Wednesday, September 3, 2014

ಮುಖವನ್ನು ಅಡಗಿಸಿ

ಮುಖವನ್ನು ಅಡಗಿಸಿ ಬದುಕದಿರು
ತಲೆ ತಗ್ಗಿಸಿಯೂ ಬದುಕದಿರು
ಕಷ್ಟಗಳ ಸುರಿಮಳೆಯಾದರೂ
ನಗು ನಗುತ್ತಲೇ ಬದುಕಿಕೊಂಡಿರು

ಮೇಘದಲಿ ಅಡಗಿ
ತಾರೆಗಳು ವಿಲುಪ್ತವಾಗುವುದಿಲ್ಲ
ಕತ್ತಲ ರಾತ್ರಿಯಲಿ
ದೀಪಗಳನ್ನು ಬೆಳಗಿಸುತ್ತಾ ಸಾಗುತ್ತಿರು
ಮುಖವನ್ನು...

ಯಾರಿಗೊತ್ತು ಯಾವ ಕ್ಷಣ
ಮೃತ್ಯುವಿನ ಕರೆ ಬರುವುದೋ
ಪ್ರತಿಯೊಂದು ಕ್ಷಣವನ್ನು
ಖುಷಿಯಿಂದ ಅಪ್ಪಿಕೊಂಡು ನಡೆಯುತ್ತಿರು
ಮುಖವನ್ನು...

ಈ ಜೀವನ
ಯಾವುದೇ ಗಮ್ಯದಲ್ಲಿ ನಿಲ್ಲಲಾರದು
ಪ್ರತಿಯೊಂದು ಹಂತದಲಿ
ಹೆಜ್ಜೆಯನ್ನು ಮುಂದೆ ಸಾಗಿಸುತ್ತಿರು
ಮುಖವನ್ನು...

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಹಮ್ರಾಜ್

ना मुँह छुपा के जियो और ना सर झुका के जियो
गमों का दौर भी आए तो मुस्कुरा के जियो

घटा में छुप के सितारे फना नहीं होते
अंधेरी रात के दिल में दीये जला के जियो
ना मुँह छुपा...

ना जाने कौन सा पल मौत की अमानत हो
हर एक पल की खुशी को गले लगा के जियो
ना मुँह छुपा...

ये जिंदगी किसी मंजिल पे रूक नहीं सकती
हर इक मकाम से आगे कदम बढ़ा के जियो
ना मुँह छुपा...
http://www.youtube.com/watch?v=KsfTT4aZxCo

2 comments:

  1. ಮಹೇಂದ್ರ ಕಪೂರ್ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ.
    ರವಿ ಯಾದವ್ ಅವರ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...