Sunday, September 7, 2014

ಹುಡುಕಾಡುತ್ತಿದ್ದುದನ್ನು

ಹುಡುಕಾಡುತ್ತಿದ್ದುದನ್ನು
ಪಡೆಯಲಿಲ್ಲ ನಾನು
ಈ ನೆಪದಿಂದಲೇ
ನೋಡಿ ಬಿಟ್ಟೆ ಈ ಪ್ರಪಂಚವನ್ನು
ಹುಡುಕಾಡುತ್ತಿದ್ದುದನ್ನು...

ನಾನು ನಿನ್ನನ್ನು ಅವಮಾನಿಸಲಿಲ್ಲ
ಸ್ವತಃ ಇದ್ದೇನೆ ಪಶ್ಚಾತ್ತಾಪದಲಿ
ಪ್ರೀತಿಯ ವಿಧಿಯನ್ನು
ಈ ರೀತಿ ನೆರವೇರಿಸಿದೆ ನಾನು
ಹುಡುಕಾಡುತ್ತಿದ್ದುದನ್ನು...

ಅದ್ಯಾವಾಗ ಭೇಟಿಯಾಗಿದ್ದೆ
ಅದೆಲ್ಲಿ ಅಗಲಿದೆ
ನೆನಪಿಲ್ಲ ನನಗೆ
ಜೀವನ ನಿನ್ನನ್ನು
ಕೇವಲ ಕನಸಲಿ ಕಂಡೆ ನಾನು
ಹುಡುಕಾಡುತ್ತಿದ್ದುದನ್ನು...

ಅದೇನನ್ನು ಹೇಳಲಿ
ನನ್ನ ಸ್ಥಿತಿಯ ಬಗ್ಗೆ ಇನ್ನು
ವಯಸ್ಸಿನ ದೀರ್ಘ ಯಾತ್ರೆಯನ್ನು
ಏಕಾಂತ ಸಾಗಿಸಿದೆ ನಾನು
ಹುಡುಕಾಡುತ್ತಿದ್ದುದನ್ನು...

ಮೂಲ : ಶಹರಿಯಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಆಶಾ ಭೋಂಸ್ಲೆ
ಸಂಗೀತ : ಖಯ್ಯಾಮ್
ಚಿತ್ರ : ಉಮ್ರಾವ್ ಜಾನ್

जुस्तजू जिस की थी उस को तो ना पाया हम ने
इस बहाने से मगर देख ली दुनियाँ हम ने

तुझ को रुसवा ना किया, खुद भी पशेमान न हुए
इश्क की रस्म को, इस तरह निभाया हम ने

कब मिली थी, कहा बिछडी थी, हमे याद नहीं
जिन्दगी तुझ को तो बस ख्वाब में देखा हम ने

ऐ अदा और सुनाएं भी तो क्या हाल अपना
उम्र का लंबा सफ़र, तय किया तनहा हम ने
http://www.youtube.com/watch?v=NMppeXU7Fl4

4 comments:

  1. ಖಯ್ಯಂ ಅವರ ಗೀತೆಗಳ opening ನಿಂದಲೇ ಅವರದೇ ಎನ್ನುವುದು ಗೊತ್ತಾಗಿ ಹೋಗುತ್ತದೆ,
    ಶಹರಿಯಾರ್ ಅವರ ಬಗ್ಗೆ ತುಸು ತಿಳಿಸಿರಿ.
    ಪ್ರವೀಣ್ ಭಟ್ ಅವರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...