Monday, September 8, 2014

ಈ ಭಾವೋದ್ರೇಕ ಕಣ್ಣುಗಳ

ಇಂದು ನನ್ನ ನೆಚ್ಚಿನ ಗಾಯಕಿ ಆಶಾ ಭೋಸ್ಲೆ ಅವರ ಜನ್ಮ ದಿನ, ಅವರಿಗೆ ಹುಟ್ಟು ಹಬ್ಬದ ಹಾರ್ದಿಕ  ಶುಭಾಶಯಗಳು.
ಅವರ ಒಂದು ಪ್ರಸಿದ್ಧ ಹಿಂದಿ ಘಜಲ್ ಕನ್ನಡದಲಿ.
------

ಈ ಭಾವೋದ್ರೇಕ ಕಣ್ಣುಗಳ
ಅಮಲಲ್ಲಿದ್ದಾರೆ ಸಾವಿರಾರು
ಈ ಕಣ್ಣುಗಳಿಂದ ಪ್ರೇರಿತ
ಪ್ರೇಮ ಕಥೆಗಳು ಸಾವಿರಾರು

ಒಂದು ನೀನೆ ಅಲ್ಲ
ಅಪಖ್ಯಾತಿಗೆ ಒಳಗಾದವನು ಪ್ರೀತಿಯಲಿ ನನ್ನ
ಈ ನಗರದಲಿ
ನಿನ್ನಂತಹ ಮರುಳರು ಸಾವಿರಾರು
ಈ ಭಾವೋದ್ರೇಕ ಕಣ್ಣುಗಳ...

ಒಂದು ನಾನೇ
ಮದ್ಯವನ್ನು ಕಣ್ಣುಗಳಿಂದ ಕುಡಿಸುತ್ತೇನೆ
ಹೇಳಲಿಕ್ಕೆ ಈ ನಗರದಲ್ಲಿದೆ
ಶರಾಬು ಅಂಗಡಿ ಸಾವಿರಾರು
ಈ ಭಾವೋದ್ರೇಕ ಕಣ್ಣುಗಳ...

ಈ ಸಂಜೆಯ ದೀಪವನ್ನು
ಬಿರುಗಾಳಿಯಿಂದ ಹೆದರಿಸುವೆಯ
ಈ ಸಂಜೆಯ ದೀಪದ ಸುತ್ತೂ
ಪತಂಗಗಳು ಸಾವಿರಾರು
ಈ ಭಾವೋದ್ರೇಕ ಕಣ್ಣುಗಳ...

ಮೂಲ : ಶಹರಿಯಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಆಶಾ ಭೋಸ್ಲೆ
ಸಂಗೀತ : ಖಯ್ಯಾಮ್
ಚಿತ್ರ : ಉಮ್ರಾವ್ ಜಾನ್

इन आँखों की मस्ती के मस्ताने हज़ारों हैं
इन आँखों से वाबस्ता अफ़साने हज़ारों हैं

इक तुम ही नहीं तन्हाँ, उल्फ़त में मेरी रुसवा
इस शहर में तुम जैसे दीवाने हज़ारों हैं
इन आँखों की...

इक सिर्फ़ हम ही मय को, आँखों से पिलाते हैं
कहने को तो दुनिया में मयख़ाने हज़ारों हैं
इन आँखों की...

इस शम्म-ए-फ़रोज़ाँ को, आँधी से डराते हो
इस शम्म-ए-फ़रोज़ाँ के परवाने हज़ारों हैं
इन आँखों की...
http://www.youtube.com/watch?v=cXdJJvpgTvw

1 comment:

  1. ಚಿರಕಾಲ ನಿಲ್ಲುವ ಚಿತ್ರ ರತ್ನದ ಇನ್ನೊಂದು ಖಯ್ಯಾಮ್ ಸಂಯೋಜನೆ.
    ತಮ್ಮ ಭಾವಾನುವಾದವೂ ಸೈ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...