Tuesday, September 2, 2014

ನೀಲ ನೀಲ ಅಂಬರದಲಿ

ನೀಲ ನೀಲ ಅಂಬರದಲಿ
ಚಂದಿರ ಬಂದಾಗಲೇ
ಪ್ರೀತಿಯ ಆಗುತ್ತದೆ ಸುರಿಮಳೆ
ನನ್ನಿಂದ ಮಾಡುತ್ತದೆ ಕೀಟಲೆ

ಹೀಗೆ ಸಂಗಾತಿ
ಯಾರೊಂದಿದ್ದರೆ
ಹೀಗೆ ಪ್ರೇಮಿ
ಯಾರೊಂದಿದ್ದರೆ
ಮನಸ್ಸ ದಾಹ ತಣಿಸಿ ಹೋದರೆ

ಎತ್ತರ ಎತ್ತರ ಪರ್ವತ
ಚುಂಬಿಸಿದಾಗ ಅಂಬರವನ್ನು
ದಾಹದಲ್ಲಿದ್ದ ಅಂಬರ
ಚುಂಬಿಸುವಾಗ ಸಾಗರವನ್ನು
ಪ್ರೀತಿಯನ್ನು ದೃಡಗೊಳಿಸಲು
ಬಾಹುಗಳಲ್ಲಿ ನೆಲೆಸಲು
ಮನಸ್ಸು ನನ್ನ ಹಾತೊರೆಯುತ್ತದೆ
ಯಾರಾದರು ಬಂದರೆ
ಹೀಗೆ ಸಂಗಾತಿ...

ತಂಪು ತಂಪು ಹೊಯ್ಗಾಳಿ
ಕೂದಲನ್ನು ಮುಟ್ಟಿದಾಗ
ಬೇಗೆಯ ಕಿರಣಗಳು
ಗಲ್ಲವನ್ನು ಸ್ಪರ್ಶಿಸಿದಾಗ
ಉಸಿರ ಬೆಚ್ಚನೆಯನ್ನು
ಕೈಯ ಮೃದುತ್ವವನ್ನು
ಮನಸ್ಸು ನನ್ನ ಹಂಬಲಿಸುತ್ತದೆ
ಯಾರಾದರು ಸ್ಪರ್ಶಿಸಿ ಹೋದರೆ
ಹೀಗೆ ಸಂಗಾತಿ...

ತಣ್ಣನೆಯ ಮಳೆ
ಹನಿಗಳ ಬಾಣ ಬಿಡುತ್ತದೆ
ಸಪ್ತವರ್ಣ ಮಳೆಯಲ್ಲಿ
ತನುಮನ ನೆನೆದಾಗ
ಪ್ರೀತಿಯಲಿ ಮೀಯಲು
ಪ್ರೀತಿಯಲಿ ಮುಳುಗಲು
ಹೃದಯ ಚಡಪಡಿಸುತ್ತದೆ
ಕನಸು ನಿರ್ಮಿಸುತ್ತದೆ
ಹೀಗೆ ಸಂಗಾತಿ...

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಕಲಾಕಾರ್

नीले नीले अंबर पर चाँद जब आये, प्यार बरसाये, हम को तरसाये
ऐसा कोई साथी हो, ऐसा कोई प्रेमी हो, प्यास दिल की बुझा जाये

उँचे उँचे परबत जब चूमते हैं अंबर को, प्यासा प्यासा अंबर जब चूमता हैं सागर को
प्यार से कसने को, बाहों में बसने को, दिल मेरा ललचाये, कोई तो आ जाये
ऐसा कोई साथी हो, ऐसा कोई प्रेमी हो, प्यास दिल की बुझा जाये

ठंडे ठंडे झोंके जब बालों को सहलाये, तपती तपती किरनें जब गालों को छू जाये
साँसों की गर्मी को, हाथों की नर्मी को, मेरा मन तरसाये, कोई तो छू जाये
ऐसा कोई साथी हो, ऐसा कोई प्रेमी हो, प्यास दिल की बुझा जाये

छम छम  करता सावन बूँदो के बान चलाये, सतरंगी बरसातों में जब तनमन भीगा जाये
प्यार में नहाने को, डूब ही जाने को, दिल मेरा तड़पाये, ख्वाब जगा जाये
ऐसा कोई साथी हो, ऐसा कोई प्रेमी हो, प्यास दिल की बुझा जाये
http://www.youtube.com/watch?v=ZUlDWcik6dg

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...