ್ದೆ
ಸಾಗುತ್ತಲೇ ಹೋದೆ
ತಾಣ ಸಿಗದೇ ಚಡಪಡಿಸಿದೆ
---
ಹೃದಯ ಅಷ್ಟೇನೂ ದೃಡವಾಗಿರಲಿಲ್ಲ
ನಿರಾಸೆ ಬೇಗನೆ ಮೂಡಿತು
ಸೋತೆ
---
ಕಲಿಯುವ ಹಂಬಲ ಇತ್ತು
ಆದರೆ ಕಲಿತವರು/ಕಲಿಸುವವರು ನಿನಗೆ ನೀನೆ ಗುರು ಎಂದರು
ನನ್ನಿಂದ ದೂರವಾದರು
---
ಪ್ರಯತ್ನಿಸಿದೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯಲು
ಆದರೆ ತುಂಬಾ ತಡವಾಯಿತು
ವ್ಯತ್ಯಾಸ ತಿಳಿಯಲು ಅಸಮರ್ಥನಾದೆ
---
ಮೌನದಿಂದ ಸ್ನೇಹ ಬೆಳೆಸಿದೆ
ಮಿತ್ರರೆಲ್ಲರು ಚಿಂತಿಸಿದರು
ನನ್ನನ್ನು ಗುರು ಎನ್ನುವವರೂ ನನ್ನ ಬಾಗಿಲಿಗೆ ಇಣುಕಿ ನೋಡುತ್ತಿದ್ದರು
by ಹರೀಶ್ ಶೆಟ್ಟಿ, ಶಿರ್ವ

2 comments:

  1. "ಆದರೆ ತುಂಬಾ ತಡವಾಯಿತು
    ವ್ಯತ್ಯಾಸ ತಿಳಿಯಲು ಅಸಮರ್ಥನಾದೆ"
    ಬಹಳ ತಟ್ಟಿತು ಮನದಾಳಕೆ!

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...